ಲಾಂಚ್ ಆಗಿಯೇ ಬಿಡ್ತು Infinix Note Edge 5G ಫೋನ್! ಫೀಚರ್ಸ್ ಹಾಗೂ ಬೆಲೆ ತಿಳಿಯಿರಿ
Infinix Note Edge 5G ಮೊಬೈಲ್ ಫೆಬ್ರವರಿ 25 ರಿಂದ ಸೇಲ್ ಪ್ರಾರಂಭಿಸಲಿದೆ
ಈ ಫೋನ್ ಸ್ಕ್ರೀನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಪಡೆದುಕೊಂಡಿದೆ
Infinix Note Edge 5G ಮೊಬೈಲ್ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ
Infinix ಮೊಬೈಲ್ ಕಂಪನಿಯ ಬಹುನಿರೀಕ್ಷಿತ Infinix NOTE Edge 5G ಮೊಬೈಲ್ ಇಂದು (ಫೆ 18 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಬಜೆಟ್ ಬೆಲೆಯಲ್ಲಿ ಲಗ್ಗೆ ಇಟ್ಟಿರುವ ಈ ಮೊಬೈಲ್ MediaTek Dimensity 7100 ಪ್ರೊಸೆಸರ್ ಪವರ್ ಪಡೆದಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 50MP ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಮೂರು ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಹಾಗಾದರೆ Infinix NOTE Edge 5G ಮೊಬೈಲ್ ಬೆಲೆ, ಸೇಲ್ ದಿನಾಂಕ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಜಿಯೋದಿಂದ AI ಕ್ಲಿನಿಕ್! ಕಣ್ಣುಗಳನ್ನು ಸ್ಕ್ಯಾನ್ ಮಾಡುವ ಮೂಲಕ ನಿಮಿಷದಲ್ಲಿ ಹೆಲ್ತ್ ರಿಪೋರ್ಟ್ ಪಡೆಯಬಹುದು!
Infinix NOTE Edge 5G ಬೆಲೆ ಹಾಗೂ ಲಭ್ಯತೆ
ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ Infinix NOTE Edge 5G ಮೊಬೈಲ್ ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. 6GB + 128GB ವೇರಿಯಂಟ್ ಬೆಲೆ 21,999 ರೂಗಳು ಆಗಿದೆ. ಅದೇ ರೀತಿ 8GB + 128GB ವೇರಿಯಂಟ್ ದರವು 23,999 ರೂಗಳು ಆಗಿದ್ದು ಹಾಗೆಯೇ 8GB + 256GB ವೇರಿಯಂಟ್ 25,999 ರೂಗಳ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿವೆ. ಇನ್ನು ಈ ಫೋನ್ ಸಿಲ್ಕ್ ಫೈಬರ್, ಸ್ಟೆಲ್ಲರ್ ಬ್ಲೂ ಮತ್ತು ಲೂನಾರ್ ಟೈಟಾನಿಯಂ ಕಲರ್ ಆಯ್ಕೆಯನ್ನು ಪಡೆದುಕೊಂಡಿದೆ. ಇನ್ನು ಆಸಕ್ತ ಗ್ರಾಹಕರು ಇದೇ ಫೆಬ್ರವರಿ 25 ರಿಂದ ಫ್ಲಿಪ್‌ಕಾರ್ಟ್ ಮತ್ತು ಇನ್ಫಿನಿಕ್ಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಬಹುದು. ಆರಂಭಿಕ ಪರಿಚಯಾತ್ಮಕ ಕೊಡುಗೆಯಾಗಿ ICICI ಮತ್ತು SBI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಇನ್‌ಸ್ಟಂಟ್ 2,000 ರೂ.ಗಳ ರಿಯಾಯಿತಿ ಪಡೆಯಬಹುದು.

Infinix NOTE Edge 5G ಫೀಚರ್ಸ್ ಮಾಹಿತಿ
ಹೊಸ Infinix NOTE Edge 5G ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ರೇಟ್ ಸೌಲಭ್ಯದ ಜೊತೆಗೆ 6.78 ಇಂಚಿನ 1.5K 3D ಕರ್ವ್ಡ AMOLED ಡಿಸ್‌ಪ್ಲೇ ಅನ್ನು ಪಡೆದಿದೆ. ಅಲ್ಲದೇ ಈ ಫೋನ್ ಸ್ಕ್ರೀನ್ 4,500 ನಿಟ್ಸ್ ಬ್ರೈಟ್ನೆಸ್ ಸಪೋರ್ಟ್ ಜೊತೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ರಕ್ಷಣೆ ಹೊಂದಿದೆ. ಹಾಗೆಯೇ ಈ ನೂತನ ಮೊಬೈಲ್ MediaTek Dimensity 7100 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದ್ದು ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 16 ಆಧಾರಿತ XOS 16 ಸಾಫ್ಟ್‌ವೇರ್ ಒಳಗೊಂಡಿದೆ. ಹಾಗೆಯೇ 128GB ಹಾಗೂ 256GB ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ.
ಹಾಗೆಯೇ Infinix NOTE Edge 5G ಮೊಬೈಲ್ 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 6,500mAh ಸಾಮರ್ಥ್ಯದ ಬ್ಯಾಟರಿ ಸಪೋರ್ಟ್ ಪಡೆದುಕೊಂಡಿದೆ. ಹಿಂಭಾಗದಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅದೇ ರೀತಿ ಸೆಲ್ಫಿಗಳು ಹಾಗೂ ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒದಗಿಸಲಾಗಿದೆ. ಇದರೊಂದಿಗೆ ಈ ಫೋನ್ JBL ಪ್ರಮಾಣೀಕೃತ ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳ ಸೌಲಭ್ಯ ಸಹ ಪಡೆದುಕೊಂಡಿದೆ. ಅಲ್ಲದೇ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಒಳಗೊಂಡಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile