ಜಿಯೋ ಹೊಸದಾಗಿ ₹103 ರೂಗಳ ಡೇಟಾ ಪ್ಯಾಕ್ 5GB ಅಲ್ಪಾವಧಿಯ ಬಳಕೆಗಾಗಿ ಪರಿಚಯಿಸಲಾಗಿದೆ.
ಜಿಯೋ ₹500 ಯೋಜನೆಯು 13 ಕ್ಕೂ ಹೆಚ್ಚು OTT ಸ್ಟ್ರೀಮಿಂಗ್ ಸೇವೆಗಳ ವ್ಯಾಪಕ ಪ್ಯಾಕೇಜ್ ಅನ್ನು ನೀಡುತ್ತದೆ.
ಜಿಯೋದ ₹500 ಮಾಸಿಕ ಮತ್ತು ₹3,599 ವಾರ್ಷಿಕ ಪ್ಲಾನ್ ಗೂಗಲ್ ಜೆಮಿನಿ ಪ್ರೊ AI ಸೇವೆಯನ್ನು 18 ತಿಂಗಳ ಚಂದಾದಾರಿಕೆ ನೀಡುತ್ತದೆ.
Jio Happy New Year 2026 Plans: ಭಾರತದಲ್ಲಿ ಪ್ರಸ್ತುತ ರಿಲಯನ್ಸ್ ಜಿಯೋ ಕಂಪನಿಯು 2026 ರ ಹೊಸ ವರ್ಷಕ್ಕೆ ಮುಂಚಿತವಾಗಿ ‘ಹ್ಯಾಪಿ ನ್ಯೂ ಇಯರ್ 2026’ ಎಂಬ ಹೆಸರಿನಲ್ಲಿ ಮೂರು ಅತ್ಯುತ್ತಮ ಪ್ರೀಪೇಯ್ಡ್ ಯೋಜನೆಗಳು ಬಿಡುಗಡೆ ಮಾಡಿದೆ. ಈ ಯೋಜನೆಗಳು ಕೇವಲ ಹೆಚ್ಚಿನ ಡೇಟಾ ಮತ್ತು ಉಚಿತ ಕರೆಗಳನ್ನು ಒದಗಿಸುವುದರೊಂದಿಗೆ ಮನರಂಜನೆಗಾಗಿ ಒಟಿಟಿ (OTT) ಚಂದಾದಾರಿಕೆಗಳು ಮತ್ತು ಗೂಗಲ್‌ನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸೇವೆಗಳನ್ನೂ ಸಹ ನೀಡುತ್ತಿವೆ. ರಿಲಯನ್ಸ್ ಜಿಯೋ ₹103, ₹500, ಮತ್ತು ₹3,599 ಬೆಲೆಯ ಈ ಹೊಸ ಪ್ಲಾನ್‌ಗಳು ಡೇಟಾ, ಮನರಂಜನೆ ಮತ್ತು ಕೆಲಸಕ್ಕೆ ಬೇಕಾದ AI ಪರಿಕರಗಳನ್ನು ಒಂದೇ ಕಡೆ ತಂದಿರುವುದು ಗ್ರಾಹಕರು ದೊಡ್ಡ ಲಾಭವಾಗಿದೆ.
SurveyAlso Read: ಅಮೆಜಾನ್‌ನಲ್ಲಿ ಇಂದು 43 ಇಂಚಿನ Google Smart TV ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ
Jio Happy New Year 2026 Plans:
ಜಿಯೋ ಕಂಪನಿಯು 2026 ಹೊಸ ವರ್ಷದ ಯೋಜನೆಗಳನ್ನು ವರ್ಷ ಮುಗಿಯುವ ಮೊದಲೇ ಬಿಡುಗಡೆ ಮಾಡಲು ಮುಖ್ಯ ಕಾರಣಗ ಏನಪ್ಪಾ ಅಂದ್ರೆ ಈ ರೀಚಾರ್ಜ್ ಮೂಲಕ ಗ್ರಾಹಕರು ಬೇಗನೆ ಸೆಳೆಯುವುದು ಮತ್ತು ದೀರ್ಘಾವಧಿಯ ಯೋಜನೆಗಳಿಗೆ ಅವರನ್ನು ಈಗಲೇ ಕಟ್ಟಿಹಾಕುವುದು. ಈ ಸಮಯವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ಜಿಯೋ ಇತರಸ್ಪರ್ಧಿಗಳ ಹೊಸ ವರ್ಷದ ಕೊಡುಗೆಗಾಗಿ ಮೊದಲು ತನ್ನದೇ ಆದ ಹೊಸ ಯೋಜನೆಗಳನ್ನು ಪರಿಚಯಿಸುತ್ತದೆ. ಯೋಜನೆಗಳ ಜೊತೆಗೆ ಗೂಗಲ್ ಜೆಮಿನಿ ಪ್ರೋ (AI) ಚಂದದಾರಿಕೆ ಇಂತಹ ದೊಡ್ಡ ಉಡುಗೊರೆಗಳನ್ನು ನೀಡುವ ಮೂಲಕ ಕೇವಲ ಕರೆ ಮತ್ತು ಡೇಟಾ ಸೇವೆಗಿಂತ ಹೆಚ್ಚಿನ ಮೌಲ್ಯವನ್ನು ಗ್ರಾಹಕರಿಗೆ ತೋರಿಸಿ ಹೊಸ ಗ್ರಾಹಕರು ಬೇಗನೆ ತನ್ನತ್ತ ಸೆಳೆಯಲು ಮತ್ತು ಹಳೆಯವರನ್ನು ಉಳಿಸಿಕೊಳ್ಳಲು ಜಿಯೋ ಈ ತಂತ್ರವನ್ನು ಬಳಸಲಾಗಿದೆ.

ಜಿಯೋ ₹103 ಡೇಟಾ ಆಡ್-ಆನ್ ಪ್ಲಾನ್ ವಿವರಗಳು:
ರಿಲಯನ್ಸ್ ಜಿಯೋ ₹103 ಫ್ಲೆಕ್ಸಿ ಪ್ಯಾಕ್ ಒಂದು ಕಡಿಮೆ ಬೆಲೆಯ ಡೇಟಾ ಆಡ್-ಆನ್ ಪ್ಲಾನ್ ಆಗಿದೆ. ಇದರ ವ್ಯಾಲಿಡಿಟಿ 28 ದಿನಗಳು ಮತ್ತು ಒಟ್ಟು 5 GB ಹೈ-ಸ್ಪೀಡ್ ಡೇಟಾ ಸಿಗುತ್ತದೆ. ಇದರ ವಿಶೇಷತೆ ಏನೆಂದರೆ ಬಳಕೆದಾರರು ಈ ಯೋಜನೆಯಲ್ಲಿ ನೀಡಲಾದ ಮೂರು ಒಟಿಟಿ ಪ್ಯಾಕ್‌ಗಳಲ್ಲಿ (ಹಿಂದಿ ಪ್ಯಾಕ್, ಇಂಟರ್ನ್ಯಾಷನಲ್ ಪ್ಯಾಕ್, ಅಥವಾ ರೀಜನಲ್ ಪ್ಯಾಕ್) ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು . ಕಡಿಮೆ ಡೇಟಾ ಬೇಕಿರುವ ಮತ್ತು ನಿರ್ದಿಷ್ಟ ಒಟಿಟಿ ವಿಷಯವನ್ನು ಇಷ್ಟಪಡುವವರಿಗೆ ಈ ಯೋಜನೆ ತುಂಬಾ ಉಪಯುಕ್ತವಾಗಿದೆ.
Also Read: OnePlus 15R ಸ್ಮಾರ್ಟ್‌ಫೋನ್ 4K ವಿಡಿಯೋ ರೆಕಾಡಿಂಗ್ ಮತ್ತು 32MP ಫ್ರಂಟ್ ಕ್ಯಾಮೆರಾ ದೃಢವಾಗಿದೆ!
ಜಿಯೋ ₹500 ಸೂಪರ್ ಸೆಲೆಬ್ರೇಶನ್ ಮಾಸಿಕ ಪ್ಲಾನ್ ವಿವರಗಳು:
ರಿಲಯನ್ಸ್ ಜಿಯೋ 500 ಸೂಪರ್ ಸೆಲೆಬ್ರರ್ ಮಾಸಿಕ ಪ್ಲಾನ್ ಮನರಂಜನೆ ಪ್ರಿಯರಿಗೆ ಆಡ್ವಾಜ್. ಇದರ ವ್ಯಾಲಿಡಿಟಿ 28 ದಿನಗಳಾಗಲಿವೆ. ಇದು ಪ್ರತಿದಿನ 2 GB ಹೈ-ಸ್ಪೀಡ್ ಡೇಟಾ (5G ಲಭ್ಯವಿದ್ದರೆ ಅನ್ಲಿಮಿಟೆಡ್ 5G) ಮತ್ತು ಅನಿಯಮಿತ ಕರೆಗಳನ್ನು ನೀಡಲಾಗುತ್ತದೆ. ಇದರ ದೊಡ್ಡ ಲಾಭವೆಂದರೆ 13ಕ್ಕೂ ಹೆಚ್ಚು ಒಟಿಟಿ (OTT) ಸೇವೆಗಳ ಬಂಡಲ್ ಸಿಗುತ್ತದೆ. ಮುಖ್ಯವಾಗಿ ಈ ಯೋಜನೆಯಲ್ಲಿ 18 ತಿಂಗಳ ಗೂಗಲ್ ಜೆಮಿನಿ ಪ್ರೋ (Google Gemini Pro) AI ಚಂದಾದಾರಿಕೆ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ ಮನರಂಜನೆಯ ಜೊತೆಗೆ ಶಕ್ತಿಯುತ AI ಉಪಕರಣಗಳ ಪ್ರಯೋಜನವನ್ನು ಸಹ ಪಡೆಯಬಹುದು.
ಜಿಯೋ ₹3599 ವಾರ್ಷಿಕ ಯೋಜನೆ ವಿವರಗಳು:
ದೀರ್ಘಾವಧಿಯ ಸಂಪರ್ಕ ಬಯಸುವವರಿಗೆ ₹3,599 ಹೀರೋ ವಾರ್ಷಿಕ ರೀಚಾರ್ಜ್ ಅತ್ಯುತ್ತಮ ಆಯ್ಕೆಯಾಗಿದೆ. ಇದರ ವ್ಯಾಲಿಡಿಟಿ ಪೂರ್ತಿ 365 ದಿನಗಳಾಗಿವೆ. ಇದು ಪ್ರತಿದಿನ 2.5 GB ಹೈ-ಸ್ಪೀಡ್ ಡೇಟಾದೊಂದಿಗೆ (ಮತ್ತು 5G ಲಭ್ಯವಿದ್ದರೆ ಅನ್ಲಿಮಿಟೆಡ್ 5G) ಮತ್ತು ಅನಿಯಮಿತ ಕರೆಗಳನ್ನು ನೀಡಲಾಗುತ್ತದೆ. ಈ ಪ್ಲಾನ್‌ನಲ್ಲೂ ಸಹ 18 ತಿಂಗಳ ಗೂಗಲ್ ಜೆಮಿನಿ ಪ್ರೋ AI ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ವರ್ಷವಿಡೀ ಉತ್ತಮ ಸಂಪರ್ಕದ ಜೊತೆಗೆ ಮುಂದಿನ ಪೀಳಿಗೆಯ AI ಪ್ರಯೋಜನಗಳನ್ನು ಪಡೆಯಲು ಇದು ಜಿಯೋದ ಪ್ರಮುಖ ಯೋಜನೆಯಾಗಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile