ನಿಮ್ಮ Aadhar Card ಕಳೆದೋಯ್ತಾ? ಆನ್ಲೈನ್ ಮೂಲಕ ಪುನಃ ಪಡೆಯಬವುದು

ನಿಮ್ಮ Aadhar  Card ಕಳೆದೋಯ್ತಾ? ಆನ್ಲೈನ್ ಮೂಲಕ ಪುನಃ ಪಡೆಯಬವುದು
HIGHLIGHTS

ಆನ್ಲೈನ್ ಮೂಲಕವೇ UIDAI ಆಧಾರ್ ಅನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್ ಪಡೆಯಬವುದೆಗೆಂದು ಈ ಕೆಳಗೆ ತಿಳಿಯಬವುದು.

ಭಾರತ ಸರ್ಕಾರವು ಒದಗಿಸುವ ಕೆಲವು ಸರ್ಕಾರಿ ಕಲ್ಯಾಣ ಸೌಲಭ್ಯಗಳನ್ನು ಆನಂದಿಸಲು ಭಾರತದ ಪ್ರಜೆಗೆ ಆಧಾರ್ ಅಗತ್ಯವಿದೆ. ಡಾಕ್ಯುಮೆಂಟ್ ಒಬ್ಬ ವ್ಯಕ್ತಿಯ ವಿಳಾಸ ಮತ್ತು ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಆಧಾರ್ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಹೊರಡಿಸಿದ 12 ಅಂಕಿಯ ಅನನ್ಯ ಗುರುತಿನ ಸಂಖ್ಯೆಯಾಗಿರುತ್ತದೆ. ಒಬ್ಬ ವ್ಯಕ್ತಿ ತನ್ನ ಆಧಾರ್ ಕೇಂದ್ರಗಳಿಗೆ ಅಥವಾ ಬ್ಯಾಂಕುಗಳು / ಅಂಚೆ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್‌ಗೆ ದಾಖಲಾದ ನಂತರ ಅವನು / ಅವಳು UIDAI ಒದಗಿಸಿದ ದಾಖಲಾತಿ ಐಡಿ, ವರ್ಚುವಲ್ ಐಡಿ ಅಥವಾ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಆನ್ಲೈನ್ ಮೂಲಕವೇ UIDAI ಆಧಾರ್ ಅನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್ ಪಡೆಯಬವುದೆಗೆಂದು ಈ ಕೆಳಗೆ ತಿಳಿಯಬವುದು.

>ಮೊದಲಿಗೆ UIDAI ಸೈಟ್ https://uidai.gov.in/ ಮೇಲೆ ಕ್ಲಿಕ್ ಮಾಡಬೇಕೆಯಾಗುತ್ತದೆ   

>ಎರಡನೇಯದಾಗಿ Download Aadhaar ಮೇಲೆ ಕ್ಲಿಕ್ ಮಾಡಿಕೊಳ್ಳಿ

>ಮೂರನೇಯದಾಗಿ ಇಲ್ಲಿ I Have ವಿಭಾಗದ ಅಡಿಯಲ್ಲಿ “ಆಧಾರ್” ಆಯ್ಕೆಯನ್ನು ಆರಿಸಿ. 

>ನಂತರ ನಿಮ್ಮ ಆಧಾರ್ ಕಾರ್ಡ್ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. 

>ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಒಮ್ಮೆ ಪಾಸ್‌ವರ್ಡ್ ಪಡೆಯಲು ಕ್ಯಾಪ್ಚಾ ಪರಿಶೀಲನಾ ಕೋಡ್ ನಮೂದಿಸಿ Send OTP ಆಯ್ಕೆಯನ್ನು ಕ್ಲಿಕ್ ಮಾಡಿ. 

>ಇದರ ನಂತರ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ಬಂದ OTP ಅನ್ನು ಇಲ್ಲಿ ನಮೂದಿಸಿ. 

>ಇಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು ಸಮೀಕ್ಷೆಯನ್ನು ಪೂರ್ಣಗೊಳಿಸಿದ ನಂತರ Verify And Download ಕ್ಲಿಕ್ ಮಾಡಿ ಅಷ್ಟೇ.

ಇದರ ನಂತರ ನಿಮ್ಮ ಡೌನ್ಲೋಡ್ ಹೋಗಿ ಕ್ಲಿಕ್ ಮಾಡಿ ತೆರೆಯಿರಿ ಆದರೆ ಇಲ್ಲಿ ಅದನ್ನು ತೆರೆಯಲು ನಿಮಗೆ ಒಂದು ಪಾಸ್‌ವರ್ಡ್ ಹಾಕಬೇಕಾಗುತ್ತದೆ. ಸಾಮಾನ್ಯವಾಗಿ ಪಾಸ್‌ವರ್ಡ್ ನಿಮ್ಮ ಮೊದಲ ಹೆಸರಿನ (ಆಂಗ್ಲದಲ್ಲಿ) ಮೊದಲ ನಾಲ್ಕು ಅಕ್ಷರ ಮತ್ತು ನೀವು ಹುಟ್ಟಿದ ವರ್ಷ ನಮೂದಿಸಬೇಕೆಗುತ್ತದೆ. ಉದಾಹರಣೆಗೆ ನನ್ನ ಹೆಸರು Manjunatha ಆಗಿದ್ದರೆ ಇದರ ಮೊದಲ ನಾಲ್ಕು ಅಕ್ಷರ MUNJ ಮತ್ತು ನನ್ನ ಹುಟ್ಟಿದ ವರ್ಷ 1993 ಆಗಿದ್ದರೆ ಪಾಸ್ವಾರ್ಡ್ MUNJ1993 ಆಗಿರುತ್ತದೆ. ಹೀಗೆ ನಿಮ್ಮ ಪಾಸ್ವರ್ಡ್ ಹಾಕಿ ತೆರೆಯಬವುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo