ನಿಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡೋದೇಗೆ?

ನಿಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡೋದೇಗೆ?
HIGHLIGHTS

Aadhaar ಅನ್ನು Ration Card ಜೊತೆ ಲಿಂಕ್ ಲಿಂಕ್ ಮಾಡೋದ್ರಿಂದ ಈ ಲಾಕ್ಡೌನಲ್ಲಿ ಭಾರಿ ಲಾಭ ಪಡೆಯಬವುದು

ಆಹಾರ ಪೂರಕಗಳನ್ನು ಪಡೆಯುವ ಅರ್ಹತೆ ಪಡೆದುಕೊಳ್ಳಲು ರೇಷನ್ ಕಾರ್ಡ್ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಪ್ರಕ್ರಿಯೆಯಾಗಿದೆ.

ನೇರ ಲಾಭ ವರ್ಗಾವಣೆ (DBT – direct benefit transfer) ಮಾರ್ಗದ ಮೂಲಕ ಮಾತ್ರ ರೈತರಿಗೆ ಉಚಿತ ವಿದ್ಯುತ್ ಒದಗಿಸುವುದು ಪ್ರತಿ ಪಡಿತರ ಚೀಟಿಯೊಂದಿಗೆ ಆಧಾರ್ ಅನ್ನು ಜೋಡಿಸುವುದು, ಆಸ್ತಿ ತೆರಿಗೆ ದರವನ್ನು ಹೆಚ್ಚಿಸುವುದು ಮತ್ತು ನೀರು ಮತ್ತು ನೈರ್ಮಲ್ಯ ಸೇವೆಗಳಿಗೆ ಬಳಕೆದಾರರ ಶುಲ್ಕವನ್ನು ವಿಧಿಸುವುದು ರಾಜ್ಯಗಳು ಮೊದಲು ಕೈಗೊಳ್ಳಬೇಕಾದ ಕೆಲವು ಸುಧಾರಣಾ ಕ್ರಮಗಳು ಕೇಂದ್ರವು ಅನುಮತಿಸಿದ ಹೆಚ್ಚಿದ ಸಾಲ ಮಿತಿಗಳನ್ನು ಅವರು ಪಡೆಯಬಹುದು. ದಿ ಪ್ರಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಖರ್ಚು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಧೀರ್ಘಕಾಲದವರೆಗೆ ಬಾಕಿ ಉಳಿದಿರುವ ಸುಧಾರಣೆಗಳನ್ನು ರಾಜ್ಯಗಳು ತರುವುದನ್ನು ಖಚಿತಪಡಿಸಿಕೊಳ್ಳಲು ಈ ಷರತ್ತುಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಭಾರತ ಸರ್ಕಾರದ ಅನುದಾನಿತ ಬೆಲೆಗಳಲ್ಲಿ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ನಿಂದ ಕೆಲವು ಆಹಾರ ಪೂರಕಗಳನ್ನು ಪಡೆಯುವ ಅರ್ಹತೆ ಪಡೆದುಕೊಳ್ಳಲು ರೇಷನ್ ಕಾರ್ಡ್ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಪ್ರಕ್ರಿಯೆಯಾಗಿದೆ. ಆಫ್ಲೈನ್ನಲ್ಲಿ ಮಾಡಬಹುದಾದ ರೇಷನ್ ಕಾರ್ಡ್ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಸುಲಭವಾದ ಪ್ರಕ್ರಿಯೆಯಾಗಿದೆ. ಇದನ್ನು ಆಧಾರ್ ಕಾರ್ಡ್ ಹತ್ತಿರದ ರೇಷನ್ ಕಛೇರಿಯಲ್ಲಿ ಅಗತ್ಯ ಡಾಕ್ಯುಮೆಂಟ್ ಪ್ರತಿಗಳನ್ನು ಸಲ್ಲಿಸುವ ಮೂಲಕ ರೇಷನ್ ಕಾರ್ಡ್ನೊಂದಿಗೆ ಸಂಪರ್ಕ ಕಲ್ಪಿಸಬಹುದು. ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಲಸದ ಸಮಯದಲ್ಲಿ ರೇಷನ್ ಕೇಂದ್ರಗಳನ್ನು ಭೇಟಿ ಮಾಡಲು ಸ್ವಲ್ಪ ಸಮಯ ಕಳೆಯಬೇಕಾಗಿದೆ. ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ನೊಂದಿಗೆ ಸಂಪರ್ಕಿಸುವ ಪ್ರಕ್ರಿಯೆ ಕೆಳಕಂಡಂತಿವೆ. 

Aadhaar ಅನ್ನು Ration Card  ಜೊತೆ ಲಿಂಕ್ ಮಾಡೋದೇಗೆ?

>ಹತ್ತಿರದ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಸೆಂಟರ್ ಅನ್ನು ಭೇಟಿ ಮಾಡಿ.

>ರೇಷನ್ ಕಾರ್ಡ್ನ ಫೋಟೊಕಾಪಿ, ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. 

>ಕುಟುಂಬದ ಮುಖ್ಯಸ್ಥನ ಪಾಸ್ಪೋರ್ಟ್ ಗಾತ್ರದ ಫೋಟೋವನ್ನು ಪಡಿತರ ಕಚೇರಿಗೆ ತೆಗೆದುಕೊಳ್ಳಬೇಕು.

>ಬ್ಯಾಂಕ್ ಪಾಸ್ಬುಕ್ನ ಫೋಟೊಕಾಪಿ ಇತರ ಡಾಕ್ಯುಮೆಂಟ್ ಪ್ರತಿಗಳ ಜೊತೆಗೆ ಸಲ್ಲಿಸಬೇಕು.

>ಆಧಾರ್ ಪ್ರಮಾಣೀಕರಣದ ಕೇಂದ್ರದಲ್ಲಿ ಬಯೋಮೆಟ್ರಿಕ್ ಫಿಂಗರ್ಪ್ರಿಂಟ್ ಮಾಹಿತಿಯನ್ನು ತೆಗೆದುಕೊಳ್ಳಲಾಗುವುದು.

>ಡಾಕ್ಯುಮೆಂಟ್ಗಳು ಯಶಸ್ವಿಯಾದ ನಂತರ ತಮ್ಮ ನೋಂದಾಯಿತ ಮೊಬೈಲ್ ನಂಬರ್ಗೆ ಪ್ರಕಟಣೆ ಮೆಸೇಜ್ ಪಡೆಯುತ್ತಾರೆ.

ಇದಕ್ಕೆ ಸಂಭದಪಟ್ಟ ಕೆಲ ಡಾಕ್ಯುಮೆಂಟ್ಗಳನ್ನು ನೀಡಬೇಕಾಗುತ್ತದೆ.  ರೇಷನ್ ಕಾರ್ಡ್ನ ಫೋಟೋಕಪಿ ಮತ್ತು ಪರಿಶೀಲನೆಗಾಗಿ ಮೂಲ. ಎಲ್ಲಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ನ ಫೋಟೊಕಾಪಿ ಮತ್ತು ಕುಟುಂಬದ ಮುಖ್ಯಸ್ಥನ ಫೋಟೊಕಾಪಿ ಹಾಗು ಬ್ಯಾಂಕ್ ಪಾಸ್ಬುಕ್ನ ಫೋಟೊಕಾಪಿ ನೀಡಬೇಕಾಗುತ್ತದೆ. ಕಳೆದ ವಾರ ಕೇಂದ್ರ ಸರ್ಕಾರ ಒಟ್ಟು ರಾಜ್ಯ ದೇಶೀಯ ಉತ್ಪನ್ನದ (GSDP) ಶೇಕಡಾ 5% ರವರೆಗೆ ಸಾಲ ಪಡೆಯಲು ರಾಜ್ಯಗಳಿಗೆ ಅನುಮತಿ ನೀಡಿತ್ತು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo