Google Pixel 10a: ನಾಳೆ Pre-order ಪ್ರಾರಂಭ; ಗಮನ ಸೆಳೆವ ಡಿಸೈನ್‌ ಹಾಗೂ ಆಕರ್ಷಕ ಕಲರ್‌ ಆಯ್ಕೆ

HIGHLIGHTS

ಗೂಗಲ್‌ ಪಿಕ್ಸಲ್‌ 10a ಪ್ರೀ-ಆರ್ಡರ್ ಫೆಬ್ರವರಿ 18 ರಿಂದ ಪ್ರಾರಂಭ

ಗೂಗಲ್‌ನ ಈ ಮೊಬೈಲ್‌ ಮಾರ್ಚ್ 5 ರಂದು ಲಾಂಚ್‌ ಆಗುವ ಸಾಧ್ಯತೆ

ಗೂಗಲ್‌ನ ಈ ಮೊಬೈಲ್‌ ನಾಲ್ಕು ಭಿನ್ನ ಕಲರ್‌ ಆಯ್ಕೆ ಒಳಗೊಂಡಿರಲಿದೆ

Google Pixel 10a: ನಾಳೆ Pre-order ಪ್ರಾರಂಭ; ಗಮನ ಸೆಳೆವ ಡಿಸೈನ್‌ ಹಾಗೂ ಆಕರ್ಷಕ ಕಲರ್‌ ಆಯ್ಕೆ

ಸರ್ಚ್‌ ಇಂಜಿನ್‌ ದೈತ್ಯ Google ಕಂಪನಿಯು ಹೊಸದಾಗಿ ಬಿಡುಗಡೆ ಮಾಡಿರುವ Google Pixel 10a ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಮೊಬೈಲ್‌ ನಾಳೆಯಿಂದ (ಫೆಬ್ರವರಿ 18 ರಿಂದ) Pre-order ಪ್ರಾರಂಭ ಮಾಡಲಿದೆ. ಅಂದಹಾಗೆ ಈ ಫೋನ್‌ Tensor G4 ಚಿಪ್‌ಸೆಟ್‌ ಪ್ರೊಸೆಸರ್‌ ಸೌಲಭ್ಯ ಪಡೆದಿದ್ದು, 48MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್‌ ಅನ್ನು ಒಳಗೊಂಡಿದೆ. ಹಾಗೆಯೇ ಇದು ನಾಲ್ಕು ಆಕರ್ಷಕ ಕಲರ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದುಕೊಂಡಿದೆ. ಹಾಗಾದರೆ Google Pixel 10a ಮೊಬೈಲ್‌ ಮಾರಾಟ ದಿನಾಂಕ, ಬೆಲೆ, ಫೀಚರ್ಸ್‌ ಹಾಗೂ ಲಭ್ಯತೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಇಂದಿನಿಂದ Samsung Galaxy F70e ಖರೀದಿಗೆ ಲಭ್ಯ! ಆಫರ್‌, ಬೆಲೆ ಹಾಗೂ ಫೀಚರ್ಸ್‌ ನೋಡಿ

Google Pixel 10a ಪ್ರೀ-ಆರ್ಡರ್‌ ಮಾಹಿತಿ

ಹೊಸ Google Pixel 10a ಸ್ಮಾರ್ಟ್‌ಫೋನ್‌ ನಾಳೆ ಮಧ್ಯಾಹ್ನ 12 ಗಂಟೆಯಿಂದ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದ ಮೂಲಕ Pre-order ಶುರು ಮಾಡಲಿದೆ. ಇನ್ನುಳಿದಂತೆ ಗೂಗಲ್‌ ಸಂಸ್ಥೆಯ ಗೂಗಲ್‌ ಪಿಕ್ಸಲ್‌ 10a ಮೊಬೈಲ್‌ ಬೆರ್ರಿ, ಫಾಗ್, ಲ್ಯಾವೆಂಡರ್ ಮತ್ತು ಅಬ್ಸಿಡಿಯನ್ ಕಲರ್‌ಗಳ ಆಯ್ಕೆಯಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ. ಇನ್ನು ಈ ಸ್ಮಾರ್ಟ್‌ಫೋನ್‌ 8GB RAM + 128GB ವೇರಿಯಂಟ್‌ 49,999 ರೂಗಳ ಬೆಲೆ ಪಡೆದಿರಬಹುದು. ಹಾಗೆಯೇ 8GB RAM + 256GB ವೇರಿಯಂಟ್‌ 69,000 ರೂಗಳ ರೇಂಜ್‌ನಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ. ಈ ಮೊಬೈಲ್‌ ಇದೇ ಮಾರ್ಚ್ 5, 2026 ರಂದು ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದುಬಂದಿದೆ.

Google Pixel 10a

Google Pixel 10a ಮೊಬೈಲ್‌ನ ನಿರೀಕ್ಷಿತ ಫೀಚರ್ಸ್‌

ಗೂಗಲ್‌ ಪಿಕ್ಸಲ್‌ 10a ಮೊಬೈಲ್‌ 6.3 ಇಂಚಿನ ಪೂರ್ಣ ಹೆಚ್‌ಡಿ+ AMOLED ಡಿಸ್‌ಪ್ಲೇ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನು ಇದರ ಸ್ಕ್ರೀನ್‌ 120Hz ರಿಫ್ರೆಶ್ ರೇಟ್‌ ಆಗಿರಲಿದ್ದು ಇದರೊಂದಿಗೆ 2,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್‌ ಬೆಂಬಲದ ಜೊತಗೆ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಹಾಗೆಯೇ ಈ ನೂತನ ಮೊಬೈಲ್‌ Tensor G4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಪೋರ್ಟ್‌ ಅನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಇದರೊಂದಿಗೆ ಧೂಳು ಮತ್ತು ನೀರಿನ ಪ್ರತಿರೋಧವನ್ನು ಪಡೆಯಲು ಇದು IP68 ರೇಟಿಂಗ್ ಸೌಲಭ್ಯ ಪಡೆದಿರಬಹುದು.

ಅಲ್ಲದೇ ಗೂಗಲ್‌ ಪಿಕ್ಸಲ್‌ 10a ಮೊಬೈಲ್‌ ತನ್ನ ವರ್ಗದಲ್ಲೇ ಉತ್ತಮ ಕ್ಯಾಮೆರಾ ರಚನೆ ಒಳಗೊಂಡಿರಲಿದೆ. ಈ ಪ್ರಿಮಿಯಂ ಮೊಬೈಲ್‌ 48MP ಮುಖ್ಯ ಕ್ಯಾಮೆರಾವನ್ನು OIS ಸಪೋರ್ಟ್‌ ಪಡೆದಿರುವ ಜೊತೆಗೆ 13MP ಅಲ್ಟ್ರಾವೈಡ್ ಸೆನ್ಸರ್‌ ಕ್ಯಾಮೆರಾ ಆಯ್ಕೆ ಕೂಡಾ ಒಳಗೊಂಡಿರಬಹುದು. ಇದಲ್ಲದೇ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಈ ಮೊಬೈಲ್‌ ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಹೊಂದಿರಬಹುದು. ಇದರ ಜೊತೆಗೆ ಈ ಫೋನ್‌ 5,100mAh ಬ್ಯಾಟರಿ ಬ್ಯಾಕ್‌ಅಪ್‌ ಜೊತೆಗೆ 23W ಚಾರ್ಜಿಂಗ್ ಅನ್ನು ಸಪೋರ್ಟ್‌ ಮಾಡಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo