Sanchar Saathi App: ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಯಾಕೆ ಕಡ್ಡಾಯ?

HIGHLIGHTS

ಭಾರತದ ಸೈಬರ್ ಸೆಕ್ಯೂರಿಟಿಗಾಗಿ ಮಹತ್ವದ ಹೆಜ್ಜೆಯನ್ನು ಇಟ್ಟಿರುವ ಕೇಂದ್ರ ಸರ್ಕಾರ.

ಕೇಂದ್ರ ಸರ್ಕಾರ ದೇಶದ ಪ್ರತಿಯೊಂದು ಸ್ಮಾರ್ಟ್‌ಫೋನ್‌ಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಕಡ್ಡಾಯ.

ದೇಶದ ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಯಾಕೆ ಕಡ್ಡಾಯ ಎಲ್ಲವನ್ನು ತಿಳಿಯಿರಿ.

Sanchar Saathi App: ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಯಾಕೆ ಕಡ್ಡಾಯ?

Sanchar Saathi App: ಭಾರತದಲ್ಲಿ ಪ್ರಸ್ತುತ ಸಂಚಾರ್ ಸಾಥಿ ಅಪ್ಲಿಕೇಶನ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿ ಹರಡುತ್ತಿದೆ ಇದಕ್ಕೆ ಕಾರಣವೆಂದರೆ ಕೇಂದ್ರ ಸರ್ಕಾರ ಭಾರತದ ಸೈಬರ್ ಸೆಕ್ಯೂರಿಟಿಗಾಗಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದೆ. ಈ ಮೂಲಕ ಭಾರತದಲ್ಲಿ ನೀವು ಖರೀದಿಸುವ ಪ್ರತಿಯೊಂದು ಸ್ಮಾರ್ಟ್ಫೋನ್ ಒಳಗೆ ಈ Sanchar Saathi App ಪ್ರೀ-ಲೋಡ್ ಆಗಿರುತ್ತದೆ ಮತ್ತು ಈಗಾಗಲೇ ಬಳಸುತ್ತಿರುವ ಸ್ಮಾರ್ಟ್ ಫೋನ್ಗಳಿಗೆ ಹೊಸ ಅಪ್ಡೇಟ್ ನೀಡುವ ಮೂಲಕ ಈ ಅಪ್ಲಿಕೇಶನ್ ಸ್ಥಾಪಿಸಲಾಗುವುದು. ಆದರೆ ಅನೇಕ ಜನರ ಪ್ರಶ್ನೆ ಏನಪ್ಪಾ ಅಂದ್ರೆ ಸಂಚಾರ್ ಸಾಥಿ ಅಪ್ಲಿಕೇಶನ್ ಅಂದ್ರೆ ಏನು? ಯಾಕೆ ಈ ಅಪ್ಲಿಕೇಶನ್ ಕಡ್ಡಾಯಗೊಳಿಸಲಾಗಿದೆ? ಇದರ ಪ್ರಯೋಜನಗಳೇನು? ಎನ್ನುವುದು ಕೆಲವು ಬುದ್ದಿಜೀವಿಗಳ ಅನಿವಾರ್ಯ ಪ್ರಶ್ನೆಯಾಗಿದ್ದು ಇವುಗಳಿಗೆ ಸೂಕ್ತ ಉತ್ತರ ಈ ಕೆಳಗೆ ವಿವರಿಸಲಾಗಿದೆ.

Digit.in Survey
✅ Thank you for completing the survey!

Also Read: Cybersecurity Apps: ಪ್ರತಿಯೊಂದು ಫೋನ್‌ಗಳಲ್ಲಿ ಸೈಬರ್ ಸೆಕ್ಯೂರಿಟಿ ಆಪ್ ಹಾಕುವಂತೆ ಬ್ರಾಂಡ್‍ಗಳಿಗೆ ಆದೇಶಿಸಿದ ಸರ್ಕಾರ!

ಸಂಚಾರ್ ಸಾಥಿ ಅಪ್ಲಿಕೇಶನ್ (Sanchar Saathi App) ಎಂದರೇನು?

ಇದೊಂದು ಸರ್ಕಾರಿ ಅಪ್ಲಿಕೇಶನ್ ಆಗಿದ್ದು ಇದನ್ನು ಬಳಕೆದಾರರು ಅಗತ್ಯವಿಲ್ಲದಿದ್ದರೆ ರಿಜಿಸ್ಟರ್ ಆದ ಮೇಲೆ ಡಿಲೀಟ್ ಸಹ ಮಾಡಬಹುದು ಅನ್ನೋದು ಗಮನಿಸಬೇಕಿದೆ. ಕೇಂದ್ರದ ಡಿಜಿಟಲ್ ಸುರಕ್ಷತಾ ಉಪಕ್ರಮವಾದ ಸಂಚಾರ್ ಸಾಥಿ ಮೊಬೈಲ್ ಅಪ್ಲಿಕೇಶನ್ ಮತ್ತು ಅದರ ವೆಬ್ ಪೋರ್ಟಲ್ ಮೂಲಕ ಬಹು ನಾಗರಿಕ ಕೇಂದ್ರಿತ ಸೇವೆಗಳನ್ನು ಒದಗಿಸುತ್ತದೆ. ಈ ಸೇವೆಗಳಲ್ಲಿ ಚಕ್ಷು ಸೇರಿದ್ದು ಇದು ಫೋನ್ ಬಳಕೆದಾರರಿಗೆ ಶಂಕಿತ ಸೈಬರ್ ವಂಚನೆಯನ್ನು ವರದಿ ಮಾಡಲು ಸಹಕರಿಸುವ ಅತ್ಯುತ್ತಮ ಮೊಬೈಲ್ ಅಪ್ಲಿಕೇಶನ್ ಆಗಿದೆ.

Sanchar Saathi App: ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಯಾಕೆ ಕಡ್ಡಾಯ?

Sanchar Saathi App ಯಾಕೆ ಕಡ್ಡಾಯಗೊಳಿಸಲಾಗಿದೆ?

ಸಂಚಾರ್ ಸಾಥಿ ಇದೊಂದು ದೂರಸಂಪರ್ಕ ಇಲಾಖೆಯ ಪ್ರಕಾರ ನಾಗರಿಕರ ಯಾವುದೇ ಸ್ಮಾರ್ಟ್‌ ಡಿವೈಸ್ ಅದರಲ್ಲೂ ಮುಖ್ಯವಾಗಿ ಸ್ಮಾರ್ಟ್ಫೋನ್‌ಗಳಿಗೆ ನೇರವಾಗಿ ಪವರ್ಫುಲ್ ಭದ್ರತಾ ಫೀಚರ್ ಮತ್ತು ವಂಚನೆಯ ವರದಿ ಮಾಡುವ ಸಾಮರ್ಥ್ಯಗಳೊಂದಿಗೆ ಸಿದ್ಧವಿದೆ. ಇದು ಕಳ್ಳತನದ ಗುರುತು, ಲಾಸ್ಟ ಲೊಕೇಶನ್, ನಕಲಿ KYC, ಫೋನ್ ಕಳ್ಳತನ, ಬ್ಯಾಂಕಿಂಗ್ ವಂಚನೆ ಮತ್ತು ಬ್ಲಾಕ್ ಮಾರ್ಕೆಟ್ ಫೋನ್ಗಳ ಬಳಕೆಯಂತಹ ಇತರ ಸೈಬರ್ ಅಪಾಯಗಳ ವಿರುದ್ಧ ರಕ್ಷಣೆಯನ್ನು ಒದಗಿಸುವ ಮೂಲಕ ಈ ಅಪ್ಲಿಕೇಶನ್ ಪೂರಕವಾಗಿದೆ. ಆದ್ದರಿಂದ ಪ್ರತಿಯೊಂದು ಸ್ಮಾರ್ಟ್‌ಫೋನ್‌ನಲ್ಲಿ ಈ ಸಂಚಾರ್ ಸಾಥಿ ಅಪ್ಲಿಕೇಶನ್ ಕಡ್ಡಾಯಗೊಳಿಸಲಾಗಿದೆ. ಇದು ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಕಳೆದುಹೋದ ಅಥವಾ ಕದ್ದ ಸ್ಮಾರ್ಟ್‌ಫೋನ್‌ಗಳನ್ನು ನಿರ್ಬಂಧಿಸಲು ಮತ್ತು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

Sanchar Saathi App ಪ್ರಯೋಜನಗಳೇನು?

ಮೊಬೈಲ್ ವಂಚನೆಯನ್ನು ತಡೆಯುವುದು: ಈ ಅಪ್ಲಿಕೇಶನ್ ಬಳಕೆದಾರರು ತಮ್ಮ ಮೊಬೈಲ್ ಸಂಪರ್ಕಗಳನ್ನು ನಿರ್ವಹಿಸಲು ಮತ್ತು ಅನುಮಾನಾಸ್ಪದ ಚಟುವಟಿಕೆಯನ್ನು ವರದಿ ಮಾಡಲು ಅನುಮತಿಸುವ ಮೂಲಕ ಹಣಕಾಸಿನ ವಂಚನೆ ಮತ್ತು ಗುರುತಿನ ಕಳ್ಳತನವನ್ನು ತಡೆಯಲು ಸಹಾಯ ಮಾಡುತ್ತದೆ.

IMEI ಪರಿಶೀಲನೆ: ನಕಲಿ ಅಥವಾ ತಿರುಚಿದ ಅಂತರರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು (IMEI) ಸಂಖ್ಯೆಗಳ ಬಳಕೆಯು ಒಂದು ಪ್ರಮುಖ ಸಮಸ್ಯೆಯಾಗಿದ್ದು ಇದು ಕಾನೂನು ಜಾರಿ ಸಂಸ್ಥೆಗಳಿಗೆ ಅನುಮಾನಾಸ್ಪದ ಸಾಧನಗಳನ್ನು ಪತ್ತೆಹಚ್ಚುವುದನ್ನು ಕಷ್ಟಕರವಾಗಿಸುತ್ತದೆ. ಅಪ್ಲಿಕೇಶನ್ ಪ್ರತಿ ಫೋನ್ ಅನ್ನು ಪರಿಶೀಲಿಸಿದ IMEI ಡೇಟಾಬೇಸ್‌ಗೆ ಲಿಂಕ್ ಮಾಡುತ್ತದೆ ಇದು ಬಳಕೆದಾರರಿಗೆ ಸಾಧನದ ನೈಜತೆಯನ್ನು ಪರಿಶೀಲಿಸಲು ಅನುವು ಮಾಡಿಕೊಡುತ್ತದೆ ವಿಶೇಷವಾಗಿ ಸೆಕೆಂಡ್ ಹ್ಯಾಂಡ್ ಫೋನ್‌ಗಳನ್ನು ಖರೀದಿಸುವಾಗ ಇದು ಮುಖ್ಯವಾಗಿದೆ.

Sanchar Saathi App

ಕಳೆದುಹೋದ ಅಥವಾ ಕಳುವಾದ ಫೋನ್‌ಗಳ ಪತ್ತೆ: ಬಳಕೆದಾರರು ಕಳೆದುಹೋದ ಅಥವಾ ಕಳುವಾದ ಸಾಧನದ ಬಗ್ಗೆ ಅಪ್ಲಿಕೇಶನ್ ಅಥವಾ ಸಂಚಾರ್ ಸಾಥಿ ಪೋರ್ಟಲ್ ಮೂಲಕ ವರದಿ ಮಾಡಬಹುದು ನಂತರ ಭಾರತದ ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಅದರ IMEI ಅನ್ನು ನಿರ್ಬಂಧಿಸುತ್ತದೆ, ಇದರಿಂದಾಗಿ ಫೋನ್ ನಿರುಪಯುಕ್ತವಾಗುತ್ತದೆ.

ವಂಚನೆಯ ಸಂಪರ್ಕಗಳನ್ನು ಗುರುತಿಸುವುದು: ಈ ವೇದಿಕೆಯು ಬಳಕೆದಾರರಿಗೆ ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಎಲ್ಲಾ ಮೊಬೈಲ್ ಸಂಪರ್ಕಗಳನ್ನು ನೋಡಲು ಮತ್ತು ಅವರಿಗೆ ತಿಳಿಯದೆ ತೆಗೆದುಕೊಂಡ ಯಾವುದೇ ಸಂಪರ್ಕಗಳನ್ನು ವರದಿ ಮಾಡಲು ಅನುಮತಿಸುತ್ತದೆ ಇದು ದೂರಸಂಪರ್ಕ ಸಂಪನ್ಮೂಲಗಳ ದುರುಪಯೋಗವನ್ನು ತಡೆಯಲು ಸಹಾಯ ಮಾಡುತ್ತದೆ.

ಹಗರಣಗಳನ್ನು ವರದಿ ಮಾಡುವುದು: ಈ ಅಪ್ಲಿಕೇಶನ್ “ಚಕ್ಷು” ಎಂಬ ವೈಶಿಷ್ಟ್ಯವು ಬಳಕೆದಾರರಿಗೆ ಫಿಶಿಂಗ್ ಲಿಂಕ್‌ಗಳು, ನಕಲಿ KYC ಎಚ್ಚರಿಕೆಗಳು ಮತ್ತು ಕರೆಗಳು, SMS ಅಥವಾ WhatsApp ಮೂಲಕ ನಕಲಿ ವಂಚನೆಗಳಂತಹ ಶಂಕಿತ ವಂಚನೆ ಸಂವಹನಗಳನ್ನು ವರದಿ ಮಾಡಲು ಅನುಮತಿಸುತ್ತದೆ ಇದು ತ್ವರಿತ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo