Free Ration: ಉಚಿತ ರೇಷನ್ ಪಡೆಯಲು ಮನೆಯಲ್ಲೇ ಕುಳಿತು ಈ 2 ನಿಮಿಷದ ಕೆಲಸ ಮಾಡಿಕೊಳ್ಳಿ!

HIGHLIGHTS

ಪಡಿತರ ಚೀಟಿಯನ್ನು (Ration Card) ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಹೇಗೆ?

ಉಚಿತ ರೇಷನ್ ಪಡೆಯಲು ಮನೆಯಲ್ಲೇ ಕುಳಿತು ಈ 2 ನಿಮಿಷದ ಕೆಲಸ ಮಾಡಿಕೊಳ್ಳಿ ಸಾಕು!

ನಿಮ್ಮ ರೇಷನ್ ಕಾರ್ಡ್ ಅನ್ನು (Ration Card) ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್ ಮಾಡೋದು ಕಡ್ಡಾಯ.

Free Ration: ಉಚಿತ ರೇಷನ್ ಪಡೆಯಲು ಮನೆಯಲ್ಲೇ ಕುಳಿತು ಈ 2 ನಿಮಿಷದ ಕೆಲಸ ಮಾಡಿಕೊಳ್ಳಿ!

Free Ration: ಭಾರತದಲ್ಲಿ ಕಡಿಮೆ ವಾರ್ಷಿಕ ಆದಾಯವನ್ನು ಪಡೆಯುವ ವರ್ಗದವರಿಗೆ ಸರ್ಕಾರದಿಂದ ಉಚಿತ ಪಡಿತರ ಚೀಟಿಯನ್ನು (Ration Card) ನೀಡಲಾಗಿದೆ. ಇದರಿಂದ ಆ ವರ್ಗದ ಜನರಿಗೆ ಅತಿ ಕಡಿಮೆ ಬೆಲೆಗೆ ದವಸೆ ಧಾನ್ಯಗಳನ್ನು ಸರ್ಕಾರದಿಂದ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೆ ಕೆಲವೊಮ್ಮೆ ಉಚಿತವಾಗಿಯೇ ಈ ಎಲ್ಲ ಸೌಲಭ್ಯವನ್ನು ಸಹ ಪಡೆಯಬಹುದು. ಆದರೆ ಇದಕ್ಕೆ ಮುಖ್ಯ ಅಂದ್ರೆ ನಿಮ್ಮ ಬಳಿ ಮಾನ್ಯತೆಯ ಪಡಿತರ ಚೀಟಿಯನ್ನು (Ration Card) ಹೊಂದಿರಬೇಕು. ಆದರೆ ಅನೇಕ ಜನರು ಕಾರ್ಡ್ ಇದ್ದರೂ ಈ ಸೌಕರ್ಯಗಳನ್ನು ಪಡೆಯದೇ ವಂಚಿತರಾಗುತ್ತಿರುವುದನ್ನು ನೀವು ಕಂಡು ಕೇಳಿರಬಹುದು. ಅಂತಹ ಸನ್ನಿವೇಶದಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು (Ration Card) ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್ ಮಾಡೋದು ಕಡ್ಡಾಯವಾಗಿದೆ.

Digit.in Survey
✅ Thank you for completing the survey!

Free Ration ಪಡೆಯಲು ಆಧಾರ್ ಜೊತೆ ರೇಷನ್ ಕಾರ್ಡ್ ಲಿಂಕ್‌ ಕಡ್ಡಾಯ!

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಪಡಿತರ ಪಡೆಯುವ ಫಲಾನುಭವಿಗಳು ಪಡಿತರ ಚೀಟಿಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಉಚಿತ ಪಡಿತರವನ್ನು ಪಡೆಯಲು ಬಯಸಿದರೆ ಮನೆಯಲ್ಲಿ ಕುಳಿತು ಈ ಸರಳ ಕೆಲಸವನ್ನು ಮಾಡಿ ಇಲ್ಲದಿದ್ದರೆ ನೀವು ಪಡಿತರವನ್ನು ಪಡೆಯಲು ಅರ ಸಾಹಸ ಮಾಡಬೇಕಾಗುತ್ತದೆ.

Free Ration

ಅಂತಹ ಸನ್ನಿವೇಶದಲ್ಲಿ ನಿಮ್ಮ ರೇಷನ್ ಕಾರ್ಡ್ ಅನ್ನು (Ration Card) ಆಧಾರ್‌ ಕಾರ್ಡ್‌ನೊಂದಿಗೆ ಲಿಂಕ್ ಮಾಡೋದು ಕಡ್ಡಾಯವಾಗಿದೆ ಅನ್ನೋದನ್ನು ಗಮನಿಸಬೇಕಿದೆ. ಯಾವುದೇ ನಕಲಿ ಪಡಿತರ ಚೀಟಿಗಳನ್ನು ತೊಡೆದುಹಾಕಲು ಮತ್ತು ಅಗತ್ಯವಿರುವವರಿಗೆ ಪ್ರಯೋಜನಗಳನ್ನು ಒದಗಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಆಧಾರ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡುವ ಪ್ರಕ್ರಿಯೆ ಹೇಗೆಂದು ತಿಳಿಯಿರಿ.

Also Read: ಇನ್ಮೇಲೆ Aadhaar ಕಾರ್ಡ್‌ನಲ್ಲಿ ಹೆಸರು, ವಿಳಾಸ, ಫೋಟೋ ಅಥವಾ ಯಾವುದೇ ಮಾಹಿತಿ ಬದಲಾಯಿಸಲು ಈ ದಾಖಲೆ ಮುಖ್ಯ!

ರೇಷನ್ ಕಾರ್ಡ್ ಇ-ಕೆವೈಸಿ ಮಾಡುವ ಆನ್‌ಲೈನ್ ವಿಧಾನ!

ಹಂತ 1: ಪಡಿತರ ಚೀಟಿ ವೆಬ್‌ಸೈಟ್‌ಗೆ ಭೇಟಿ ನೀಡಿ ಮೊದಲು ನಿಮ್ಮ ಕರ್ನಾಟಕ ಸರ್ಕಾರದ ಪಡಿತರ ಚೀಟಿ ಪೋರ್ಟಲ್‌ಗೆ ahara.karnataka.gov.in ಭೇಟಿ ನೀಡಿ.

ಹಂತ 2: ಗಮನದಲ್ಲಿರಲಿ ಪ್ರತಿಯೊಂದು ರಾಜ್ಯವು ವಿಭಿನ್ನ ಪೋರ್ಟಲ್ ಅನ್ನು ಹೊಂದಿರುತ್ತದೆ ನಿಮ್ಮ ವಾಸಿಸುತ್ತಿರುವ ರಾಜ್ಯವನ್ನು ಆರಿಸಿಬೇಕಿದೆ.

ಹಂತ 3: ಇ-ಸೇವೆಗಳಿಗೆ ನ್ಯಾವಿಗೇಟ್ ಮಾಡಿ “ಇ-ಸೇವೆಗಳು” ಟ್ಯಾಬ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಿ.

ಹಂತ 4: ರೇಷನ್ ಕಾರ್ಡ್/ಆಧಾರ್ ಲಿಂಕ್ ಆಯ್ಕೆಮಾಡಿ ಆಧಾರ್ ಅನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲು ಅಥವಾ ಪಡಿತರ ಚೀಟಿಗಳಿಗೆ ಇ-ಕೆವೈಸಿಗೆ ಸಂಬಂಧಿಸಿದ ಆಯ್ಕೆಯನ್ನು ನೋಡಿ.

ಹಂತ 5: ವಿವರಗಳನ್ನು ನಮೂದಿಸಿ ನಿಮ್ಮ ಪಡಿತರ ಚೀಟಿ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕಿದೆ.

ಹಂತ 6: ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. ಪ್ರಕ್ರಿಯೆಯನ್ನು ಪರಿಶೀಲಿಸಲು OTP ನಮೂದಿಸಬೇಕು.

ಹಂತ 7: ಈ ಪೋರ್ಟಲ್‌ಗಳು ನಿಮ್ಮ ಇತ್ತೀಚಿನ ಫೋಟೋ ಮತ್ತು ಇತರ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗಬಹುದು. ಈ ದಾಖಲೆಗಳು ಗುರುತಿನ ಚೀಟಿ, ನಿವಾಸಿ ಪ್ರಮಾಣಪತ್ರ ಮತ್ತು ಪಡಿತರ ಚೀಟಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿರಬಹುದು.

ಹಂತ 8: ಫಾರ್ಮ್ ಅನ್ನು ಸಲ್ಲಿಸಿ ಮತ್ತು ಪರಿಶೀಲನೆಗಾಗಿ ಕಾಯಿರಿ ಲಿಂಕ್ ಯಶಸ್ವಿಯಾದ ನಂತರ ನೀವು ನೋಟಿಫಿಕೇಷನ್ ಅನ್ನು ಸ್ವೀಕರಿಸುತ್ತೀರಿ.

ಹಂತ 9: ಒಮ್ಮೆ ನಿಮ್ಮ aಎಲ್ಲ ಮಾಹಿತಿಗಳು ಸರಿಯಾಗಿದ್ದಾರೆ ನೀವು ಇ-ಕೆವೈಸಿ ಪ್ರಕ್ರಿಯೆಯನ್ನು ಸಲ್ಲಿಸಬೇಕು. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ ನೀವು ದೃಢೀಕರಣವನ್ನು ನೋಡುತ್ತೀರಿ. ಇದರ ನಂತರ ಇ-ಕೆವೈಸಿ ಪೂರ್ಣಗೊಂಡಿದೆ ಎಂದು ತಿಳಿಸುವ ಸಂದೇಶವನ್ನು ನಿಮ್ಮ ಫೋನ್‌ನಲ್ಲಿ ಪಡೆಯುತ್ತೀರಿ.

ಹಂತ 10: ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬಂದಿಲ್ಲವಾದರೆ ಹತ್ತಿರದ ರೇಷನ್ ಅಂಗಡಿಗೆ ಭೇಟಿ ನೀಡಿ ಪರಿಶಿಸಬೇಕಾಗುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo