Nokia, Samsung, OnePlus, Oppo ಮತ್ತು Vivo ಸೇರಿ ಈ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ

Nokia, Samsung, OnePlus, Oppo ಮತ್ತು Vivo ಸೇರಿ ಈ ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಭಾರಿ ಇಳಿಕೆ
HIGHLIGHTS

Samsung Galaxy Note10 Lite ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಇಳಿಕೆ

OnePlus 7T ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಇದು ನಿಮಗೆ ನಿಜಕ್ಕೂ ಉತ್ತಮ ಅವಕಾಶವಾಗಲಿದೆ

ಈಗಾಗಲೇ ನಿಮಗೆ ತಿಳಿದಿರುವಂತೆ ಭಾರತ ಸರ್ಕಾರ ಮೊಬೈಲ್ ಫೋನ್‌ಗಳ ಜಿಎಸ್‌ಟಿ ದರವನ್ನು ಏಪ್ರಿಲ್ 1 ರಿಂದ ಶೇ 12 ರಿಂದ 18 ಕ್ಕೆ ಹೆಚ್ಚಿಸಿದೆ. ಅಂದಿನಿಂದ ಅನೇಕ ಮೊಬೈಲ್ ಕಂಪನಿಗಳು ತಮ್ಮ ಫೋನ್‌ಗಳ ಬೆಲೆಯನ್ನು ಹೆಚ್ಚಿಸಿವೆ. ಆದಾಗ್ಯೂ ಕೆಲವು ಸ್ಮಾರ್ಟ್ಫೋನ್ಗಳು ಮಾರುಕಟ್ಟೆಯಲ್ಲಿವೆ ಇದರ ಬೆಲೆಗಳನ್ನು ಕೆಲವು ದಿನಗಳ ಹಿಂದೆ ಕಡಿಮೆ ಮಾಡಲಾಗಿದೆ. ಈ ಪಟ್ಟಿಯಲ್ಲಿ Nokia, Samsung, OnePlus, Oppo ಮತ್ತು Vivo ಸ್ಮಾರ್ಟ್ಫೋನ್‌ಗಳು ಸೇರಿವೆ. ಇದರ ಬೆಲೆಗಳು ಇತ್ತೀಚೆಗೆ ಇಳಿದಿವೆ. ಸ್ಮಾರ್ಟ್‌ಫೋನ್ ಮಾರಾಟವು ಈಗಾಗಲೇ ದೇಶಾದ್ಯಂತದ ಲಾಕ್‌ಡೌನ್‌ನಲ್ಲಿ ನಿಧಾನಗತಿಯ ಅವಧಿಯನ್ನು ಎದುರಿಸುತ್ತಿದೆ. ಆದರೆ ಈಗ ಸರ್ಕಾರವು ಲಾಕ್‌ಡೌನ್ ಅನ್ನು ಸಡಿಲಗೊಳಿಸುತ್ತಿರುವುದರಿಂದ ಮತ್ತು ಸ್ಮಾರ್ಟ್‌ಫೋನ್ ಮಾರಾಟ ನಿಧಾನವಾಗಿ ತೆರೆದುಕೊಳ್ಳುತ್ತಿದೆ. ಮಾರಾಟವನ್ನು ಮತ್ತಷ್ಟು ಹೆಚ್ಚಿಸಲು ಅನೇಕ ಬ್ರಾಂಡ್‌ಗಳು ತಮ್ಮ ಪ್ರಮುಖ ಸಾಧನಗಳಲ್ಲಿ ಬೆಲೆ ಕಡಿತವನ್ನು ನೀಡುತ್ತಿವೆ.

Mobile Phones

SAMSUNG GALAXY NOTE 10 LITE

ಈ ಐಷಾರಾಮಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10 ಲೈಟ್‌ಗೆ ಈ ಹಿಂದೆ ಸ್ಮಾರ್ಟ್ಫೋನ್ ಬೆಲೆ 41,000 ರೂಗಳ ಬೆಲೆ ಇತ್ತು ಆದರೆ ಈಗ ಇದರ ಬೆಲೆ 37,999 ರೂಗಳಿಗೆ ಕುಸಿದಿದೆ. ಇದರ ಫೋನ್‌ನ 6GB RAM ರೂಪಾಂತರವು ಈ ಬೆಲೆಯಲ್ಲಿ ಲಭ್ಯವಿದೆ. ಇದಲ್ಲದೆ ಗ್ಯಾಲಕ್ಸಿ ನೋಟ್ 10 ಲೈಟ್‌ನ 8GB ರೂಪಾಂತರದ ಬೆಲೆಯನ್ನು ಸಹ 43,100 ರೂಗಳಿಂದ 39,999 ರೂಗಳಿಗೆ ಇಳಿಸಲಾಗಿದೆ.

OPPO F15

ಭಾರತಕ್ಕೆ ಚೀನಿಯ ಉತ್ಪನ್ನಗಳ ಕೊರತೆಯಿಂದಾಗಿ ಈ ಒಪ್ಪೋ ಕಂಪನಿಯ OPPO F15 ಫೋನ್‌ನ ಬೆಲೆಯನ್ನು 3,000 ರೂಗಳಷ್ಟು ಕಡಿಮೆಗೊಳಿಸಿದೆ. ಈ ಫೋನ್ 8 ಜಿಬಿ ಸಂಗ್ರಹ ಮತ್ತು 128GB ಸ್ಟೋರೇಜ್ ಜೊತಗೆ ಬರುತ್ತದೆ. ಮತ್ತು ಈ ಸ್ಮಾರ್ಟ್ಫೋನ್ ಬಿಡುಗಡೆಯಾದ  ಸಮಯದಲ್ಲಿ ಈ ಫೋನ್ ಬೆಲೆ 21,990 ರೂ ಆಗಿತ್ತು ಆದರೆ ಈಗ ಭಾರಿ ಕುಸಿತದೊಂದಿಗೆ 18,990 ರೂಗಳಿಗೆ ಇಳಿಸಲಾಗಿದೆ.

VIVO S1 PRO

ಭಾರತದಲ್ಲಿ ಬಿಡುಗಡೆಯಾದ ಈ ಸ್ಮಾರ್ಟ್ಫೋನ್ ವಿವೋ ಎಸ್ 1 ಪ್ರೊ ಫೋನ್‌ನ ಬೆಲೆ 20,990 ರೂಗಳಾಗಿತ್ತು ಆದರೆ ಈಗ ಇದರ ಬೆಲೆಯಲ್ಲಿ ಕುಸಿತವಾಗಿ ಸುಮಾರು 19,990 ರೂಗಳಿಗೆ ಲಭ್ಯವಿದೆ. ನೀವು ಈ ಸ್ಮಾರ್ಟ್ಫೋನ್ ಅನ್ನು ಮಿಸ್ಟಿಕ್ ಬ್ಲ್ಯಾಕ್, ಜಾಜ್ ಬ್ಲೂ ಮತ್ತು ಡ್ರೀಮಿ ವೈಟ್‌ನಲ್ಲಿ ಖರೀದಿಸಬಹುದು.

NOKIA 2.3

ನೋಕಿಯಾ 2.3 ಅನ್ನು ಕಳೆದ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಈ NOKIA 2.3 ಫೋನ್‌ನ 2GB RAM ಮತ್ತು 32GB ಸ್ಟೋರೇಜ್ ರೂಪಾಂತರದ ಬೆಲೆಯನ್ನು 8,199 ರೂಗಳಿಂದ ನೇರವಾಗಿ 7,199 ರೂಗಳಿಗೆ ಇಳಿಸಲಾಗಿದೆ. ಇದರಲ್ಲಿ HD+ ಡಿಸ್ಪ್ಲೇ ಮತ್ತು ಡ್ಯುಯಲ್ ರಿಯರ್ ಕ್ಯಾಮೆರಾವನ್ನು ನೀಡಲಾಗಿದ್ದು ಈ ಸ್ಮಾರ್ಟ್ಫೋನ್ 4000mAh ಬ್ಯಾಟರಿಯನ್ನು ಸಹ ಹೊಂದಿದೆ.

ONEPLUS 7T

ಭಾರತದಲ್ಲಿ ಒನ್‌ಪ್ಲಸ್ ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಇದು ನಿಮಗೆ ನಿಜಕ್ಕೂ ಉತ್ತಮ ಅವಕಾಶವಾಗಲಿದೆ. ಈ ಒನ್‌ಪ್ಲಸ್ 7 ಟಿ ಫೋನ್‌ನ ಬೆಲೆಯನ್ನು ಈ ಮೊದಲು ಕಡಿಮೆ ಮಾಡಲಾಗಿದೆ ಮತ್ತು ಈಗ ಈ ಫೋನ್‌ನ ಬೆಲೆಯನ್ನು ಮತ್ತೊಮ್ಮೆ ಕಡಿಮೆ ಮಾಡಲಾಗಿದೆ. ಸಾಧನದ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ 37,999 ರೂಗಳಾಗಿತ್ತು ಆದರೆ 8GB RAM ಮತ್ತು 128GB ಸ್ಟೋರೇಜ್ ಬೆಲೆ 34,999 ರೂಗಳಿಗೆ ಇಳಿಸಲಾಗಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo