WhatsApp ಬಳಕೆದಾರರು ನೀವಾಗಿದ್ದರೆ ಈ ಫೀಚರ್ಗಳ ಬಗ್ಗೆ ನಿಮಗೆ ತಿಳಿದಿರಲಿ

WhatsApp ಬಳಕೆದಾರರು ನೀವಾಗಿದ್ದರೆ ಈ ಫೀಚರ್ಗಳ ಬಗ್ಗೆ ನಿಮಗೆ ತಿಳಿದಿರಲಿ
HIGHLIGHTS

ನಿಮಗೊತ್ತಾ ಇಲ್ಲಿ ★ ನಕ್ಷತ್ರ ಆಕಾರದ ಚಿಹ್ನೆಯನ್ನು ಹಾಕುವ ಮೂಲಕ ನಿಮ್ಮ ಮೆಸೇಜ್ಗಳನ್ನು ಬುಕ್ಮಾರ್ಕ್ ಮಾಡಬವುದು

ಫೇಸ್‌ಬುಕ್ ಒಡೆತನದ ಖಾಸಗಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಹೆಚ್ಚು ಬಳಸುವ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಗಿದೆ. ಇದರ ಮೂಲಕ ನೀವು ಫೋಟೋ, ವಿಡಿಯೋ ಕರೆ ವಾಯ್ಸ್ ಕರೆಗಳನ್ನು ಮಾಡಬಹುದು. ವಾಟ್ಸಾಪ್ ಕಾಲಕಾಲಕ್ಕೆ ಹೊಸ ಉಪಯುಕ್ತ ವೈಶಿಷ್ಟ್ಯಗಳನ್ನು ತರುತ್ತಲೇ ಇರುತ್ತದೆ. ನಾವು ಈ ವೈಶಿಷ್ಟ್ಯಗಳನ್ನು ಅಪ್ಡೇಟ್ ಮಾಡುವ ಮೂಲಕ ಬಳಸಬಹುದು. ಅವುಗಳ ಬಳಕೆಯ ಬಗ್ಗೆ ಮುಖ್ಯವಾಗಿ ನೀವು ತಿಳಿದಿರಬೇಕು. ವಾಟ್ಸಾಪ್ನ ಈ ವೈಶಿಷ್ಟ್ಯಗಳ ಬಗ್ಗೆ ಸ್ವಲ್ಪ ತಿಳಿಯಿರಿ. 

ನೀವು ವಾಟ್ಸಾಪ್ ಮೆಸೇಜ್ಗಳನ್ನು ಬುಕ್ಮಾರ್ಕ್ ಮಾಡಲು ಬಯಸಿದರೆ ಅವುಗಳನ್ನು ಸಮಯಕ್ಕೆ ಸುಲಭವಾಗಿ ಕಂಡುಹಿಡಿಯಬಹುದು. ಇದಕ್ಕಾಗಿ ನಕ್ಷತ್ರ ಆಕಾರದ ★ ಹಾಕಿ ಆ ಮೆಸೇಜ್ಗಳ ಅನ್ನು ಬುಕ್‌ಮಾರ್ಕ್ ಮಾಡಲು ಬಯಸುವ ಮೆಸೇಜ್ಗಳನ್ನು ಟ್ಯಾಪ್ ಮಾಡಿ ಮತ್ತು 1-2 ಸಕೆಂಡ್ ಹಿಡಿದಿಟ್ಟುಕೊಳ್ಳಿ ಈಗ ನಿಮಗೆ ಸ್ಟಾರ್, ರಿಪ್ಲೈ, ಫಾರ್ವರ್ಡ್, ಕಾಪಿ ಮುಂತಾದ ಆಯ್ಕೆಗಳು ಸಿಗುತ್ತವೆ. ಇಲ್ಲಿ ★ ನಕ್ಷತ್ರ ಆಕಾರದ ಚಿಹ್ನೆಯನ್ನು ಹಾಕುವ ಮೂಲಕ ನಿಮ್ಮ ಮೆಸೇಜ್ಗಳನ್ನು ಬುಕ್ಮಾರ್ಕ್ ಮಾಡಬವುದು.

ಸಾಮಾನ್ಯವಾಗಿ ನಿಮ್ಮ ಯಾವುದೇ ವೀಡಿಯೊಗಳು ಮತ್ತು ಫೋಟೋಗಳು ಫೋನ್‌ನಲ್ಲಿರುತ್ತವೆ. ಸೇವ್ ವಾಟ್ಸಾಪ್‌ನಲ್ಲಿ ಯಾವುದೇ ಸ್ಟೇಟಸ್ ಮತ್ತು ವೀಡಿಯೊವನ್ನು ಹಾಕಿದರೂ ಅದು 24 ಗಂಟೆಗಳಲ್ಲಿ ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತದೆ. ಆದರೆ ಈ ಫೋಟೋಗಳು ಮತ್ತು ವೀಡಿಯೊಗಳನ್ನು ಹೆಚ್ಚು ಸಮಯ ಉಳಿಸಬವುದು. ಅದಕ್ಕಾಗಿ ಮೊದಲು ನೀವು ಆಂಡ್ರಾಯ್ಡ್ ಫೋನ್‌ನಲ್ಲಿ ಗೂಗಲ್ ಫೈಲ್ಸ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ.

ಅದರ ನಂತರ ಮೇಲಿನ ಬಲ ಮೂಲೆಯಲ್ಲಿ ನೀಡಲಾದ ಮೆನು ಆಯ್ಕೆಯ ಸೆಟ್ಟಿಂಗ್‌ಗಳ ಆಯ್ಕೆಯ ಗುಪ್ತ ಫೈಲ್‌ಗಳಿಗೆ ಹೋಗಿ. ಇದರ ನಂತರ ಈ ಅಪ್ಲಿಕೇಶನ್‌ನ ಬ್ರೌಸ್ ಟ್ಯಾಪ್ ಮಾಡಿ. ಮತ್ತು ಇಂಟರ್ನಲ್ ಸ್ಟೋರೇಜ್ ಹೋಗಿ. ಇದರ ನಂತರ ಈಗ ವಾಟ್ಸಾಪ್ ಫೋಲ್ಡರ್‌ನಲ್ಲಿರುವ ಮಾಧ್ಯಮಕ್ಕೆ ಹೋಗಿ ಅಲ್ಲಿ ನೀವು ಸ್ಟೇಟಸ್ಗಳ ಫೋಲ್ಡರ್ ಅನ್ನು ನೋಡುತ್ತೀರಿ. ಅಲ್ಲಿಂದ ಚಿತ್ರ ಅಥವಾ ವೀಡಿಯೊ ಡೌನ್‌ಲೋಡ್ ಮಾಡಿ ಮತ್ತು ಅದನ್ನು ಇಂಟರ್ನಲ್ ಸ್ಟೋರೇಜ್ ಅಲ್ಲಿ ನಿಮ್ಮ ಫೋಲ್ಡರ್‌ಗೆ ಸೇವ್ ಮಾಡಬವುದು.

ಈ ಅದ್ಭುತ ವೈಶಿಷ್ಟ್ಯವನ್ನು ಒಳಗೊಂಡಿರುವ WhatsApp ಇತ್ತೀಚಿನ ಅಪ್ಡೇಟ್ಗಳನ್ನು ಸ್ವೀಕರಿಸದಿದ್ದರೆ ಈ ಉಪಯುಕ್ತ ವೈಶಿಷ್ಟ್ಯದ ಪ್ರಯೋಜನವನ್ನು ಪಡೆಯಲು ಅಪ್ಡೇಟ್ ಮಾಡಿ. ಏಕೆಂದರೆ ನೀವು ಕೆಲವು ಪ್ರಮುಖ ಚಾಟ್‌ಗಳನ್ನು ಪಿನ್ ಮಾಡಲು ಬಯಸಿದರೆ ಇದರರ್ಥ ಆ ಮೆಸೇಜ್ಗಳು ಹೆಚ್ಚಾ ಮುಖ್ಯತೆಯಾಂನಿ ಹೊಂದಿವೆ ಎಂದು ನೀವು ಬಯಸಿದರೆ ನೀವು ಆ ಚಾಟ್‌ನಲ್ಲಿ ಟ್ಯಾಪ್ ಮಾಡಿ ಮತ್ತು ಪಿನ್ ಐಕಾನ್ ಮೇಲೆ ಒತ್ತಿ. ಇದು ನಿಮ್ಮ ಪ್ರಮುಖ ಚಾಟ್ ಪಿನ್‌ಗಳನ್ನು ಒಟ್ಟಿಗೆ  ತೋರಿಸುತ್ತದೆ. 

WhatsApp ಕರೆಗಳು ಈಗ ಈ ಪ್ಲಾಟ್‌ಫಾರ್ಮ್‌ನಲ್ಲಿ ಸೂಕ್ತ ಮತ್ತು ಅತಿ ಹೆಚ್ಚಾಗಿ ಬಳಕೆಯಾಗುತ್ತಿರುವ ಫೀಚರ್ ಆಗಿದೆ. ಆದರೆ ನೀವು ಭಾರೀ ಬಳಕೆದಾರರಾಗಿದ್ದರೆ ಅಥವಾ ಸೀಮಿತ ಯೋಜನೆಯಲ್ಲಿದ್ದರೆ ಅವುಗಳು ಸಾಕಷ್ಟು ಮೊಬೈಲ್ ಡೇಟಾವನ್ನು ಬಳಸಬವುದು. ಡೇಟಾ ಬಳಕೆಯನ್ನು ಸುಧಾರಿಸಲು ಹೆಚ್ಚಿನ ವಾಟ್ಸಾಪ್ ತಂತ್ರಗಳನ್ನು ಬಳಸಿ. ನೀವು ಕೆಲವು ಬ್ಯಾಂಡ್‌ವಿಡ್ತ್ ಉಳಿಸಲು ಬಯಸಿದರೆ Settings > Data and storage usage > Low data usage ಬಳಕೆಗೆ ಭೇಟಿ ನೀಡಿ ಪ್ರಯತ್ನಿಸಿ ಮತ್ತು ಕರೆಯಲ್ಲಿ ಬಳಸಿದ ಡೇಟಾದ ಪ್ರಮಾಣವನ್ನು ಕಡಿಮೆ ಮಾಡಲು ಬಾಕ್ಸ್ ಅನ್ನು ಟಿಕ್ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo