Aadhaar Mitra: ಆಧಾರ್ ಸೇವೆಗಳನ್ನು ಸುಲಭಗೊಳಿಸಲು ಯುಐಡಿಎಐ ‘ಆಧಾರ್ ಮಿತ್ರ ಮ್ಯಾಸ್ಕಾಟ್ ಪ್ರಾರಂಭ!

Aadhaar Mitra: ಆಧಾರ್ ಸೇವೆಗಳನ್ನು ಸುಲಭಗೊಳಿಸಲು ಯುಐಡಿಎಐ ‘ಆಧಾರ್ ಮಿತ್ರ ಮ್ಯಾಸ್ಕಾಟ್ ಪ್ರಾರಂಭ!

Aadhaar Mitra: ಆಧಾರ್ ಕಾರ್ಡ್ ಸಂಬಂಧಿತ ಸಂಸ್ಥೆಯಾದ ಯುಐಡಿಎಐ ಆಧಾರ್ ಸಂಬಂದಿತ ಸೇವೆಗಳನ್ನು ಸಾರ್ವಜನಿಕರಿಗೆ ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಉದ್ಯ (Udia) ಎಂಬ ಹೊಸ ಮ್ಯಾಸ್ಕಾಟ್ ಅನ್ನು ಪ್ರಾರಂಭಿಸಿದೆ. ಈ ಡಿಜಿಟಲ್ ಪಾತ್ರವು ಚಾಟ್‌ಾಟ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಜನರು ತಮ್ಮ ಆಧಾರ್ ಸಂಬಂದಿತ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮತ್ತು ಸೇವೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. UIDAI ಹೇಳುವಂತೆ UIDAI, Udai ಅನ್ನು ನಿರ್ದಿಷ್ಟವಾಗಿ ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

Digit.in Survey
✅ Thank you for completing the survey!

ಇದರ ಮೂಲಕ, ಜನರು ಆಧಾರ್ ನವೀಕರಣಗಳು, ಡೌಲೋಡಗಳು, ತಿದ್ದುಪಡಿಗಳು ಮತ್ತು ಇತರ ಸೇವೆಗಳಿಗೆ ಸಂಬಂದಿಸಿದ ಮಾಹಿತಿಯನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುತ್ತದೆ. ಇದು ಸಣ್ಣ ಮಾಹಿತಿಗಾಗಿ ಜನರು ಪದೇ ಪದೇ ಕಚೇರಿಗಳು ಅಥವಾ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಅಗತ್ಯವನ್ನು ನಿವಾರಿಸುತ್ತದೆ.

Also Read: ಬರೋಬ್ಬರಿ 32 ಇಂಚಿನ ಜಬರ್ದಸ್ತ್ QLED Smart TV ಅಮೆಜಾನ್‌ನಲ್ಲಿ ₹8,099 ರೂಗಳಿಗೆ ರೂಗಳಿಗೆ ಲಭ್ಯ!

Aadhaar Mitra: ಈ ಮ್ಯಾಸ್ಕಾಟ್ ಅನ್ನು ಹೀಗೆ ಆಯ್ಕೆ ಮಾಡಲಾಗಿದೆ

ಈ ಮ್ಯಾಸ್ಕಾಟ್ ಅನ್ನು ಆಯ್ಕೆ ಮಾಡಲು ಯುಐಡಿಎಐ ರಾಷ್ಟ್ರವ್ಯಾಪಿ ವಿನ್ಯಾಸ ಮತ್ತು ಹೆಸರಿಸುವ ಸ್ಪರ್ಧೆಯನ್ನು ನಡೆಸಿತು ಯುಐಡಿಎಐ ಸಿಇಒ ಭುವನೇಶ್ ಕುಮಾರ್ ಅವರ ಪ್ರಕಾರ ವಿದ್ಯಾರ್ಥಿಗಳು, ವಿನ್ಯಾಸಕರು ಮತ್ತು ವಿವಿಧ ಕ್ಷೇತ್ರಗಳ ವ್ಯಕ್ತಿಗಳು ಸೇರಿದಂತೆ ಸುಮಾರು 875 ಜನರು ಭಾಗವಹಿಸಿದ್ದರು. ಮ್ಯಾಸ್ಕಾಟ್‌ನ ಹೆಸರನ್ನು ಸಾರ್ವಜನಿಕ ಅಭಿಪ್ರಾಯದಿಂದಲೂ ನಿರ್ಧರಿಸಲಾಗಿದೆ. ವಿನ್ಯಾಸ ಸ್ಪರ್ಧೆಯಲ್ಲಿ ಕೇರಳದ ತ್ರಿಶೂರ್‌ನ ಅರುನ್ ಗೋಕುಲ್ ಪ್ರಥಮ ಸ್ಥಾನ ಪಡೆದರು. ಮಹಾರಾಷ್ಟ್ರದ ಪುಣೆಯ ಇದ್ರಿಸ್ ದವಾವಾಲಾ ಮತ್ತು ಉತ್ತರ ಪ್ರದೇಶದ ಕೃಷ್ಣ ಶರ್ಮಾ ಎರಡನೇ ಮತ್ತು ಮೂರನೇ ಸ್ಥಾನ ಪಡೆದರು. ಮ್ಯಾಸ್ಕಾಟ್ ಹೆಸರಿನ ವಿಜೇತರಾಗಿ ಭೋಪಾಲ್‌ನ ರಿಯಾ ಜೈಸ್ ಆಯ್ಕೆಯಾದರು.

ಆಧಾರ್ ಅಪ್ಲಿಕೇಶನ್ ಅನ್ನು ಈಗಾಗಲೇ ಬಿಡುಗಡೆ

ಆಧಾರ್ ಸೇವೆಗಳನ್ನು ಮೊಬೈಲ್ ಸಾಧನಗಳಿಗೆ ತರಲು ಯುಐಡಿಎಐ ಈಗಾಗಲೇ ಆಧಾರ್ ಅಪ್ಲಿಕೇಶನ್ ಅನ್ನು ನವೆಂಬರ್ 2025 ರಲ್ಲಿ ಪ್ರಾರಂಭಿಸಿದೆ. ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಫೋನ್ ಎರಡರಲ್ಲೂ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಆಧಾರ್ ಕಾರ್ಡ್ ಅನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ಮತ್ತು ಅಗತ್ಯವಿದ್ದಾಗ ಇತರರೊಂದಿಗೆ ಹಂಚಿಕೊಳ್ಳಲು ನಿಮಗೆ ಅನುಮತಿಸುತ್ತದೆ. ಈ ಅಪ್ಲಿಕೇಷನ್ mAadhaar ಜೊತೆಗೆ ಕಾರ್ಯನಿರ್ವಹಿಸುತ್ತದೆ.

ಈ ಅಪ್ಲಿಕೇಶನ್ ಹಲವು ಉಪಯುಕ್ತ ವೈಶಿಷ್ಟ್ಯಗಳನ್ನು ನೀಡುತ್ತದೆ. ಬಳಕೆದಾರರು ಕುಟುಂಬ ಸದಸ್ಯರನ್ನು ಸೇರಿಸಬಹುದು ಮತ್ತು ಅವರ ಆಧಾರ್ ಕಾರ್ಡಗಳನ್ನು ಉಳಿಸಬಹುದು ಆದರೆ ಇದಕ್ಕೆ ಅವರ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಭದ್ರತೆಗಾಗಿ ಅಪ್ಲಿಕೇಶನ್ ಪಿಂಗರ್‌ ಪ್ರಿಂಟ್ ಅಥವಾ ಫೇಸ್ ಲಾಕ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ ಇದು QR ಕೋಡ್ ಮೂಲಕ ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲು ಸಹ ಅನುಮತಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo