iPhone 16 Series ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಸೇಲ್‌ನಲ್ಲಿ ಜಬರದಸ್ತ್ ಡೀಲ್ ಮತ್ತು ಡಿಸ್ಕೌಂಟ್ ಬಹಿರಂಗ!
ಭಾರತದಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 23ನೇ ಸೆಪ್ಟೆಂಬರ್ 2025 ರಂದು ಪ್ರಾರಂಭ.
ಫ್ಲಿಪ್‌ಕಾರ್ಟ್ ಮಾರಾಟಕ್ಕೂ ಮುನ್ನ ಐಫೋನ್ ಸರಣಿಯ ಮೇಲೆ ಡೀಲ್ ಮತ್ತು ಡಿಸ್ಕೌಂಟ್ ಬಹಿರಂಗಪಡಿಸಿದೆ.
ಈ ಸೇಲ್ನಲ್ಲಿ iPhone 16 Pro ಮತ್ತು iPhone 16 Pro Max ಮಾದರಿಗಳನ್ನು ಆಕರ್ಷಕ ಬೆಲೆಗೆ ಖರೀದಿಸಬಹುದು.
iPhone 16 Series: ಭಾರತದಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ (Flipkart Big Billion Days Sale) ಅನ್ನು ಮುಂದಿನ ವಾರ ಅಂದರೆ 23ನೇ ಸೆಪ್ಟೆಂಬರ್ 2025 ರಂದು ಪ್ರಾರಂಭವಾಗಲಿದೆ. ಇದು ಇ-ಕಾಮರ್ಸ್ ದೈತ್ಯದ ಅತಿದೊಡ್ಡ ವಾರ್ಷಿಕ ಮಾರಾಟವಾಗಿದ್ದು ವಿವಿಧ ಶ್ರೇಣಿಯ ಉತ್ಪನ್ನಗಳ ಮೇಲೆ ಲಾಭದಾಯಕ ಡೀಲ್‌ಗಳು ಇರುತ್ತವೆ. ವಿಶೇಷವಾಗಿ ಸ್ಮಾರ್ಟ್‌ಫೋನ್‌ಗಳು ಅವುಗಳ ಸಾಮಾನ್ಯ ಮಾರುಕಟ್ಟೆ ದರಗಳಿಗಿಂತ ಗಣನೀಯವಾಗಿ ಕಡಿಮೆ ಬೆಲೆಯಲ್ಲಿ ಲಭ್ಯವಿರುತ್ತವೆ. ಈ ಮಾರಾಟಕ್ಕೂ ಮುನ್ನ ಫ್ಲಿಪ್‌ಕಾರ್ಟ್ ಐಫೋನ್ ಸರಣಿಯ ಡೀಲ್ ಮತ್ತು ಡಿಸ್ಕೌಂಟ್ ಬಹಿರಂಗಪಡಿಸಿದೆ. ಅದರಲ್ಲೂ ಇತ್ತೀಚೆಗೆ ಸ್ಥಗಿತಗೊಂಡ iPhone 16 ಸೇರಿ iPhone 16 Pro ಮತ್ತು iPhone 16 Pro Max ಮಾದರಿಗಳನ್ನು ನೀವು ಎಂದು ಊಹಿಸಲು ಸಾಧ್ಯವಾಗದ ಜಬರದಸ್ತ್ ಡೀಲ್ ಮತ್ತು ಡಿಸ್ಕೌಂಟ್ ನೀಡುತ್ತಿದೆ.
SurveyAlso Read: Samsung ಮತ್ತು JBL ಸೌಂಡ್ ಬಾರ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ Dolby ಸೌಂಡ್‌ನೊಂದಿಗೆ ಲಭ್ಯ!
ಫ್ಲಿಪ್‌ಕಾರ್ಟ್ ಸೇಲ್ನಲ್ಲಿ iPhone 16 Series ಮೇಲೆ ಭರ್ಜರಿ ಕೊಡುಗೆಗಳು:
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2025 ರ ನಿರೀಕ್ಷೆಯಲ್ಲಿ ಇ-ಕಾಮರ್ಸ್ ದೈತ್ಯವು iPhone 16 ಸರಣಿಯ ಮೇಲೆ ಆಕರ್ಷಕ ಆಫರ್‌ಗಳನ್ನು ಘೋಷಿಸಿದೆ. iPhone 16 ಆರಂಭಿಕ 128GB ಮಾದರಿಯು ಈಗ ಕೇವಲ ₹51,999 ಗೆ ಲಭ್ಯವಿದೆ. ಇದು ₹79,900 ರೂಗಳಿಗೆ ಲಭ್ಯವಾಗಲಿದ್ದು ಇದರ ಮೂಲ ಬೆಲೆಯಿಂದ ಸಿಕ್ಕಾಪಟ್ಟೆ ಇಳಿಕೆಯಾಗಿದೆ. ಇದರ ಜೊತೆಗೆ ಮತ್ತೊಂದು 256GB ಮತ್ತು 512GB ಮಾದರಿ ಕ್ರಮವಾಗಿ ₹61,999 ಮತ್ತು ₹81,999 ರೂಗಳಿಗೆ ಬರುವ ನಿರೀಕ್ಷೆಗಳಿವೆ.

iPhone 16 ಸರಣಿಯ ಪ್ರೀಮಿಯಂ ಮಾದರಿಗಳಾದ iPhone 16 Pro ಮತ್ತು 16 Pro Max ಮೇಲೂ ಭಾರೀ ರಿಯಾಯಿತಿಗಳಿವೆ. ಬರೋಬ್ಬರಿ ₹1,19,900 ರೂಗಳ ಮೂಲ ಬೆಲೆಯ iPhone 16 Pro flipkart ಮಾರಾಟದಲ್ಲಿ ಈಗ ₹74,900 ಗೆ ಲಭ್ಯವಿದ್ದು iPhone 16 Pro Max ಸುಮಾರು ₹94,900 ಕ್ಕೆ ಮಾರಾಟವಾಗಲಿದೆ. ಈ ಬೆಲೆಗಳ ಜೊತೆಗೆ ಫ್ಲಿಪ್‌ಕಾರ್ಟ್ ಈ ಎರಡೂ ಮಾದರಿಗಳಿಗೆ ₹5,000 ಬ್ಯಾಂಕ್ ಕಾರ್ಡ್ ರಿಯಾಯಿತಿಯನ್ನು ಸಹ ನೀಡುತ್ತಿದೆ.
Also Read: Samsung ಮತ್ತು JBL ಸೌಂಡ್ ಬಾರ್ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಅಮೆಜಾನ್‌ನಲ್ಲಿ Dolby ಸೌಂಡ್‌ನೊಂದಿಗೆ ಲಭ್ಯ!
ಇದು iPhone 16 Pro ಅನ್ನು ₹69,900 ಮತ್ತು iPhone 16 Pro Max ಅನ್ನು ₹89,900 ಕ್ಕೆ ಇಳಿಸುತ್ತದೆ. ಗಮನಿಸಬೇಕಾದ ಅಂಶವೆಂದರೆ iPhone 17 ಸರಣಿಯ ಬಿಡುಗಡೆಯ ನಂತರ Apple ಈ ಎರಡೂ ಹ್ಯಾಂಡ್‌ಸೆಟ್‌ಗಳ ಉತ್ಪಾದನೆಯನ್ನು ನಿಲ್ಲಿಸಿದೆ. ಈ ರಿಯಾಯಿತಿಗಳು ಗ್ರಾಹಕರಿಗೆ ಈ ಪ್ರೀಮಿಯಂ ಫೋನ್‌ಗಳನ್ನು ಕಡಿಮೆ ಬೆಲೆಯಲ್ಲಿ ಪಡೆಯಲು ಕೊನೆಯ ಅವಕಾಶವನ್ನು ನೀಡುತ್ತವೆ.
ಬ್ಯಾಂಕ್ ಕಾರ್ಡ್ ಮೇಲೆ ಆಫರ್ಗಳೇನು?
ಈ ಡೀಲ್‌ಗಳು ಗ್ರಾಹಕರಿಗೆ ದೊಡ್ಡ ಉಳಿತಾಯವನ್ನು ನೀಡುವುದರೊಂದಿಗೆ ಆಯ್ದ ಬ್ಯಾಂಕ್ ಆಧಾರಿತ ರಿಯಾಯಿತಿಗಳ ಜೊತೆಗೆ ಖರೀದಿದಾರರು ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳು, UPI ಆಧಾರಿತ ಕೊಡುಗೆಗಳು ಮತ್ತು ವಿನಿಮಯ ಡೀಲ್‌ಗಳ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಫ್ಲಿಪ್‌ಕಾರ್ಟ್ ಪ್ಲಸ್ ಗ್ರಾಹಕರಿಗೆ ಪೇ ಲೇಟರ್ ಸೇವೆಗಳು ಮತ್ತು ಸೂಪರ್‌ಕಾಯಿನ್ಸ್ ಕೊಡುಗೆಗಳು ಸಹ ಸೇರಿಸಲಾಗಿದೆ. ಒಟ್ಟಾರೆಯಾಗಿ ಐಫೋನ್ ಖರೀದಿಸಲು ಬಯಸುವವರಿಗೆ ಮತ್ತು ಈಗಾಗಲೇ ಐಫೋನ್ ಬಳಸುತ್ತಿರುವವರು ಅಪ್ಗ್ರೇಡ್ ಮಾಡಲು ಬಯಸುತ್ತಿದ್ದರೆ ಇದು ಸೂಕ್ತ ಸಮಯವಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile