ಇವೇಲ್ಲಾ 25,000 ರೂಗಳ ಬಜೆಟ್‌ನಲ್ಲಿ ಬರುವ 43 ಇಂಚಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳು

ಇವೇಲ್ಲಾ 25,000 ರೂಗಳ ಬಜೆಟ್‌ನಲ್ಲಿ ಬರುವ 43 ಇಂಚಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳು
HIGHLIGHTS

25,000 ರೂಗಳ ಬಜೆಟ್‌ನಲ್ಲಿ ಬರುವ 43 ಇಂಚಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳಿವು

Xiaomi ಭಾರತದಲ್ಲಿ ತನ್ನ ಹೊಚ್ಚ ಹೊಸ Mi TV 4A Horizon Edition ಅನ್ನು ಬಿಡುಗಡೆ ಮಾಡಿದೆ.

Thomson tv ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಸಹ ಒದಗಿಸಲಾಗಿದೆ.

ಲಾಕ್‍ಡೌನ್ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಸ್ಕ್ರೀನ್ ಟಿವಿಯ ವ್ಯಾಮೋಹ ಜನರಲ್ಲಿ ಹೆಚ್ಚಾಗಿದೆ ಏಕೆಂದರೆ ಕ್ರೀಡೆ, ಚಲನಚಿತ್ರಗಳು ಅಥವಾ ಸರಣಿಗಳನ್ನು ನೋಡುವುದು ವಿಭಿನ್ನ ಮೋಜು. ಆದರೆ ಆಗಾಗ್ಗೆ ಅವರು ದೊಡ್ಡ ಸ್ಕ್ರೀನ್ ಸ್ಮಾರ್ಟ್ ಟಿವಿಗಳು ದುಬಾರಿಯಾಗಬಹುದೆಂದು ಭಾವಿಸಿ ಅವುಗಳನ್ನು ಖರೀದಿಸುವ ಯೋಜನೆಯನ್ನು ತ್ಯಜಿಸುತ್ತಾರೆ. ಆದರೆ ಈ ಯೋಚನೆ ನಿಲ್ಲಿಸುವುದು ಒಳಿತು ಏಕೆಂದರೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಸ್ಪರ್ಧೆಯನ್ನು ಗಮನಿಸಿದರೆ ಕಂಪನಿಗಳು ಕೈಗೆಟುಕುವ ಬೆಲೆಯಲ್ಲಿ ಅಂತಂದ್ರೆ ಕಡಿಮೆ ಬೆಲೆಗೆ ಹೊಸ ಮಾದರಿಯ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಕಾಲಿಡುತ್ತಿವೆ. ಆದ್ದರಿಂದ 25,000 ರೂಗಳ ಬಜೆಟ್‌ನಲ್ಲಿ ಬರುವ 43 ಇಂಚಿನ ಅತ್ಯುತ್ತಮ ಸ್ಮಾರ್ಟ್ ಟಿವಿಗಳ ಪಟ್ಟಿಯನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ.

Mi TV
ಬೆಲೆ: 23,499 ರೂಗಳು

Xiaomi ಭಾರತದಲ್ಲಿ ತನ್ನ ಹೊಚ್ಚ ಹೊಸ Mi TV 4A Horizon Edition ಅನ್ನು ಬಿಡುಗಡೆ ಮಾಡಿದೆ. ಇದು 32 ಇಂಚಿನ ಮತ್ತು 43 ಇಂಚಿನ ಸ್ಕ್ರೀನ್ ಗಾತ್ರಗಳಲ್ಲಿ ಲಭ್ಯವಿದೆ. ಈ ಟಿವಿ Xiaomi ಯ ಪ್ಯಾಚ್‌ವಾಲ್ UI ನಲ್ಲಿ ಚಾಲನೆಯಲ್ಲಿದೆ ಮತ್ತು ಟಿವಿಗಳು ನಿಮಗೆ Android TV ಗೆ ಪ್ರವೇಶವನ್ನು ನೀಡುತ್ತದೆ. ಆಂಡ್ರಾಯ್ಡ್ ಟಿವಿಯೊಂದಿಗೆ ನೀವು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಪ್ಲೇ ಸ್ಟೋರ್, ಗೂಗಲ್ ಅಸಿಸ್ಟೆಂಟ್, ಕ್ರೋಮ್‌ಕಾಸ್ಟ್ ಮತ್ತು ಹೆಚ್ಚಿನವುಗಳಿಗೆ ಪ್ರವೇಶ ಪಡೆಯುತ್ತೀರಿ. ಹೊಸ Mi TV 4A Horizon Edition ಬೆಲೆ 22,999 ರೂಗಳಾಗಿವೆ ಇದು 28ನೇ ಸೆಪ್ಟೆಂಬರ್ 2020 ರಿಂದ ಮಾರಾಟಕ್ಕೆ ಬರಲಿದೆ. 

Shinco SO43AS
ಬೆಲೆ: 22,499 ರೂಗಳು

ಈ 43 ಇಂಚಿನ ಸ್ಮಾರ್ಟ್ ಟಿವಿಯ ಸ್ಕ್ರೀನ್ ರೆಸಲ್ಯೂಶನ್ 1920×1080 ಪಿಕ್ಸೆಲ್‌ಗಳು. ಸಂಪರ್ಕಕ್ಕಾಗಿ ಇದು 2 ಯುಎಸ್‌ಬಿ, 3 ಎಚ್‌ಡಿಎಂಐ ಪೋರ್ಟ್‌ಗಳು ಮತ್ತು ವೈಫೈ ಬೆಂಬಲವನ್ನು ಹೊಂದಿದೆ. ಇದು A-53 ಕ್ವಾಡ್ ಕೋರ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 1GB RAM ಮತ್ತು 8GB ಆಂತರಿಕ ಮೆಮೊರಿಯನ್ನು ಹೊಂದಿದೆ. ಇದು ಆಂಡ್ರಾಯ್ಡ್ 8.0 ಮತ್ತು ಹೆಚ್ಚಿನದನ್ನು ಬೆಂಬಲಿಸುತ್ತದೆ. ಇದು ಡಿಸ್ನಿ + ಹಾಟ್‌ಸ್ಟಾರ್, ZEE5 , ಸೋನಿ ಲಿವ್, ವೂಟ್, ಸನ್ ಎನ್‌ಎಕ್ಸ್‌ಟಿ, ಜಿಯೋ ಸಿನೆಮಾ, ಇರೋಸ್ ನೌ, ಹಂಗಮಾ ಪ್ಲೇ ಮತ್ತು ಆಲ್ಟ್ ಬಾಲಾಜಿಯಂತಹ ಅಪ್ಲಿಕೇಶನ್‌ಗಳ ಬೆಂಬಲವನ್ನು ಹೊಂದಿದೆ.

Thomson TV
ಬೆಲೆ: 24,999 ರೂಗಳು 

ಥಾಮ್ಸನ್ ಅವರ 43 ಇಂಚಿನ ಸ್ಮಾರ್ಟ್ ಟಿವಿಯಲ್ಲಿ ಗೂಗಲ್ ಪ್ಲೇ ಸ್ಟೋರ್ ಬೆಂಬಲವಿದೆ. ಇದನ್ನು ವಿಶೇಷ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು. ಇದು ಮೊದಲೇ ಸ್ಥಾಪಿಸಲಾದ ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಹೊಂದಿದೆ. ಅಲ್ಲದೆ Thomson tv ಗೂಗಲ್ ಅಸಿಸ್ಟೆಂಟ್ ಬೆಂಬಲವನ್ನು ಸಹ ಒದಗಿಸಲಾಗಿದೆ.  ಬಳಕೆದಾರರು ತಮ್ಮ ವಾಯ್ಸ್ ಕಮೆಂಡ್ ಮೂಲಕ ಮಾತ್ರವೇ ಟಿವಿಯನ್ನು ನಿಯಂತ್ರಿಸಬಹುದು.

Realme TV
ಬೆಲೆ: 21,999 ರೂಗಳು 

Realme ಸ್ಮಾರ್ಟ್ ಟಿವಿ 43 ಇಂಚಿನ ಪೂರ್ಣ ಎಚ್‌ಡಿ ಪ್ರದರ್ಶನವನ್ನು ಹೊಂದಿದ್ದು 1920×1080 ಪಿಕ್ಸೆಲ್‌ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಇದು ಆಂಡ್ರಾಯ್ಡ್ 9.0 ಓಎಸ್ ಅನ್ನು ಬೆಂಬಲಿಸುತ್ತದೆ. ಈ ಟಿವಿಯು ಮೀಡಿಯಾ ಟೆಕ್ ಎಂಎಸ್‌ಡಿ 6683 ಪ್ರೊಸೆಸರ್ ಹೊಂದಿದ್ದು ಗೂಗಲ್ ಪ್ಲೇ ಸ್ಟೋರ್ ಬೆಂಬಲವನ್ನು ಹೊಂದಿದೆ. ಸಂಪರ್ಕಕ್ಕಾಗಿ ಬ್ಲೂಟೂತ್ 5.0 ಬೆಂಬಲ ಲಭ್ಯವಿದೆ.

OnePlus TV
ಬೆಲೆ: 24,999 ರೂಗಳು 

ಒನ್‌ಪ್ಲಸ್ ಇತ್ತೀಚೆಗೆ ಭಾರತದಲ್ಲಿ ತನ್ನ ವೈ ಸರಣಿಯ ಟಿವಿಗಳನ್ನು ಬಿಡುಗಡೆ ಮಾಡಿದೆ. ಇದು 43 ಇಂಚಿನ ಡಿಸ್ಪ್ಲೇ ಹೊಂದಿರುವ ಮಾದರಿಯನ್ನು ಸಹ ಒಳಗೊಂಡಿದೆ. ಇದು ಆಕ್ಸಿಜನ್ ಪ್ಲೇ, ಒನ್‌ಪ್ಲಸ್ ಕನೆಕ್ಟ್ ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದನ್ನು ಅಮೆಜಾನ್‌ನಿಂದ ಪ್ರತ್ಯೇಕವಾಗಿ ಖರೀದಿಸಬಹುದು. ಇದು ಪೂರ್ಣ ಎಚ್‌ಡಿ ಡಿಸ್ಪ್ಲೇ ಮತ್ತು ಡಾಲ್ಬಿ ಆಡಿಯೊದೊಂದಿಗೆ ಡ್ಯುಯಲ್ 10 ಡಬ್ಲ್ಯೂ ಸ್ಪೀಕರ್‌ಗಳನ್ನು ಹೊಂದಿದೆ. ಈ ಸ್ಮಾರ್ಟ್ ಟಿವಿಯಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಹಾಟ್‌ಸ್ಟಾರ್ ಅನ್ನು ಮೊದಲೇ ಲೋಡ್ ಮಾಡಲಾದ ಒಟಿಟಿ ಅಪ್ಲಿಕೇಶನ್‌ಗಳಿವೆ.

Hisense TV 
ಬೆಲೆ: 20,999 ರೂಗಳು 

ಹಿಸ್ಸೆನ್ಸ್‌ನ 43 ಇಂಚಿನ ಟಿವಿಯನ್ನು ಅಮೆಜಾನ್‌ನಿಂದ ಖರೀದಿಸಬಹುದು. ಇದು ಶಬ್ದ ಕಡಿತ ವೈಶಿಷ್ಟ್ಯವನ್ನು ಹೊಂದಿದೆ. 24W ಸರೌಂಡ್ ಸೌಂಡ್ ಸ್ಪೀಕರ್‌ಗಳೂ ಇವೆ. ಇದರಲ್ಲಿ ಬಳಕೆದಾರರು ಉತ್ತಮ ಬಣ್ಣ ಡಿಸ್ಪ್ಲೇಯನ್ನು ಪಡೆಯುತ್ತಾರೆ. ಇದು 2GB RAM ಮತ್ತು 16GB ಸ್ಟೋರೇಜ್ ಅನ್ನು ಹೊಂದಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo