Moto G67 Power 5G ನಾಳೆ ಮಧ್ಯಾಹ್ನ ಬಿಡುಗಡೆಗೆ ಸಜ್ಜು! ಬೆಲೆ ಮತ್ತು ಫೀಚರ್ಗಳೇನು?
Moto G67 Power 5G ನಾಳೆ ಅಂದ್ರೆ 5ನೇ ನವೆಂಬರ್ 2025 ರಂದು ಮಧ್ಯಾಹ್ನ ಬಿಡುಗಡೆಯಾಗಲಿದೆ.
Moto G67 Power 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ Sony LYT-600 ಸೆನ್ಸರ್ನೊಂದಿಗೆ ಬರಲಿದೆ.
Moto G67 Power 5G ಸ್ಮಾರ್ಟ್ಫೋನ್ 7000mAh ಬ್ಯಾಟರಿ ಮತ್ತು Snapdragon 7s Gen 2 ಪ್ರೊಸೆಸರ್ ಹೊಂದಿದೆ.
ಮೋಟೋರೋಲದ ಮುಂಬರಲಿರುವ Moto G67 Power 5G ಸ್ಮಾರ್ಟ್ಫೋನ್ ಬಿಡುಗಡೆಗೆ ಡೇಟ್ ಕಂಫಾರ್ಮ್ ಮಾಡಿದೆ. ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ Sony LYT-600 ಸೆನ್ಸರ್ನೊಂದಿಗೆ ಬರಲಿದ್ದು ಸ್ಮಾರ್ಟ್ಫೋನ್ 7000mAh ಬ್ಯಾಟರಿ ಮತ್ತು Snapdragon 7s Gen 2 ಪ್ರೊಸೆಸರ್ ಹೊಂದಿದೆ. ಈ ಮೋಟೋರೋಲ ಸ್ಮಾರ್ಟ್ಫೋನ್ ನಾಳೆ ಅಂದ್ರೆ 5ನೇ ನವೆಂಬರ್ 2025 ರಂದು ಮಧ್ಯಾಹ್ನ ಬಿಡುಗಡೆಯಾಗಲಿದೆ. ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ. ಹಾಗಾದ್ರೆ ಸ್ಮಾರ್ಟ್ಫೋನ್ ಬಗ್ಗೆ ಈವರೆಗೆ ಲಭ್ಯವಿರುವ ಎಲ್ಲ ಮಾಹಿತಿ ಮತ್ತು ನಿರೀಕ್ಷಿತ ಬೆಲೆ ಎಷ್ಟು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.
SurveyAlso Read: ಅಮೆಜಾನ್‌ನಲ್ಲಿ ಇಂದು 5.1ch Dolby Audio ಸೌಂಡ್‌ಬಾರ್ ಸಿಕ್ಕಾಪಟ್ಟೆ ಡಿಸ್ಕೌಂಟ್ಗಳೊಂದಿಗೆ ಮಾರಾಟವಾಗುತ್ತಿದೆ!
Moto G67 Power 5G ಸ್ಮಾರ್ಟ್ಫೋನ್ ನಿರೀಕ್ಷಿತ ಬೆಲೆ ಎಷ್ಟು?
Moto G67 Power 5G ಈಗ ಮೋಟೋರೋಲ ಇಂಡಿಯಾದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾಗಿದೆ. ಹೊಸ ನಮೂದು ಈ ಹ್ಯಾಂಡ್‌ಸೆಟ್ ಭಾರತದಲ್ಲಿ 8GB+128GB ಮತ್ತು 8GB+256GB ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿರುತ್ತದೆ ಎಂದು ಬಹಿರಂಗಪಡಿಸುತ್ತದೆ. ಇದು ಮೂರು ಪ್ಯಾಂಟೋನ್-ಕ್ಯುರೇಟೆಡ್, ಪ್ಯಾರಾಚೂಟ್ ಪರ್ಪಲ್, ಬ್ಲೂ ಕುರಾಕೊ ಮತ್ತು ಸಿಲಾಂಟ್ರೋ ಬಣ್ಣಗಳಲ್ಲಿ ಮಾರಾಟವಾಗಲಿದೆ. ಇತ್ತೀಚೆಗೆ ಮೀಸಲಾದ ಮೈಕ್ರೋಸೈಟ್ ಇದು ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಮಾರಾಟವಾಗಲಿದೆ ಎಂದು ಬಹಿರಂಗಪಡಿಸಿದ್ದು ಆದಾಗ್ಯೂ ಆನ್‌ಲೈನ್ ಸ್ಟೋರ್ ಮೂಲಕವೂ ಮಾರಾಟವಾಗಲಿದೆ ಎಂದು ದೃಢಪಡಿಸುತ್ತದೆ.

ಮೋಟೋರೋಲ ಸ್ಮಾರ್ಟ್ಫೋನ್ ಫೀಚರ್ಗಳೇನು?
ಈ ಮುಂಬರಲಿರುವ Moto G67 Power 5G ಸ್ಮಾರ್ಟ್‌ಫೋನ್‌ನ ಪ್ರಮುಖ ಆಕರ್ಷಣೆಯೆಂದರೆ ಅದರ ಪವರ್ಫುಲ್ 7000mAh ಬ್ಯಾಟರಿಯೊಂದಿಗೆ ಇದು 30W ಟರ್ಬೊಪವರ್ ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ದೀರ್ಘಕಾಲದ ಬಳಕೆಯನ್ನು ಖಚಿತಪಡಿಸುತ್ತದೆ. ಕಾರ್ಯಕ್ಷಮತೆಯ ವಿಷಯದಲ್ಲಿ ಇದು ಫಾಸ್ಟ್ 5G ಕನೆಕ್ಷನ್ ಮತ್ತು ಉತ್ತಮ ಗೇಮಿಂಗ್ ಸಾಮರ್ಥ್ಯಕ್ಕಾಗಿ Qualcomm Snapdragon 7s Gen 2 ಪ್ರೊಸೆಸರ್ ಅನ್ನು ಹೊಂದಿರಲಿದ್ದು ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಕಾರ್ಯನಿರ್ವಹಿಸಲಿದೆ.
Moto G67 Power 5G ಸ್ಮಾರ್ಟ್‌ಫೋನ್‌ನ ಕ್ಯಾಮರಾ ವಿಭಾಗದಲ್ಲಿ ಇದು 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ OIS ಬೆಂಬಲದೊಂದಿಗೆ ಮತ್ತು 32MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಸೇರಿದಂತೆ ಉತ್ತಮ ಸೆಟಪ್ ಅನ್ನು ಒಳಗೊಂಡಿದೆ. ಡಿಸ್ಪ್ಲೇಯು 6.72 ಇಂಚಿನ FHD+ ಡಿಸ್ಪ್ಲೇಯಾಗಿದ್ದು ಸುಗಮ ನೋಟಕ್ಕಾಗಿ 120Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸುತ್ತದೆ. ಇದರ ಜೊತೆಗೆ ಫೋನ್ IP64 ರೇಟಿಂಗ್ ಮತ್ತು MIL-810H ಮಿಲಿಟರಿ-ಗ್ರೇಡ್ ರಕ್ಷಣೆಯನ್ನು ಹೊಂದಿದ್ದು ಗಟ್ಟಿಮುಟ್ಟಾದ ವಿನ್ಯಾಸವನ್ನು ಒದಗಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile