ಮುಂಬರಲಿರುವ Infinix GT 30 Pro 5G ಫೋನ್‌ನ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ
Infinix GT 30 Pro 5G ಫೋನ್‌ನ ಇದೆ 3ನೇ ಜೂನ್ 2025 ರಂದು ಬಿಡುಗಡೆಗೆ ಡೇಟ್ ಕಂಫಾರ್ಮ್ ಆಗಿದೆ.
ಮುಂಬರಲಿರುವ Infinix GT 30 Pro 5G ಸ್ಮಾರ್ಟ್‌ಫೋನ್‌ನ ಬಿಡುಗಡೆಯನ್ನು ಮುಂದಿನ ತಿಂಗಳು ಆಯೋಜಿಸಿದೆ.
Infinix GT 30 Pro 5G ಸ್ಮಾರ್ಟ್‌ಫೋನ್ ಈ ಬಾರಿ ಮುಖ್ಯವಾಗಿ ಗೇಮಿಂಗ್ ಕೇಂದ್ರಿತ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಭಾರತದಲ್ಲಿ ಇನ್ಫಿನಿಕ್ಸ್ (Infinix) ತನ್ನ ಮುಂಬರಲಿರುವ Infinix GT 30 Pro 5G ಸ್ಮಾರ್ಟ್‌ಫೋನ್‌ನ ಬಿಡುಗಡೆಯನ್ನು ಮುಂದಿನ ತಿಂಗಳು ಆಯೋಜಿಸಿದೆ. ಈ ಇನ್ಫಿನಿಕ್ಸ್ ಸ್ಮಾರ್ಟ್ಫೊನ್ ಲಭ್ಯತೆ, ವಿನ್ಯಾಸದ ವೈಶಿಷ್ಟ್ಯಗಳು, ಪ್ರಮುಖ ವಿಶೇಷಣಗಳು ಮತ್ತು ಬೆಲೆಯ ನಿರೀಕ್ಷೆಗಳ ಬಗ್ಗೆ ನೀಡಿದ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಈ ಕೆಳಗೆ ಒದಗಿಸಲಾಗಿದೆ. ಈ Infinix GT 30 Pro 5G ಸ್ಮಾರ್ಟ್‌ಫೋನ್ ಈ ಬಾರಿ ಮುಖ್ಯವಾಗಿ ಗೇಮಿಂಗ್ ಕೇಂದ್ರಿತ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಸ್ಪಷ್ಟವಾಗಿ ಕಂಪನಿ ಹೈಲೈಟ್ ಮಾಡಲಾಗಿದೆ.
Infinix GT 30 Pro 5G ಭಾರತದ ಬಿಡುಗಡೆ ದಿನಾಂಕ ಮತ್ತು ಲಭ್ಯತೆ:
ಇನ್ಫಿನಿಕ್ಸ್ GT 30 Pro 5G ಅನ್ನು ಈ ವಾರದ ಆರಂಭದಲ್ಲಿ ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಪರಿಚಯಿಸಲಾಗಿದೆ. ಕಂಪನಿಯು ಈಗ ಭಾರತದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಈ Infinix GT 30 Pro 5G ಭಾರತದಲ್ಲಿ ಜೂನ್ 3 ರಂದು ಮಧ್ಯಾಹ್ನ 12 ಗಂಟೆಗೆ ಭಾರತೀಯ ಕಾಲಮಾನದಲ್ಲಿ ಬಿಡುಗಡೆಯಾಗಲಿದೆ ಎಂದು ಫ್ಲಿಪ್‌ಕಾರ್ಟ್‌ನಲ್ಲಿನ ಪ್ರಚಾರ ಬ್ಯಾನರ್ ದೃಢಪಡಿಸುತ್ತದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಮೂಲಕ ದೇಶದಲ್ಲಿ ಖರೀದಿಗೆ ಲಭ್ಯವಿರುತ್ತದೆ.
The gaming KING is coming back! 👑
— Infinix India (@InfinixIndia) May 23, 2025
Infinix GT Series has been one of the most awarded gaming smartphones in India!
Ready to take the crown once again, GT 30 Pro launches on 3rd June.
Check it out here: https://t.co/9tpuZGoKAn#GT30Pro #TheOGBadass pic.twitter.com/jG2K0ea1Hf
Infinix GT 30 Pro 5G ವಿನ್ಯಾಸ ಮತ್ತು ಗೇಮಿಂಗ್ ವೈಶಿಷ್ಟ್ಯಗಳು:
ಫೋನ್‌ನ ವಿನ್ಯಾಸವು ಗೇಮಿಂಗ್ ಅನುಭವವನ್ನು ಹೆಚ್ಚಿಸಲು ನಿರ್ದಿಷ್ಟ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಪ್ರಮುಖವಾದುದೆಂದರೆ ಕಸ್ಟಮೈಸ್ ಮಾಡಬಹುದಾದ RGB LED ಲೈಟ್ ಪ್ಯಾನೆಲ್‌ಗಳನ್ನು ಹೊಂದಿದೆ. ಗೇಮಿಂಗ್‌ಗಾಗಿ ಭುಜದ ಟ್ರಿಗ್ಗರ್‌ಗಳನ್ನು ಸಹ ಫೋನ್ ಹೊಂದಿರುತ್ತದೆ ಎಂದು ಟೀಸ್ ಮಾಡಲಾಗಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾದಂತಹ ಆಟಗಳಲ್ಲಿ ಇದು 120fps ವರೆಗಿನ ಫ್ರೇಮ್ ದರವನ್ನು ಬೆಂಬಲಿಸುತ್ತದೆ. ಈ ಹೇಳಿಕೆಯು ಗೇಮಿಂಗ್ ಕಾರ್ಯಕ್ಷಮತೆಗೆ ಒತ್ತು ನೀಡುತ್ತದೆ. ಅಲ್ಲದೆ ಇನ್ಫಿನಿಕ್ಸ್‌ನ XBoost ಗೇಮಿಂಗ್ ಎಂಜಿನ್ ಫೋನ್ ಉಷ್ಣ ನಿರ್ವಹಣೆಗಾಗಿ AI-ಬೆಂಬಲಿತ VC ಕೂಲಿಂಗ್ ವ್ಯವಸ್ಥೆ ಹೊಂದಿದೆ.
ಇದನ್ನೂ ಓದಿ: Lava Shark 5G ಸ್ಮಾರ್ಟ್ಫೋನ್ 4+4GB RAM ಮತ್ತು 5000mAh ಬ್ಯಾಟರಿ 7,999 ರೂಗಳಿಗೆ ಬಿಡುಗಡೆಯಾಗಿದೆ!
Infinix GT 30 Pro 5G ಪ್ರಮುಖ ನಿರೀಕ್ಷಿತ ವಿಶೇಷಣಗಳು:
Infinix GT 30 Pro 5G ಸ್ಮಾರ್ಟ್ಫೋನ್ ಪವರ್ಫುಲ್ MediaTek Dimensity 8350 Ultimate ಪ್ರೊಸೆಸರ್ ಹೊಂದುವ ನಿರೀಕ್ಷೆಗಳಿವೆ. ಈ ಸ್ಮಾರ್ಟ್ಫೋನ್ 5500mAh ಬ್ಯಾಟರಿ, 45W ವೈರ್ಡ್ ಮತ್ತು 30W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ. ಇದು 10W ವೈರ್ಡ್ ಮತ್ತು 5W ವೈರ್‌ಲೆಸ್ ರಿವರ್ಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಆಪರೇಟಿಂಗ್ ಸಿಸ್ಟಮ್: ಆಂಡ್ರಾಯ್ಡ್ 15-ಆಧಾರಿತ XOS 15 ನೊಂದಿಗೆ ಬರುತ್ತದೆ. ಅಲ್ಲದೆ 108MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಯೂನಿಟ್ ಮತ್ತು 13MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ನಿರೀಕ್ಷಿಸಲಾಗಿದೆ.
ಹೆಚ್ಚುವರಿಯಾಗಿ ಫೋನ್ 6.78 ಇಂಚಿನ AMOLED ಡಿಸ್ಪ್ಲೇಯನ್ನು 144Hz ರಿಫ್ರೆಶ್ ದರದೊಂದಿಗೆ 1.5K ರೆಸಲ್ಯೂಶನ್ ಹೊಂದಿದ್ದು 2,160Hz ಇನ್‌ಸ್ಟಂಟ್ ಟಚ್ ಸ್ಯಾಂಪ್ಲಿಂಗ್ ರೇಟ್ ಸಪೋರ್ಟ್ ಮಾಡಲಿದೆ. ಅಲ್ಲದೆ ಫೋನ್ 1,100 nits ವರೆಗಿನ ಗರಿಷ್ಠ ಹೊಳಪನ್ನು ಸಹ ನೀಡಲಿದೆ. ಫೋನ್ TÜV ರೈನ್‌ಲ್ಯಾಂಡ್‌ನ ಕಡಿಮೆ ನೀಲಿ ಬೆಳಕು ಮತ್ತು ಫ್ಲಿಕರ್-ಮುಕ್ತ ಪ್ರಮಾಣೀಕರಣಗಳೊಂದಿಗೆ ಡಿಸ್ಪ್ಲೇ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್ 7i ಹೊಂದಿದೆ.
Infinix GT 30 Pro 5G ನಿರೀಕ್ಷಿತ ಬೆಲೆ:
ಪ್ರಸ್ತುತ ಫೋನ್‌ನ ನಿಖರವಾದ ಬೆಲೆ ಬಿಡುಗಡೆಯ ಸಮಯದಲ್ಲಿ ಬಹಿರಂಗಗೊಳ್ಳುತ್ತದೆ. ಆದಾಗ್ಯೂ ಈ Infinix GT 30 Pro 5G ಸ್ಮಾರ್ಟ್ಫೋನ್ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಸುಮಾರು 20,000 ರೂಗಳಿಂದ ಶುರುವಾಗಬಹದು ಎಂದು ಮೂಲಗಳು ನಿರೀಕ್ಷೆಯನ್ನು ನೀಡುತ್ತವೆ. ಇದು ಸ್ಪರ್ಧಾತ್ಮಕ ಬೆಲೆಯ ಸ್ಮಾರ್ಟ್‌ಫೋನ್ ಆಗಿರಬಹುದು ಎಂಬುದನ್ನು ಸೂಚಿಸುತ್ತದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile