ಹೋಳಿ ಹಬ್ಬದ ಸಂದರ್ಭದಲ್ಲಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಅದ್ಭುತ ಉಡುಗೊರೆಯನ್ನು ಘೋಷಿಸಿದೆ.
ಬಿಎಸ್‌ಎನ್ಎಲ್ ಈ 2399 ರೂಗಳ ರಿಚಾರ್ಜ್ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ನೀಡುತ್ತಿದೆ.
BSNL Holi Offer 2025 ಅಡಿಯಲ್ಲಿ 30 ದಿನಗಳ ಮಾನ್ಯತೆಯೊಂದಿಗೆ 60GB ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.
BSNL Holi Offer 2025: ಸರ್ಕಾರಿ ಸೌಮ್ಯದ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ (BSNL) ಈ ವರ್ಷದ ಹೋಳಿ ಹಬ್ಬದ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ಅದ್ಭುತ ಉಡುಗೊರೆಯನ್ನು ನೀಡಿದೆ. ಈ ಸಂದರ್ಭದಲ್ಲಿ ಕಂಪನಿಯು ತನ್ನ ಒಂದು ಯೋಜನೆಯ ಮಾನ್ಯತೆಯನ್ನು ಒಂದು ತಿಂಗಳು ವಿಸ್ತರಿಸಿದೆ ಅಥವಾ ಕಂಪನಿಯು ಯೋಜನೆಯಲ್ಲಿ 30 ದಿನಗಳ ಮಾನ್ಯತೆಯನ್ನು ಉಚಿತವಾಗಿ ನೀಡುತ್ತಿದೆ. ಅಲ್ಲದೆ ಹೆಚ್ಚುವರಿಯಾಗಿ 60GB ಡೇಟಾ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಿದೆ. ಹಾಗಾದ್ರೆ ಈ ಹೋಳಿ ಆಫರ್ ನೀಡುತ್ತಿರುವ ಪ್ಲಾನ್ ಯಾವುದು ಇದ್ರಾ ಬೆಲೆ ಎಷ್ಟು ಎಲ್ಲವನ್ನು ಇಲ್ಲಿದೆ.
ಬಿಎಸ್ಎನ್ಎಲ್ ರೂ. 2399 ರೂಗಳ ಪ್ಲಾನ್ (BSNL Holi Offer 2025 2025)
ಈ ಹೋಳಿ ಹಬ್ಬದ ಸಂದರ್ಭದಲ್ಲಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಟ್ವಿಟ್ಟರ್ ಮೂಲಕ ಈ ಅದ್ಭುತ ಉಡುಗೊರೆಯನ್ನು ಪ್ರಕಟಿಸಿದೆ. ಬಿಎಸ್‌ಎನ್ಎಲ್ ಈ 2399 ರೂಗಳ ರಿಚಾರ್ಜ್ ಯೋಜನೆಯಲ್ಲಿ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ನೀಡುತ್ತಿದೆ. ಈ BSNL ಯೋಜನೆಯಲ್ಲಿ ಗ್ರಾಹಕರು 425 ದಿನಗಳ ಮಾನ್ಯತೆಯನ್ನು ಪಡೆಯುತ್ತಾರೆ. ಅಂದರೆ ಒಮ್ಮೆ ರೀಚಾರ್ಜ್ ಮಾಡಿದರೆ ಸುಮಾರು 14 ತಿಂಗಳುಗಳ ಕಾಲ ನೀವು ಒತ್ತಡದಿಂದ ಮುಕ್ತರಾಗಿರುತ್ತೀರಿ. ಈ BSNL ಯೋಜನೆಯ ಬೆಲೆ 2399 ರೂಗಳ ಯೋಜನೆಯಲ್ಲಿ ಲಭ್ಯವಿರುವ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿಯಿರಿ.
More colors, more fun, and now more validity!
— BSNL India (@BSNLCorporate) March 3, 2025
Get unlimited calls, 2GB data per day, and 100 SMS per day for 425 days, not just 395! All for just ₹2399!
#BSNLIndia #HoliDhamaka #BSNLOffers pic.twitter.com/gZ7GfdnMOK
Also Read: ಇನ್ಫಿನಿಕ್ಸ್ನಿಂದ 3D Curved ಡಿಸ್ಪ್ಲೇ ಮತ್ತು 50MP ಕ್ಯಾಮೆರಾದ Infinix Note 50 Series ಬಿಡುಗಡೆ!
ಈ ಹೋಳಿ ಆಫರ್ ಯೋಜನೆಯ ಪ್ರಯೋಜನಗಳೇನು?
ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಬಿಎಸ್‌ಎನ್‌ಎಲ್‌ನ 2,399 ರೂಗಳ ಯೋಜನೆಯು ಈ ಹಿಂದೆ 395 ದಿನಗಳ ಮಾನ್ಯತೆ ಮತ್ತು ದಿನಕ್ಕೆ 2GB ಡೇಟಾ, ಅನಿಯಮಿತ ಕರೆಗಳನ್ನು ನೀಡುತ್ತಿತ್ತು. ಆದರೆ ಹೋಳಿ ಹಬ್ಬದ ಸಂದರ್ಭದಲ್ಲಿ BSNL 30 ದಿನಗಳ ಉಚಿತ ವ್ಯಾಲಿಡಿಟಿ, 2GB ದೈನಂದಿನ ಡೇಟಾ ಮತ್ತು ಅನಿಯಮಿತ ಕರೆಗಳ ಪ್ರಯೋಜನವನ್ನು ನೀಡುತ್ತಿದೆ. ಇದರರ್ಥ ಗ್ರಾಹಕರು ಈಗ 425 ದಿನಗಳ ಮಾನ್ಯತೆ ಮತ್ತು ಒಟ್ಟು 850GB ಡೇಟಾವನ್ನು ಪಡೆಯುತ್ತಾರೆ.
ಬಿಎನ್ಎನ್ಎಲ್ 2,399 ರೂಗಳ ರಿಚಾರ್ಜ್ ಯೋಜನೆಯು (BSNL Recharge) ದೀರ್ಘಾವಧಿಯ ಮಾನ್ಯತೆಯೊಂದಿಗೆ ಅನಿಯಮಿತ ಉಚಿತ ಕರೆಗಳನ್ನು ಸಹ ನೀಡುತ್ತದೆ. ಇದಲ್ಲದೆ ಪ್ರತಿದಿನ 100 ಉಚಿತ SMS ಗಳ ಪ್ರಯೋಜನವನ್ನು ಸಹ ನೀಡಲಾಗುತ್ತಿದೆ. ಈ ಯೋಜನೆಯ ವೆಚ್ಚ ದಿನಕ್ಕೆ ಸರಿಸುಮಾರು 5.6 ರೂಗಳಾಗಿದ್ದು ಈ ಎಲ್ಲಾ ಪ್ರಯೋಜನಗಳು 14 ತಿಂಗಳವರೆಗೆ ಲಭ್ಯವಿರುತ್ತವೆ. ಈ ಹೋಳಿ ಆಫರ್ ಎಷ್ಟು ಕಾಲ ಬಳಕೆದಾರರಿಗೆ ಮಾನ್ಯವಾಗಿರುತ್ತದೆ ಎಂಬುದರ ಕುರಿತು ಇನ್ನೂ ಯಾವುದೇ ಅಧಿಕೃತ ವಿವರಗಳಿಲ್ಲ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile