Vi ಗ್ರಾಹಕರೇ ಗಮನಿಸಿ! ಈ ಬಜೆಟ್‌ ಬೆಲೆಯ ಪ್ಲಾನ್‌ಗಳಲ್ಲಿ ಡೇಟಾ ಜೊತೆಗೆ ಅತ್ಯುತ್ತಮ ವ್ಯಾಲಿಡಿಟಿ

HIGHLIGHTS

Vi ಟೆಲಿಕಾಂನ ಈ ಪ್ಲಾನ್‌ಗಳಲ್ಲಿ ದೈನಂದಿನ 1.5GB ಡೇಟಾ ಸೌಲಭ್ಯ ದೊರೆಯುತ್ತದೆ

ವಿ ಟೆಲಿಕಾಂನ ಈ ಯೋಜನೆಗಳಲ್ಲಿ ಅನಿಯಮಿತ ವಾಯ್ಸ್‌ ಕರೆಗಳು ಮತ್ತು ಎಸ್‌ಎಮ್‌ಎಸ್‌ ಸೇವೆ ಲಭ್ಯ

ಈ ಯೋಜನೆಗಳು ವೀಕೆಂಡ್‌ ಡೇಟಾ ರೋಲ್‌ಓವರ್‌ ಸೌಲಭ್ಯವನ್ನು ಒಳಗೊಂಡಿವೆ

Vi ಗ್ರಾಹಕರೇ ಗಮನಿಸಿ! ಈ ಬಜೆಟ್‌ ಬೆಲೆಯ ಪ್ಲಾನ್‌ಗಳಲ್ಲಿ ಡೇಟಾ ಜೊತೆಗೆ ಅತ್ಯುತ್ತಮ ವ್ಯಾಲಿಡಿಟಿ

Vi ವೊಡಾಫೋನ್‌ ಐಡಿಯಾ ಟೆಲಿಕಾಂ ಕಡಿಮೆ ಬೆಲೆಯಿಂದ ದುಬಾರಿ ದರದ ವರಗೆ ಹಲವು ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಆ ಪೈಕಿ ಪ್ರತಿದಿನ ಭಿನ್ನ ಡೇಟಾ ಪ್ರಯೋಜನ ಒದಗಿಸುವ ಪ್ಲಾನ್‌ಗಳು ಸೇರಿವೆ. ಅದಾಗ್ಯೂ, ಪ್ರತಿದಿನ 1.5GB ಡೇಟಾ ಸೌಲಭ್ಯ ಒಳಗೊಂಡ ರೀಚಾರ್ಜ್‌ ಯೋಜನೆಗಳಿಗೆ ಹೆಚ್ಚಿನ ಡಿಮ್ಯಾಂಡ್‌ ಇದೆ. ನಿತ್ಯ ಅಧಿಕ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಈ ಯೋಜನೆಗಳು ಅತ್ಯುತ್ತಮ ಎನಿಸಿವೆ. ಕೆಲವು ಯೋಜನೆಗಳು 1.5GB ಡೇಟಾ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸಹ ಪಡೆದಿವೆ. ಹಾಗೆಯೇ ಇನ್ನು ಕೆಲವು ಪ್ಲಾನ್‌ಗಳು ಡೇಟಾ, ವ್ಯಾಲಿಡಿಟಿ ಸೌಲಭ್ಯಗಳೊಂದಿಗೆ ಓಟಿಟಿ ಚಂದಾದಾರಿಕೆಯ ಪ್ರಯೋಜನ ಸಹ ಪಡೆದಿವೆ. ಹಾಗಾದರೆ ಗ್ರಾಹಕಸ್ನೇಹಿ ಬೆಲೆಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಒಳಗೊಂಡ Vi ಪ್ರೀಪೇಯ್ಡ್‌ ಯೋಜನಗಳ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Redmi Note 14 SE 5G ಬೆಲೆಯಲ್ಲಿ ಇಳಿಕೆ! 13,999 ರೂಗಳಿಗೆ ಸಿಗುತ್ತೆ 20MP ಸೆಲ್ಫಿ ಕ್ಯಾಮೆರಾದ ಈ ಫೋನ್‌!

Vi ಸಂಸ್ಥೆಯ 579 ರೂಗಳ ಪ್ಲಾನ್ ಮಾಹಿತಿ

ವೊಡಾಫೋನ್‌ ಐಡಿಯಾ ಟೆಲಿಕಾಂನ 579 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB Data ಸೌಲಭ್ಯ ಸಿಗಲಿದೆ. ಅಲ್ಲದೇ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಇದರಲ್ಲಿ ವೀಕೆಂಡ್‌ ಡೇಟಾ ರೋಲ್‌ಓವರ್‌ ಹಾಗೂ 12am ರಿಂದ 6am ವರೆಗೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ಸಿಗಲಿದೆ.

vi

Vi ಸಂಸ್ಥೆಯ 666 ರೂಗಳ ಪ್ಲಾನ್ ಮಾಹಿತಿ

ವೊಡಾಫೋನ್‌ ಐಡಿಯಾ ಟೆಲಿಕಾಂನ 666 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB Data ಸೌಲಭ್ಯ ಸಿಗಲಿದೆ. ಅಲ್ಲದೇ ಈ ಯೋಜನೆಯು 64 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಇದರಲ್ಲಿ ವೀಕೆಂಡ್‌ ಡೇಟಾ ರೋಲ್‌ಓವರ್‌ ಹಾಗೂ 12am ರಿಂದ 6am ವರೆಗೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ಸಿಗಲಿದೆ.

Vi ಸಂಸ್ಥೆಯ 799 ರೂಗಳ ಪ್ಲಾನ್ ಮಾಹಿತಿ

ವೊಡಾಫೋನ್‌ ಐಡಿಯಾ ಸಂಸ್ಥೆಯ 799 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB Data ಪ್ರಯೋಜನ ಸಿಗಲಿದೆ. ಅಲ್ಲದೇ ಈ ಯೋಜನೆಯು 77 ದಿನಗಳ ವ್ಯಾಲಿಡಿಟಿ ಪ್ರಯೋಜನ ಹೊಂದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಇದರಲ್ಲಿ ವೀಕೆಂಡ್‌ ಡೇಟಾ ರೋಲ್‌ಓವರ್‌ ಹಾಗೂ 12am ರಿಂದ 6am ವರೆಗೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ಸಿಗಲಿದೆ.

Vi ಸಂಸ್ಥೆಯ 859 ರೂಗಳ ಪ್ಲಾನ್ ಮಾಹಿತಿ

ವೊಡಾಫೋನ್‌ ಐಡಿಯಾ ಟೆಲಿಕಾಂನ 859 ರೂಗಳ ರೀಚಾರ್ಜ್‌ ಯೋಜನೆಯಲ್ಲಿ ಸಹ ಬಳಕೆದಾರರಿಗೆ ಪ್ರತಿದಿನ 1.5GB Data ಪ್ರಯೋಜನ ಲಭ್ಯವಾಗಲಿದೆ. ಅಂದಹಾಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದಿದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಇದರಲ್ಲಿ ವೀಕೆಂಡ್‌ ಡೇಟಾ ರೋಲ್‌ಓವರ್‌ ಹಾಗೂ 12am ರಿಂದ 6am ವರೆಗೆ ಅನಿಯಮಿತ ಡೇಟಾ ಬಳಕೆಯ ಸೌಲಭ್ಯ ಸಿಗಲಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo