BSNL ದಿನಕ್ಕೆ 10GB ಡೇಟಾದೊಂದಿಗೆ 4G ಸೇವೆಯನ್ನು ಕರ್ನಾಟಕದಲ್ಲೂ ಆರಂಭಿಸಲಿದೆ

BSNL ದಿನಕ್ಕೆ 10GB ಡೇಟಾದೊಂದಿಗೆ 4G ಸೇವೆಯನ್ನು ಕರ್ನಾಟಕದಲ್ಲೂ ಆರಂಭಿಸಲಿದೆ

ಭಾರತದಲ್ಲಿ ನೆನ್ನೆ ಅಂದ್ರೆ 21ನೇ ಅಕ್ಟೋಬರ್ 2019 ರಂದು BSNL  ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಭಾರತದ ಜನಪ್ರಿಯ ಮತ್ತು ಹೆಚ್ಚು ಬಳಕೆದಾರರನ್ನು ಹೊಂದಿರುವ ರಿಲಯನ್ಸ್ ಜಿಯೋವಿನ ವಿರುದ್ಧ ಅದ್ದೂರಿಯ ಒಂದೇರಡು ಘೋಷಣೆವನ್ನು ಹೊರ ತಂದಿದೆ. ಏನಪ್ಪಾ ಅಂದ್ರೆ ಮೊದಲನೇಯದು ಅತಿ ಶೀಘ್ರದಲ್ಲೇ ನಮ್ಮ ಕರ್ನಾಟಕದಲ್ಲಿ BSNL ತನ್ನ 4G ಸೇವೆಯನ್ನು ಆರಂಭಿಸಲಿದೆಯಂತೆ ಮತ್ತೋಂದು BSNL ಜಿಯೋವಿನ ವಿರುದ್ಧವಾಗಿ ಊಹಿಸಲು ಅಸಾದ್ಯವಾದ ಎರಡು ಪ್ಲಾನ್ಗಳನ್ನು 96 ರೂಪಾಯಿ ಮತ್ತೋಂದು 236 ರೂಪಾಯಿಗಳ ಪ್ಲಾನ್ಗಳನ್ನು ತರುವುದಾಗಿ ಕಂಪನಿಯ ಮೇಲ್ವಿಚಾರಕರೊಬ್ಬರು ತಿಳಿಸಿದ್ದಾರೆ. ಇದರಲ್ಲಿ ಬಳಕೆದಾರರಿಗೆ ಸುಮಾರು 10GB ಡೇಟಾ + ಅನ್ಲಿಮಿಟೆಡ್ ಕರೆ ಲಭ್ಯವಾಗುವ ನಿರೀಕ್ಷೆಯಿದೆಯಂತೆ.

https://images.financialexpress.com/2019/08/bsnl-660.jpg

ಆದರೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಮೀಡಿಯಾದ ಮುಂದೆ ಅಥವಾ ತಮ್ಮ ವೆಬ್ಸೈಟಲ್ಲಿ ಘೋಷಿಸಿಲ್ಲವಾದರೂ…ಇದರ ವ್ಯಾಲಿಡಿಟಿ ಎಷ್ಟು, ಎಷ್ಟು SMS ಸಿಗುತ್ತೇ, ಕರೆಗಳು ನಿಜಕ್ಕೂ ಎಷ್ಟು ಉಚಿತ, ಎಷ್ಟು ಡೇಟಾ ಮತ್ತು ಡೇಟಾ ಮುಗಿದರೆ ಯಾವ ರೀತಿಯ ಚಾರ್ಜ್ ಎನ್ನುವುದರ ಬಗ್ಗೆ ಇನ್ನು ಯಾವುದೇ ಮಾಹಿತಿಗಳನ್ನು ಸದ್ಯಕ್ಕೆ ನೀಡಿಲ್ಲ. ಈಗ ಭಾರತ 5G ಟೆಕ್ನಾಲಜಿಯತ್ತ ಮುಖ ಮಾಡಿದ್ದು ಇನ್ನು ಯಾಕೆ BSNL ಭಾರತದದ್ಯಾಂತ 4G ಸೇವೆಗಳನ್ನು ನೀಡ್ತಾಯಿಲ್ಲ. ಯಾಕೆ ಈ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಇಷ್ಟು ಲೇಟ್ ಅನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿದ್ದರೆ ಇದಕ್ಕೆ ಹಲವಾರು ನೀವು ತಿಳಿದ ಅಥವಾ ತಿಳಿಯದ ಉತ್ತರ ಇಲ್ಲಿದೆ ಅದ್ದಕ್ಕಾಗಿ BSNL 4G ಪ್ರಾಜೆಕ್ಟ್ ಇತಿಹಾಸ ಸ್ವಲ್ಪ ನೋಡಬೇಕಾಗುತ್ತದೆ.

BSNL 2016 ಜನವರಿಯಂದು ತನ್ನ ಮೊಟ್ಟ ಮೊದಲ 4G ಸೇವೆಯನ್ನು (ಇದನ್ನು ಬ್ಯಾಂಡ್ 1 LTE ಅಂಥ ಕರೆಯುತ್ತಾರೆ) ಪಂಜಾಬ್ ರಾಜ್ಯದ ಛಂಡಿಘಡ್ ನಗರದಲ್ಲಿ ಹೊರ ತಂದಿತ್ತು ಆಗಲೇ ಅದರ ಸ್ಪೀಡ್ ಸುಮಾರು 35Mbps ಆಗಿತ್ತು. ಇದು 20MHz ಬ್ರಾಡ್ಬ್ಯಾಂಡ್ ವಯರ್ಲೆಸ್ ಆಕ್ಸೆಸ್ (ಇದನ್ನು BWA ಅಂಥ ಕರೆಯುತ್ತಾರೆ) ಸ್ಪೆಕ್ಟ್ರಮ್ 2500MHz ಬ್ಯಾಂಡ್ವಿಚ್ ಜೊತೆಗೆ ಅದ್ದೂರಿಯಾಗಿ 4G ಸೇವೆ ಆರಂಭವಾಯಿತು. ಆದರೆ ಇದರ ನಂತರ ಕಂಪನಿ 4G ಟವೆರ್ಗಳನ್ನು ಹೊಸದಾಗಿ ಹಾಕದೆ ಆಗ ಅಸ್ತಿತ್ವದಲ್ಲಿದ್ದ GSM ಟವರ್ಗಳ ಮೇಲೆಯೇ Base Tower Stations (BTS) ಹಾಕಲಾಯಿತು. ಈ ಮೂಲಕ ಕಂಪನಿ ಸ್ಲಲ್ಪ ಲಾಭಗಳಿಸಿದಾದರೂ 4G ಸೇವೆಯನ್ನು ಜನಸಾಮನ್ಯರಿಗೆ ನೀಡುವಲ್ಲಿ ಅಷ್ಟಾಗಿ ಯಶಸ್ವಿಯಾಗಲಿಲ್ಲ.

https://bsmedia.business-standard.com/_media/bs/img/article/2017-08/31/full/1504180066-3085.jpg

ಅಲ್ಲದೆ ಆ ಸಮಯದಲ್ಲಿ 4G ಫೋನ್ಗಳನ್ನು ಕೇವಲ ಜನಪ್ರಿಯ ಬ್ರಾಂಡ್ಗಳಾದ Apple, Motorola, Lenovo, Google ಮತ್ತು Nokia ಕಂಪನಿಗಳು ಮಾತ್ರ ನೀಡುತ್ತಿತ್ತು ಇವುಗಳ ಬೆಲೆ ಅಧಿಕವಾದ ಕಾರಣ ಅವು ಜನಸಾಮನ್ಯರ ಕೈಗೆ ದೂರವಾಗಿತ್ತು. ಅಲ್ಲದೆ BSNL ತಲೆ ಎತ್ತುವ ಸಮಯದಲ್ಲೇ ರಿಲಯನ್ಸ್ ಜಿಯೋ ಟೆಲಿಕಾಂ ವಲಯಕ್ಕೆ ಕಾಲಿಟ್ಟು 4G ಸೇವೆಗಳನ್ನು ಕಮಾರ್ಷಿಯಲಿ ಪ್ರಾರಂಭಿಸಲು ಸಜ್ಜುಗೊಳಿಸಿ ಟೆಲಿಕಾಂ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಇನ್ನಷ್ಟು ತೀವ್ರಗೊಳಿಸಿತು. ಈ ಸಮಯದಲ್ಲಿ ಸುಮಾರು 5.84 ಮಿಲಿಯನ್ BSNL ಬಳಕೆದಾರರು MNP ರಿಕ್ವೆಸ್ಟ್ ನೀಡಿದರು. BSNL ತಮ್ಮ ಟೆಸ್ಟಿಂಗ್ ಪ್ರೊಸೆಸರ್ ಮುಗಿದ ನಂತರ ದೇಶದಲ್ಲಿ ಒಟ್ಟಿಗೆ 14 ಟೆಲಿಕಾಂ ವಲಯಗಳಲ್ಲಿ ತಮ್ಮ 4G ಸೇವೆಯನ್ನು ಆರಂಭಿಸಿದರು.

https://www.thehindu.com/migration_catalog/article10544644.ece/ALTERNATES/FREE_660/BSNL

ಅವೆಂದರೆ ಕೋಲ್ಕತಾ, ಆಂಧ್ರಪ್ರದೇಶ ಮತ್ತು ತೆಲಂಗಾಣ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ತಮಿಳುನಾಡು, ಹರಿಯಾಣ, ಕೇರಳ, ಮಧ್ಯಪ್ರದೇಶ ಮತ್ತು ಛತ್ತೀಸ್ಘಡ್, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ (ಪೂರ್ವ ಮತ್ತು ಪಶ್ಚಿಮ), ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ ಮತ್ತು ಹಿಮಾಚಲ್ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಈಶಾನ್ಯ, ಒಡಿಶಾ ಆದರೆ ಈಗಾಗಲೇ ಮೊದಲೇ ಹೇಳಿರುವಂತೆ ಕಂಪನಿ 4G ಟವೆರ್ಗಳನ್ನು ಹೊಸದಾಗಿ ಹಾಕದೆ ಆಗ ಅಸ್ತಿತ್ವದಲ್ಲಿದ್ದ GSM ಟವರ್ಗಳ ಮೇಲೆಯೇ Base Tower Stations (BTS) ಹಾಕಲಾಯಿತು.

ಇದಕ್ಕಾಗಿ ಅಂದಾಜು 8313.80 ಕೋಟಿ ಖರ್ಚು ಮಾಡಿತು. ಸಮಯ ಕಳೆದಂತೆ ಸಿಗ್ನಲ್ ಸಿಗದ ಕಾರಣ ಕೆಲವು ವಲಯಗಳಲ್ಲಿ ಮುಖ್ಯವಾಗಿ ಕೋಲ್ಕತಾ, ಆಂಧ್ರಪ್ರದೇಶ ಮತ್ತು ತೆಲಂಗಾಣ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ, ತಮಿಳುನಾಡು ಪ್ರದೇಶದಲ್ಲಿ 4G ಸೇವೆಯನ್ನು ಅಧಿಕೃತವಾಗಿ ನಿಲ್ಲಿಸಲಾಯಿತು. ಆದರೂ ಈ ಕೆಲವು ಪ್ರದೇಶಗಳಲಿ 4G Base Tower Stations (BTS) ಇರುವ ಕಾರಣ ಅಲ್ಪ ಸ್ವಲ್ಪ 4G ಸೇವೆಯನ್ನು ಇಂದಿಗೂ  ಪಡೆಯುತ್ತಿದ್ದಾರೆ.

ಕೊನೆಯದಾಗಿ ಜಿಯೋ ಸಹ ನೆನ್ನೆ ಅಂದ್ರೆ 21ನೇ ಅಕ್ಟೋಬರ್ 2019 ರಂದು ಮೂರು ಹೊಸ ಪ್ಲಾನ್ 222, 333 ಮತ್ತು 444 ರೂಗಳ ಪ್ಲಾನ್ಗಳನ್ನು  ಅನಾವರಣಗೊಳಿಸಿದೆ. ಇದರ ಬಗ್ಗೆ ಡೀಟೇಲ್ ವಿಡಿಯೋ ಡಿಜಿಟ್ ಕನ್ನಡಲಿ ನೋಡಿ. ಈ ಪ್ಲಾನ್ಗಳಲ್ಲಿ ದಿನಕ್ಕೆ 2GB ಡೇಟಾ ಮತ್ತು ಒಂದು, ಎರಡು ಮತ್ತು ಮೂರು ತಿಂಗಳ ಮಾನ್ಯತೆಯನ್ನು ನೀಡುತ್ತವೆ. ಅಲ್ಲಷ್ಟೇ IUC ಟಾಪ್ ಅಪ್ ಬದಲಾಗಿ ಈ ಪ್ಲಾನ್ಗಳಲ್ಲೇ 1000 ನಿಮಿಷ ಬೇರೆ ನೆಟ್ವರ್ಕ್ ಆಪರೇಟರ್ಗಳಿಗೆ ನೀಡುತ್ತದೆ. ಒಟ್ಟಾರೆಯಾಗಿ ಈ ಹೊಸ ಪ್ಲಾನ್ಗಳು ಸದ್ಯದಲ್ಲಿರುವ ಹತ್ತಾರು ಪ್ಲಾನ್ಗಳಿಗೆ ಹೋಲಿಸಿದರೆ ನಾವು ನೀಡುವ ಹಣಕ್ಕೆ ತಕ್ಕ ಪ್ಲಾನ್ಗಳಾಗಿವೆ ಅನ್ನೋದು ನನ್ನ ಅಭಿಪ್ರಾಯ ಇದರ ಬಗ್ಗೆ ನೀವೆನು ಅಂತೀರಾ ಅಂಥ ಕಾಮೆಂಟ್ ಮಾಡಿ ತಿಳಿಸಿ.

https://cdn0.desidime.com/attachments/photos/592005/original/IMG-20191021-WA0006.jpg?1571646967

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo