Cybersecurity Apps: ಪ್ರತಿಯೊಂದು ಫೋನ್‌ಗಳಲ್ಲಿ ಸೈಬರ್ ಸೆಕ್ಯೂರಿಟಿ ಆಪ್ ಹಾಕುವಂತೆ ಬ್ರಾಂಡ್‍ಗಳಿಗೆ ಆದೇಶಿಸಿದ ಸರ್ಕಾರ!

HIGHLIGHTS

ಭಾರತದಲ್ಲಿ ಬರೋಬ್ಬರಿ 1.2 ಬಿಲಿಯನ್‌ಗಿಂತಲೂ ಹೆಚ್ಚು ಟೆಲಿಕಾಂ ಬಳಕೆದಾರರಿದ್ದಾರೆ.

ಈ ಸೈಬರ್ ಭದ್ರತಾ ಬೆದರಿಕೆಗಳನ್ನು ಎದುರಿಸಲು ಈ ಆ್ಯಪ್ ಪರಿಣಾಮಕಾರಿ ಎಂದು ಸರ್ಕಾರ ಹೇಳಿದೆ.

ಪ್ರಸ್ತುತ ಆಪಲ್, ಸ್ಯಾಮ್‌ಸಂಗ್, ವಿವೋ, ಒಪ್ಪೋ, ಶಿಯೋಮಿ ಮೇಲೆ ಈ ನಿರ್ದೇಶನ ಪರಿಣಾಮ ಬೀರುತ್ತದೆ.

Cybersecurity Apps: ಪ್ರತಿಯೊಂದು ಫೋನ್‌ಗಳಲ್ಲಿ ಸೈಬರ್ ಸೆಕ್ಯೂರಿಟಿ ಆಪ್ ಹಾಕುವಂತೆ ಬ್ರಾಂಡ್‍ಗಳಿಗೆ ಆದೇಶಿಸಿದ ಸರ್ಕಾರ!

Cybersecurity Apps: ಭಾರತ ಸರ್ಕಾರ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿಗಳಾದ Apple, Samsung, Xiaomi, Vivo, OPPO, Realme, OnnePlus, Honor, POCO, ಮತ್ತು ಇತರ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ತಮ್ಮ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕೃತ ಸೈಬರ್ ಭದ್ರತಾ ಅಪ್ಲಿಕೇಶನ್ ಜೊತೆಗೆ ಬರುವುದನ್ನು ಖಚಿತಪಡಿಸಿಕೊಳ್ಳಲು ಕಡ್ಡಾಯಗೊಳಿಸುತ್ತಿದೆ. ರಾಯಿಟರ್ಸ್‌ನ ವರದಿಯ ಪ್ರಕಾರ ದೂರಸಂಪರ್ಕ ಸಚಿವಾಲಯವು ಖಾಸಗಿಯಾಗಿ ಸ್ಮಾರ್ಟ್‌ಫೋನ್ ತಯಾರಕರನ್ನು ಎಲ್ಲಾ ಹೊಸ ಸಾಧನಗಳಲ್ಲಿ ಸರ್ಕಾರಿ ಸ್ವಾಮ್ಯದ ಸಂಚಾರ್ ಸಾಥಿ ಯಂತಹ ಸೈಬರ್ ಸೆಕ್ಯೂರಿಟಿ ಅಪ್ಲಿಕೇಶನ್ಗಳನ್ನು ಪೂರ್ವ ಲೋಡ್ ಮಾಡಲು ಕೇಳಿಕೊಂಡಿದೆ. ಒಟ್ಟಾರೆಯಾಗಿ ಭಾರತದಲ್ಲಿ ಸೈಬರ್ ಭದ್ರತೆಗಾಗಿ ಪ್ರತಿಯೊಂದು ಸ್ಮಾರ್ಟ್‌ಫೋನ್‌ಗಳಲ್ಲಿ ಸರ್ಕಾರಿ ಸೈಬರ್ ಸುರಕ್ಷತಾ ಅಪ್ಲಿಕೇಶನ್ ಪೂರ್ವ ಲೋಡ್ ಮಾಡಲು ಸರ್ಕಾರ ಆದೇಸಿದೆ.

Digit.in Survey
✅ Thank you for completing the survey!

Cybersecurity Apps ಸಂಚಾರ್ ಸಾಥಿ ಅಪ್ಲಿಕೇಶನ್:

ಪ್ರಸ್ತುತ ಎರಡು ದಿನಗಳ ಹಿಂದೆ ಅಂದ್ರೆ 28ನೇ ನವೆಂಬರ್ 2025 ರಂದು ಹೊರಡಿಸಲಾದ ಸರ್ಕಾರಿ ಆದೇಶದಡಿಯಲ್ಲಿ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸರ್ಕಾರದ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಹೊಸ ಮೊಬೈಲ್ ಫೋನ್‌ಗಳಲ್ಲಿ ಮೊದಲೇ ಸ್ಥಾಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು 90 ದಿನಗಳ ಕಾಲಾವಕಾಶ ನೀಡುತ್ತದೆ. ಅಲ್ಲದೆ ಪ್ರಸ್ತುತ ಬಳಕೆದಾರರು ಅದನ್ನು ನಿಷ್ಕ್ರಿಯಗೊಳಿಸಲು ಸಾದ್ಯವಾಗೋದಿಲ್ಲ. ನಕಲಿ ಅಥವಾ ವಂಚನೆಯ IMEI ಸಂಖ್ಯೆಗಳಿಂದ ಟೆಲಿಕಾಂ ಸೈಬರ್ ಭದ್ರತೆಗೆ ಉಂಟಾಗುವ ಗಂಭೀರ ಅಪಾಯವನ್ನು ಎದುರಿಸಲು ಈ ಅಪ್ಲಿಕೇಶನ್ ಅತ್ಯಗತ್ಯ ಎಂದು ಸರ್ಕಾರ ಹೇಳಿದ್ದು ಇದು ವಂಚನೆಗಳು ಮತ್ತು ನೆಟ್‌ವರ್ಕ್ ದುರುಪಯೋಗಕ್ಕೆ ಅನುವು ಮಾಡಿಕೊಡುತ್ತದೆ.

Cybersecurity Apps

ಈಗಾಗಲೇ ಬಳಕೆಯಲ್ಲಿರುವ ಪಹೊಂಗಳಲ್ಲಿ ಫೋನ್ಗಳಲ್ಲಿ ಬ್ರಾಂಡ್ ತಯಾರಕರು ಹೊಸ ಸಾಫ್ಟ್‌ವೇರ್ ಅಪ್ಡೇಟ್ ನೀಡುವ ಮೂಲಕ ಪ್ರತಿಯೊಂದು ಫೋನ್‌ಗಳಲ್ಲಿ ಈ ಸರ್ಕಾರಿ ಸೈಬರ್ ಅಪ್ಲಿಕೇಶನ್ ನೀಡಬೇಕೆಂದು ಆದೇಶಿಸಿದೆ. ವರದಿಯ ಪ್ರಕಾರ ಈ ಅಪ್ಲಿಕೇಶನ್ ಸೈಬರ್ ಬೆದರಿಕೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕಳೆದುಹೋದ ಅಥವಾ ಕದ್ದ ಫೋನ್‌ಗಳನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಸಹಾಯ ಮಾಡುತ್ತದೆ ನಕಲಿ ಡಿವೈಸ್ಗಳನ್ನು ಬ್ಲಾಕ್ ಮಾರ್ಕೆಟ್‌ನಿಂದ ದೂರವಿಡುವುದರೊಂದಿಗೆ ಅವನ್ನು ಪತ್ತೆಹಚ್ಚಲು ಪೊಲೀಸರಿಗೆ ಸಹಾಯ ಮಾಡುತ್ತದೆ.

Also Read: BSNL Freedom Plan: ಬಿಎಸ್ಎನ್ಎಲ್ ಕೇವಲ 1 ರೂಗಳ ಫ್ರೀಡಂ ರಿಚಾರ್ಜ್ ಪ್ಲಾನ್ ಆಫರ್ ಈಗ ಮತ್ತಷ್ಟು ದಿನ ವಿಸ್ತರಣೆ!

Sanchar Saathi App ಬಳಕೆ:

ಇದೊಂದು ದೂರಸಂಪರ್ಕ ಇಲಾಖೆಯ ಪ್ರಕಾರ ನಾಗರಿಕ-ಕೇಂದ್ರಿತ ಸಾಧನವು ಬಳಕೆದಾರರ ಸ್ಮಾರ್ಟ್‌ಫೋನ್‌ಗಳಿಗೆ ನೇರವಾಗಿ ಬಲವಾದ ಭದ್ರತಾ ಫೀಚರ್ಗಳು ಮತ್ತು ವಂಚನೆಯ ವರದಿ ಮಾಡುವ ಸಾಮರ್ಥ್ಯಗಳನ್ನು ತರುತ್ತದೆ. ಗುರುತಿನ ಕಳ್ಳತನ, ನಕಲಿ KYC, ಫೋನ್ ಕಳ್ಳತನ, ಬ್ಯಾಂಕಿಂಗ್ ವಂಚನೆ ಮತ್ತು ಇತರ ಸೈಬರ್ ಅಪಾಯಗಳ ವಿರುದ್ಧ ಅನುಕೂಲಕರ ಪ್ರಯಾಣದಲ್ಲಿರುವಾಗ ರಕ್ಷಣೆಯನ್ನು ಒದಗಿಸುವ ಮೂಲಕ ಅಪ್ಲಿಕೇಶನ್ ಅಸ್ತಿತ್ವದಲ್ಲಿರುವ ಸಂಚಾರ್ ಸಾಥಿ ಪೋರ್ಟಲ್‌ಗೆ ಪೂರಕವಾಗಿದೆ. ಸಂಚಾರ್ ಸಾಥಿ ಅಪ್ಲಿಕೇಶನ್ ಮುಖ್ಯವಾಗಿ ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಕಳೆದುಹೋದ ಅಥವಾ ಕದ್ದ ಸ್ಮಾರ್ಟ್‌ಫೋನ್‌ಗಳನ್ನು ನಿರ್ಬಂಧಿಸಲು ಮತ್ತು ಟ್ರ್ಯಾಕ್ ಮಾಡಲು ಬಳಕೆದಾರರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

SIM Rules: ಸಿಮ್ ಆಕ್ಟಿವ್ ಇದ್ದರೆ ಮಾತ್ರ ಸೋಶಿಯಲ್ ಮೀಡಿಯಾ ಬಳಕೆ:

ವಂಚನೆಯನ್ನು ತಡೆಗಟ್ಟಲು ಎಲ್ಲಾ ಹೊಸ ಸಿಮ್ ಕಾರ್ಡ್ ಸಕ್ರಿಯಗೊಳಿಸುವಿಕೆಗಳಿಗೆ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ ಅಗತ್ಯವಿದೆ. ಈ ಬದಲಾವಣೆಗಳಿಂದ ಸೈಬರ್ ಕ್ರೈಂ ಮತ್ತು ಮೋಸಗಳಲ್ಲಿ ಸಿಮ್ ಕಾರ್ಡ್‌ಗಳ ತಪ್ಪು ಬಳಕೆಯನ್ನು ತಡೆಯಲು ಯತ್ನಿಸಲಾಗಿದೆ. ಇದರಿಂದ ಸುಳ್ಳು ಹೇಳಿ ಕನೆಕ್ಷನ್‌ಗಳನ್ನು ಪಡೆಯುವುದು ಕಷ್ಟವಾಗುತ್ತದೆ.

ಟೆಲಿಕಾಂ ಇಲಾಖೆ (DoT) ಹೊಸ ಆದೇಶದ ಪ್ರಕಾರ ಪ್ಲಾಟ್‌ಫಾರ್ಮ್‌ಗಳು ತಮ್ಮ ಅಪ್ಲಿಕೇಶನ್‌ಗಳನ್ನು ಜನರ ಸಿಮ್ ಕಾರ್ಡ್‌ಗಳ ಜೊತೆ ಜೋಡಣೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಈಗ 90 ದಿನಗಳ ಕಾಲಾವಕಾಶ ಸಿಕ್ಕಿದೆ. ಅಂದರೆ ಯಾವುದೇ ಹಳೆ ಸಿಮ್ ಕಾರ್ಡ್ ಅಥವಾ ಇಂಟರ್ನೆಟ್ ಮೂಲಕ ಪಡೆಯದ ನಂಬರ್ ಬಳಸಿಕೊಂಡು WhatsApp ಮತ್ತು ಬೇರೆ ಯಾವುದೇ ಅಪ್ಲಿಕೇಷನ್ ನಡೆಯುತ್ತಿದ್ದರೆ ತಕ್ಷಣ ಬಂದ್ ಆಗುವ ಸಾದ್ಯತೆಗಳಿವೆ. ಟೆಲಿಕಾಂ ಇಲಾಖೆಯು ಈ OTT ಅಪ್ಲಿಕೇಶನ್‌ಗಳನ್ನು ಬಳಕೆದಾರರ ಸಿಮ್ ಕಾರ್ಡ್‌ನೊಂದಿಗೆ ಬಂಧಿಸಲು ಒತ್ತಾಯಿಸುತ್ತಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo