ಅನಗತ್ಯ ಕರೆಗಳಿಂದ ಬೇಸರವಾಗಿದ್ಯೇ? ಈ ಸಣ್ಣ ಕೆಲಸ ಮಾಡಿ ಬೇಡದ ಕರೆಗಳಿಂದ ಮುಕ್ತಿ ಪಡೆಯಿರಿ!

ಅನಗತ್ಯ ಕರೆಗಳಿಂದ ಬೇಸರವಾಗಿದ್ಯೇ? ಈ ಸಣ್ಣ ಕೆಲಸ ಮಾಡಿ ಬೇಡದ ಕರೆಗಳಿಂದ ಮುಕ್ತಿ ಪಡೆಯಿರಿ!
HIGHLIGHTS

ಅನಗತ್ಯ ಟೆಲಿಮಾರ್ಕೆಟಿಂಗ್ ಮತ್ತು ಸ್ಪ್ಯಾಮ್ ಕರೆಗಳಿಂದ ಕಿರಿಕಿರಿ ಉಂಟಾಗುವುದು ಸಾಮಾನ್ಯವಾಗಿದೆ

ಅನಗತ್ಯ ಸ್ಕ್ಯಾಮರ್‌ ಮತ್ತು ವಂಚಕರಿಂದ ಈ ಕರೆಗಳು ಹಣವನ್ನು ಕದಿಯಲು ಹೆಚ್ಚಾಗಿ ಮಾಡಲಾಗುತ್ತದೆ

ಬಳಕೆದಾರರು ಟೆಲಿಕಾಂ ಕಂಪನಿಗಳ ಸಹಾಯದ ಮೂಲಕ ಬೇಡದ ಕರೆಗಳಿಂದ ಮುಕ್ತಿ ಪಡೆಯಬಹುದು

Do Not Disturb (DND) Activation: ಸಾಮಾನ್ಯವಾಗಿ ಅನಗತ್ಯ ಕರೆಗಳು ಬಂದ್ರೆ ಸಾಕು ಕೆಲವರಿಗೆ ಎಲ್ಲಿಲ್ಲಿದ ಕೋಪ ಅಥವಾ ಬೇಸರವಾಗೋದು ಅನಿವಾರ್ಯ. ಅದರಲ್ಲೂ ವಿಶೇಷವಾಗಿ ಯಾವುದಾರೊಂದು ಕಾರ್ಯದಲ್ಲಿ ನಿರತವಾಗಿದ್ದರೆ ಅಥವಾ ಬೇರೆ ಪ್ರಮುಖ ಕರೆಗಾಗಿ ಕಾಯುತ್ತಿರುವಾಗ ಈ  ಟೆಲಿಮಾರ್ಕೆಟಿಂಗ್ ಕರೆ ಅಥವಾ ಸ್ಪ್ಯಾಮ್ ಕರೆಗಳು ಬಂದರಂತೂ ಕಿರಿಕಿರಿ ಮತ್ತು ಬೇಸರವಾಗೋದು ಪಕ್ಕ. ಕ್ರೆಡಿಟ್ ಕಾರ್ಡ್‌ಗಳು, ಮಾರ್ಕೆಟಿಂಗ್, ಟೆಲಿಶಾಪಿಂಗ್ ಅಥವಾ ವಂಚನೆಗಾಗಿ ನಿರಂತರ ಕರೆಗಳು ಬರುವುದು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಅಲ್ಲದೆ ಬಹಳಷ್ಟು ಈ ಕರೆಗಳು ನಿಮ್ಮನ್ನು ವಂಚಿಸುವ ಪ್ರಯತ್ನದಲ್ಲಿ ನಿಮ್ಮ ಹಣಕಾಸಿನ ಮತ್ತು ವೈಯಕ್ತಿಕ ಮಾಹಿತಿಯನ್ನು ಕೇಳುವ ಬ್ಯಾಂಕ್ ಸಿಬ್ಬಂದಿಯಂತೆ ನಟಿಸುವ ಸ್ಕ್ಯಾಮರ್‌ಗಳಿಂದ ಬರುತ್ತವೆ.

DND ಸೇವೆ ಎಂದರೇನು?

ಡಿಎನ್​ಡಿ ಸೇವೆಯೂ ಉಚಿತವಾಗಿದ್ದು ಅನಗತ್ಯ ಕರೆಗಳನ್ನು ನಿರ್ಬಂಧಿಸುವ ಸೇವೆಯನ್ನು ಒದಗಿಸುತ್ತದೆ. ಈ ಸೇವೆ ಸಂಪೂರ್ಣವಾಗಿ ಉಚಿತವಾಗಿದ್ದು ನಿಮಗೆ ಬೇಡದ ಕರೆ ಅಥವಾ SMS ಅನ್ನು ಬಂದ್ ಮಾಡಬಹುದು. ಆದರೆ ಗಮನದಲ್ಲಿಡಿ ಇದರಲ್ಲಿ ಎರಡು ಬಗೆಯ DND ಸೇವೆಗಳಿವೆ ಒಂದು ಪೂರ್ತಿ DND ಮತ್ತೊಂದು ಪಾರ್ಷಲ್ DND. ಈ ಸೇವೆ ಮುಖ್ಯವಾಗಿ 7 ವಿಷಯಗಳ ಭಾಗಗಳಲ್ಲಿ ವಿಭಜಿಸಲಾಗಿದೆ. ನಿಮಗೆ ಯಾವುದೇ ಕರೆಗಳು ಬೇಡವಾದರೆ ಫುಲ್ ಡಿಎನ್​ಡಿ ಸೇವೆಯನ್ನು ಪಡೆಯಬಹುದು. ಆದರೆ ಆ 7 ವಿಷಯಗಳಲ್ಲಿ ನಿಮಗೆ ಯಾವುದಾದರು ಒಂದು ವಿಷಯದ ಬಗ್ಗೆ ನಿಮಗೆ ಕರೆಗಳು ಬೇಕಿದ್ದರೆ ಅದನ್ನು ಮಾತ್ರ ಆನ್ ಮಾಡಿ ಉಳಿದವುಗಳನ್ನು ಬಂದ್ ಮಾಡಿಸಬಹುದು. ಆ 7 ವಿಷಯಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ. ಆದರೆ ನನ್ನ ಅನಿಸಿಕೆಯ ಪ್ರಕಾರ ನಿಮಗೆ ವಂಚಕರಿಂದ ಮುಕ್ತಿ ಪಡೆಯಲು ಸಾಧ್ಯವಾದ ಕಡೆಗಳೆಲ್ಲ ನಿಮ್ಮ ಇಮೇಲ್ ಬಳಸುವುದು ನಂಬರ್ಗಳಿಂತ ಉತ್ತಮವಾಗಿರುತ್ತದೆ.

DND code Particulars or Benefits
SMS ‘START 0’ to 1909 Block completely
SMS ‘START 1’ to 1909 To stop getting calls and SMS of Banking, Insurance
SMS ‘START 2’ to 1909 To stop getting calls and SMS of Real Estate
SMS ‘START 3’ to 1909 To stop getting calls and SMS of Educational
SMS ‘START 4’ to 1909 To stop getting calls and SMS from Health
SMS ‘START 5’ to 1909 To stop getting calls and SMS of Consumer Goods
SMS ‘START 6’ to 1909 To stop getting calls and SMS of Communication, Broadcasting
SMS ‘START 7’ to 1909 To stop getting calls and SMS from Tourism

ಉಚಿತ DND ಸೇವೆಯನ್ನು ಬಳಸಲು ಆರಂಭಿಸಿ  

ನಿಮ್ಮ ಸಹಾಯಕ್ಕಾಗಿ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಸ್ಪ್ಯಾಮ್ ಕರೆಗಳನ್ನು ಶಾಶ್ವತವಾಗಿ ನಿಲ್ಲಿಸಲು ನಿರ್ದಿಷ್ಟ ಸೇವೆಯನ್ನು ಹೊಂದಿದೆ. ಸ್ಪ್ಯಾಮ್ ಕರೆಗಳನ್ನು ತಡೆಗಟ್ಟುವಲ್ಲಿ ಜನರಿಗೆ ಸಹಾಯ ಮಾಡಲು TRAI ರಾಷ್ಟ್ರೀಯ ಗ್ರಾಹಕ ಪ್ರಾಶಸ್ತ್ಯ ನೋಂದಣಿ (NCPR) ಅನ್ನು ಪ್ರಾರಂಭಿಸಿದೆ. ಈ ಹಿಂದೆ ರಾಷ್ಟ್ರೀಯ ಡೋಂಟ್ ಕಾಲ್ ರಿಜಿಸ್ಟ್ರಿ (NDNC) ಯೋಜನೆಯು ಸ್ಪ್ಯಾಮ್ ಕರೆಗಳನ್ನು ತಡೆಯಲು ಸಹಾಯವಾಗಿತ್ತು ಆದರೆ ಆಯ್ದ ವಲಯಗಳಿಂದ ಯಾವುದೇ ಟೆಲಿಮಾರ್ಕೆಟಿಂಗ್ ಕರೆಗಳು ಅಥವಾ ಮೆಸೇಜ್ಗಳನ್ನ  ಪಡೆಯುವುದನ್ನು ನಿಲ್ಲಿಸಲು ಈಗ ನೀವು ಈ DND ಉಚಿತ ಸೇವೆಯನ್ನು ಪಡೆಯಬಹುದು. ಒಮ್ಮೆ ಸಕ್ರಿಯಗೊಳಿಸಿದ ನಂತರ DND ಪ್ರತ್ಯೇಕವಾಗಿ ಅನಧಿಕೃತ ಥರ್ಡ್ ಪಾರ್ಟಿ ಕಮರ್ಷಿಯಲ್ ಕರೆಗಳನ್ನು ತಡೆಯುತ್ತದೆ ಮತ್ತು ನಿಮ್ಮ ಬ್ಯಾಂಕ್‌ನಿಂದ ಬರುವ SMS ಅಲೆರ್ಟ್ಸ್ ಇತ್ಯಾದಿಗಳನ್ನು ನಿರ್ಬಂಧಿಸುತ್ತದೆ. 

ಫೋನ್ ನಂಬರ್ನೊಂದಿಗೆ DND ಆನ್ ಮಾಡುವುದು ಹೇಗೆ?

ಮೊದಲಿಗೆ ನೀವು ಈ ಉಚಿತ ಸೇವೆಯನ್ನು SMS ಅಪ್ಲಿಕೇಶನ್‌ನಲ್ಲಿ START ಎಂದು ಟೈಪ್ ಮಾಡುವ ಮೂಲಕ ಪ್ರಾರಂಭಿಸಿ. ಈ ಮೆಸೇಜ್ ಅನ್ನು ತಕ್ಷಣವೇ 1909 ಗೆ ಕಳುಹಿಸಬಹುದು. ನಿಮ್ಮ ಸೇವಾ ಪೂರೈಕೆದಾರರು ಕೋಡ್‌ನೊಂದಿಗೆ ಬ್ಯಾಂಕಿಂಗ್, ಹೋಟೆಲ್ ಮತ್ತು ಇತರವುಗಳನ್ನು ಒಳಗೊಂಡಂತೆ ವರ್ಗಗಳ ಪಟ್ಟಿಯನ್ನು ನೀವು ಕಳುಹಿಸುತ್ತಾರೆ. ನೀವು ನಿರ್ಬಂಧಿಸಲು ಬಯಸುವ ವರ್ಗಕ್ಕೆ ಕೋಡ್‌ನೊಂದಿಗೆ ಪ್ರತ್ಯುತ್ತರಿಸಿ. ರಿಯಲ್ ಎಸ್ಟೇಟ್, ಶಿಕ್ಷಣ, ಆರೋಗ್ಯ ಇತ್ಯಾದಿಗಳಂತಹ ವಿವಿಧ ವರ್ಗಗಳಿಂದ ಕರೆಗಳನ್ನು ನಿರ್ಬಂಧಿಸಲು ನೀವು ಈ ಕೆಳಗಿನ ಕೋಡ್‌ಗಳಿಂದ ಆಯ್ಕೆ ಮಾಡಬಹುದು.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo