7,000mAh ಬ್ಯಾಟರಿ ಇರುವ Oppo K13 5G ಬೆಲೆಯಲ್ಲಿ ಭಾರೀ ಡಿಸ್ಕೌಂಟ್‌!

HIGHLIGHTS

ಫ್ಲಿಪ್‌ಕಾರ್ಟ್‌ ತಾಣದಲ್ಲಿ Oppo K13 5G ಮೊಬೈಲ್‌ಗೆ ಸದ್ಯ ಭಾರೀ ರಿಯಾಯಿತಿ

ಒಪ್ಪೋದ ಈ ಫೋನ್‌ ಡಿಸ್‌ಪ್ಲೇಯು 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ

Oppo K13 5G ಮೊಬೈಲ್‌ 16MP ಸೆನ್ಸಾರ್ ಕ್ಯಾಮೆರಾ ಸೌಲಭ್ಯ ಹೊಂದಿದೆ

7,000mAh ಬ್ಯಾಟರಿ ಇರುವ Oppo K13 5G ಬೆಲೆಯಲ್ಲಿ ಭಾರೀ ಡಿಸ್ಕೌಂಟ್‌!

Oppo ಕಂಪನಿಯ ಸ್ಟೈಲಿಶ್‌ ಲುಕ್‌ನಲ್ಲಿರುವ Oppo K13 5G ಮೊಬೈಲ್‌ ಇದೀಗ ಆಕರ್ಷಕ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಜನಪ್ರಿಯ ಇ ಕಾಮರ್ಸ್‌ ತಾಣ Flipkart ವೆಬ್‌ಸೈಟ್‌ ನಲ್ಲಿ Oppo K13 5G ಸ್ಮಾರ್ಟ್‌ಫೋನ್‌ ಭರ್ಜರಿ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಆಯ್ದ ಬ್ಯಾಂಕ್‌ ಕೊಡುಗೆಗಳ ಮೂಲಕ ಆಸಕ್ತ ಗ್ರಾಹಕರು ಹೆಚ್ಚುವರಿ ರಿಯಾಯಿತಿ ಸಹ ಪಡೆಯಲು ಅವಕಾಶ ಇದೆ. ಒಪ್ಪೋ ಕಂಪನಿಯ ಈ ಮೊಬೈಲ್‌ Snapdragon 6 Gen 4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು ಹಾಗೆಯೇ 50MP ಸೌಲಭ್ಯದ ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಇನ್ನುಳಿದಂತೆ Flipkart ಇ ಕಾಮರ್ಸ್‌ ವೆಬ್‌ಸೈಟ್‌ನಲ್ಲಿ Oppo K13 5G ಮೊಬೈಲ್‌ಗೆ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Google Pixel 10a: ನಾಳೆ Pre-order ಪ್ರಾರಂಭ; ಗಮನ ಸೆಳೆವ ಡಿಸೈನ್‌ ಹಾಗೂ ಆಕರ್ಷಕ ಕಲರ್‌ ಆಯ್ಕೆ

Oppo K13 5G ಮೊಬೈಲ್‌ ಬೆಲೆಯಲ್ಲಿ ಭರ್ಜರಿ ಇಳಿಕೆ

ಒಪ್ಪೋ ಸಂಸ್ಥೆಯ Oppo K13 5G ಮೊಬೈಲ್‌ ಪ್ರಸ್ತುತ Flipkart ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಭಾರೀ ಡಿಸ್ಕೌಂಟ್‌ ಪಡೆದಿದೆ. ಈ ಮೊಬೈಲ್‌ 8 GB RAM + 128 GB ವೇರಿಯಂಟ್‌ 22,999 ರೂಗಳ ಬೆಲೆಯನ್ನು ಹೊಂದಿದ್ದು, ಆದರೆ ಗ್ರಾಹಕರು Flipkart Axis ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ 3050 ರೂಗಳ ಡಿಸ್ಕೌಂಟ್‌ ಸಿಗಲಿದೆ. ಹೀಗಾಗಿ ಈ ಫೋನ್‌ ಅನ್ನು ಗ್ರಾಹಕರು 19,949 ರೂಗಳಿಗೆ ಖರೀದಿ ಮಾಡಬಹುದು. ಅಂದಹಾಗೆ ಈ ಫೋನ್‌ Icy Purple ಹಾಗೂ Prism Black ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

Oppo K13

Oppo K13 5G ಮೊಬೈಲ್‌ನ ಪ್ರಮುಖ ಫೀಚರ್ಸ್‌

Oppo K13 5G ಮೊಬೈಲ್‌ ಡಿಸ್‌ಪ್ಲೇಯು 6.67 ಇಂಚಿನ AMOLED ಮಾದರಿ ಡಿಸ್‌ಪ್ಲೇ ಹೊಂದಿದೆ. ಹಾಗೆಯೇ 120Hz ರಿಫ್ರೆಶ್‌ ರೇಟ್‌ ಹೊಂದಿದ್ದು ಜೊತೆಗೆ 1200 nits ಬ್ರೈಟ್ನೆಸ್‌ ಸೌಲಭ್ಯ ಪಡೆದಿದೆ. ಇನ್ನು ಈ ಮೊಬೈಲ್‌ Snapdragon 6 Gen 4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಈ ಫೋನ್‌ 8GB RAM + 128GB ಮತ್ತು 8GB RAM + 256GB ವೇರಿಯಂಟ್‌ ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ ಇದು ವೆಟ್ ಹ್ಯಾಂಡ್ ಟಚ್ ಮತ್ತು ಗ್ಲೋವ್ ಮೋಡ್ ಆಯ್ಕೆ ಪಡೆದಿದೆ.

ಅಲ್ಲದೇ Oppo K13 5G ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರ ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್‌ ಅನ್ನು ಒಳಗೊಂಡಿದ್ದು, ಹಾಗೆಯೇ 2MP ಸೆನ್ಸಾರ್‌ ಸೆಕೆಂಡರಿ ಕ್ಯಾಮೆರಾ ರಚನೆ ಹೊಂದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ ಈ ಮೊಬೈಲ್‌ 16MP ಸೆನ್ಸಾರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇನ್ನು ಈ ಫೋನ್‌ ಬರೋಬ್ಬರಿ 7,000mAh ಬ್ಯಾಟರಿ ಜೊತೆಗೆ 80W ಸೂಪರ್‌ವೂಕ್‌ ಫಾಸ್ಟ್‌ ಚಾರ್ಜಿಂಗ್‌ ಬೆಂಬಲ ಪಡೆದಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo