Google Maps ಮತ್ತು Google Search ಬಳಸಿ ಅಧಿಕೃತ Covid-19 ಪರೀಕ್ಷಾ ಕೇಂದ್ರಗಳನ್ನು ಪಡೆಯುವುದು ಹೇಗೆ?

Google Maps ಮತ್ತು Google Search ಬಳಸಿ ಅಧಿಕೃತ Covid-19 ಪರೀಕ್ಷಾ ಕೇಂದ್ರಗಳನ್ನು ಪಡೆಯುವುದು ಹೇಗೆ?
HIGHLIGHTS

Covid-19 ಪರೀಕ್ಷೆಗೆ ಯಾವುದೇ ಲ್ಯಾಬ್‌ಗಳು / ಕೇಂದ್ರಗಳಿಗೆ ಭೇಟಿ ನೀಡುವ ಮೊದಲು ವೈದ್ಯರ ಪ್ರಿಸ್ಕ್ರಿಪ್ಷನ್ (ರಶೀದಿಯನ್ನು) ಹೊಂದಿರಬೇಕು ಎಂಬುದನ್ನು ಗಮನಿಸಬೇಕು.

ಇದು ನಿಮ್ಮ ಹತ್ತಿರವಿರುವ ಅಧಿಕೃತ Covid-19 ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ನಿಮಗೆ ತೋರಿಸುತ್ತದೆ.

ಈಗ ಗೂಗಲ್ ಸರ್ಚ್ ಎಂಜಿನ್ ದೈತ್ಯ ಗೂಗಲ್ ಗೂಗಲ್ ಮ್ಯಾಪ್ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ, ಇದು ಕೋವಿಡ್ -19 ಪರೀಕ್ಷಾ ಕೇಂದ್ರಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ದೇಶಾದ್ಯಂತದ ಕರೋನವೈರಸ್ ಪರೀಕ್ಷಾ ಕೇಂದ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ಮತ್ತು ಮೈಗೊಇಂಡಿಯಾ ಜೊತೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಂಪನಿಯು ಇತ್ತೀಚೆಗೆ ಮಾಡಿದ ಟ್ವೀಟ್‌ನಲ್ಲಿ ಪ್ರಕಟಿಸಿದೆ. 

ಗೂಗಲ್ ಸರ್ಚ್ ಜೊತೆಗೆ ಗೂಗಲ್ ಅಸಿಸ್ಟೆಂಟ್ ನಲ್ಲಿಯೂ ಈ ವೈಶಿಷ್ಟ್ಯ ಲಭ್ಯವಿದೆ. ಬಳಕೆದಾರರು ಪರೀಕ್ಷಾ ಕೇಂದ್ರಗಳನ್ನು ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಇತರ 7 ಪ್ರಾದೇಶಿಕ ಭಾಷೆಗಳಲ್ಲಿ ಹುಡುಕಬಹುದು. ಪರೀಕ್ಷೆಗೆ ಯಾವುದೇ ಲ್ಯಾಬ್‌ಗಳು / ಕೇಂದ್ರಗಳಿಗೆ ಭೇಟಿ ನೀಡುವ ಮೊದಲು ವೈದ್ಯರ ಪ್ರಿಸ್ಕ್ರಿಪ್ಷನ್ (ರಶೀದಿಯನ್ನು) ಹೊಂದಿರಬೇಕು ಎಂಬುದನ್ನು ಗಮನಿಸಬೇಕು. ನಿಮ್ಮ ಹತ್ತಿರವಿರುವ Covid-19 ಪರೀಕ್ಷಾ ಕೇಂದ್ರಗಳನ್ನು ಹೇಗೆ ಪಡೆಯುವುದು ಎಂಬುದರ ಹಂತ ಹಂತದ ಮಾರ್ಗದರ್ಶಿ ಮುಂದೆ ನೋಡಿ.

Google Map

ಗೂಗಲ್ ಮ್ಯಾಪ್ ಅಲ್ಲಿ ಪಡೆಯುವುದು ಹೇಗೆ? 

>ಮೊದಲಿಗೆ ಗೂಗಲ್ ಮ್ಯಾಪ್ಗಳನ್ನು ತೆರೆಯಿರಿ

>ಈಗ ಮೇಲಿನ ಸರ್ಚ್ ಪಟ್ಟಿಯಲ್ಲಿ ಕೊರೊನಾವೈರಸ್ ಪರೀಕ್ಷೆ ಅಥವಾ ಕೋವಿಡ್ -19 ಪರೀಕ್ಷೆಯಂತಹ ನುಡಿಗಟ್ಟುಗಳನ್ನು ಟೈಪ್ ಮಾಡಿ

>ಇದು ನಿಮ್ಮ ಹತ್ತಿರವಿರುವ ಅಧಿಕೃತ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ನಿಮಗೆ ತೋರಿಸುತ್ತದೆ. ಪರೀಕ್ಷಾ ಕೇಂದ್ರದ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಲು ಬಳಕೆದಾರರು ‘ಪರೀಕ್ಷಾ ಮಾಹಿತಿಯನ್ನು ನೋಡಿ’ (ಪ್ರತಿ ಸರ್ಚ್ ಫಲಿತಾಂಶದ ಅಡಿಯಲ್ಲಿ ಲಭ್ಯವಿದೆ) ಟ್ಯಾಪ್ ಮಾಡಬಹುದು.

ಗೂಗಲ್ ಸರ್ಚ್ ಅಲ್ಲಿ ಪಡೆಯುವುದು ಹೇಗೆ?

Google Map 

ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಸರ್ಚ್ ಅನ್ನು ತೆರೆಯಿರಿ ಮತ್ತು ‘ಕೊರೊನಾವೈರಸ್ ಪರೀಕ್ಷೆ’ ಎಂದು ಟೈಪ್ ಮಾಡಿ

ಈಗ ನಿಮ್ಮ ಹತ್ತಿರವಿರುವ ಎಲ್ಲಾ ಕರೋನವೈರಸ್ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಪಡೆಯಲು ಎಂಟರ್ ಒತ್ತಿರಿ ಅಷ್ಟೇ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo