ಭಾರತದಲ್ಲಿ Apple MacBook Pro ಹೊಸದಾಗಿ ಬಿಡುಗಡೆಯಾಗಿದೆ
ಹೊಸ ಆಪಲ್ ಮ್ಯಾಕ್ ಬುಕ್ M5 ಚಿಪ್ ಮತ್ತು ಫಾಸ್ಟ್ AI ಕಾರ್ಯಕ್ಷಮತೆಯೊಂದಿಗೆ ಬರುತ್ತದೆ..
ಇದು 24 ಗಂಟೆಗಳ ಬ್ಯಾಟರಿ ಮತ್ತು ವೇಗದ SSD ಕಾರ್ಯಕ್ಷಮತೆಯ ಸೌಲಭ್ಯವನ್ನು ಹೊಂದಿರುತ್ತದೆ.
Apple MacBook Pro Launched: ಭಾರತದಲ್ಲಿ ನೆನ್ನೆ ಅಂದರೆ 15ನೇ ಅಕ್ಟೋಬರ್ 2025 ರಂದು ಆಪಲ್ ತನ್ನ 14 ಇಂಚಿನ ಹೊಸ ಮ್ಯಾಕ್‌ಬುಕ್ ಪ್ರೊ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದು ಹೊಸ M5 ಚಿಪ್ ಮತ್ತು 14.2 ಇಂಚಿನ ಲಿಕ್ವಿಡ್ ರೇಟಿನಾ XDR ಡಿಸ್ಪ್ಲೇಯೊಂದಿಗೆ ಬರುತ್ತದೆ. ಆಪಲ್ ತನ್ನ ಈ ಹೊಸ ಮ್ಯಾಕ್‌ಬುಕ್ ಪ್ರೊ ಮಾದರಿಯನ್ನು ಹಳೆಯ M4 ಚಿಪ್‌ಗಿಂತ ಸುಮಾರು 3.5 ಪಟ್ಟು ಉತ್ತಮ AI ಕಾರ್ಯಕ್ಷಮತೆ ಮತ್ತು 1.6 ಪಟ್ಟು ಉತ್ತಮ ಗ್ರಾಫಿಕ್ಸ್ ಕಾರ್ಯಕ್ಷಮತೆ ಮತ್ತು ವೇಗವಾದ SSD ಕಾರ್ಯಕ್ಷಮತೆಯನ್ನು ನೀಡುತ್ತದೆ. ಅಲ್ಲದೆ ಹೊಸ ಲ್ಯಾಪ್‌ಟಾಪ್ ಅನ್ನು ಒಂದೇ ಚಾರ್ಜ್‌ನಲ್ಲಿ 24 ಗಂಟೆಗಳ ಬ್ಯಾಟರಿ ಅವಧಿಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ.
Surveyಭಾರತದಲ್ಲಿ Apple MacBook Pro (2025) ಬೆಲೆ ಮತ್ತು ಲಭ್ಯತೆ:
ಮ್ಯಾಕ್‌ಬುಕ್ ಪ್ರೊ M5 ಚಿಪ್ ಹೊಂದಿರುವ ಹೊಸ ಮ್ಯಾಕ್‌ಬುಕ್ ಪ್ರೊ 16GB RAM ಮತ್ತು 512GB SSD ಸ್ಟೋರೇಜ್ ಹೊಂದಿರುವ ಮೂಲ ಮಾದರಿಗೆ ₹169,900 ರಿಂದ ಪ್ರಾರಂಭವಾಗುತ್ತದೆ. ಇದು 16GB+1TB ಮತ್ತು 24GB+1TB ಕಾನ್ಫಿಗರೇಶನ್‌ಗಳಲ್ಲಿಯೂ ಲಭ್ಯವಿರುತ್ತದೆ. ಬೆಲೆ ಕ್ರಮವಾಗಿ ₹189,900 ಮತ್ತು ₹209,900 rರೂಗಳಾಗಿವೆ. ಈ ಹೊಸ ಮ್ಯಾಕ್‌ಬುಕ್ ಪ್ರೊ ಸಿಲ್ವರ್ ಮತ್ತು ಸ್ಪೇಸ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಮುಂಗಡ ಬುಕಿಂಗ್‌ಗೆ ಲಭ್ಯವಿದೆ ಮತ್ತು 22 ಅಕ್ಟೋಬರ್ 2025 ರಿಂದ ಭಾರತದಲ್ಲಿ ಮಾರಾಟಕ್ಕೆ ಬರಲಿದೆ. ವಿದ್ಯಾರ್ಥಿಗಳು ಆಪಲ್‌ನ ಅಂಗಡಿಯಿಂದ ರೂ. 10,000 ರಿಯಾಯಿತಿಯನ್ನು ಪಡೆಯಬಹುದು.
Also Read: BSNL ಸೇರಲು ಸುವರ್ಣವಕಾಶ! ಕೇವಲ ₹1 ರೂಪಾಯಿಗೆ ತಿಂಗಳ ಪೂರ್ತಿ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಲಭ್ಯ!
ಮ್ಯಾಕ್‌ಬುಕ್ ಪ್ರೊ (2025) ವಿಶೇಷಣಗಳು ಮತ್ತು ವೈಶಿಷ್ಟ್ಯಗಳು:
ಆಪಲ್ ತನ್ನ ಹೊಸ ಮ್ಯಾಕ್‌ಬುಕ್ ಪ್ರೊ ಅನ್ನು ಇತ್ತೀಚಿನ M5 ಚಿಪ್‌ನೊಂದಿಗೆ ಸಜ್ಜುಗೊಳಿಸಿದೆ ಇದರಲ್ಲಿ 10-ಕೋರ್ CPU ಮತ್ತು 10-ಕೋರ್ GPU, ಜೊತೆಗೆ 32GB ವರೆಗಿನ ಏಕೀಕೃತ ಮೆಮೊರಿ ಮತ್ತು 4TB ವರೆಗಿನ SSD ಸಂಗ್ರಹಣೆ ಸೇರಿವೆ. ಕಂಪನಿಯು ಬಳಕೆದಾರರಿಗೆ ತನ್ನ ಆನ್‌ಲೈನ್ ಅಂಗಡಿಯಿಂದ ಹೆಚ್ಚುವರಿ ರೂಪಾಂತರಗಳನ್ನು ಕಾನ್ಫಿಗರ್ ಮಾಡಲು ಅನುಮತಿಸುತ್ತದೆ. ಲ್ಯಾಪ್‌ಟಾಪ್ ಆನ್-ಡಿವೈಸ್ AI ಕಾರ್ಯಗಳಿಗಾಗಿ 16-ಕೋರ್ ನ್ಯೂರಲ್ ಎಂಜಿನ್ ಅನ್ನು ಸಹ ಹೊಂದಿದೆ. ಹೊಸ ಮ್ಯಾಕ್‌ಬುಕ್ ಪ್ರೊನ SSD ಸಂಗ್ರಹಣೆಯು ಹಿಂದಿನ ಮಾದರಿಗಿಂತ ಎರಡು ಪಟ್ಟು ವೇಗವಾಗಿದೆ ಎಂದು ಆಪಲ್ ಹೇಳುತ್ತದೆ.
ಮ್ಯಾಕ್‌ಬುಕ್ ಏರ್ (2025) ಮಾದರಿಯು 14.2 ಇಂಚಿನ (3,024×1,964 ಪಿಕ್ಸೆಲ್‌ಗಳು) ಡಿಸ್ಪ್ಲೇಯನ್ನು ಹೊಂದಿದ್ದು ಈ ವರ್ಷವೂ ಅದು ಬದಲಾಗದೆ ಉಳಿದಿದೆ. ಇದು 120Hz ಪ್ರೊಮೋಷನ್ ರಿಫ್ರೆಶ್ ದರ, ಟ್ರೂ ಟೋನ್, 254ppi ಪಿಕ್ಸೆಲ್ ಸಾಂದ್ರತೆ ಮತ್ತು 1,000nits ಗರಿಷ್ಠ ಹೊಳಪನ್ನು ಹೊಂದಿರುವ ಲಿಕ್ವಿಡ್ ರೆಟಿನಾ ಪ್ರೊ XDR ಪ್ಯಾನೆಲ್ ಅನ್ನು ಒಳಗೊಂಡಿದೆ. ಗ್ರಾಹಕರು ಐಚ್ಛಿಕವಾಗಿ ನ್ಯಾನೊ-ಟೆಕ್ಸ್ಚರ್ ಫಿನಿಶ್ ಹೊಂದಿರುವ ಡಿಸ್ಪ್ಲೇಯನ್ನು ಸಹ ಆಯ್ಕೆ ಮಾಡಬಹುದು.
ಮ್ಯಾಕ್‌ಬುಕ್ ಪ್ರೊ ಹಾರ್ಡ್ವೇರ್ ಮತ್ತು ಬ್ಯಾಟರಿ:
ಮ್ಯಾಕ್‌ಬುಕ್ ಪ್ರೊ (2025) ನಲ್ಲಿರುವ ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈ-ಫೈ 6E, ಬ್ಲೂಟೂತ್ 5.3, ಮೂರು ಥಂಡರ್‌ಬೋಲ್ಟ್ 5 ಪೋರ್ಟ್‌ಗಳು, ಒಂದು HDMI ಪೋರ್ಟ್, ಒಂದು MagSafe 3 ಚಾರ್ಜಿಂಗ್ ಪೋರ್ಟ್ ಮತ್ತು SDXC ಕಾರ್ಡ್ ಸ್ಲಾಟ್ ಸೇರಿವೆ. ಇದು 12-ಮೆಗಾಪಿಕ್ಸೆಲ್ ಸೆಂಟರ್ ಸ್ಟೇಜ್ ಕ್ಯಾಮೆರಾ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಟಚ್ ಐಡಿ ಸೆನ್ಸಾರ್ ಅನ್ನು ಸಹ ಒಳಗೊಂಡಿದೆ. ಮ್ಯಾಕ್‌ಬುಕ್ ಪ್ರೊ ಮ್ಯಾಕೋಸ್ ತಾಹೋ (ಮ್ಯಾಕೋಸ್ 26) ಅನ್ನು ರನ್ ಮಾಡುತ್ತದೆ ಮತ್ತು ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.
ಆಪಲ್ ಸಾಮಾನ್ಯವಾಗಿ ತನ್ನ ಮ್ಯಾಕ್‌ಬುಕ್ ಮಾದರಿಗಳ ಬ್ಯಾಟರಿ ಸಾಮರ್ಥ್ಯವನ್ನು ಬಹಿರಂಗಪಡಿಸುವುದಿಲ್ಲ ಆದರೆ ಕಂಪನಿಯು ಈ ಮಾದರಿಯು ಒಂದೇ ಚಾರ್ಜ್‌ನಲ್ಲಿ 24 ಗಂಟೆಗಳವರೆಗೆ ಇರುತ್ತದೆ ಎಂದು ಹೇಳುತ್ತದೆ. ಇದು 70W USB ಟೈಪ್-ಸಿ ಪವರ್ ಅಡಾಪ್ಟರ್‌ನೊಂದಿಗೆ ಬರುತ್ತದೆ ಆದರೂ ಗ್ರಾಹಕರು 96W ಪವರ್ ಅಡಾಪ್ಟರ್ ಅನ್ನು ಸಹ ಆಯ್ಕೆ ಮಾಡಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile