Aadhar Card: ನಿಮ್ಮ ಫೋನ್ ನಂಬರ್, ಫೋಟೋ ಎಲ್ಲಾವನ್ನು ಸರಳವಾಗಿ ಅಪ್ಡೇಟ್ ಮಾಡಬವುದು

Aadhar Card: ನಿಮ್ಮ ಫೋನ್ ನಂಬರ್, ಫೋಟೋ ಎಲ್ಲಾವನ್ನು ಸರಳವಾಗಿ ಅಪ್ಡೇಟ್ ಮಾಡಬವುದು
HIGHLIGHTS

ಈಗ ನೀವು ನಿಮ್ಮ ಆಧಾರ್ ಕಾರ್ಡ್‌ಗಳಲ್ಲಿ ಫೋನ್ ನಂಬರ್ ಮತ್ತು ಫೋಟೋವನ್ನು ಬದಲಾಯಿಸಬಹುದು.

ಇದಕ್ಕಾಗಿ ಯಾವುದೇ ಆಧಾರ್ ದಾಖಲಾತಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಕೇಂದ್ರಗಳಿಗೆ ಭೇಟಿ ನೀಡಿ.

ಆಧಾರ್ ಕೇಂದ್ರಕ್ಕೆ ಸಲ್ಲಿಸಿದ ನಂತರ ಕಾರ್ಯನಿರ್ವಾಹಕನು ನಿಮ್ಮ ಎಲ್ಲಾ ಬಯೋಮೆಟ್ರಿಕ್ ಮಾಹಿತಿಯನ್ನು ಪರಿಶೀಲಿಸುತ್ತಾನೆ.

ಈಗ ನೀವು ನಿಮ್ಮ ಆಧಾರ್ ಕಾರ್ಡ್‌ಗಳಲ್ಲಿ ಫೋನ್ ನಂಬರ್ ಮತ್ತು ಫೋಟೋವನ್ನು ಬದಲಾಯಿಸಬಹುದು. ಆದರೆ ನೀವು ಅದನ್ನು ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ ಅದಕ್ಕಾಗಿ ನೇರ ಕೇಂದ್ರಗಳ ಮೂಲಕ ಮಾತ್ರ ಸಾಧ್ಯವಾಗುತ್ತದೆ. ನೀವು ಮಾಡಬೇಕಾದ್ದು ನಿಮ್ಮ ಹತ್ತಿರವಿರುವ ಯಾವುದೇ ಆಧಾರ್ ದಾಖಲಾತಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ (CSC) ಕೇಂದ್ರಗಳಿಗೆ ಭೇಟಿ ನೀಡಿ. ನಿಮ್ಮ ದಾಖಲಾತಿ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಮತ್ತು ಅದನ್ನು ಆಧಾರ್ ಕೇಂದ್ರಕ್ಕೆ ಸಲ್ಲಿಸಿದ ನಂತರ ಕಾರ್ಯನಿರ್ವಾಹಕನು ನಿಮ್ಮ ಎಲ್ಲಾ ಬಯೋಮೆಟ್ರಿಕ್ ಮಾಹಿತಿಯನ್ನು ಪರಿಶೀಲಿಸುತ್ತಾನೆ. ಮತ್ತು ನಿಮ್ಮ ಹೊಸ ಫೋಟೋ ತೆಗೆದುಕೊಳ್ಳುತ್ತಾನೆ. ನಂತರ ನೀವು ₹25 + GST ಪಾವತಿಸಬೇಕಾಗುತ್ತದೆ ಮತ್ತು ನಿಮಗೆ ಸ್ಲಿಪ್ ಸಿಗುತ್ತದೆ. 

ಈ ಉದ್ದೇಶಕ್ಕಾಗಿ ನಿಮಗೆ ಡಾಕ್ಯುಮೆಂಟ್ ಅಗತ್ಯವಿಲ್ಲ. ನೀವು ಫೋಟೋವನ್ನು ತರುವ ಅಗತ್ಯವಿಲ್ಲಇದು ಸುಮಾರು 90 ದಿನಗಳಲ್ಲಿ ನಿಮ್ಮ ಹೊಸ ಫೋಟೋವನ್ನು ಬದಲಾಯಿಸಲಾಗುತ್ತದೆ. ಇದರ ನಂತರ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಫೋನ್ ಸಂಖ್ಯೆಯನ್ನು ಬದಲಾಯಿಸಲು ಬಯಸುವಿರಾ? ಹಾಗಾದ್ರೆ ಫೋನ್ ಸಂಖ್ಯೆಗಳು ಅತಿ ಹೆಚ್ಚು ಜನರ  ಸಾಮಾನ್ಯ ಸಮಸ್ಯೆಯೆಂದರೆ ಫೋನ್ ನಂಬರ್ಗಳಾಗಿವೆ. ನೀವು ಆಧಾರ್ ಕಾರ್ಡ್‌ನಲ್ಲಿ ತಪ್ಪು ಫೋನ್ ಸಂಖ್ಯೆಯನ್ನು ನೀಡಿದ್ದರೆ / ನೀವು ಈಗ ಈ ನಂಬರ್ ಅನ್ನು ಬಳಸದಿದ್ದರೆ ನಿಮಗೆ ಸಾಕಷ್ಟು ತೊಂದರೆಗಳು ಎದುರಾಗುತ್ತವೆ ಆದರೆ ಈಗ ಇದಕ್ಕೊಂದು ಪರಿಹಾರವಿದೆ.

1. ಮೊದಲು ನಿಮ್ಮ ಹತ್ತಿರವಿರುವ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ

2. ಆಧಾರ್ ಅಪ್ಡೇಟ್ ಫೋರಂ ಅಲ್ಲಿ ನಿಮ್ಮ ಬೇರೆಲ್ಲಾ ಮಾಹಿತಿ ಭರ್ತಿ ಮಾಡಿ

3. ಆ ಫೋರಂನಲ್ಲಿ ನೀವು ಅಪ್ಡೇಟ್ ಮಾಡಲು ಬಯಸುವ ಫೋನ್ ಸಂಖ್ಯೆಯನ್ನು ಬರೆಯಿರಿ

4. ಗಮನದಲ್ಲಿಡಿ ಇಲ್ಲಿ ನಿಮ್ಮ ಹಳೆಯ ಫೋನ್ ನಂಬರ್ ಬರೆಯುವ ಅಗತ್ಯವಿಲ್ಲ

5. ಇದಕ್ಕಾಗಿ ನಿಮಗೆ ಬೇರೆ ಯಾವುದೇ ಪುರಾವೆಗಳನ್ನೂ ನೀಡುವ ಅಗತ್ಯವಿಲ್ಲ

6. ಅದರ ನಂತರ ಕಾರ್ಯನಿರ್ವಾಹಕನು ನಿಮ್ಮ ವಿನಂತಿಯನ್ನು ನೋಂದಾಯಿಸುತ್ತಾನೆ

7. ನಿಮಗೆ ನೋಂದಾಯಿತ ಸ್ಲಿಪ್ ನೀಡಲಾಗುವುದು. 

8. ಈ ಸೇವೆಗಳಿಗೆ ನೀವು ಕೇವಲ 25 ರೂಗಳನ್ನೂ ಮಾತ್ರ ನೀಡಬೇಕಾಗುತ್ತದೆ.  

ಈ ರೀತಿಯಾಗಿ ನಿಮ್ಮ ಹೆಸರು, ವಿಳಾಸ, ಫೋನ್ ಸಂಖ್ಯೆ ಮತ್ತು ಫೋಟೋವನ್ನು ನೀವು ಬದಲಾಯಿಸಬಹುದು.

ಈ ಮೂಲಕ ನಿಮಗೆ ಸುಧಾರಿತ ವಿನ್ಯಾಸ, ಉತ್ತಮ ಚಿತ್ರದ ಗುಣಮಟ್ಟ ಮತ್ತು ನವೀಕರಿಸಿದ ಮಾಹಿತಿಯು ಹೊಸ ಡೌನ್‌ಲೋಡ್ ಮಾಡಲಾದ ಆಧಾರ್ ಅಥವಾ ಎಲೆಕ್ಟ್ರಾನಿಕ್ ಆಧಾರ್‌ನ ಕೆಲವು ಪ್ರಮುಖ ಲಕ್ಷಣಗಳೊಂದಿಗೆ ನಿಮ್ಮ ತಲೆ ನೋವು ಇನ್ಮೇಲೆ ಕಡಿಮೆಯಾಗಲಿದೆ. ಈ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) 12 ಅಂಕಿಯ ಆಧಾರ್ ಸಂಖ್ಯೆಯನ್ನು mAadhar ಬಳಸಿ ಫೋನಲ್ಲಿಯೇ ಇಡಬವುದು. ಈ ಮಾಹಿತಿ ಇಷ್ಟವಾದರೆ ತಿಳಿಯದವರೊಂದಿಗೆ ಶೇರ್ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo