WhatsApp: ವಿಶೇಷವಾದ ದಿನಾಂಕ / ಸಮಯವನ್ನು ನೆನಪಿಡಲು ವಾಟ್ಸಾಪ್ ಮೆಸೇಜ್ ಸೆಡ್ಯೂಲ್ ಫೀಚರ್ ಬಳಸಬವುದು

WhatsApp: ವಿಶೇಷವಾದ ದಿನಾಂಕ / ಸಮಯವನ್ನು ನೆನಪಿಡಲು ವಾಟ್ಸಾಪ್ ಮೆಸೇಜ್ ಸೆಡ್ಯೂಲ್ ಫೀಚರ್ ಬಳಸಬವುದು
HIGHLIGHTS

ಈಗ ನೀವು ವಿಶೇಷವಾದ ದಿನಾಂಕ ಅಥವಾ ಟೈಮ್ ಮರೆಯುವರಲ್ಲಿ ಒಬ್ಬರಾಗಿದ್ದಾರೆ ಈ ಫೀಚರ್ ಖಂಡಿತವಾಗಿ ನಿಮಗೆ ಇಷ್ಟವಾಗಬವುದು

ಸ್ನೇಹಿತರೇ WhatsApp ಪ್ರಪಂಚದ ಹೆಚ್ಚು ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ನಲ್ಲಿ ಒಂದಾಗಿದ್ದು 1.5 ಮಿಲಿಯನ್ ಕ್ಕಿಂತ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ. ನಿಮ್ಮ ಮೆಸೇಜ್ಗಳು, ಫೋಟೊಗಳು ಮತ್ತು ವೀಡಿಯೊಗಳನ್ನು ಕಳುಹಿಸಲು WhatsApp ನಿಮಗೆ ಅವಕಾಶ ಮಾಡಿಕೊಡುತ್ತದೆ ಆದರೆ ತಕ್ಷಣವೇ ನಿಮ್ಮ ಮೆಸೇಜನ್ನು ಸರಿಯಾದ ಸಮಯದಲ್ಲಿ ತಲುಪಿಸಲು ಸದ್ಯಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಈ WhatsApp ನಿಮ್ಮ ಮೆಸೇಜ್ಗಳನ್ನು ನೀವು ನಿಗದಿಪಡಿಸುವ ಸಮಯದ ಆಯ್ಕೆಯನ್ನು ಅಷ್ಟಾಗಿ ಒದಗಿಸುವುದಿಲ್ಲವಾದರೂ ಈ ವೈಶಿಷ್ಟ್ಯವು ಕೆಲವು ಬಳಕೆದಾರರಿಗೆ ಉನ್ನತ ಮಾನದಂಡದಲ್ಲಿರುವುದಿಲ್ಲ. ಆದರೆ ಪ್ರಮುಖ ಸಮಯ ಮತ್ತು ದಿನಾಂಕಗಳನ್ನು ಮರೆಯುವ ಪ್ರವೃತ್ತಿಯಲ್ಲಿರುವ ಜನರಿಗೆ ಈ ವೈಶಿಷ್ಟ್ಯವನ್ನು ಖಂಡಿತವಾಗಿ ಇಷ್ಟವಾಗಬಹುದು.

https://techviral.net/wp-content/uploads/2018/10/WhatsApp-Schedule.jpg

1. ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರಿನಲ್ಲಿ SKEDit Scheduling App ಎಂಬ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಳ್ಳಿ.

2. ಇನ್ಸ್ಟಾಲ್ ಮಾಡಿದ ನಂತರ ಅಪ್ಲ್ಲಿಕೇಷನನ್ನು ತೆರೆಯಿರಿ ಇಲ್ಲಿ ನಿಮ್ಮ ಫೇಸ್ಬುಕ್ ಅಥವಾ ಹೊಸ ಅಕೌಂಟ್ ಕ್ರಿಯೇಟ್ ಮಾಡಬವುದು. 

3. ಮೊದಲ ಬಾರಿಗೆ ಬಳಸುತ್ತಿದ್ದರೆ ಅಕೌಂಟ್ ಕ್ರಿಯೇಟ್ ಮೇಲೆ ಕ್ಲಿಕ್ ಮಾಡಿ ತೆರೆಯಿರಿ. 

4. ತೆರೆದ ನಂತರ ಇಲ್ಲಿ ನಿಮ್ಮ ಹೆಸರು, ಇಮೇಲ್ ಮತ್ತು ಪಾಸ್ವರ್ಡ್ ನಮೂದಿಸಿರಿ.   

5. ಇಲ್ಲಿನ ಎಲ್ಲಾ ಮಾಹಿತಿ ನೀಡಿದ ನಂತರ ಈಗ Create Account ಮೇಲೆ ಕ್ಲಿಕ್ ಮಾಡಿರಿ.

6. ಅಕೌಂಟ್ ಕ್ರಿಯೇಟ್ ಆದ ನಂತರ ಪುನಃ ನೀವು ಬಳಸಿದ ಇಮೇಲ್ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಮಾಡಿರಿ. 

7. ಇದರೊಳಗೆ ಸೈನ್ ಇನ್ ಆದ ನಂತರ ನಿಮಗೆ WhatsApp Business, WhatsApp, SMS, Email, Call ಮತ್ತು Facebook ಕಾಣಿಸುತ್ತದೆ. 

8. ಇದರಲ್ಲಿ ನೀವು ಮೊದಲಿಗೆ WhatsApp ಮೇಲೆ ಕ್ಲಿಕ್ ಮಾಡಿ ಇಲ್ಲಿ To ಅನ್ನುವ ನಂತರ ಯಾರಿಗೆ ಮೆಸೇಜ್ ಕಳುಯಿಸಬೇಕೋ ಅವರ ನಂಬರ್ ಸೇರಿಸಿ. 

9. ನಿಮ್ಮ ಆತ್ಮೀಯರ ನಂಬರ್ ಸೇರಿಸಿದ ನಂತರ ಏನು ಬರೆಯಬೇಕೋ ಅದನ್ನು ಇಲ್ಲಿ ಬರೆಯಿರಿ. 

10. ನಿಮ್ಮ ಮೆಸೇಜ್ ಟೈಪ್ ಆದ ನಂತರ ಕೆಳಗೆ ನೋಡಿ ಯಾವಾಗ ಕಳುಯಿಸಬೇಕೋ ಅದನ್ನು ಆಯ್ಕೆ ಮಾಡಿಕೊಳ್ಳಿ. 

11. ಇದರಲ್ಲಿ ನಿಮ್ಮ ಟೈಮ್ ಮತ್ತು ಡೇಟ್ ಆಯ್ಕೆ ಮಾಡಿದ ನಂತರ ನಿಮ್ಮ ಬಲ ಭಾಗದ ಮೇಲೆ ಕೊನೆಯಲ್ಲಿ  ಚಿನ್ಹೆಯ ಮೇಲೆ ಕ್ಲಿಕ್ ಮಾಡಿ. 

12. ಈ ರೀತಿಯಲ್ಲಿ ಆತ್ಮೀಯರ ಹುಟ್ಟುಹಬ್ಬ, ಆನಿರ್ವೇರ್ಸಿರಿ ಮತ್ತು ವಿಶೇಷ ದಿನಗಳನ್ನು ಮರೆಯದೆ ಶೆಡ್ಯೂಯಲ್ ಮಾಡಬವುದು. ಬಳಕೆದಾರರು ಒಂದೇ ಸಮಯದಲ್ಲಿ ಅನೇಕ ಸಂದೇಶಗಳನ್ನು ನಿಗದಿಪಡಿಸಬಹುದು ಆದರೆ ನಿಗದಿತ ಸಮಯ ಒಂದೇ ಆಗಿರಬಾರದಷ್ಟೇ. ಇಂತಹ ಪ್ರತಿ ಗಂಟೆಯಲ್ಲಿ ತಾಜಾ ಮತ್ತು ತಿಳಿದುಕೊಳ್ಳಲೇಬೇಕಾದ ಟೆಕ್ ಸಂಬಂಧಿತ ಮಾಹಿತಿಗಾಗಿ ಡಿಜಿಟ್ ಕನ್ನಡ ಮತ್ತು ಯೌಟ್ಯೂಬ್ ಚಾನಲನ್ನು ಲೈಕ್ ಮತ್ತು ಫಾಲೋ ಮಾಡಿ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo