Lava Shark 5G ಸ್ಮಾರ್ಟ್ಫೋನ್ 8GB RAM ಮತ್ತು 5000mAh ಬ್ಯಾಟರಿ 7,999 ರೂಗಳಿಗೆ ಬಿಡುಗಡೆಯಾಗಿದೆ!

HIGHLIGHTS

ಭಾರತದಲ್ಲಿ Lava Shark 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದೆ.

Lava Shark 5G ಸ್ಮಾರ್ಟ್ಫೋನ್ ಆರಂಭಿಕ 4GB RAM ಮಾದರಿ ₹7,999 ರೂಗಳಿಗೆ ಪರಿಚಯಿಸಲಾಗಿದೆ.

Lava Shark 5G ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.

Lava Shark 5G ಸ್ಮಾರ್ಟ್ಫೋನ್ 8GB RAM ಮತ್ತು 5000mAh ಬ್ಯಾಟರಿ 7,999 ರೂಗಳಿಗೆ ಬಿಡುಗಡೆಯಾಗಿದೆ!

ಭಾರತದಲ್ಲಿ Lava Shark 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಸ್ಮಾರ್ಟ್ಫೋನ್ 4GB RAM ಮತ್ತು4GB ವರ್ಚುವಲ್ RAM ವಿಸ್ತರಣೆಯನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ ಸ್ಮಾರ್ಟ್ಫೋನ್ 50MP ಕ್ಯಾಮೆರಾದೊಂದಿಗೆ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಅಲ್ಲದೆ ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ ಸುಮಾರು ₹7,999 ರೂಗಳಿಗೆ ಬಿಡುಗಡೆಗೊಳಿಸಿ ತಮ್ಮ ಸೈಟ್ lavamobiles.com ಮೂಲಕ ಮಾರಾಟಕ್ಕೆ ಪಟ್ಟಿ ಮಾಡಲಾಗಿದೆ. ಈ Lava Shark 5G ಸ್ಮಾರ್ಟ್ಫೋನ್ ಆಫರ್ ಬೆಲೆಯೊಂದಿಗೆ ಇದರ ಸಂಪೂರ್ಣ ಫೀಚರ್ಗಳೇನು ಎಲ್ಲವನ್ನು ಈ ಕೆಳಗೆ ತಿಳಿಯಬಹುದು.

ಭಾರತದಲ್ಲಿ Lava Shark 5G ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣತೆಗಳೇನು?

Lava Shark 5G ಸ್ಮಾರ್ಟ್ಫೋನ್ 6.75 ಇಂಚಿನ HD+ (720×1,600 ಪಿಕ್ಸೆಲ್‌ಗಳು) ಪರದೆಯನ್ನು 90Hz ರಿಫ್ರೆಶ್ ದರ ಮತ್ತು 20:9 ಆಕಾರ ಅನುಪಾತದೊಂದಿಗೆ ಹೊಂದಿದೆ. ಹ್ಯಾಂಡ್‌ಸೆಟ್ ಆಕ್ಟಾ-ಕೋರ್ 6nm ಜೊತೆಗೆ UniSoc T765 ನಿಂದ ಚಾಲಿತವಾಗಿದೆ. ಇದು 4,00,000 ಕ್ಕಿಂತ ಹೆಚ್ಚಿನ AnTuTu ಸ್ಕೋರ್ ಅನ್ನು ಹೊಂದಿದೆ. ಇದು 4GB RAM ಮತ್ತು 64GB ಆನ್‌ಬೋರ್ಡ್ ಸ್ಟೋರೇಜ್ ಬೆಂಬಲಿಸುತ್ತದೆ. Lava Shark 5G ಸ್ಮಾರ್ಟ್‌ಫೋನ್ ಹೆಚ್ಚುವರಿ 4GB ವರ್ಚುವಲ್ RAM ವಿಸ್ತರಣೆ ಮತ್ತು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಬಾಹ್ಯ ಸಂಗ್ರಹಣೆಯನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ: Cyber Fraud: ಸೈಬರ್ ವಂಚಕರಿಗೆ ತಲೆನೋವು ತಂದ ಈ ಪವರ್ಫುಲ್ ಟೂಲ್ ಬಗ್ಗೆ ನಿಮಗೆಷ್ಟು ಗೊತ್ತು?

Lava Shark 5G Launched

ಹೆಚ್ಚುವರಿಯಾಗಿ ಈ ಹೊಸ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 15 ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ Lava Shark 5G ಸ್ಮಾರ್ಟ್‌ಫೋನ್ AI- ಬೆಂಬಲಿತ 13 ಮೆಗಾಪಿಕ್ಸೆಲ್ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವನ್ನು ಹೊಂದಿದ್ದು ಅನಿರ್ದಿಷ್ಟ ಸೆಕೆಂಡರಿ ಸೆನ್ಸರ್ ಮತ್ತು LED ಫ್ಲ್ಯಾಷ್ ಘಟಕವನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ ಫೋನ್ 5MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ. ಆದರೆ ನನ್ನ ಅನಿಸಿಕೆಯ ಪ್ರಕಾರ ಸುಮಾರು 8000 ರೂಗಳ ಬಜೆಟ್ ಬೆಲೆಗೆ ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಪಡೆಯಬಹುದು.

Lava Shark 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆಯ ವಿವರಗಳೇನು?

ಈಗಾಗಲೇ ಮೇಲೆ ತಿಳಿಸಿರುವಂತೆ ಈ ಸ್ಮಾರ್ಟ್ಫೋನ್ ಭಾರತದಲ್ಲಿ ಏಕೈಕ ಮಾದರಿಯಲ್ಲಿ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯನ್ನು 7,999 ರೂಗಳ ಬೆಲೆಗೆ ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್ಫೋನ್ ಪ್ರಸ್ತುತ ಸ್ಟೆಲ್ಲಾರ್ ಬ್ಲೂ ಮತ್ತು ಸ್ಟೆಲ್ಲಾರ್ ಗೋಲ್ಡ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಪ್ರಸ್ತುತ ದೇಶದಲ್ಲಿ ಅಧಿಕೃತ ಇ-ಸ್ಟೋರ್ ಮತ್ತು ಕಂಪನಿಯ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಖರೀದಿಸಲು ಲಭ್ಯವಿದೆ. ದೇಶಾದ್ಯಂತ ಲಾವಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಗ್ರಾಹಕರು ಉಚಿತ ಮನೆಯಲ್ಲಿಯೇ ಸೇವೆಗಳನ್ನು ಪಡೆಯುತ್ತಾರೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ದೃಢಪಡಿಸಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo