Exclusive: ಫ್ಲಿಪ್‌ಕಾರ್ಟ್ ಯೂನಿಕ್ ಲುಕ್ ಜೊತೆಗೆ ನೋಕಿಯಾ ಟಿವಿ ಬಿಡುಗಡೆಯಾಗಲಿದೆ

Exclusive: ಫ್ಲಿಪ್‌ಕಾರ್ಟ್ ಯೂನಿಕ್ ಲುಕ್ ಜೊತೆಗೆ ನೋಕಿಯಾ ಟಿವಿ ಬಿಡುಗಡೆಯಾಗಲಿದೆ
HIGHLIGHTS

ನೋಕಿಯಾ ಟಿವಿಗೆ ಧ್ವನಿಯನ್ನು ನೀಡುವ ಮೂಲಕ ಜೆಬಿಎಲ್ ಇದೇ ಮೊದಲ ಬಾರಿಗೆ ಟಿವಿ ವಲಯದಲ್ಲಿ ಕಾಲಿಟ್ಟಿದೆ.

ಈ ಟಿವಿ ಡಾಲ್ಬಿ ಆಡಿಯೋ ಮತ್ತು DTS ಟ್ರುಸರ್ರೌಂಡ್ ಸೌಂಡ್ ಸ್ಪೀಕರ್ಗಳ ಬೆಂಬಲದೊಂದಿಗಿನ ಜೆಬಿಎಲ್ ಸ್ಪೀಕರ್‌ಗಳನ್ನು ಹೊಂದಿದೆ.

ಈ ನೋಕಿಯಾ ಟಿವಿಯನ್ನು ಇದೇ ಡಿಸೆಂಬರ್ ತಿಂಗಳ ಆರಂಭದಲ್ಲಿ ಫ್ಲಿಪ್‌ಕಾರ್ಟ್ ವಿಶೇಷ ಪ್ರಾಡಕ್ಟ್ ಆಗಿ ಬಿಡುಗಡೆಗೊಳಿಸಲಿದೆ.

ಫ್ಲಿಪ್‌ಕಾರ್ಟ್ ಇದರ ಫೋಟೋಗಳನ್ನು ಪ್ರತ್ಯೇಕವಾಗಿ ನಮ್ಮೊಂದಿಗೆ ಹಂಚಿಕೊಂಡಿದೆ ಮತ್ತು JBL ಆಡಿಯೊ ಚಾಲಿತದ ಈ ನೋಕಿಯಾ ಟಿವಿಯನ್ನು ಇದೇ ಡಿಸೆಂಬರ್ ತಿಂಗಳ ಆರಂಭದಲ್ಲಿ ಫ್ಲಿಪ್‌ಕಾರ್ಟ್ ವಿಶೇಷ ಪ್ರಾಡಕ್ಟ್ ಆಗಿ ಬಿಡುಗಡೆಗೊಳಿಸಲಿದೆ ಎಂದು ಧೃಡಪಡಿಸಿದೆ.

ನೋಕಿಯಾ ಟಿವಿಗೆ ಧ್ವನಿಯನ್ನು ನೀಡುವ ಮೂಲಕ ಜೆಬಿಎಲ್ ಇದೇ ಮೊದಲ ಬಾರಿಗೆ ಟಿವಿ ವಲಯದಲ್ಲಿ ಕಾಲಿಟ್ಟಿದೆ. ಈ ಟಿವಿ ಡಾಲ್ಬಿ ಆಡಿಯೋ ಮತ್ತು DTS ಟ್ರುಸರ್ರೌಂಡ್ ಸೌಂಡ್ ಸ್ಪೀಕರ್ಗಳ ಬೆಂಬಲದೊಂದಿಗಿನ ಜೆಬಿಎಲ್ ಸ್ಪೀಕರ್‌ಗಳನ್ನು ಹೊಂದಿದೆ. 

ನೀವು ಹೊಸ ಸ್ಮಾರ್ಟ್ ಟಿವಿಯಲ್ಲಿ ಹೂಡಿಕೆ ಅಥವಾ ಖರೀದಿಸಲು ಬಯಸಿದರೆ ಇನ್ನು ಸ್ವಲ್ಪ ಸಮಯ ಕಾಯಬವುದು. ಈ ನೋಕಿಯಾ ತನ್ನ ಸ್ಮಾರ್ಟ್ ಟಿವಿಯನ್ನು ಆಂಡ್ರಾಯ್ಡ್‌ನಲ್ಲಿ ಫ್ಲಿಪ್‌ಕಾರ್ಟ್ ವಿಶೇಷ ಪ್ರಾಡಕ್ಟ್ ಆಗಿ ಮೊದಲ ಬಾರಿಗೆ ಬಿಡುಗಡೆ ಮಾಡುತ್ತಿದೆ. ಮತ್ತು ಮುಂಬರುವ ಟಿವಿಯ ಧ್ವನಿಯನ್ನು ಜೆಬಿಎಲ್ ಆಡಿಯೊ ನಡೆಸಲಿದೆ. ಮೇಲಿನ ಚಿತ್ರ ನೋಡುವುದರ ಮೂಲಕ ಈ ಟಿವಿ ಹೇಗಿರುತ್ತದೆ ಎಂಬುದರ ಬಗ್ಗೆ ಒಂದು ಸಣ್ಣ ನೋಟವಿದೆ. ಈ ಟಿವಿಯಿಂದ ಧ್ವನಿ ಔಟ್ಪುಟನ್ನು ಜೆಬಿಎಲ್ ಸೌಂಡ್ ಸಿಸ್ಟಮ್ ಸ್ಪೀಕರ್‌ಗಳು ನಿರ್ವಹಿಸುತ್ತಾವೆ. ಚಿತ್ರದಿಂದ ಟಿವಿಯು ಮುಂಭಾಗದ ಬಟನ್ ಸ್ಪೀಕರ್‌ಗಳನ್ನು ಹೊಂದಿರುವುದು ಸ್ಪಷ್ಟವಾಜಿ ಕಾಣಿಸುತ್ತಿದೆ. 

ಈ ದಿನಗಳಲ್ಲಿ ಟಿವಿಗಳಲ್ಲಿನ ಕೊರತೆಯ ಅಂಶವೆಂದರೆ ಆಡಿಯೊ ಔಟ್ಪುಟ್ ಆಗಿರುತ್ತದೆ. ಆದರೆ ಮೊದಲ ಬಾರಿಗೆ ಜೆಬಿಎಲ್‌ನೊಂದಿಗಿನ ನೋಕಿಯಾ ಸಹಭಾಗಿತ್ವದ ಮೂಲಕ ಮುಂಬರುವ ನೋಕಿಯಾ ಟಿವಿಯಲ್ಲಿ ಇದೇ ಜೆಬಿಎಲ್ ಮಾನದಂಡಗಳ ಪ್ರಕಾರ ಸೌಂಡ್ ಟ್ಯೂನಿಂಗ್ ಜೊತೆಗೆ ಜೆಬಿಎಲ್ ವಿನ್ಯಾಸಗೊಳಿಸುದನ್ನು ಗ್ರಾಹಕರು ನಿರೀಕ್ಷಿಸಬಹುದು. ಟಿವಿ ಕ್ಲಿಯರ್ ವೋಕಲ್ ಟೋನ್ ಮತ್ತು ಕನಿಷ್ಟ ಹಾರ್ಮೋನಿಕ್ ಡಿಸ್ಟಾರ್ಷನ್ ನಂತಹ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎಂದು ಫ್ಲಿಪ್ಕಾರ್ಟ್ ಡಿಜಿಟ್'ಗೆ ಖಚಿತಪಡಿಸಿದೆ. ಈ ಜೆಬಿಎಲ್ ಸ್ಪೀಕರ್‌ಗಳು ಉತ್ತಮ ಧ್ವನಿ ನಿಷ್ಠೆಗೆ ಹೆಸರುವಾಸಿಯಾಗಿರುವುದು ಮನೆಮಾತಾಗಿದೆ ಆದ್ದರಿಂದ ನೋಕಿಯಾ ಟಿವಿಯ ಭರವಸೆಯನ್ನು ಪಡೆದುಕೊಂಡಿದೆ.

ಜೆಬಿಎಲ್‌ನ ಸ್ಪೀಕರ್‌ಗಳ ಜೊತೆಗೆ ಟಿವಿ ಅದರೊಂದಿಗೆ ಡಾಲ್ಬಿ ಆಡಿಯೋ ಮತ್ತು ಡಿಟಿಎಸ್ ಟ್ರುಸರ್ರೌಂಡ್ ಸೌಂಡ್ ಅನ್ನು ಸಹ ತರುತ್ತದೆ ಇದು ನಿಮ್ಮ ಟಿವಿ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲಿದೆ. ಈ ಡಾಲ್ಬಿ ಆಡಿಯೋ ಮತ್ತು ಡಿಟಿಎಸ್ ಟ್ರುಸರ್ರೌಂಡ್‌ನೊಂದಿಗೆ ಟಿವಿಯು ಹೆಚ್ಚಿನ ನಿಷ್ಠಾವಂತ ಆಡಿಯೊವನ್ನು ಡಿಕೋಡ್ ಮಾಡಲು ಮತ್ತು ಟಿವಿಗಳ ಜೆಬಿಎಲ್ ಸ್ಪೀಕರ್‌ಗಳಿಂದ ಅದನ್ನು ಪ್ಲೇ ಮಾಡಲು ಸಾಧ್ಯವಾಗುತ್ತದೆ. ಡಿಟಿಎಸ್ ಟ್ರುಸರ್ರೌಂಡ್‌ನೊಂದಿಗೆ ಟಿವಿಗೆ 5.1 ಸರೌಂಡ್ ಧ್ವನಿಯನ್ನು ಡಿಕೋಡ್ ಮಾಡಲು ಮತ್ತು ಟಿವಿಗಳ ಜೆಬಿಎಲ್ ಸ್ಪೀಕರ್‌ಗಳ ಮೂಲಕ ಅದನ್ನು ಹಿಂತಿರುಗಿಸಬವುದಂತೆ.

https://static.digit.in/default/4b045fbdd401794b50e5f9e5b4e38829a02a75f9.jpeg 

 ನೋಕಿಯಾ ಟಿವಿಯ ಇತರ ವಿಶೇಷಣಗಳೆಂದರೆ ಇದು 4K ರೆಸಲ್ಯೂಶನ್ ಹೊಂದಿರುವ 55 ಇಂಚಿನ ಟಿವಿಯಾಗಿದೆ. ನಾವು ವರದಿ ಮಾಡಿದ ಹಿಂದಿನ ಕಥೆಯಲ್ಲಿ ನೋಕಿಯಾ ಬ್ರಾಂಡ್ ಪಾರ್ಟ್‌ನರ್‌ಶಿಪ್‌ಗಳ ಉಪಾಧ್ಯಕ್ಷರಾದ ಶ್ರೀ ವಿಪುಲ್ ಮೆಹ್ರೋತ್ರಾ “ದೇಶದ ಪ್ರಮುಖ ಇ-ಕಾಮರ್ಸ್ ಕಂಪನಿಯಾದ ಫ್ಲಿಪ್‌ಕಾರ್ಟ್ ಮೊಟ್ಟ ಮೊದಲ ಬಾರಿಗೆ ನೋಕಿಯಾ ಬ್ರಾಂಡ್ ಸ್ಮಾರ್ಟ್ ಟಿವಿಗಳನ್ನು ಭಾರತಕ್ಕೆ ತರುತ್ತಿರುವುದು ನಮಗೆ ಖುಷಿ ತಂದಿದ್ದು ನೋಕಿಯಾ ಬ್ರ್ಯಾಂಡ್‌ಗೆ ಹೊಸ ವಿಭಾಗದಲ್ಲಿ ಅತ್ಯಾಕರ್ಷಕ ಹೊಸ ಅಧ್ಯಾಯದ ಆರಂಭವನ್ನು ಇಂದು ಸೂಚಿಸುತ್ತದೆ” ಎಂದು ಹೇಳಿದ್ದಾರೆ.

Digit Kannada
Digit.in
Logo
Digit.in
Logo