Vivo V70 ಮತ್ತು Vivo V70 Elite ಫೋನ್‌ಗಳ ಬೆಲೆ ಲೀಕ್; ಕುತೂಹಲ ಹೆಚ್ಚಿಸಿದ ಫೀಚರ್ಸ್
Vivo V70 ಸರಣಿಯು ಇದೇ ಫೆಬ್ರವರಿ 25 ರಿಂದ ಮಾರಾಟ ಪ್ರಾರಂಭ ಮಾಡಲಿದೆ
Vivo V70 ಸರಣಿಯ ಆರಂಭಿಕ ವೇರಿಯಂಟ್ ಬೆಲೆ 45,999 ರೂಗಳು ಎಂದು ನಿರೀಕ್ಷಿಸಲಾಗಿದೆ
Vivo V70 ಸರಣಿಯು Snapdragon ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿರಲಿದೆ
Vivo ಮೊಬೈಲ್ ಕಂಪನಿಯು ಶೀಘ್ರದಲ್ಲೇ Vivo V70 ಸರಣಿಯನ್ನು ಬಿಡುಗಡೆ ಮಾಡಲಿದೆ. ಈ ಸರಣಿಯು Vivo V70 ಮತ್ತು Vivo V70 Elite ಮಾಡೆಲ್‌ಗಳನ್ನು ಒಳಗೊಂಡಿರಲಿದೆ. ಆದರೆ ಬಿಡುಗಡೆಗೂ ಮುನ್ನವೇ ಈ Vivo V70 ಸರಣಿಯ ಫೋನ್‌ಗಳ ಬೆಲೆಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿವೆ. ಅಲ್ಲದೇ ಹೊಸ Vivo V70 ಸರಣಿಗಾಗಿ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋ ಪೇಜ್ ಕೂಡಾ ತೆರೆಯಲಾಗಿದೆ. ಇನ್ನು ಮುಂಬರುವ ಈ ಫೋನ್‌ಗಳು Snapdragon ಪ್ರೊಸೆಸರ್ ಹಾಗೂ Zeiss ಕ್ಯಾಮೆರಾ ವ್ಯವಸ್ಥೆಯನ್ನು ಒಳ ಪ್ರೊಸೆಸರ್ ಹಾಗೂ Zeiss ಕ್ಯಾಮೆರಾ ವ್ಯವಸ್ಥೆಯನ್ನು ಒಳಗೊಂಡಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. Vivo V70 ಸರಣಿಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : Lava Bold N2 ಶೀಘ್ರದಲ್ಲೇ ಲಾಂಚ್! ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಎಂಟ್ರಿ ಕೊಡುವ ಸಾಧ್ಯತೆ
Vivo V70 ನಿರೀಕ್ಷಿತ ಬೆಲೆ ಹಾಗೂ ಲಭ್ಯತೆ
ಲೀಕ್ ಮಾಹಿತಿ ಪ್ರಕಾರ, Vivo V70 ಫೋನಿನ 8GB + 256GB ವೇರಿಯಂಟ್‌ಗೆ 45,999 ರೂ ಮತ್ತು 12GB + 256GB ವೇರಿಯಂಟ್ ರೂ 49,999 ಬೆಲೆಯಿರಬಹುದು ಎನ್ನಲಾಗಿದೆ. ಹಾಗೆಯೇ Vivo V70 Elite ಫೋನಿನ 8GB + 256GB ವೇರಿಯಂಟ್ ರೂ 51,999 ರಿಂದ ಪ್ರಾರಂಭವಾಗಬಹುದು ಎನ್ನಲಾಗಿದೆ. ಇನ್ನು 12GB + 256GB ವೇರಿಯಂಟ್ ಬೆಲೆ ರೂ 56,999 ಮತ್ತು 12GB + 512GB ವೇರಿಯಂಟ್ ಬೆಲೆ ರೂ 61,999 ಆಗಿರಬಹುದು ಎನ್ನಲಾಗಿದೆ. ಅಂದಹಾಗೆ ಇದೇ ಫೆಬ್ರವರಿ 12 ರಿಂದ 24 ರ ವರೆಗೆ ಪೂರ್ವ-ಬುಕಿಂಗ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಫೆಬ್ರವರಿ 25 ರಿಂದ ಮಾರಾಟ ಪ್ರಾರಂಭವಾಗುತ್ತದೆ.

Vivo V70 ನಿರೀಕ್ಷಿತ ಫೀಚರ್ಸ್ ಹೀಗಿವೆ
Vivo V70 ಮೊಬೈಲ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.59 ಇಂಚಿನ AMOLED ಡಿಸ್‌ಪ್ಲೇ ಅನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಈ ಫೋನ್ Snapdragon 7 Gen 4 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಪಡೆದಿರಬಹುದು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ 12GB RAM ಮತ್ತು 256GB ಸ್ಟೋರೇಜ್ ಆಯ್ಕೆಗಳು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು ಎಂದು ಲೀಕ್ ಮಾಹಿತಿಗಳು ಸೂಚಿಸುತ್ತದೆ. ಇನ್ನು ಈ ಮೊಬೈಲ್ 50MP + 8MP + 50MP ಸಾಮರ್ಥ್ಯದ Zeiss ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ.
Vivo V70 Elite ನಿರೀಕ್ಷಿತ ಫೀಚರ್ಸ್
Vivo V70 Elite ಮೊಬೈಲ್ 6.59 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿರುವ ಸಾಧ್ಯತೆಗಳು ಇವೆ. ಈ ಫೋನ್ Qualcomm Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್ ಅನ್ನು ಪಡೆದಿರಬಹುದು ಎಂದು ಹೇಳಲಾಗಿದೆ. ಅಲ್ಲದೇ ಈ ಫೋನ್ 6,500mAh ಬ್ಯಾಟರಿ ಆಯ್ಕೆ ಹೊಂದಿರುವ ಜೊತೆಗೆ 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಅನ್ನು ಸಹ ಒಳಗೊಂಡಿರಬಹುದು ಎಂದು ಲೀಕ್ ವರದಿಗಳು ಸೂಚಿಸುತ್ತವೆ. ಹಾಗೆಯೇ ಹಿಂಭಾಗದಲ್ಲಿ Zeiss ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಇರಲಿದ್ದು ಕ್ರಮವಾಗಿ 50MP + 50MP + 50MP ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ. ಸೆಲ್ಫಿಗಾಗಿ ಸಹ 50MP ಕ್ಯಾಮೆರಾ ಸೌಲಭ್ಯ ನೀಡಬಹುದು.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile