Samsung Galaxy M36 5G ಸ್ಮಾರ್ಟ್ ಫೋನ್ ಇಂದು ಅಮೆಜಾನ್‌ನಲ್ಲಿ ಭಾರಿ ವಿನಿಮಯ ಆಫರ್‌ನೊಂದಿಗೆ ಲಭ್ಯ!
Samsung Galaxy M36 5G ಅಮೆಜಾನ್‌ನಲ್ಲಿ ಭಾರಿ ವಿನಿಮಯ ಆಫರ್‌ನೊಂದಿಗೆ ಲಭ್ಯ.
Samsung Galaxy M36 5G ಆರಂಭಿಕ ಬೆಲೆ ₹13,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
Samsung Galaxy M36 5G ಫೋನ್ 6GB RAM ಮತ್ತು 4K Video ರೆಕಾರ್ಡಿಂಗ್ ಫೀಚರ್ ಹೊಂದಿದೆ.
ಪ್ರಸ್ತುತ ಭಾರತದಲ್ಲಿ ಅಮೆಜಾನ್ ಈ ವರ್ಷದ ಅತಿದೊಡ್ಡ ಸೇಲ್ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon GIF Sale 2025) ಅನ್ನು ನಡೆಸುತ್ತಿದ್ದು ಈಗ ಹೊಸದಾಗಿ ಎರಡನೇ ಹಂತದ ಡೀಲ್ ನೀಡಲು ಅಮೆಜಾನ್ ದೀಪಾವಳಿ ಸ್ಪೆಷಲ್ (Amazon Diwali Special) ಮಾರಾಟವನ್ನು ಆರಂಭಿಸಿದೆ. ಇದರಡಿಯಲ್ಲಿ ಪ್ರಸ್ತುತ Samsung Galaxy M36 5G ಅನ್ನು ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಪಟ್ಟಿ ಮಾಡಿ ಮಾರಾಟ ಮಾಡುತ್ತಿದೆ. ನೀವು ಸ್ಯಾಮ್‌ಸಂಗ್ ಫ್ಯಾನ್ ಆಗಿದ್ದು ನಿಮ್ಮ ಫೋನನ್ನು ಅಪ್ಗ್ರೇಡ್ ಮಾಡಲು ಯೋಚಿಸುತ್ತಿದ್ದರೆ ಇದು ಉತ್ತಮ ಸಮಯವಾಗಿದೆ.
SurveySamsung Galaxy M36 5G ಸ್ಮಾರ್ಟ್‌ಫೋನ್ ವಿನಿಮಯ ಆಫರ್
Samsung Galaxy M36 5G ಸ್ಮಾರ್ಟ್‌ಫೋನ್‌ಗೆ ಅಮೆಜಾನ್‌ನಲ್ಲಿ ದೊಡ್ಡ ಮಟ್ಟದ ಬೆಲೆ ಇಳಿಕೆಯಾಗಿದೆ. ಇದು ಈಗ ಮಧ್ಯಮ ಶ್ರೇಣಿಯ 5G ಫೋನ್‌ಗಳ ಅತ್ಯಂತ ಆಕರ್ಷಕ ಡೀಲ್ ಆಗಿದೆ. ಈ ಫೋನ್‌ನ ಮೂಲ ಬೆಲೆ (MRP) ಸುಮಾರು ₹22,999 ರಿಂದ ₹24,499 ಇತ್ತು ಆದರೆ ಈಗ ಪ್ರಮುಖ ಮಾರಾಟದ ಸಮಯದಲ್ಲಿ ಇದರ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ.

ಉದಾಹರಣೆಗೆ ಇದರ ಮೂಲ ಮಾದರಿ 6GB RAM ಮತ್ತು 128GB ಸ್ಟೋರೇಜ್ ಫೋನ್‌ನ ಬೆಲೆ ಸಾಮಾನ್ಯವಾಗಿ ₹13,999 ಕ್ಕೆ ಸಿಗುತ್ತಿದೆ. ಈ ಬೆಲೆ ಇಳಿಕೆಯ ಜೊತೆಗೆ ನೀವು ನಿಮ್ಮ ಹಳೆಯ ಫೋನ್ ಅನ್ನು ವಿನಿಮಯ ಕೊಡುಗೆ (Exchange Offer) ಮೂಲಕ ಬದಲಾಯಿಸಿ ಸುಮಾರು ₹13,250 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
ಸ್ಯಾಮ್ಸಂಗ್ Galaxy M36 5G ಫೀಚರ್ಗಳೇನು?
Samsung Galaxy M36 5G ಸ್ಮಾರ್ಟ್‌ಫೋನ್ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 6.7 ಇಂಚಿನ ಪೂರ್ಣ HD+ ಸೂಪರ್ AMOLED ಡಿಸ್ಪ್ಲೇ ಹೊಂದಿದೆ. ಇದು ಅತ್ಯಂತ ಸ್ಪಷ್ಟ ಮತ್ತು ಉತ್ತಮ ಬಣ್ಣಗಳನ್ನು ಹೊಂದಿದೆ. ಇದರ ಪರದೆ 120Hz ರಿಫ್ರೆಶ್ ರೇಟ್ ಹೊಂದಿದ್ದು ಸ್ಕ್ರಾಚ್‌ಗಳಿಂದ ರಕ್ಷಿಸಲು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ (ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+) ರಕ್ಷಣೆಯನ್ನು ಒದಗಿಸುತ್ತದೆ. ಫೋನ್‌ಗೆ ಪವರ್ ತುಂಬುವ 5nm Exynos 1380 ಆಕ್ಟಾ-ಕೋರ್ ಪ್ರೊಸೆಸರ್ ವೇಗವಾಗಿ ಕೆಲಸ ಮಾಡುತ್ತದೆ.
ಕ್ಯಾಮೆರಾದ ವಿಷಯಕ್ಕೆ ಬಂದರೆ ಹಿಂಭಾಗದಲ್ಲಿ 50MP ಮುಖ್ಯ ಕ್ಯಾಮೆರಾ (OIS ಜೊತೆ) 8MP ಅಲ್ಟ್ರಾವೈಡ್ ಮತ್ತು 2MP ಮ್ಯಾಕ್ರೋ ಕ್ಯಾಮೆರಾ ಇದೆ. ಸೆಲ್ಫಿಗಾಗಿ 13MP ಕ್ಯಾಮೆರಾ ಇದೆ ಮತ್ತು ಮುಖ್ಯ ಫೀಚರ್ಗಳೊಂದಿಗೆ ಮುಂಭಾಗ ಮತ್ತು ಹಿಂಭಾಗದ ಕ್ಯಾಮೆರಾಗಳಲ್ಲಿ 4K ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಇದು ದೀರ್ಘಕಾಲ ಬಾಳಿಕೆ ಬರುವ 5,000mAh ಬ್ಯಾಟರಿ ಮತ್ತು 25W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದರ ಜೊತೆಗೆ Galaxy AI ವೈಶಿಷ್ಟ್ಯಗಳು ಸರ್ಕಲ್-ಟು-ಸರ್ಚ್ ಮತ್ತು 6 ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್ ಭರವಸೆಯನ್ನು ಸಹ ಸ್ಯಾಮ್ಸಂಗ್ ನೀಡಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile