Jio Tv+ : ಇನ್ಮೇಲೆ ನೆಟ್‌ಫ್ಲಿಕ್ಸ್, ಅಮೆಜಾನ್‌ ಮತ್ತು ಯೂಟ್ಯೂಬ್‌ ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಲಭ್ಯ

Jio Tv+ : ಇನ್ಮೇಲೆ ನೆಟ್‌ಫ್ಲಿಕ್ಸ್, ಅಮೆಜಾನ್‌ ಮತ್ತು ಯೂಟ್ಯೂಬ್‌ ಎಲ್ಲವೂ ಒಂದೇ ಕ್ಲಿಕ್‌ನಲ್ಲಿ ಲಭ್ಯ
HIGHLIGHTS

Jio Tv+ (ಜಿಯೋ ಟಿವಿ ಪ್ಲಸ್) ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹೋಗಲು ಪ್ರತಿ ಬಾರಿಯೂ ಪ್ರತ್ಯೇಕ ಲಾಗಿನ್ ಹೊಂದುವ ಅಗತ್ಯವಿಲ್ಲ.

Jio Tv+ (ಜಿಯೋ ಟಿವಿ ಪ್ಲಸ್) ಎಲ್ಲಾ ಕ್ಲಿಕ್‌ಗಳಲ್ಲಿ ಎಲ್ಲಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವಿರುತ್ತದೆ.

ಜಿಯೋ ಟಿವಿ ಪ್ಲಸ್ ಅಲ್ಲಿ ಶಿಕ್ಷಣ, ಯೋಗ, ಗೇಮಿಂಗ್, ಧರ್ಮಕ್ಕೆ ಸಂಬಂಧಿಸಿದ ವಿಷಯವನ್ನು ಜಿಯೋ ಟಿವಿ ಪ್ಲಸ್ ಸೆಟ್ ಟಾಪ್ ಬಾಕ್ಸ್‌ನಲ್ಲಿ ಕಾಣಬಹುದು.

ರಿಲಯನ್ಸ್‌ನ ವಾರ್ಷಿಕ ಸಭೆಯಲ್ಲಿ JIO ಫೈಬರ್ ಮತ್ತು Jiotv + ಕುರಿತು ದೊಡ್ಡ ಪ್ರಕಟಣೆಗಳನ್ನು ಮಾಡಲಾಯಿತು. ವಿಶೇಷವಾಗಿ ಜಿಯೋ ಟಿವಿ ಪ್ಲಸ್ ನಲ್ಲಿ ನೀಡಲಾಗುವ ವೈಶಿಷ್ಟ್ಯಗಳು ಮನರಂಜನೆಯ ಮಾರ್ಗವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಈ ಮಾಹಿತಿಯನ್ನು ನೀಡುತ್ತಾ ಆಕಾಶ್ ಅಂಬಾನಿ ಜಿಯೋ ಟಿವಿ ಪ್ಲಸ್ ಈಗ ಅದ್ಭುತ ವೈಶಿಷ್ಟ್ಯಗಳೊಂದಿಗೆ ಬರುತ್ತಿದೆ. ಜಿಯೋ ಟಿವಿ ಪ್ಲಸ್ ಗೆ ಎಲ್ಲಾ ಕ್ಲಿಕ್‌ಗಳಲ್ಲಿ Netflix, Prime Video, Disney+ Hotstar, Voot, Sony LIV, Zee5, Lionsgate Play, JioCinema, Shemaroo, JioSaavn, YouTube, ಮತ್ತು Eros Now ಅಂಥಹ ಎಲ್ಲಾ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವಿರುತ್ತದೆ. 

ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ಹೋಗಲು ಪ್ರತಿ ಬಾರಿಯೂ ಪ್ರತ್ಯೇಕ ಲಾಗಿನ್ ಹೊಂದುವ ಅಗತ್ಯವಿಲ್ಲ. ಎರಡನೇ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿ ಹುಡುಕಾಟಯ (Voice Search) ಸೌಲಭ್ಯ. ಈ ನಿಮ್ಮ ಧ್ವನಿಯ ಹುಡುಕಾಟದಲ್ಲಿ ಎಲ್ಲಾ ಪ್ಲಾಟ್‌ಫಾರ್ಮ್‌ಗಳ ಫಲಿತಾಂಶಗಳನ್ನು ಪಡೆಯಬವುದು. Movies, Shows, Live TV, Kids, ಮತ್ತು Music ವಿಭಾಗಗಳಾಗಿ ವಿಂಗಡಿಸಲಾದ ಉನ್ನತ ಮೆನುವಿನೊಂದಿಗೆ ಜಿಯೋ ಟಿವಿ ಪ್ಲಸ್ ಜೊತೆಗೆ ಕಂಟೆಂಟ್ ಆವಿಷ್ಕಾರವನ್ನು ಸುಲಭಗೊಳಿಸಲಾಗಿದೆ. ಧ್ವನಿ ಹುಡುಕಾಟವು ಪ್ರತಿಯೊಂದು ಅಪ್ಲಿಕೇಶನ್‌ನಿಂದ Movies, Shows, Live TV, Kids, ಮತ್ತು Music ಹಾಗು ಟ್ರೇಲರ್‌ಗಳೊಂದಿಗೆ ಉತ್ತಮ ಸಂದರ್ಭೋಚಿತ ಫಲಿತಾಂಶಗಳನ್ನು ಒಂದೇ ಪರದೆಯಲ್ಲಿ ಸಂಯೋಜಿಸುತ್ತದೆ.

JIo TV+

Jio Tv+ ಎರಡು ರೀತಿಯಲ್ಲಿ ಸಂವಹನ ಮಾಡಬವುದು

ಜಿಯೋ ಟಿವಿ ಪ್ಲಸ್ ಅಲ್ಲಿ ಒಟ್ಟಿಗೆ ದ್ವಿಮುಖ ಸಂವಹನವನ್ನು ಮಾಡಬವುದು. ಅಂದರೆ ಕೇವಲ ಟಿವಿ ನೋಡುವುದಷ್ಟೇ ಅಲ್ಲ ಅದೇ ಸಮಯದಲ್ಲಿ ನೀವು ಇದರಲ್ಲಿ ಆನ್‌ಲೈನ್ ಪೋಲ್‌ಗಳನ್ನು ಸಹ ಬಳಸಬವುದು. ಈ ಎಲ್ಲಾ ಕೆಲಸವನ್ನು ಜಿಯೋ ರಿಮೋಟ್‌ನಿಂದ ಮಾಡಬಹುದು. ಅಂತೆಯೇ ಕ್ರೀಡಾ ಚಾನೆಲ್‌ಗಳಲ್ಲಿ ವಿಶೇಷವಾದ ಪರಸ್ಪರ ಸಂಪರ್ಕವನ್ನು ಒದಗಿಸಲಾಗಿದೆ.

Jio Tv+ ಮತ್ತು ಸೆಟಾಪ್ ಬಾಕ್ಸ್‌ನಲ್ಲಿ ಲಭ್ಯ

ಜಿಯೋ ಟಿವಿ ಪ್ಲಸ್ ಅಲ್ಲಿ ಶಿಕ್ಷಣ, ಯೋಗ, ಗೇಮಿಂಗ್, ಧರ್ಮಕ್ಕೆ ಸಂಬಂಧಿಸಿದ ವಿಷಯವನ್ನು ಜಿಯೋ ಟಿವಿ ಪ್ಲಸ್ ಸೆಟ್ ಟಾಪ್ ಬಾಕ್ಸ್‌ನಲ್ಲಿ ಕಾಣಬಹುದು. ಅಪ್ಲಿಕೇಶನ್ ಅಭಿವೃದ್ಧಿಯ ಸೌಲಭ್ಯವೂ ಇಲ್ಲಿ ಇರುತ್ತದೆ. ಅಂದರೆ ಯಾವುದೇ ಡೆವಲಪರ್ ತನ್ನದೇ ಆದ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಬಹುದು ಮತ್ತು ಸಲ್ಲಿಸಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.

ಅಧ್ಯಕ್ಷ ಮುಖೇಶ್ ಅಂಬಾನಿ ಮಾತನಾಡುವುದಾದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರ ಹೆಜ್ಜೆಗಳ ಬಗ್ಗೆ ಮಾಹಿತಿ ನೀಡುವಾಗ ಅವರು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಸಂದೇಶವನ್ನು ರವಾನಿಸಿದ್ದಾರೆ. ಅವರು ಭಾರತಕ್ಕೆ ವಿಶೇಷ ಸ್ಥಾನ ಎಂದು ಜುಕರ್‌ಬರ್ಗ್ ಹೇಳಿದ್ದಾರೆ. ಇಲ್ಲಿ ಅನೇಕ ಪ್ರತಿಭಾವಂತ ಉದ್ಯಮಿಗಳು ವಾಟ್ಸಾಪ್ ಮೂಲಕ ಕೋಟ್ಯಂತರ ಭಾರತೀಯರು ನಮ್ಮೊಂದಿಗೆ ಸಂಪರ್ಕ ಹೊಂದಿದ್ದಾರೆ. ಭಾರತದಲ್ಲಿ ಸಣ್ಣ ಉದ್ಯಮಗಳೊಂದಿಗೆ 60 ದಶಲಕ್ಷಕ್ಕೂ ಹೆಚ್ಚು ಜನರು ಸಂಬಂಧ ಹೊಂದಿದ್ದಾರೆ. ಈ ಎಲ್ಲ ಜನರು ಡಿಜಿಟಲ್ ಉಪಕರಣಗಳ ಮೂಲಕ Covid ಯುಗಕ್ಕೆ ಸೇರಬೇಕಾಗಿದೆ. ಜನರ ಜೀವನವನ್ನು ಸುಲಭಗೊಳಿಸಲು ನಾವು ಪರಸ್ಪರ ಸಂಪರ್ಕ ಹೊಂದಬೇಕೆಂದು ನಾವು ಬಯಸುತ್ತೇವೆಂದು ತಿಳಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo