ಭಾರತದಲ್ಲಿ Pixel Buds Pro 2 ಮತ್ತು Pixel Watch 3 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!

ಭಾರತದಲ್ಲಿ Pixel Buds Pro 2 ಮತ್ತು Pixel Watch 3 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
HIGHLIGHTS

ಭಾರತದಲ್ಲಿ ಗೂಗಲ್ (Google) ಕಂಪನಿ ತನ್ನ ಲೇಟೆಸ್ಟ್ ಪ್ರಾಡಕ್ಟ್‌ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Google Pixel Buds Pro 2 ಅನ್ನು ಸುಮಾರು 22,900 ರೂಗಳಿಗೆ ಮತ್ತು Pixel Watch 3 ಅನ್ನು ಸುಮಾರು 39,990 ರೂಗಳಿಗೆ ಬಿಡುಗಡೆಗೊಳಿಸಿದೆ.

Pixel Buds Pro 2 ಮತ್ತು Pixel Watch 3 ಬೆಲೆ ಮತ್ತು ಲಭ್ಯತೆಯೊಂದಿಗೆ ಇವುಗಳ ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯಿರಿ.

ಭಾರತದಲ್ಲಿ ಗೂಗಲ್ (Google) ಕಂಪನಿ ತನ್ನ ಲೇಟೆಸ್ಟ್ ಪ್ರಾಡಕ್ಟ್‌ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದರಲ್ಲಿ ಇಂದಿನ ಸ್ಮಾರ್ಟ್ ಮಾರುಕಟ್ಟೆಗೆ ಬೇಕಿರುವ ಎಲ್ಲವನ್ನು ಪರಿಚಯಿಸಿದೆ. ಅವೆಂದರೆ ಗೂಗಲ್ ಕಂಪನಿ ತಮ್ಮ Pixel 9, Pixel 9 Pro, Pixel 9 Pro XL ಮತ್ತು Pixel 9 Pro Fold ಸ್ಮಾರ್ಟ್​​ಫೋನ್​ಗಳೊಂದಿಗೆ Pixel Buds Pro 2 ಮತ್ತು Pixel Watch 3 ಅನ್ನು ಸಹ ಬಿಡುಗಡೆಗೊಳಿಸಿದೆ. ಈ ಲೇಖಾನದಲ್ಲಿ ನಾನು ನಿಮಗೆ ಕೇವಲ ಈ ಹೊಸ ಬಡ್ಸ್ ಮತ್ತು ಸ್ಮಾರ್ಟ್ ವಾಚ್ ಬಗ್ಗೆ ಮಾತ್ರ ಮಾಹಿತಿ ನೀಡಲಿದ್ದೇನೆ. ಇವುಗಳ ಬೆಲೆ ಮತ್ತು ಫೀಚರ್ಗಳನ್ನು ನೋಡುವುದಾದರೆ ಸಾಮಾನ್ಯ ಮಾರುಕಟ್ಟೆಗಿಂತ ಅಧಿಕವಾಗಿದೆ. ಈ ಕೆಳಗೆ ಪ್ರತ್ಯೇಕವಾಗಿ Pixel Buds Pro 2 ಮತ್ತು Pixel Watch 3 ಬೆಲೆ ಮತ್ತು ಲಭ್ಯತೆಯೊಂದಿಗೆ ಇವುಗಳ ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯಿರಿ.

Pixel Buds Pro 2 ಬೆಲೆ ಮತ್ತು ಫೀಚರ್ಗಳು:

ಗೂಗಲ್ ಬಿಡುಗಡೆಗೊಳಿಸಿರುವ ಈ ಲೇಟೆಸ್ಟ್ ಇಯರ್‌ಬಡ್‌ಗಳು Tensor G1 ಚಿಪ್‌ನೊಂದಿಗೆ ಸಜ್ಜುಗೊಂಡಿವೆ. ಗೂಗಲ್ ಪ್ರಕಾರ Gemini ಬೆಂಬಲದೊಂದಿಗೆ ಬರುವ ಮೊತ್ತ ಮೊದಲ ಸ್ಮಾರ್ಟ್ ಬಂದ ಮೊದಲ TWS ಇಯರ್‌ಬಡ್‌ಗಳಾಗಿವೆ. ಈ ಇಯರ್‌ಬಡ್‌ಗಳು ANC ಮೋಡ್‌ನೊಂದಿಗೆ 8 ಗಂಟೆಗಳ ಬ್ಯಾಟರಿ ಅವಧಿಯನ್ನು ಮತ್ತು ಚಾರ್ಜಿಂಗ್ ಕೇಸ್‌ನೊಂದಿಗೆ 30 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಬಹುದು. ಅಲ್ಲದೆ ಈ ಇಯರ್‌ಬಡ್‌ಗಳು 11mm ದೊಡ್ಡ ಡ್ರೈವರ್‌ಗಳನ್ನು ಹೊಸ ಹೈ-ಫ್ರೀಕ್ವೆನ್ಸಿ ಚೇಂಬರ್ ಅನ್ನು ಹೊಂದಿದೆ.

Pixel Buds Pro 2 and Pixel Watch 3 launched in India, here price and features
Pixel Buds Pro 2 and Pixel Watch 3 launched in India, here price and features

ನೀವು ಯಾವಾಗ ಮಾತನಾಡಲು ಪ್ರಾರಂಭಿಸುತ್ತೀರಿ ಎಂಬುದನ್ನು ತಿಳಿಸಲು ಈ ಹೊಸ ಬಡ್ಸ್ ಸಂವಾದ ಪತ್ತೆಯೊಂದಿಗೆ AI ಅನ್ನು ಬಳಸುತ್ತವೆ. ನೀವು ಏನನ್ನೂ ಮಾಡದೆಯೇ ಇದರಲ್ಲಿ ಸಕ್ರಿಯ ನೋಯಿಸ್ ಕ್ಯಾನ್ಸಲ್ಲೇಶನ್ ಆನ್ ಆಗುವುದರೊಂದಿಗೆ ಗೂಗಲ್ ಹೊಂದಿರುವ ಸರಿ ಸುಮಾರು ಎಲ್ಲಾ ಅಪ್ಲಿಕೇಶನ್ ಬಳಸಲು ಅನುವು ಮಾಡಿಕೊಳುತ್ತದೆ. ಇದರ ಹೊರತಾಗಿ Pixel Buds Pro 2 ಹೊಸದಾಗಿ ಕಳೆದುಹೋದರೆ ಅಥವಾ ಕಳ್ಳತನವಾದರೆ ಪತ್ತೆ ಹಚ್ಚಲು ಇದರಲ್ಲಿ Find My Device ಫೀಚರ್ ನೆಟ್‌ವರ್ಕ್ ಅನ್ನು ಸಹ ಬೆಂಬಲಿಸುತ್ತದೆ. ಇದರಿಂದ ನೀವು ನಕ್ಷೆಯಲ್ಲಿ ನಿಮ್ಮ ಇಯರ್‌ಬಡ್‌ಗಳ ನಿಖರವಾದ ಸ್ಥಳವನ್ನು ಕಂಡುಹಿಡಿಯಬಹುದು.

Pixel Watch 3 ಫೀಚರ್ಗಳೇನು?

ಈ ಸ್ಮಾರ್ಟ್ ವಾಚ್ ಮೊದಲಿಗಿಂತ ಸುಮಾರು 16% ಪ್ರತಿಶತ ಚಿಕ್ಕ ಬೆಜೆಲ್‌ಗಳೊಂದಿಗೆ ಹೆಚ್ಚು ಪ್ರಕಾಶಮಾನವಾಗಿದೆ. ಡಿಸ್ಪ್ಲೇ Custom 3D Corning® Gorilla® Glass 5 ಪ್ರೊಟೆಕ್ಷನ್ ಜೊತೆಗೆ 60Hz ವರೆಗೆ ರಿಫ್ರೆಶ್ ದರವನ್ನು ನೀಡುತ್ತದೆ. ಈ Pixel Watch 3 ಬ್ಯಾಟರಿ ಸೇವರ್ ಮೋಡ್‌ನಲ್ಲಿ ಬರೋಬ್ಬರಿ 36 ಗಂಟೆಗಳ ಬ್ಯಾಟರಿ ಲೈಫ್ ಅನ್ನು ನೀಡುತ್ತದೆ. ನೀವು ಬಳಸದೆ ಇರುವ ಸಮಯದಲ್ಲಿ ಬ್ಯಾಟರಿ ತನ್ನ ಲೈಫ್ ಅನ್ನು ಉಳಿಸಿಕೊಳ್ಳಲು ಸ್ಮಾರ್ಟ್‌ವಾಚ್ ಸ್ವಯಂ ಸ್ಲೀಪ್ ಮೂಡ್ ಆನ್ ಮಾಡಿಕೊಳ್ಳುತ್ತದೆ. ಅಲ್ಲದೆ ಇದು 40 ಕ್ಕಿಂತ ಅಧಿಕ ವ್ಯಾಯಾಮ ವಿಧಾನಗಳನ್ನು ಹೊಂದಿದೆ. ಅಲ್ಲದೆ ಇದರಲ್ಲಿ ನಿದ್ರೆ, ಒತ್ತಡ, ಸ್ಕಿನ್ ಉಷ್ಣತೆ, ಹೃದಯ ಬಡಿತ ಮತ್ತು SpO2 ಅನ್ನು ಟ್ರ್ಯಾಕ್ ಫೀಚರ್ಗಳನ್ನು ಹೊಂದಿದೆ. ಅಲ್ಲದೆ ರಿಯಲ್ ಸಮಯದಲ್ಲಿ ಚಾಲನೆಯಲ್ಲಿರುವ ಮಾರ್ಗದರ್ಶನವನ್ನು ಒದಗಿಸುತ್ತದೆ. ಇದರಲ್ಲಿ ಎಲ್ಲಾ ಡೇಟಾವನ್ನು Fitbit ಅಪ್ಲಿಕೇಶನ್ ಡ್ಯಾಶ್ಬೋರ್ಡ್ ಮೂಲಕ ಪ್ರವೇಶಿಸಬಹುದು.

Pixel Buds Pro 2 and Pixel Watch 3 launched in India, here price and features
Pixel Buds Pro 2 and Pixel Watch 3 launched in India, here price and features

Google Pixel Watch 3 Price ಎಷ್ಟು?

ಈ ಹೊಸ ಗೂಗಲ್ Pixel Watch 3 ಅನ್ನು ನೋಡುವುದಾದರೆ ಈ ವಾಚ್ ನಿಮಗೆ ಒಟ್ಟಾರೆಯಾಗಿ ಎರಡು 41mm (1.2 Inch) ಮತ್ತೊಂದು 45mm (1.4 Inch) ಎಂಬ ಸೈಜ್ ಆಧಾರದಲ್ಲಿ ಬಿಡುಗಡೆಯಾಗಿದೆ. ಮೊದಲಿಗೆ 41mm ಇಂಚಿನ ಸ್ಮಾರ್ಟ್ ವಾಚ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರಲ್ಲೂ ಎರಡು ರೂಪಾಂತರಗಳನ್ನು ಕಾಣಬಹುದು. ಮೊದಲನೆಯದು Google Pixel Watch 3 (41mm Bluetooth version) ಇದರ ಬೆಲೆಯನ್ನು EUR 399 ಅಂದ್ರೆ ಭಾರತದಲ್ಲಿ ಸುಮಾರು ₹36,810 ರೂಗಳಾಗಿವೆ. ಇದರ ಕ್ರಮವಾಗಿ ಇದರ Google Pixel Watch 3 (41mm LTE + BT/Wi-Fi version) ಇದರ ಬೆಲೆಯನ್ನು EUR 499 ಅಂದ್ರೆ ಭಾರತದಲ್ಲಿ ಸುಮಾರು ₹46,036 ರೂಗಳಾಗಿವೆ.

Also Read: ರಿಯಲ್‌ಮಿ ತನ್ನ ಮುಂಬರಲಿರುವ ಸ್ಮಾರ್ಟ್​ಫೋನಲ್ಲಿ 320W SuperSonic ಚಾರ್ಜರ್ ನಾಳೆ ಬಿಡುಗಡೆಯಾಗಲಿದೆ!

Google Pixel Watch 3 Price
Google Pixel Watch 3 Price

ಇದರ ಕ್ರಮವಾಗಿ 45mm ಇಂಚಿನ ಸ್ಮಾರ್ಟ್ ವಾಚ್ ಬೆಲೆಯ ಬಗ್ಗೆ ಮಾತನಾಡುವುದಾದರೆ ಇದರಲ್ಲೂ ಎರಡು ರೂಪಾಂತರಗಳನ್ನು ಕಾಣಬಹುದು. ಮೊದಲನೆಯದು Google Pixel Watch 3 (45mm Bluetooth version) ಇದರ ಬೆಲೆಯನ್ನು EUR 449 ಅಂದ್ರೆ ಭಾರತದಲ್ಲಿ ಸುಮಾರು ₹41,423 ರೂಗಳಾಗಿವೆ. ಇದರ ಕ್ರಮವಾಗಿ ಇದರ Google Pixel Watch 3 (45mm LTE + BT/Wi-Fi version) ಇದರ ಬೆಲೆಯನ್ನು EUR 549 ಅಂದ್ರೆ ಭಾರತದಲ್ಲಿ ಸುಮಾರು ₹50,648 ರೂಗಳಾಗಿವೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo