ಜಿಯೋದಿಂದ AI ಕ್ಲಿನಿಕ್! ಕಣ್ಣುಗಳನ್ನು ಸ್ಕ್ಯಾನ್ ಮಾಡುವ ಮೂಲಕ ನಿಮಿಷದಲ್ಲಿ ಹೆಲ್ತ್ ರಿಪೋರ್ಟ್ ಪಡೆಯಬಹುದು!
AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಜಿಯೋ AI ಆಧಾರಿತ ಕ್ಲಿನಿಕ್ ಮಾಡೆಲ್ ಪರಿಚಯಿಸಿದೆ
ಈ ಡಿವೈಸ್‌ನ ವಿಶೇಷವೆಂದರೆ ಇದು ಪ್ರಮುಖ ಭಾರತೀಯ ಭಾಷೆಗಳ ಸಪೋರ್ಟ್ ಹೊಂದಿದೆ
ರೋಗಿಯು ಸಮಸ್ಯೆಯನ್ನು 'ವಾಯ್ಸ್ ಎಐ ವೈದ್ಯರಿಗೆ' ಮೌಖಿಕವಾಗಿ ವಿವರಿಸಬಹುದು
AI Impact Summit 2026: ಜಿಯೋ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ AI ಆಧಾರಿತ ಕ್ಲಿನಿಕ್ ಮಾದರಿಯನ್ನು ಪರಿಚಯಿಸಿದೆ. ಈ AI ಚಾಲಿತ ವ್ಯವಸ್ಥೆಯು ರೋಗಿಯ ಆರೋಗ್ಯದ ಕುರಿತಾಗಿ ನಿಮಿಷಗಳಲ್ಲಿ ಹೆಲ್ತ್ ರಿಪೋರ್ಟ್ ವಿಶ್ಲೇಷಣೆ ಮಾಡಿ ಫಲಿತಾಂಶವನ್ನು ನೀಡುವ AI ಆಧಾರಿತ ಕ್ಲಿನಿಕ್ ಮಾದರಿ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಗಮನ ಸೆಳೆಯುತ್ತಿದೆ. ಅಂದ ಹಾಗೆ ಇದರ ಪ್ರದರ್ಶನ ಇರುವುದು AI Impact Summit 2026 ಕಾರ್ಯಕ್ರಮದ ಜಿಯೋ ಪೆವಿಲಿಯನ್‌ನಲ್ಲಿ. ಕಾರ್ಯ ಪ್ರದರ್ಶಿಸಲಾದ ಜಿಯೋ ಆರೋಗ್ಯ ಎಐ, ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಎಐ-ಆಧಾರಿತ ಕ್ಲಿನಿಕ್ ಮಾದರಿಯನ್ನು ಪರಿಚಯಿಸಿದೆ. ಈ ಎಐ-ಚಾಲಿತ ವ್ಯವಸ್ಥೆಯು ರೋಗಿಯ ಪ್ರಮುಖ ಆರೋಗ್ಯ ಅಂಶಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಕ್ರೀನ್ ಮಾಡುತ್ತದೆ. ಅಲ್ಲದೇ ಸಂಭಾವ್ಯ ಅಪಾಯಗಳನ್ನು ಗುರುತಿಸಿ ಅಗತ್ಯವಿರುವಂತೆ ತಜ್ಞ ವೈದ್ಯರ ಶಿಫಾರಸು ಮಾಡುತ್ತದೆ.
SurveyAlso Read : Google Pixel 10a: ನಾಳೆ Pre-order ಪ್ರಾರಂಭ; ಗಮನ ಸೆಳೆವ ಡಿಸೈನ್ ಹಾಗೂ ಆಕರ್ಷಕ ಕಲರ್ ಆಯ್ಕೆ
ಜಿಯೋ AI ಡಯಾಗ್ನೋಸ್ಟಿಕ್
ಜಿಯೋ ಪ್ರದರ್ಶಿಸಿರುವ ಈ ವ್ಯವಸ್ಥೆಯಲ್ಲಿ ರೋಗಿಯು AI-ಸಕ್ರಿಯಗೊಳಿಸಿದ ರೋಗನಿರ್ಣಯ (ಡಯಾಗ್ನೋಸ್ಟಿಕ್) ಡಿವೈಸ್ ಸ್ಮಾರ್ಟ್ ಮಿರರ್ ಮುಂದೆ ನಿಲ್ಲುತ್ತಾನೆ. ಆಗ ಇದು ರೋಗಿಯ ಕಣ್ಣುಗಳು, ಚರ್ಮ ಮತ್ತು ಇತರ ದೃಶ್ಯ ಸೂಚನೆಗಳ ಆಧಾರದ ಮೇಲೆ ಅಗತ್ಯವಾದ ರೀಡಿಂಗ್ ತೆಗೆದುಕೊಳ್ಳುತ್ತದೆ. ಬಳಿಕ ಎಐ ಈ ಡೇಟಾವನ್ನು ವಿಶ್ಲೇಷಿಸುತ್ತದೆ ಮತ್ತು ಪ್ರಾಥಮಿಕ ಆರೋಗ್ಯ ಮೌಲ್ಯಮಾಪನವನ್ನು ಜನರೇಟ್ ಮಾಡುತ್ತದೆ. ರೋಗಿಯು ಸಮಸ್ಯೆಯನ್ನು ‘ವಾಯ್ಸ್ ಎಐ ವೈದ್ಯರಿಗೆ’ ಮೌಖಿಕವಾಗಿ ವಿವರಿಸಬಹುದು. ಅಗತ್ಯವಿದ್ದರೆ ವಾಯ್ಸ್ ಎಐ ವೈದ್ಯರು ರೋಗಿಗೆ ಹೆಚ್ಚುವರಿ ಪ್ರಶ್ನೆಗಳನ್ನು ಸಹ ಕೇಳುತ್ತಾರೆ. ಈ ಡಿವೈಸ್‌ನ ವಿಶೇಷವೆಂದರೆ ಅದು ಹಲವಾರು ಪ್ರಮುಖ ಭಾರತೀಯ ಭಾಷೆಗಳಲ್ಲಿ ಸಂವಹನ ನಡೆಸುವ ಆಯ್ಕೆ ಪಡೆದಿದೆ.

ಜಿಯೋ ಆರೋಗ್ಯ AI
Jio Arogya AI ರೋಗಿಗಳನ್ನು ವರ್ಗೀಕರಿಸಬಹುದು ಮತ್ತು ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವ ಪ್ರಕರಣಗಳಿಗೆ ರೆಫರೆನ್ಸ್ ಗಳಿಗೆ ಆದ್ಯತೆ ನೀಡಬಹುದು. ಇದು ವೈದ್ಯರ ನಿತ್ಯದ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ನಿರ್ಣಾಯಕ ಪ್ರಕರಣಗಳ ಮೇಲೆ ಹೆಚ್ಚು ಗಮನಹರಿಸಲು ಸಹಾಯ ಮಾಡುತ್ತದೆ. ಕಂಪನಿಯ ಪ್ರಕಾರ ಎಐ ವ್ಯವಸ್ಥೆಯು ಪ್ರಾಥಮಿಕ ಮೌಲ್ಯಮಾಪನವನ್ನು ಮಾತ್ರ ಜನರೇಟ್ ಮಾಡುತ್ತದೆ ಮತ್ತು ವೈದ್ಯರ ಸಲಹೆಯಿಲ್ಲದೆ ಔಷಧಿ ಅಥವಾ ಇತರ ವೈದ್ಯಕೀಯ ಸಹಾಯವನ್ನು ಒದಗಿಸುವುದಿಲ್ಲ.
ಸದ್ಯಕ್ಕೆ ಅಸ್ತಿತ್ವದಲ್ಲಿರುವ ಆರೋಗ್ಯ ಮೂಲಸೌಕರ್ಯದ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಈ ಮಾದರಿಯು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಕಂಪನಿ ಹೇಳಿದೆ. ಸಂಪರ್ಕ ಲಭ್ಯವಿರುವಲ್ಲೆಲ್ಲಾ ಎಐ ಚಿಕಿತ್ಸಾಲಯಗಳನ್ನು ಸ್ಥಾಪಿಸಬಹುದು. ಪೋರ್ಟಬಲ್ ಎಕ್ಸ್-ರೇಗಳು ಮತ್ತು ಪೋರ್ಟಬಲ್ ಇಸಿಜಿಗಳಂತಹ ಸಾಧನಗಳನ್ನು ಸಹ ಸಂಪರ್ಕಿಸಬಹುದು. ಅಗತ್ಯವಿದ್ದರೆ ರೋಗಿಗಳು ಆನ್‌ಲೈನ್ ಕನ್ಸಲ್ಟೇಷನ್ ಮತ್ತು ಡಿಜಿಟಲ್ ಔಷಧಿ ಪ್ರಿಸ್ಕ್ರಿಪ್ಷನ್ ನಂಥ ವೈಶಿಷ್ಟ್ಯಗಳಿಂದ ಪ್ರಯೋಜನ ಪಡೆಯಬಹುದು. ಜಿಯೋ ಆರೋಗ್ಯ ಎಐ ನಂತಹ ವ್ಯವಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಜಾರಿಗೆ ಬಂದರೆ, ಆರಂಭಿಕ ರೋಗನಿರ್ಣಯ ಮತ್ತು ತಜ್ಞರ ಸಲಹೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile