Fake or Safe: ಇನ್ಮೇಲೆ ಯಾವುದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಅಸಲಿನಾ? ನಕಲಿನಾ ಈ ರೀತಿ ಪರಿಶೀಲಿಸಬಹುದು!

Fake or Safe: ಇನ್ಮೇಲೆ ಯಾವುದೇ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಅಸಲಿನಾ? ನಕಲಿನಾ ಈ ರೀತಿ ಪರಿಶೀಲಿಸಬಹುದು!

Fake or Safe: ಇಂದಿನ ಡಿಜಿಟಲ್ ಜಮಾನಾದಲ್ಲಿ ಎಲ್ಲ ಕೆಲಸಗಳು ಮೊಬೈಲ್ ಫೋನ್‌ಗಳು ಮತ್ತು ಇಂಟರ್ನೆಟ್ ಮೂಲಕವೇ ನಡೆಯುತ್ತವೆ. ಅದು ಬ್ಯಾಂಕ್ ಕೆಲಸವಿರಲಿ, ಶಾಪಿಂಗ್ ಇರಲಿ ಅಥವಾ ಮಜಾ ಮಾಡುವುದಿರಲಿ ಇದೇ ಕಾರಣಕ್ಕೆ ಪ್ರತಿ ವರ್ಷ ಕೋಟ್ಯಂತರ ಅಪ್ಲಿಕೇಶನ್ ಜಗತ್ತಿನಾದ್ಯಂತ ಡೌನ್‌ಲೋಡ್ ಮಾಡುತ್ತಾರೆ. ಆದರೆ ಈ ಸೌಲಭ್ಯದ ಜೊತೆಗೆ ನಕಲಿ ಆ್ಯಪ್‌ಗಳು ಮತ್ತು ಮೋಸ ಮಾಡುವ ವೆಬ್‌ಸೈಟ್‌ಗಳಿಂದ ದೊಡ್ಡ ತೊಂದರೆ ಇದೆ. ತುಂಬಾ ಜನರಿಗೆ ಸರಿಯಾದ ಮಾಹಿತಿ ಇರಲ್ಲದ ಕಾರಣ ಅವರು ನೋಡಲು ಪೂರ್ತಿ ಅಸಲಿಯಂತೆ ಕಾಣುವ ಆ್ಯಪ್‌ಗಳು ಅಥವಾ ವೆಬ್‌ಸೈಟ್‌ಗಳನ್ನು ನಂಬುತ್ತಾರೆ. ಆದರೆ ನಿಜವಾಗಿ ಅವು ಮೋಸ ಮಾಡಲಿಕ್ಕಾಗಿಯೇ ತಯಾರಾಗಿರುತ್ತವೆ.

Digit.in Survey
✅ Thank you for completing the survey!

Also Read: Jio Happy New Year 2026 Plans: ರಿಲಯನ್ಸ್ ಜಿಯೋ 3 ಹೊಸ ಹ್ಯಾಪಿ ನ್ಯೂ ಇಯರ್ ಪ್ಲಾನ್‌ಗಳನ್ನು ಪರಿಚಯಿಸಿದೆ!

ನೀವು ತಪ್ಪು ಮಾಡಿ ಅವುಗಳನ್ನು ಡೌನ್‌ಲೋಡ್ ಮಾಡಿದರೆ ಅಥವಾ ಓಪನ್ ಮಾಡಿದರೆ ನಿಮ್ಮ ಮೊಬೈಲ್ ಫೋನ್ ಹ್ಯಾಕ್ ಆಗಬಹುದು ನಿಮ್ಮ ಡೇಟಾ ಕಳ್ಳತನ ಆಗಬಹುದು ಮತ್ತು ನಿಮ್ಮ ಬ್ಯಾಂಕ್ ಖಾತೆಯಿಂದ ದುಡ್ಡು ಮಂಗಮಾಯ ಆಗಬಹುದು. ಹಾಗಾಗಿ ಒಂದು ವೆಬ್‌ಸೈಟ್ ಅಥವಾ ಆ್ಯಪ್ ನಕಲಿಯೋ ಇಲ್ಲವೋ ಎಂದು ಹೇಗೆ ತಿಳಿದುಕೊಳ್ಳೋದು ಮತ್ತು ಯಾವ ಕ್ರಮವು ನಿಮ್ಮನ್ನು ಮೋಸದಿಂದ ಕಾಪಾಡುತ್ತದೆ ಎಂಬುದನ್ನು ಇವತ್ತು ಗೊತ್ತು ಮಾಡಿಕೊಳ್ಳೋಣ.

ವೆಬ್‌ಸೈಟ್ ಅಥವಾ ಆ್ಯಪ್ ನಕಲಿ ಅಂತ ಪತ್ತೆ ಮಾಡೋದು ಹೇಗೆ?

ಈ ದಿನಗಳಲ್ಲಿ ದುಡ್ಡಿಗಿಂತ ಡೇಟಾ ಬಹಳ ಮುಖ್ಯವಾಗಿದೆ. ಯಾರಾದರೂ ನಿಮ್ಮ ವೈಯಕ್ತಿಕ ಡೇಟಾವನ್ನು ತೆಗೆದುಕೊಂಡರೆ ಅವರು ಅದನ್ನು ತಪ್ಪಾಗಿ ಬಳಸಿ ಅಥವಾ ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು. ಆದ್ದರಿಂದ ವೆಬ್‌ಸೈಟ್ ಅಥವಾ ಆ್ಯಪ್ ಅಸಲಿಯೋ ಅಥವಾ ನಕಲಿಯೋ ಎಂದು ಖಚಿತಪಡಿಸಿಕೊಳ್ಳುವುದು ತುಂಬಾ ಅಗತ್ಯವಾಗಿದೆ.

Fake or Safe

ಇಲ್ಲಿ ಒಳ್ಳೆಯ ವಿಷಯ ಏನಪ್ಪಾ ಅಂದ್ರೆ ಕೆಲವು ಸರಳ ಹಂತಗಳು ಫಾಲೋ ಮಾಡುವುದರಿಂದ ನೀವೇ ಯಾವುದೇ ವೆಬ್‌ಸೈಟ್ ಅಥವಾ ಆ್ಯಪ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಭಾರತ ಸರ್ಕಾರವು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ನಲ್ಲಿ ಒಂದು ಬಹಳ ಉಪಯುಕ್ತ ಸೌಲಭ್ಯವನ್ನು ನೀಡಿದೆ. ಇಲ್ಲಿ ಆ್ಯಪ್ ಅಥವಾ ವೆಬ್‌ಸೈಟ್ ಅಸಲಿಯೋ ಅಥವಾ ನಕಲಿಯೋ ಎಂದು ನೀವು ಒಂದು ನಿಮಿಷದಲ್ಲಿ ಕಂಡುಹಿಡಿಯಬಹುದು.

ನಕಲಿ ವೆಬ್‌ಸೈಟ್‌ಗಳು ಅಥವಾ ಆ್ಯಪ್‌ಗಳನ್ನು ಚೆಕ್ ಮಾಡಲು ಸುಲಭವಾದ ಸರ್ಕಾರಿ ವಿಧಾನ:

  • ಮೊದಲಿಗೆ ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ಗೂಗಲ್ ಸರ್ಚ್ ಬಾರ್‌ನಲ್ಲಿ “NCRP” ಅಂತ ಹುಡುಕಿ.
  • ಹುಡುಕಾಟದ ರಿಸಲ್ಟ್‌ಗಳಲ್ಲಿ ನಿಮಗೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್ ಕಾಣಿಸುತ್ತದೆ ಅದನ್ನು ಓಪನ್ ಮಾಡಿ.
  • ವೆಬ್‌ಸೈಟ್ ಓಪನ್ ಆದ ಮೇಲೆ ಮೇಲೆ ಅಥವಾ ಪಕ್ಕದಲ್ಲಿ ಕೊಟ್ಟಿರುವ ಮೂರು ಗೆರೆಗಳನ್ನು ಟ್ಯಾಪ್ ಮಾಡಿ. ಇದು ಪೂರ್ತಿ ಮೆನುವನ್ನು ತೆರೆಯುತ್ತದೆ.
  • ಮೆನುವಿನಲ್ಲಿ ವರದಿ ಮತ್ತು ಶಂಕಿತನನ್ನು ಪರಿಶೀಲಿಸಿ ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಇಲ್ಲಿ ನೀವು “ಶಂಕಿತನನ್ನು ಪರಿಶೀಲಿಸಿ (ವೆಬ್‌ಸೈಟ್ / ಆ್ಯಪ್)” ಎಂಬ ಆಪ್ಷನ್ (ಆಯ್ಕೆ) ಅನ್ನು ನೋಡಬಹುದು. ಅದನ್ನು ಆಯ್ಕೆ ಮಾಡಿ.
  • ಈಗ ನಿಮಗೆ ಎರಡು ಆಯ್ಕೆಗಳು ಕಾಣಿಸುತ್ತವೆ ಇದರಲ್ಲಿ ವೆಬ್‌ಸೈಟ್ URL ಮತ್ತು ಆ್ಯಪ್ URL. ನೀವು ಯಾವುದನ್ನು ಚೆಕ್ ಮಾಡಲು ಇಷ್ಟಪಡುತ್ತೀರೋ ಅದನ್ನು ಆಯ್ಕೆ ಮಾಡಿ.
  • ಕೊಟ್ಟಿರುವ ಬಾಕ್ಸ್ನಲ್ಲಿ ವೆಬ್‌ಸೈಟ್‌ನ ಪೂರ್ತಿ ಲಿಂಕ್ ಅಥವಾ ನೀವು ಪರಿಶೀಲಿಸಲು ಬಯಸುವ ಆ್ಯಪ್‌ನ ಹೆಸರು / URL ಅನ್ನು ಟೈಪ್ ಮಾಡಿ.
  • ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಕ್ಯಾಪ್ಚಾವನ್ನು ತುಂಬಿ ಮತ್ತು ಸರ್ಚ್ ಬಟನ್ ಅನ್ನು ಕ್ಲಿಕ್ ಮಾಡಿ.
  • ನೀವು ಸರ್ಚ್ ಮಾಡಿದ ಕೂಡಲೇ ವೆಬ್‌ಸೈಟ್ ಅಥವಾ ಆ್ಯಪ್ ನಕಲಿಯೋ ಅಥವಾ ಸುರಕ್ಷಿತವೋ ಎಂದು ಸಿಸ್ಟಮ್ ನಿಮಗೆ ತಿಳಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo