Lava Bold N2 ಶೀಘ್ರದಲ್ಲೇ ಲಾಂಚ್! ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಎಂಟ್ರಿ ಕೊಡುವ ಸಾಧ್ಯತೆ
Lava Bold N2 ಮೊಬೈಲ್ ಬ್ಲ್ಯಾಕ್ ಮತ್ತು ಸಿಲ್ವರ್ ಆಯ್ಕೆಯಲ್ಲಿ ಬರುವ ನಿರೀಕ್ಷೆ ಇದೆ
Lava Bold N2 ಮೊಬೈಲ್ ಇದೊಂದು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಆಗಿರಲಿದೆ
Lava Bold N2 ಮೊಬೈಲ್ 13MP ರಿಯರ್ ಕ್ಯಾಮೆರಾ ರಚನೆ ಪಡೆದಿರಲಿದೆ
Lava ಮೊಬೈಲ್ ಕಂಪನಿಯು ಅಗ್ಗದ ಬೆಲೆಯಲ್ಲಿ ಕೆಲವು ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ಸಂಸ್ಥೆಯ ಈ ಹಿಂದಿನ Lava Bold N1 ಫೋನಿನ ಉತ್ತರಾಧಿಕಾರಿಯಾಗಿ ಕಂಪನಿಯು ಈಗ Lava Bold N2 ಮೊಬೈಲ್ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಲಾವಾ ಈ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಶೀಘ್ರದಲ್ಲೇ ಲಾಂಚ್ ಮಾಡುವ ನಿರೀಕ್ಷೆಯಿದೆ. ಈ ಬಗ್ಗೆ ಕಂಪನಿಯು ಟೀಸ್ ಮಾಡಿದ್ದು, ಫೋನಿನ ಕುರಿತಾಗಿ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಮೈಕ್ರೋ ಪೇಜ್ ಕೂಡಾ ತೆರೆಯಲಾಗಿದೆ. ಅಂದಹಾಗೆ Lava Bold N2 ಮೊಬೈಲ್ 13MP ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಇನ್ನುಳಿದಂತೆ ಮುಂಬರುವ Lava Bold N2 ಮೊಬೈಲ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : iPhone 16 Plus ಬೆಲೆಯಲ್ಲಿ ಮತ್ತೆ ಭರ್ಜರಿ ಇಳಿಕೆ! ಈ ಬೊಂಬಾಟ್ ಆಫರ್ ಒಮ್ಮೆ ಗಮನಿಸಿ
Lava Bold N2 ಮೊಬೈಲ್ ಲಾಂಚ್ ಯಾವಾಗ
ಲಾವಾ ಸಂಸ್ಥೆಯ Lava Bold N2 ಮೊಬೈಲ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ. ಈ ಬಗ್ಗೆ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಸೈಟ್ ಈಗ ಲಭ್ಯವಿದೆ. ಆದಾಗ್ಯೂ, ಈ ಫೋನ್‌ನ ನಿಖರವಾದ ಲಾಂಚ್ ದಿನಾಂಕ ಬಹಿರಂಗ ಆಗಿಲ್ಲ. ಕಂಪನಿಯು ಸಹ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ. ಆದರೆ ಫೋನ್ ಟೀಸರ್ ಮೊಬೈಲ್‌ನ ವಿನ್ಯಾಸವನ್ನು ಬಹಿರಂಗಪಡಿಸುತ್ತದೆ. ಅಂದಹಾಗೆ ಬರಲಿರುವ ಈ ಫೋನ್ ಗ್ರಾಹಕಸ್ನೇಹಿ ಪ್ರೈಸ್‌ಟ್ಯಾಗ್ ಅನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.

Lava Bold N2 ಮೊಬೈಲ್ ನಿರೀಕ್ಷಿತ ಫೀಚರ್ಸ್
Lava Bold N2 ಮೊಬೈಲ್ ಬ್ಲ್ಯಾಕ್ ಮತ್ತು ಸಿಲ್ವರ್ ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವುದು ಬಹುತೇಕ ಪಕ್ಕಾ ಎಂದು ಹೇಳಲಾಗಿದೆ. ಹಾಗೆಯೇ ಈ ಮೊಬೈಲ್ ಹಿಂಭಾಗದಲ್ಲಿ 13MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಇರಲಿದ್ದು ಅದರ ಜೊತೆಗೆ LED ಫ್ಲ್ಯಾಷ್ ಸೌಲಭ್ಯ ಸಹ ಪಡೆದಿರುವ ನಿರೀಕ್ಷೆಯಿದೆ. ಅಂದಹಾಗೆ ಈ ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಅಲ್ಲದೇ ಈ ಮೊಬೈಲ್ Unisoc 9863A ಚಿಪ್‌ಸೆಟ್ ಪ್ರೊಸೆಸರ್ ಹೊಂದಿರುವ ನಿರೀಕ್ಷೆಗಳು ಇವೆ.
Lava Bold N2 ಎಂಟ್ರಿ ಲೆವೆಲ್ ಮಾದರಿಯ ಸ್ಮಾರ್ಟ್‌ಫೋನ್ ಆಗಿರಲಿದ್ದು ಇದು 4 GB RAM ಮತ್ತು 64 GB ಆಂತರೀಕ ಸ್ಟೋರೇಜ್ ಆಯ್ಕೆ ಪಡೆಯಬಹುದು. ಹಾಗೆಯೇ ಈ ಸ್ಮಾರ್ಟ್‌ಫೋನ್ 18W ಚಾರ್ಜಿಂಗ್ ಸಪೋರ್ಟ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆಯುವ ಸಾಧ್ಯತೆಯಿದೆ. ಟೀಸರ್‌ನಿಂದ ತಿಳಿದಂತೆ ಈ ಫೋನ್‌ನ ಬಲಭಾಗದಲ್ಲಿ ಪವರ್ ಬಟನ್ ಮತ್ತು ವಾಲ್ಯೂಮ್ ಕಂಟ್ರೋಲ್‌ಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ಯುಎಸ್‌ಬಿ ಟೈಪ್-ಸಿ ಪೋರ್ಟ್, 3.5mm ಆಡಿಯೊ ಜ್ಯಾಕ್ ಮತ್ತು ಸ್ಪೀಕರ್ ಗ್ರಿಲ್ ಅನ್ನು ಬೋಲ್ಡ್ ಎನ್ 2 ನ ಕೆಳಭಾಗದಲ್ಲಿ ಇರಿಸಲಾಗುತ್ತದೆ. ಅಂದಹಾಗೆ ಈ ಹಿಂದಿನ Lava Bold N1 ಫೋನ್ ಮೇ 2025 ರಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile