ಶೀಘ್ರದಲ್ಲೇ ನಿಮ್ಮ WhatsApp ಖಾತೆಯನ್ನು 4 ಫೋನ್ಗಳಲ್ಲಿ ಏಕಕಾಲದಲ್ಲಿ ಬಳಸಬವುದು

ಶೀಘ್ರದಲ್ಲೇ ನಿಮ್ಮ WhatsApp ಖಾತೆಯನ್ನು 4 ಫೋನ್ಗಳಲ್ಲಿ ಏಕಕಾಲದಲ್ಲಿ ಬಳಸಬವುದು
HIGHLIGHTS

ಈಗ ಜನರು ತಮ್ಮ ಖಾತೆಯನ್ನು ಅನೇಕ ಫೋನ್ಗಳಲ್ಲಿ ಬಳಸಲು ಅನುಮತಿಸುವ ವೈಶಿಷ್ಟ್ಯದಲ್ಲಿ ವಾಟ್ಸಾಪ್ (WhatsApp) ಕಾರ್ಯನಿರ್ವಹಿಸುತ್ತಿದೆ.

ಪ್ರಸ್ತುತ ಬಳಕೆದಾರರು ಒಂದೇ ಸಮಯದಲ್ಲಿ ಒಂದು ಸ್ಮಾರ್ಟ್‌ಫೋನ್ ಮತ್ತು ಪಿಸಿಯಿಂದ (WhatsApp ವೆಬ್ ಮೂಲಕ) ಲಾಗ್ ಇನ್ ಮಾಡಬಹುದು.

WhatsApp ಬಳಕೆದಾರರು ತಮ್ಮ ಖಾತೆಯನ್ನು ಅನೇಕ ಫೋನ್ಗಳಲ್ಲಿ ಬಳಸಲು ಅನುಮತಿಸುವ ವೈಶಿಷ್ಟ್ಯದಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮೊದಲ ಬಾರಿಗೆ ಈ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಬಹು ಫೋನ್ಗಳ ಬೆಂಬಲ ಲಭ್ಯವಿರುತ್ತದೆ ಎಂದು ಸೂಚಿಸಲಾಗಿತ್ತು. ಈಗ ಭವಿಷ್ಯದಲ್ಲಿ ಏಕಕಾಲದಲ್ಲಿ ನಾಲ್ಕು ಫೋನ್ಗಳಲ್ಲಿ ಒಂದು ವಾಟ್ಸಾಪ್ ಖಾತೆಯನ್ನು ಬಳಸಬಹುದು ಎಂದು WABetaInfo ವರದಿ ಮಾಡಿದೆ. ಹೌದು ಒಂದೇ ಸಮಯದಲ್ಲಿ ನಾಲ್ಕು ಫೋನ್ಗಳಿಂದ ನಿಮ್ಮ ವಾಟ್ಸಾಪ್ ಖಾತೆಯನ್ನು ಬಳಸುವ ಸಾಮರ್ಥ್ಯವನ್ನು ಹೊಂದಲಿದ್ದು ಇದು ಇನ್ನು ಅಭಿವೃದ್ಧಿಯ ಹಂತದಲ್ಲಿದೆ.

ಟ್ವೀಟ್‌ನಲ್ಲಿ ಸ್ಕ್ರೀನ್‌ಶಾಟ್ ಸಹ ನೀಡಿದ್ದು ಇದು ಫೋನ್ಗಳಾದ್ಯಂತ ಡೇಟಾವನ್ನು ವೈ-ಫೈ ಸಂಪರ್ಕವನ್ನು ಬಳಸಿಕೊಂಡು ಸಿಂಕ್ ಮಾಡಲಾಗುವುದು ಎಂದು ಸೂಚಿಸುತ್ತದೆ. ಪ್ರಸ್ತುತ ಬಳಕೆದಾರರು ಒಂದೇ ಸಮಯದಲ್ಲಿ ಒಂದು ಸ್ಮಾರ್ಟ್‌ಫೋನ್ ಮತ್ತು ಪಿಸಿಯಿಂದ (WhatsApp ವೆಬ್ ಮೂಲಕ) ಲಾಗ್ ಇನ್ ಮಾಡಬಹುದು.

Digit.in
Logo
Digit.in
Logo