BSNL 1499 Recharge Plan: ನೀವು ಬಿಎಸ್ಎನ್ಎಲ್ ಬಳಕೆದಾರರಾಗಿದ್ದಾರೆ ಒಮ್ಮೆ ಈ ವಾರ್ಷಿಕ ಯೋಜನೆಯ ಬಗ್ಗೆ ತಿಳಿಯಲೇಬೇಕು. ಯಾಕೆಂದರೆ ಈ ಬೆಲೆಗೆ ಬೇರೆ ಯಾವುದೇ Jio, Airtel ಅಥವಾ Vi ಕಂಪನಿಗಳ ಯೋಜನೆಗಳನ್ನು ಕಾಣಲು ಸಾಧ್ಯವಿಲ್ಲ. ಪ್ರಸ್ತುತ ಜಿಯೋ ಮತ್ತು ಏರ್ಟೆಲ್ ವಾರ್ಷಿಕ ಯೋಜನೆ 3500 ರೂಗಳಿಂದ ಶುರುವಾದರೆ ಬಿಎಸ್ಎನ್ಎಲ್ ಏಕಮಾತ್ರ ಕಂಪನಿ ಕೇವಲ 1499 ರೂಗಳಿಗೆ ಬರೋಬ್ಬರಿ 336 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್ಲಿಮಿಟೆಡ್ ಕರೆ ಮತ್ತು ಡೇಟಾವನ್ನು ನೀಡುತ್ತಿದೆ. BSNL ಭಾರತದಲ್ಲಿ ನೀಡಲಾಗುವ ಅತ್ಯುತ್ತಮ ವ್ಯಾಲಿಡಿಟಿ ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದಾಗಿದೆ. ಸಹಜವಾಗಿ ಇದು BSNL ನೆಟ್‌ವರ್ಕ್ ಸೇವೆಗಳು ಖಾಸಗಿ ಟೆಲಿಕಾಂಗಳ ಸೇವೆಯೊಂದಿಗೆ ಅಷ್ಟಾಗಿ ಸಮನಾಗಿರುವುದಿಲ್ಲ.
ಮೊದಲಿಗೆ ಈ ಜಬರ್ದಸ್ತ್ ರಿಚಾರ್ಜ್ ಯೋಜನೆಯ ಬಗ್ಗೆ ಮಾತನಾಡುವುದಾದರೆ ಇದರ ಬೆಲೆ ಕೇವಲ 1499 ರೂಗಳಾಗಿದ್ದು ಇದರಲ್ಲಿ ನಿಮಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳನ್ನು ಬಳಸಲು ಅವಕಾಶವಿದೆ. ಅಲ್ಲದೆ ಇದರಲ್ಲಿ 24GB ಡೇಟಾವನ್ನು ಸಹ ಕಂಪನಿ ನೀಡುತ್ತಿದ್ದು ಬೆಸ್ಟ್ ರಿಚಾರ್ಜ್ ಯೋಜನೆಯ ವಿಭಾಗದಲ್ಲಿ ಉತ್ತಮವಾಗಿದೆ. ಒಂದು ವೇಳೆ ಈ ಯೋಜನೆಯಲ್ಲಿನ FUP ಡೇಟಾ ಖಾಲಿಯಾದರೆ ಹೆಚ್ಚುವರಿಯಾಗಿ ನೀವು ಡೇಟಾ ವೋಚರ್ಗಳ ಮೂಲಕ ರೀಚಾರ್ಜ್ ಮಾಡಿಕೊಂಡು ಬಳಸಬಹುದು.
BSNL 1499 Recharge Plan
ಈ ಯೋಜನೆ ಅತಿ ಹೆಚ್ಚು ಕರೆಗಳನ್ನು ಬಳಸುವ ಮತ್ತು ಡೇಟಾದ ಹೆಚ್ಚಿನ ಅಗತ್ಯ ಯಾರಿಗೆ ಇಲ್ಲವೋ ಅಂಥ ಗ್ರಾಹಕರಿಗೆ ಇದೊಂದು ಅದ್ಬುತ ಆಯ್ಕೆಯಾಗಲಿದೆ. ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ನಿಮಗೆ ಪ್ರತಿದಿನ 100 ಉಚಿತ SMS ಸಹ ಪಡೆಯಬಹುದು. BSNL ಭಾರತೀಯ ದೂರಸಂಪರ್ಕ ಆಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಗ್ರಾಹಕರಿಗೆ ಅತ್ಯಂತ ಕೈಗೆಟುಕುವ ದರಗಳನ್ನು ನೀಡುತ್ತಿದೆ.
BSNL ವೇಗವಾಗಿ ಸುಧಾರಿಸುತ್ತಿರುವ ನೆಟ್ವರ್ಕ್
ಬಿಎಸ್ಎನ್ಎಲ್ ತನ್ನ ಸೇವೆಯನ್ನು ಇನ್ನಷ್ಟು ಹೆಚ್ಚಿಸಲು BSNL ತನ್ನ 4G ನೆಟ್‌ವರ್ಕ್ ಅನ್ನು 60,000 ಹೊಸ ಟವರ್‌ಗಳೊಂದಿಗೆ ವಿಸ್ತರಿಸಿದೆ ಮತ್ತು ಈ ವರ್ಷ ಹೆಚ್ಚುವರಿ 100,000 ಟವರ್‌ಗಳನ್ನು ಪ್ರಾರಂಭಿಸಲು ಯೋಜಿಸಿದ್ದು 9000 ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕವನ್ನು ವಿಸ್ತರಿಸುತ್ತದೆ. ಅಲ್ಲದೆ BSNL ನೆಟ್ವರ್ಕ್ ಅನ್ನು ಸುಧಾರಿಸುವ ಕೆಲಸಕ್ಕಾಗಿ TATA TCS ಅನ್ನು ಆಯ್ದು ಈಗಾಗಲೇ 15,000 ಕೋಟಿಯ ಟೆಂಡರ್ ಸಹ ನೀಡಿದೆ. ಅಂದ್ರೆ ನೆಟ್ವರ್ಕ್ ನಿಜಕ್ಕೂ ಉತ್ತಮವಾಗಲಿದೆ.
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile