Reliance Digital Sale: ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್‌ ಜೂಲೈ 26 ರಿಂದ ಆರಂಭ

HIGHLIGHTS

Reliance Digital Sale ಟೆಲಿವಿಷನ್‌ಗಳು, ಹೋಮ್ ಅಪ್ಲೈಯನ್ಸ್‌ಗಳು, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಅಕ್ಸೆಸರಿಗಳಂತಹ ವಿಶಾಲ ಶ್ರೇಣಿಯಲ್ಲಿ ವಿಶೇಷ ಕೊಡುಗೆಗಳು ಲಭ್ಯ

Reliance Digital Sale ಕನಿಷ್ಠ ವಹಿವಾಟು ರೂ. 10,000 ಮೇಲೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್ ಮೇಲೆ 10% ಕ್ಯಾಶ್‌ಬ್ಯಾಕ್

Reliance Digital Sale 22 ಜುಲೈ ರಿಂದ 5 ಆಗಸ್ಟ್ 2021 ರ ವರೆಗೆ ಪಡೆಯಬಹುದು.

Reliance Digital Sale: ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್‌ ಜೂಲೈ 26 ರಿಂದ ಆರಂಭ

ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ಸೇಲ್‌ – ಡಿಜಿಟಲ್ ಇಂಡಿಯಾ ಸೇಲ್ ಅನ್ನು ಜುಲೈ 26 ರಂದು ಆರಂಭಿಸಲು ರಿಲಾಯನ್ಸ್‌ ಡಿಜಿಟಲ್‌ ನಿರ್ಧರಿಸಿದೆ. ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಮತ್ತು www.reliancedigital.in ನಲ್ಲಿ ಸೇಲ್ ಲೈವ್ ಆಗಲಿದೆ. ವಿಶಾಲವಾದ ಶ್ರೇಣಿಯ ಎಲೆಕ್ಟ್ರಾನಿಕ್ ಐಟಂಗಳ ಮೇಲೆ ಅತ್ಯುತ್ತಮ ಡೀಲ್‌ಗಳನ್ನು ಗ್ರಾಹಕರು ಪಡೆಯಬಹುದು. ಮತ್ತು ಕನಿಷ್ಠ ವಹಿವಾಟು ರೂ. 10,000 ಮೇಲೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ಸ್ ಮೇಲೆ 10% ಕ್ಯಾಶ್‌ಬ್ಯಾಕ್ ಅನ್ನು ಜುಲೈ 22 ರಿಂದ ಆಗಸ್ಟ್ 5, 2021 ರ ವರೆಗೆ ಪಡೆಯಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ವಹಿವಾಟುಗಳ ಮೇಲೆ ರೂ. 5,000 ವರೆಗೆ ಉಳಿತಾಯ ಮಾಡಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ ಇಎಂಐ ವಹಿವಾಟುಗಳ ಮೇಲೂ ಕೊಡುಗೆ ಲಭ್ಯವಿದೆ. 

Digit.in Survey
✅ Thank you for completing the survey!

ಟೆಲಿವಿಷನ್‌ಗಳು, ಹೋಮ್ ಅಪ್ಲೈಯನ್ಸ್‌ಗಳು, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಅಕ್ಸೆಸರಿಗಳಂತಹ ವಿಶಾಲ ಶ್ರೇಣಿಯಲ್ಲಿ ವಿಶೇಷ ಕೊಡುಗೆಗಳು ಲಭ್ಯವಿವೆ. ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ರಿಯಾಯಿತಿ ಮತ್ತು ಆಕರ್ಷಕ ಕ್ಯಾಶ್‌ಬ್ಯಾಕ್‌ಗಳನ್ನು ಗ್ರಾಹಕರು ಪಡೆಯಬಹುದು. ಆಕಸ್ಮಿಕ ಹಾನಿ ಮತ್ತು ದ್ರವ ಹಾನಿ ಕವರೇಜ್‌ ಜುಲೈ 31 ರ ವರೆಗೆ ಆಯ್ದ ಮೊಬೈಲ್‌ ಖರೀದಿ ಮೇಲೆ ಲಭ್ಯವಿದೆ. ಅತ್ಯಂತ ನಿರೀಕ್ಷಿತ ಒನ್‌ಪ್ಲಸ್‌ ನಾರ್ಡ್‌2 ಸ್ಮಾರ್ಟ್‌ಫೋನ್‌ ಕೂಡಾ ಜುಲೈ 28 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಜೊತೆಗೆ ವೆರೆಬಲ್ ಮಾರ್ಕೆಟ್‌ನಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಆಪಲ್ ವಾಚ್‌ ಸಿರೀಸ್ 6 ಸೆಲ್ಯುಲರ್ 44mm ಮತ್ತು ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆಕ್ಟಿವ್ 2 ಕೂಡಾ ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ.

ಹೊಚ್ಚಹೊಸ ಸ್ಮಾರ್ಟ್‌ವಾಚ್‌ ಫೈರ್‌ ಬೋಲ್ಟ್‌ ಅಗ್ನಿ SPO2 ವಿಶೇಷಣದೊಂದಿಗೆ ವಿಶೇಷವಾಗಿ ಡಿಜಿಟಲ್ ಇಂಡಿಯಾ ಸೇಲ್‌ನಲ್ಲಿ ರೂ. 2,599 ಕ್ಕೆ ಲಭ್ಯವಿದೆ. ಲ್ಯಾಪ್‌ಟಾಪ್‌ ವಿಭಾಗದಲ್ಲಿ ಬ್ಯಾಂಕ್‌ ಕ್ಯಾಶ್‌ಬ್ಯಾಕ್ ಮತ್ತು ಬ್ರ್ಯಾಂಡ್ ವಾರಂಟಿ ಕೊಡುಗೆಗಳ ಜೊತೆಗೆ ರೂ. 14,990 ವರೆಗಿನ ಮೌಲ್ಯದ ಪ್ರಯೋಜನಗಳನ್ನು ಗ್ರಾಹಕರು ಪಡೆಯಬಹುದು. ಆಸಸ್‌ 10 ನೇ ಜೆನ್‌ ಐ5 ಗೇಮಿಂಗ್ ಲ್ಯಾಪ್‌ಟಾಪ್‌ 16 ಜಿಬಿ ರ್‍ಯಾಮ್‌ ಹಾಗೂ 4ಜಿಬಿ ಎನ್‌ವಿಡಿಯಾ ಜಿಫೋರ್ಸ್‌ ಜಿಟಿಎಕ್ಸ್ 1650 ಗ್ರಾಫಿಕ್ಸ್‌ ಸಹಿತ ವಿಶೇಷ ಬೆಲೆ ರೂ. 64,999 ರಲ್ಲಿ ಲಭ್ಯವಿದೆ. ಹಾಗೂ ಮ್ಯಾಕ್‌ಬುಕ್‌ ಪ್ರೋ ರೂ. 1,12,990 ಫ್ಲಾಟ್ ಬೆಲೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ರೂ. 7000 ಎಚ್‌ಡಿಎಫ್‌ಸಿ ಕ್ಯಾಶ್‌ಬ್ಯಾಕ್‌ ಲಭ್ಯವಿದೆ.

Reliance digital Sale - 2021

ತೆಳ್ಳಗಿನ ಮತ್ತು ಹಗುರ ಲ್ಯಾಪ್‌ಟಾಪ್‌ಗಳನ್ನು ಗ್ರಾಹಕರು ರೂ. 16,999 ಬೆಲೆಯಿಂದ ಆರಂಭಿಸಿ ಖರೀದಿ ಮಾಡಬಹುದು. ತೆಳ್ಳನೆಯ ಮತ್ತು ಹಗುರ ಲ್ಯಾಪ್‌ಟಾಪ್‌ಗಳ ಮೇಲೆ ವಿಶೇಷ ಡೀಲ್‌ ಜುಲೈ 26 ಮತ್ತು 27 ರಂದು ಮಾತ್ರ ಲಭ್ಯವಿದೆ. ಇತರ ಎಲೆಕ್ಟ್ರಾನಿಕ್ ಐಟಂಗಳ ಮೇಲೂ ಆಕರ್ಷಕ ಕೊಡುಗೆಗಳು ಇವೆ. 32 ಇಂಚಿನ ಸ್ಮಾರ್ಟ್‌ ಟಿವಿಗಳು ರೂ. 12,990 ರಿಂದ ಲಭ್ಯವಿವೆ. ಡೈರೆಕ್ಟ್ ಕೂಲ್‌ ರೆಫ್ರಿಜರೇಟರ್‌ಗಳು ರೂ. 11,990 ರಿಂದ ಆರಂಭಿಸಿ ಲಭ್ಯವಿದ್ದು ರೂ. 1,999 ವರೆಗಿನ ಮೌಲ್ಯದ ಉಚಿತ ಉಡುಗೊರೆಗಳು ಇವೆ.  ಟಾಪ್ ಲೋಡ್ ವಾಶಿಂಗ್ ಮಶಿನ್‌ಗಳು ರೂ. 13,290 ರಿಂದ ಆರಂಭಿಸಿ ಲಭ್ಯವಿದ್ದು ಇದರ ಜೊತೆಗೆ ರೂ.1,999 ವರೆಗಿನ ಮೌಲ್ಯದ ಉಚಿತ ಸಾಮಗ್ರಿಗಳಿವೆ.  

ಅಲ್ಲದೆ ರೂ. 3,498 ಮೌಲ್ಯದ ಬ್ರೇಕ್‌ಫಾಸ್ಟ್‌ ಕಾಂಬೋ (ಸ್ಯಾಂಡ್‌ವಿಚ್‌ ಮೇಕರ್ ಮತ್ತು ಎಲೆಕ್ಟ್ರಿಕ್‌ ಕೆಟಲ್‌) ವಿಶೇಷ ಬೆಲೆ ರೂ. 1,199 ರಲ್ಲಿ ಲಭ್ಯವಿದೆ. ಸುಲಭ ಹಣಕಾಸು ಮತ್ತು ಇಎಂಐ ಆಯ್ಕೆಗಳೊಂದಿಗೆ ಡಿಜಿಟಲ್ ಇಂಡಿಯಾ ಮಾರಾಟದ ಅನುಭವವನ್ನು ಈ ವರ್ಷ ಇನ್ನಷ್ಟು ಲಾಭದಾಯಕವಾಗಿಸಲಾಗಿದೆ. ಗ್ರಾಹಕರು ತಮ್ಮ ಹತ್ತಿರದ ಅಂಗಡಿಗಳಿಂದ ಇನ್‌ಸ್ಟಾ ಡೆಲಿವರಿ (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ವಿತರಣೆ) ಮತ್ತು ಸ್ಟೋರ್ ಪಿಕ್-ಅಪ್ ಆಯ್ಕೆಗಳನ್ನು ಸಹ ಪಡೆಯಬಹುದು. ಎಲ್ಲಾ ಮಳಿಗೆಗಳು ಮತ್ತು ವಿತರಣಾ ಪಾಲುದಾರರು ಗ್ರಾಹಕರು ಮತ್ತು ನೌಕರರ ಸುರಕ್ಷತೆಯ ಹಿತದೃಷ್ಟಿಯಿಂದ COVID- ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ.
 
ಎಲ್ಲಾ ಕೊಡುಗೆಗಳು ಮತ್ತು ಬೆಲೆಗಳಿಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯವಾಗುತ್ತವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo