FaceApp ನ್ಯೂಸ್: ಈ ಫೇಸ್ಆಪ್ ಬಳಸದಿರಲು ಟಾಪ್ ಐದು ಕಾರಣಗಳನೊಮ್ಮೆ ನೋಡಲೇಬೇಕು

FaceApp ನ್ಯೂಸ್: ಈ ಫೇಸ್ಆಪ್ ಬಳಸದಿರಲು ಟಾಪ್ ಐದು ಕಾರಣಗಳನೊಮ್ಮೆ ನೋಡಲೇಬೇಕು
HIGHLIGHTS

ನೀವು ಈ ಕ್ಷಣದಿಂದಲೇ ಫೇಸ್‌ಆಪ್ (FaceApp) ಬಳಸುವುದನ್ನು ನಿಲ್ಲಿಸಲು ನೀವೇ ಅರಿಯದ ಕೆಲವು ಅತಿದೊಡ್ಡ ಕಾರಣಗಳಿವೆ.

ಅವಸರದಲ್ಲಿ ಅಥವಾ ತಮ್ಮ ವಿಡಿಯೋ ಅಥವಾ ಫೋಟೋಗಳನ್ನು ಯಾವುದೇ ಷರತ್ತುಗಳನ್ನೂ ನೋಡದೆ ಓದದೆ ಎಲ್ಲಕ್ಕೂ ಸೈ ಹೇಳಿ ಬಳಸಲು ತವಕದಲ್ಲಿರುವವರು ಹೆಚ್ಚೆಂದು ದಟ್ಟವಾಗಿ ಕಾಣುತ್ತದೆ.

ಈ ಫೇಸ್‌ಆಪ್ ಬಗ್ಗೆ ನೀವೀಗಾಗಲೇ ಹೆಚ್ಚಾಗಿ ಕೇಳಿರಲೇಬೇಕು ಏಕೆಂದರೆ ಈ 'FaceApp' ಎಂಬುದು ತಂತ್ರಜ್ಞಾನದ ಇತ್ತೀಚಿನ ವೈರಲ್ ವಿಷಯವಾಗಿದ್ದು ಪ್ರಸ್ತುತ ಜನರನ್ನು ವಯಸ್ಸಾದ ಮತ್ತು ಬಣ್ಣಗಳನ್ನು ಹಚ್ಚಿ ಹೇಗೆ ಕಾಣುತ್ತಾರೆಂಬ ಮಾಹಿತಿಯನ್ನು ಈ ಮೂಲಕ ಮುಂದೆ ಹೇಗೆಲ್ಲ ಕಾಣಬವುದು ಎಂಬುದರ ಬಗ್ಗೆ ಒಂದು ನೋಟವನ್ನು ನೀಡುತ್ತದೆ. ಈ ಅಪ್ಲಿಕೇಶನ್ ತನ್ನ ಇತ್ತೀಚಿನ ಫಿಲ್ಟರ್ ಮೂಲಕ ಕೆಲವು ಜನಪ್ರಿಯತೆಯನ್ನು ನವೀಕರಿಸುವಲ್ಲಿ ಯಶಸ್ವಿಯಾಗಿದ್ದರೂ ಇದೀಗ ಅದರ ಸುತ್ತಲೂ ಸುರಕ್ಷತೆ ಮತ್ತು ಗೌಪ್ಯತೆ ಕಾಳಜಿಗಳ ಬಗ್ಗೆ ದೇಶಗಳು ಚಿಂತಿಸುವಂತಾಗಿದೆ. ಏಕೆಂದರೆ ಈ ರೀತಿಯ ಎಡಿಟ್ಗಳನ್ನು ಬಳಕೆದಾದರೂ ಮಾಡಲು ಫೇಸ್‌ಅಪ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಟುಲ್ಗಳನ್ನು ಬಳಸಿದೆ. ಇದರ ಮೂಲಕ ಅವಸರದಲ್ಲಿ ಅಥವಾ ತಮ್ಮ ವಿಡಿಯೋ ಅಥವಾ ಫೋಟೋಗಳನ್ನು ಹೊಸ ಅಪ್ಲಿಕೇಷನ್ಗಳಲ್ಲಿ ವೈರಲ್ ಮಾಡಿ ಪ್ರಸಿದ್ಧಿಗಳಿಸಲು ಯಾವುದೇ ಷರತ್ತುಗಳನ್ನೂ ನೋಡದೆ ಓದದೆ ಎಲ್ಲಕ್ಕೂ ಸೈ ಹೇಳಿ ಬಳಸಲು ತವಕದಲ್ಲಿರುವವರು ಹೆಚ್ಚೆಂದು ದಟ್ಟವಾಗಿ ಕಾಣುತ್ತದೆ.     

ನೀವು ಈ ಕ್ಷಣದಿಂದಲೇ ಫೇಸ್‌ಆಪ್ (FaceApp) ಬಳಸುವುದನ್ನು ನಿಲ್ಲಿಸಲು ನೀವೇ ಅರಿಯದ ಕೆಲವು ಅತಿದೊಡ್ಡ ಕಾರಣಗಳಿವೆ.  ಈಗಾಗಲೇ ಅಮೆರಿಕ ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಂಡಿದೆ. ಇತ್ತೀಚೆಗೆ ಡೆಮಾಕ್ರಟಿಕ್ ಪಕ್ಷದ ಮುಖಂಡರು ಅದನ್ನು ತಕ್ಷಣ ತಮ್ಮ ಮೊಬೈಲ್‌ನಿಂದ ತೆಗೆದುಹಾಕಿ FBI ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಆದಾಗ್ಯೂ ಈ ಅಪ್ಲಿಕೇಶನ್ ರಷ್ಯನ್ ಆಗಿರುವುದರಿಂದ ಅಮೇರಿಕ ಹೆಚ್ಚು ಚಿಂತಾಜನಕರಾಗಿದ್ದರೆ. ಈ ಮೊದಲು ರಷ್ಯಾ ತನ್ನ ಚುನಾವಣೆಗಳನ್ನು ಇಂಟರ್ನೆಟ್ ಮೂಲಕ ಪ್ರಭಾವಿಸುತ್ತಿದೆ ಎಂದು ಅಮೇರಿಕ ಆರೋಪಿಸಿತ್ತು. ಈ ರೀತಿಯ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ನಮ್ಮ ನಿಮ್ಮ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳುವ ಅಪಾಯ ಹೊಸದಲ್ಲ. ಫೇಸ್ಬುಕ್ ಮತ್ತು ಗೂಗಲ್‌ನಂತಹ ದೊಡ್ಡ ಕಂಪನಿಗಳು ಡೇಟಾ ಅಥವಾ ವೈಯಕ್ತಿಕ ಮಾಹಿತಿಯ ದುರುಪಯೋಗದ ಆರೋಪಗಳನ್ನು ಎದುರಿಸಿವೆ. ಈ ಕಂಪನಿಗಳು ಶತಕೋಟಿ ರೂಪಾಯಿಗಳನ್ನು ಈಗಾಗಲೇ ಪಾವತಿಸಿ ಮಾಹಿತಿಗಳನ್ನು ರಕ್ಷಿಸುತ್ತಿವೆ.

http://oi68.tinypic.com/skxft4.jpg

ಈ ಅಪ್ಲಿಕೇಶನ್‌ ಡೆವಲಪರ್ಗಳು ನೀವು ಅಪ್ಲೋಡ್ ಮಾಡಿದ ಯಾವುದೇ ಫೋಟೋಗಳನ್ನು ಮತ್ತೆ ಮತ್ತೆ ಬಳಸಬಹುದು: ಫೇಸ್‌ಆಪ್‌ನ ಪ್ರಮುಖ ಭದ್ರತಾ ಕಾಳಜಿಗಳೆಂದರೆ ಈ ಅಪ್ಲಿಕೇಶನ್ ರಷ್ಯಾದಲ್ಲಿ ಅಭಿವೃದ್ಧಿಗೊಂಡಿದ್ದು ಈ ಅಪ್ಲಿಕೇಶನ್‌ನ ಬಳಕೆದಾರ ಎಲ್ಲ ವಿಷಯ ಒಪ್ಪಂದಕ್ಕಾಗಿ ನೀವು ಇದನ್ನು ಮೊದಲ ಬಾರಿಗೆ ಚಲಿಸುವಾಗ ಅದರ ಒಪ್ಪಂದಕ್ಕೆ 'ಸರಿ' ಎಂದು ಒಪ್ಪುತೀರ. ಅಂದ್ರೆ ಫೇಸ್‌ಅಪ್‌ನ ಫಿಲ್ಟರ್‌ಗಳನ್ನು ಬಳಸುವ ಮೊದಲು ಒಪ್ಪಂದದ ನಿಯಮಗಳ ಪ್ರಕಾರ ಅಪ್ಲಿಕೇಶನ್‌ನ ಡೆವಲಪರ್‌ಗಳು ಸೆರೆಹಿಡಿದ ಮತ್ತು ಅಪ್ಲಿಕೇಶನ್‌ಗೆ ಅಪ್ಲೋಡ್ ಮಾಡಿದ ಯಾವುದೇ ಚಿತ್ರವನ್ನು ಇರಿಸಿಕೊಳ್ಳಬಹುದು ಅಥವಾ ಮತ್ತೆ ಅವನ್ನು ಬಳಸಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ.

ನಿಮ್ಮ ಪ್ರತಿಯೊಂದು ಫೋಟೋವನ್ನು ಅಪ್ಲಿಕೇಶನ್‌ ಜೊತೆಗೆ ನೇರವಾಗಿ ಇವರ ಸರ್ವರ್ಗಳಲ್ಲು ಸಹ ಸೇರಿಸಲಾಗುತ್ತದೆ: ಫೇಸ್‌ಆಪ್‌ಗೆ ಸಂಬಂಧಿಸಿದ ಕಾಳಜಿಗಳ ಬಗ್ಗೆ ಬಹುಶಃ ಅತ್ಯಂತ ಆತಂಕಕಾರಿ ಸಂಗತಿಯೆಂದರೆ ಅದು ನಿಮ್ಮ ಗ್ಯಾಲರಿಯಿಂದ ಸೆರೆಹಿಡಿಯಲಾದ ಅಥವಾ ಅಪ್‌ಲೋಡ್ ಮಾಡಿದ ಫೋಟೋಗಳನ್ನು ನಿಮ್ಮಿಂದ ಸಾವಿರಾರು ಮೈಲುಗಳ ದೂರದಲ್ಲಿರುವ ಇವರ ಸರ್ವರ್‌ಗೆ ಕಳುಹಿಸುತ್ತದೆ. ನಿಮ್ಮ ಅಪ್ಲೋಡ್ ನಂತರ ನಿಮ್ಮ ಸುಕ್ಕುಗಟ್ಟಿದ ಮುಖದೊಂದಿಗೆ ನಿಮ್ಮ ಅಸಲಿ ಮುಖ ಮತ್ತು ಕೂದಲಿನ ಆವೃತ್ತಿಯನ್ನು ತನ್ನಲಿ ಈ ಡೇಟಾವನ್ನಾಗಿಸಿ ಪ್ರಕ್ರಿಯೆಗೊಳಿಸುತ್ತದೆ.

ನಿಮ್ಮ ಗ್ಯಾಲರಿಯಲ್ಲಿರುವ ಕ್ಯಾಮೆರಾಕ್ಕೆ ಸಂಬಧಿಸಿದ ಎಲ್ಲವನ್ನೂ (ಫೋಟೋ, ವಿಡಿಯೋ) ಈ ಅಪ್ಲಿಕೇಶನ್ ನೋಡುತ್ತದೆ: ಇದು ಸಾಬೀತಾಗಿಲ್ಲವಾದರೂ ನಿಮ್ಮ ಗ್ಯಾಲರಿಯಲ್ಲಿ ಉಳಿಸಲಾದ (Save) ಆಗಿರುವ ಪ್ರತಿಯೊಂದು ಫೋಟೋವನ್ನೂ ಈ ಫೇಸ್‌ಆಪ್ ನೋಡುವ ಸಾಧ್ಯತೆಯಿದೆ. ನೀವು ಅಪ್ಲೋಡ್ ಮಾಡುವ ಮತ್ತು ವಯಸ್ಸಿನ ಫಿಲ್ಟರ್ ಅನುಮತಿಸುವ ಚಿತ್ರಗಳನ್ನು ಅಪ್ಲಿಕೇಶನ್‌ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗಿದೆ ಎಂದು ದೃಡಿಕರಿಸಲಾಗಿದ್ದರೂ ಬಳಕೆದಾರರು ತಮ್ಮ ಗ್ಯಾಲರಿಯನ್ನು ಪ್ರವೇಶಿಸಲು ಅನುಮತಿ ನೀಡಿದಾಗ ಮಾತ್ರವೇ  ಅಪ್ಲಿಕೇಶನ್‌ನಲ್ಲಿ ತೋರಿಸಿರುವ ಚಿತ್ರಗಳಿಗೆ ಪ್ರವೇಶ ನೀಡಬವುದು. ನಿಮ್ಮ ಗ್ಯಾಲರಿಯಲ್ಲಿರುವ ಯಾವುದಾದರೊಂದು ಫೋಟ್ ಆಯ್ಕೆ ಮಾಡುವಾಗ ಅಂದ್ರೆ ಇಲ್ಲಿಂದ ಅಪ್ಲಿಕೇಶನ್ ಬೇರೆ ಫೋಟೋ ಅಥವಾ ವಿಡಿಯೋಗಳನ್ನು ಈ ಮೂಲಕ ಸುಲಭವಾಗಿ ನೋಡುತ್ತದೆ. 

ಅಪ್ಲೋಡ್ ಮಾಡಿದ ಫೋಟೋಗಳನ್ನು ಬೇರೆ ಮೀಡಿಯಾ ವಲಯದಲ್ಲಿ ತನ್ನಿಷ್ಟದಂತೆ ತೋರಿಸಬವುದು: ನೀವು ಅಪ್ಲೋಡ್ ಮಾಡಿದ ಫೋಟೋಗಳನ್ನು ತನ್ನಲ್ಲಿ ಇರಿಸುವುದು ಮತ್ತು ಬೇರೆ ಮೀಡಿಯಾ ವಲಯದಲ್ಲಿ ಬಳಸುವುದು ಒಂದು ರೀತಿಯಲ್ಲಿ ಭಾರಿ ತಲೆ ನೋವಿನ  ವಿಷಯವಾಗಿದೆ. ಆದರೆ ಇಂಟರ್ನೆಟ್ (ಅಶ್ಲೀಲ ಪ್ರಪಂಚ) ಮತ್ತು ಪ್ರಪಂಚದಾದ್ಯಂತ ನಿಮ್ಮ ಚಿತ್ರಗಳನ್ನು ಮತ್ತು ನಿಮ್ಮ ಹೆಸರನ್ನು ತೋರಿಸುವುದರಲ್ಲಿ ವಿಭಿನ್ನವಾಗಿದೆ. ನಿಮ್ಮ ಫೋಟೋ ಅಥವಾ ವಿಡಿಯೋ ಬಳಕೆದಾರ ಹೆಸರು ಅಥವಾ ಹೋಲಿಕೆಯನ್ನು ಎಲ್ಲಾ ಮಾಧ್ಯಮ ಸ್ವರೂಪಗಳು ಮತ್ತು ಚಾನಲ್‌ಗಳಲ್ಲಿ ಈಗ ನಿಮಗೆ ತಿಳಿಯದ ಅಥವಾ ನಂತರ ಅಭಿವೃದ್ಧಿಪಡಿಸಲಾದ ಸೈಟ್ಗಳಲ್ಲಿ ಬಳಸಬವುದು. ಇದರ ಅರ್ಥವೇನೆಂದರೆ ನಿಮ್ಮ ಒಪ್ಪಿಗೆಯ ಅಗತ್ಯತೆಯೊಂದಿಗೆ ಅಥವಾ ಅದೇ ಉದ್ದೇಶವನ್ನು ತಿಳಿಸದೆ ಫೇಸ್‌ಆಪ್ ನಿಮ್ಮ ಚಿತ್ರಗಳನ್ನು ಮತ್ತು ನಿಮ್ಮ ಹೆಸರನ್ನು ತಮಗೆ ಬೇಕಾದ ಯಾವುದೇ ಉದ್ದೇಶಕ್ಕಾಗಿ ಬಳಸಬಹುದು ಮತ್ತು ಹಂಚಿಕೊಳ್ಳಬಹುದು.

ಈ ಅಪ್ಲಿಕೇಶನ್ ಫೇಸ್ಬುಕ್ ಜೊತೆಗೆ ಮಾಹಿತಿಯನ್ನು ಹಂಚಿಕೊಳ್ಳುತ್ತದೆ: ನಿಮ್ಮ ಒಪ್ಪಿಗೆಯನ್ನು ಕೋರದೆ ಫೇಸ್‌ಬುಕ್‌ಗೆ ಮಾಹಿತಿಯನ್ನು ಕಳುಹಿಸಲು ಕಂಡುಬಂದ ಆ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಫೇಸ್‌ಆಪ್ ಅನ್ನು ಸೇರಿಸಲಾಗಿದೆ. ಫೇಸ್‌ಬುಕ್‌ನ ಇತ್ತೀಚಿನ ಗೌಪ್ಯತೆ ಹಗರಣಗಳು ಮತ್ತು ಡೇಟಾ ಉಲ್ಲಂಘನೆಗಳ ಮೂಲಕ ನಿರ್ಣಯಿಸುವುದು ನಿಮ್ಮ ಫೋನ್‌ನ ಮಾಹಿತಿಯನ್ನು ಫೇಸ್‌ಬುಕ್‌ಗೆ ಕಳುಹಿಸಲು ಫೇಸ್‌ಆಪ್ ಅನ್ನು ನೀವು ಅನುಮತಿಸುತ್ತೀರಾ? ಇಲ್ಲ್ವೋ ನೀವೇ ನೋಡಬೇಕಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo