ಇಂದು Vivo V70 ಸರಣಿ ಲಾಂಚ್‌! ಜಬರ್ದಸ್ತ್‌ ಫೀಚರ್ಸ್‌ಗಳೊಂದಿಗೆ ಅತ್ಯುತ್ತಮ ಕ್ಯಾಮೆರಾ ನಿರೀಕ್ಷೆ

HIGHLIGHTS

Vivo V70 ಸರಣಿಯು (ಇಂದು) ಫೆಬ್ರವರಿ 19 ರಂದು ಬಿಡುಗಡೆ ಆಗಲಿದೆ

Vivo V70 ಸರಣಿಯ ಫೋನ್‌ಗಳು 6,500 mAh ಬ್ಯಾಟರಿ ಪಡೆದಿರುವ ಸಾಧ್ಯತೆ

Vivo V70 ಮತ್ತು Vivo V70 Elite ಫೋನ್‌ಗಳು Snapdragon ಪ್ರೊಸೆಸರ್ ಹೊಂದಿರಲಿವೆ

ಇಂದು Vivo V70 ಸರಣಿ ಲಾಂಚ್‌! ಜಬರ್ದಸ್ತ್‌ ಫೀಚರ್ಸ್‌ಗಳೊಂದಿಗೆ ಅತ್ಯುತ್ತಮ ಕ್ಯಾಮೆರಾ ನಿರೀಕ್ಷೆ

ಮೊಬೈಲ್‌ ಮಾರುಕಟ್ಟೆಯಲ್ಲಿ ನಿರೀಕ್ಷೆ ಹೆಚ್ಚಿಸಿರುವ Vivo V70 ಸರಣಿಯು ಇಂದು (ಫೆಬ್ರವರಿ 19 ರಂದು) ಭಾರತದಲ್ಲಿ ಅಧಿಕೃತವಾಗಿ ಲಾಂಚ್‌ ಆಗಲಿದೆ. ಅಂದಹಾಗೆ ವಿವೋ ಮೊಬೈಲ್‌ ಕಂಪನಿಯು ಪರಿಚಯಿಸುತ್ತಿರುವ ಈ ಸರಣಿಯು Vivo V70 ಮತ್ತು Vivo V70 Elite ಮಾಡೆಲ್‌ಗಳನ್ನು ಒಳಗೊಂಡಿರಲಿದೆ. Vivo V70 ಸರಣಿ ಲಾಂಚ್ ಬಗ್ಗೆ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋಪೇಜ್‌ ಓಪೆನ್‌ ಇದೆ. ಇಂದು ಎಂಟ್ರಿ ಕೊಡಲಿರುವ ಈ ಮೊಬೈಲ್‌ಗಳು Snapdragon ಪ್ರೊಸೆಸರ್‌ ಜೊತೆಗೆ Zeiss ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿರುವುದು ಪಕ್ಕಾ ಎಂದು ಹೇಳಲಾಗಿದೆ. ಅಲ್ಲದೇ ಈ ಫೋನ್‌ಗಳು ಸ್ಟೈಲಿಶ್‌ ಲುಕ್ ಜೊತೆಗೆ AMOLED ಡಿಸ್‌ಪ್ಲೇ ಅನ್ನು ಪಡೆದಿರಲಿವೆ. ಹಾಗಾದರೆ Vivo V70 ಸರಣಿಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಅಗ್ಗದ ಬೆಲೆಯ POCO C75 5G ಮೊಬೈಲ್‌ ಈಗ ಇನ್ನಷ್ಟು ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯ!

Vivo V70 ಸರಣಿ ಬಿಡುಗಡೆ ಮಾಹಿತಿ

ವಿವೋ ಸಂಸ್ಥೆಯ Vivo V70 ಸರಣಿಯು ಇಂದು (ಫೆಬ್ರವರಿ 19 ರಂದು) ಬಿಡುಗಡೆ ಆಗಲಿದೆ. ಕೆಲವು ಲೀಕ್‌ ಮಾಹಿತಿಯಂತೆ Vivo V70 ಫೋನಿನ 8GB + 256GB ವೇರಿಯಂಟ್‌ಗೆ 45,999 ರೂ ಮತ್ತು 12GB + 256GB ವೇರಿಯಂಟ್‌ ರೂ 49,999 ಬೆಲೆ ಹೊಂದಿರಬಹುದು ಎಂದು ಹೇಳಲಾಗಿದೆ. ಅದೇ ರೀತಿ Vivo V70 Elite ಫೋನಿನ 8GB + 256GB ವೇರಿಯಂಟ್‌ ರೂ 51,999 ರಿಂದ ಪ್ರಾರಂಭವಾಗಬಹುದು ಎನ್ನಲಾಗಿದೆ. ಇನ್ನು 12GB + 256GB ವೇರಿಯಂಟ್‌ ಬೆಲೆ ರೂ 56,999 ಮತ್ತು 12GB + 512GB ವೇರಿಯಂಟ್‌ ಬೆಲೆ ರೂ 61,999 ಆಗಿರುವ ಸಾಧ್ಯತೆಗಳು ಇವೆ.

Vivo v70
Vivo v70

Vivo V70 ನಿರೀಕ್ಷಿತ ಫೀಚರ್ಸ್‌ ಮಾಹಿತಿ

Vivo V70 ಮೊಬೈಲ್‌ 120Hz ರಿಫ್ರೆಶ್ ರೇಟ್‌ ಸಪೋರ್ಟ್‌ ಜೊತೆಗೆ 6.59 ಇಂಚಿನ AMOLED ಡಿಸ್‌ಪ್ಲೇ ಅನ್ನು ಪಡೆದಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಈ ಫೋನ್‌ Snapdragon 7 Gen 4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ 12GB RAM ಮತ್ತು 256GB ಸ್ಟೋರೇಜ್‌ ಆಯ್ಕೆಗಳು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್‌ 90W ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಜೊತೆಗೆ 6,500 mAh ಬ್ಯಾಟರಿ ಸಾಮರ್ಥ್ಯದ ಸೌಲಭ್ಯದಲ್ಲಿ ಮಾರುಕಟ್ಟೆ ಲಗ್ಗೆ ಇಡಬಹುದು ಎಂದು ಲೀಕ್ ಮಾಹಿತಿಗಳು ಸೂಚಿಸುತ್ತದೆ. ಇನ್ನು ಈ ಮೊಬೈಲ್‌ 50MP + 8MP + 50MP ಸಾಮರ್ಥ್ಯದ Zeiss ಕ್ಯಾಮೆರಾ ಸೆನ್ಸಾರ್ ಆಯ್ಕೆ ಪಡೆದಿರಲಿದೆ.

Vivo V70 Elite ನಿರೀಕ್ಷಿತ ಫೀಚರ್ಸ್

Vivo V70 Elite ಫೋನ್ 6.59 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇ ಅನ್ನು ಹೊಂದಿರುವ ಜೊತೆಗೆ 120Hz ರಿಫ್ರೆಶ್ ರೇಟ್‌ ಸೌಲಭ್ಯ ಪಡೆದಿರುವ ಸಾಧ್ಯತೆಗಳು ಇವೆ. ಈ ಫೋನ್‌ Qualcomm Snapdragon 8s Gen 3 ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಪಡೆದಿರಬಹುದು ಎನ್ನಲಾಗಿದೆ. ಅಲ್ಲದೇ ಈ ಫೋನ್‌ 6,500mAh ಬ್ಯಾಟರಿ ಆಯ್ಕೆ ಹೊಂದಿರುವ ಜೊತೆಗೆ 90W ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಅನ್ನು ಸಹ ಒಳಗೊಂಡಿರಬಹುದು ಎಂದು ಲೀಕ್ ವರದಿಗಳು ಸೂಚಿಸುತ್ತವೆ. ಹಾಗೆಯೇ ಹಿಂಭಾಗದಲ್ಲಿ Zeiss ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಇರಲಿದ್ದು ಕ್ರಮವಾಗಿ 50MP + 50MP + 50MP ಕ್ಯಾಮೆರಾ ಸೆನ್ಸಾರ್‌ ಆಯ್ಕೆ ಪಡೆದಿರಲಿದೆ. ಸೆಲ್ಫಿಗಾಗಿ ಸಹ 50MP ಕ್ಯಾಮೆರಾ ಸೌಲಭ್ಯ ಒದಗಿಸಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo