Google Pixel 10a ಭಾರತದಲ್ಲಿ ಬಿಡುಗಡೆ! Tensor G4 ಪ್ರೊಸೆಸರ್‌, 48MP ಕ್ಯಾಮೆರಾ ಸೌಲಭ್ಯ ಪಡೆದಿದೆ

HIGHLIGHTS

ಗೂಗಲ್‌ ಪಿಕ್ಸಲ್‌ 10a ಇದೇ ಮಾರ್ಚ್ 6 ರಿಂದ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ

ಗೂಗಲ್‌ ಪಿಕ್ಸಲ್‌ 10a ಫೋನ್‌ 48MP ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದೆ

ಗೂಗಲ್‌ನ ಈ ನೂತನ ಮೊಬೈಲ್‌ ನಾಲ್ಕು ಆಕರ್ಷಕ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ

Google Pixel 10a ಭಾರತದಲ್ಲಿ ಬಿಡುಗಡೆ! Tensor G4 ಪ್ರೊಸೆಸರ್‌, 48MP ಕ್ಯಾಮೆರಾ ಸೌಲಭ್ಯ ಪಡೆದಿದೆ

ಸರ್ಚ್ ಇಂಜಿನ್‌ ದೈತ್ಯ Google ತನ್ನ ಬಹುನಿರೀಕ್ಷಿತ Google Pixel 10a ಸ್ಮಾರ್ಟ್‌ಫೋನ್‌ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇಂದು (ಫೆಬ್ರವರಿ 18 ರಂದು) ಬಿಡುಗಡೆ ಮಾಡಿದೆ. ಈ ಫೋನ್‌ Tensor G4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು ಈ ಮೂಲಕ ಫ್ಲ್ಯಾಗ್‌ಶಿಪ್ ರೇಂಜ್‌ನ ವೈಶಿಷ್ಟ್ಯಗಳನ್ನು ಮಿಡ್‌ರೇಂಜ್ ವಿಭಾಗಕ್ಕೆ ತರುತ್ತಿದೆ. ಇನ್ನು ಈ ಫೋನ್‌ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 48MP ಪ್ರಾಥಮಿಕ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಹಾಗೆಯೇ Pixel 10a ಮೊಬೈಲ್‌ ಏಳು ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್‌ ಸಪೋರ್ಟ್‌ ನೀಡಲಿದೆ. ಹಾಗಾದರೆ Google Pixel 10a ಸ್ಮಾರ್ಟ್‌ಫೋನ್‌ ಬೆಲೆ, ಫೀಚರ್ಸ್‌, ಆಫರ್‌ ಸೇರಿದಂತೆ ಇನ್ನಿತರೆ ಮಾಹಿತಿಗಳನ್ನು ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಲಾಂಚ್‌ ಆಗಿಯೇ ಬಿಡ್ತು Infinix Note Edge 5G ಫೋನ್‌! ಫೀಚರ್ಸ್‌ ಹಾಗೂ ಬೆಲೆ ತಿಳಿಯಿರಿ

Google Pixel 10a ಬೆಲೆ ಹಾಗೂ ಲಭ್ಯತೆಯ ಮಾಹಿತಿ

Google ಕಂಪನಿಯು Google Pixel 10a ಮೊಬೈಲ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿ ಗ್ರಾಹಕರ ಗಮನ ಸೆಳೆದಿದೆ. ಇನ್ನು ಭಾರತದಲ್ಲಿ ಈ ಫೋನಿನ 8GB RAM + 256GB ವೇರಿಯಂಟ್‌ ಬೆಲೆಯು 49,999 ರೂಗಳು ಆಗಿದೆ. ಅಂದಹಾಗೆ ಈ ಸ್ಮಾರ್ಟ್‌ಫೋನ್‌ ಇಂದಿನಿಂದ Pre-Orders (9PM ಗಂಟೆಯಿಂದ) ಲಭ್ಯವಿದೆ ಹಾಗೂ ಇದೇ ಮಾರ್ಚ್ 6, 2026 ರಿಂದ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಇನ್ನು ಗ್ರಾಹಕರು ಆಯ್ದ HDFC ಬ್ಯಾಂಕ್ ಕಾರ್ಡ್‌ಗಳಲ್ಲಿ 3,000 ರೂಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು. ಇದು 24 ತಿಂಗಳವರೆಗೆ ನೋ-ಕಾಸ್ಟ್ EMI ಆಯ್ಕೆಗಳು ಮತ್ತು 3,000 ರೂ. ಎಕ್ಸ್‌ಚೇಂಜ್ ಬೋನಸ್‌ನೊಂದಿಗೆ ಬರುತ್ತದೆ. ಇದಲ್ಲದೆ ಖರೀದಿದಾರರು ತಿಂಗಳಿಗೆ ಕೇವಲ 2,083 ರೂ.ಗಳಿಗೆ ನೋ-ಕಾಸ್ಟ್ EMI ಆಯ್ಕೆಯನ್ನು ಪಡೆಯಬಹುದು. ಇನ್ನು ಈ ಫೋನ್‌ ಲ್ಯಾವೆಂಡರ್, ಅಬ್ಸಿಡಿಯನ್, ಫಾಗ್ ಮತ್ತು ಬೆರ್ರಿ ಕಲರ್‌ ಆಯ್ಕೆಗಳನ್ನು ಪಡೆದುಕೊಂಡಿದೆ.

Google Pixel 10a

Google Pixel 10a ಫೋನಿನ ಫೀಚರ್ಸ್‌

Google Pixel 10a ಮೊಬೈಲ್‌ 6.3 ಇಂಚಿನ Actua ಡಿಸ್‌ಪ್ಲೇ ಅನ್ನು ಪಡೆದಿದೆ. ಹಾಗೆಯೇ ಇದು 3,000 nits ಗರಿಷ್ಠ ಬ್ರೈಟ್ನೆಸ್‌ ಸಪೋರ್ಟ್ ಜೊತಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಅನ್ನು ಹೊಂದಿದೆ. ಇನ್ನು ಈ ಮೊಬೈಲ್‌ Tensor G4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 8GB RAM + 256GB ಆಂತರೀಕ ಸ್ಟೋರೇಜ್‌ ಸಪೋರ್ಟ್‌ ಅನ್ನು ಒಳಗೊಂಡಿದೆ. ಅಲ್ಲದೇ ಈ ದೈತ್ಯ ಫೋನ್‌ ಆಂಡ್ರಾಯ್ಡ್ 16 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಏಳು ವರ್ಷಗಳ OS ಮತ್ತು ಭದ್ರತಾ ಅಪ್‌ಡೇಟ್‌ ಬೆಂಬಲ ನೀಡುತ್ತದೆ.

Google Pixel 10a ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಇದರ ಪ್ರಾಥಮಿಕ ಕ್ಯಾಮೆರಾವು 48MP ಸೆನ್ಸಾರ್‌ ಆಗಿದ್ದು ಸೆಕೆಂಡರಿ ಕ್ಯಾಮೆರಾವು 13MP ಅಲ್ಟ್ರಾವೈಡ್ ಲೆನ್ಸ್‌ ಪಡೆದುಕೊಂಡಿದೆ. ಇದಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್‌ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 30W ವೈರ್ಡ್ ಚಾರ್ಜಿಂಗ್ ಮತ್ತು 10W ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್‌ ಅನ್ನು ಹೊಂದಿದೆ. ಒಮ್ಮೆ ಪೂರ್ಣ ಚಾರ್ಜ್‌ನ ಮಾಡಿದರೆ 30 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo