ಅತೀ ಶೀಘ್ರದಲ್ಲೇ Vivo X300 Ultra ಬಿಡುಗಡೆ; ಕುತೂಹಲ ಹೆಚ್ಚಿಸಿದ ನಿರೀಕ್ಷಿತ ಫೀಚರ್ಸ್‌

HIGHLIGHTS

Vivo X300 Ultra ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಒಳಗೊಂಡಿರಲಿದೆ

Vivo X300 Ultra ಮೊಬೈಲ್ ಮುಂದಿನ ತಿಂಗಳು ಮಾರುಕಟ್ಟೆಗೆ ಬರುವ ಸಾಧ್ಯತೆ

Vivo X300 Ultra ಫೋನ್‌ 7000mAh ಬ್ಯಾಟರಿ ಪಡೆದಿರುವ ಸಾಧ್ಯತೆ ಇದೆ

ಅತೀ ಶೀಘ್ರದಲ್ಲೇ Vivo X300 Ultra ಬಿಡುಗಡೆ; ಕುತೂಹಲ ಹೆಚ್ಚಿಸಿದ ನಿರೀಕ್ಷಿತ ಫೀಚರ್ಸ್‌

Vivo X300 Ultra: ಚೀನಾ ಮೂಲದ Vivo ಮೊಬೈಲ್‌ ಬ್ರ್ಯಾಂಡ್‌ ಭಾರತದಲ್ಲಿ ಈಗಾಗಲೇ ಹಲವು ಸ್ಮಾರ್ಟ್‌ಫೋನ್‌ ಸರಣಿಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ Vivo ಕಂಪನಿಯು ತನ್ನ ಜನಪ್ರಿಯ X ಸರಣಿಯಲ್ಲಿ ಹೊಸದಾಗಿ Vivo X300 Ultra ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಲೀಕ್‌ ಮಾಹಿತಿಗಳ ಪ್ರಕಾರ Vivo X300 Ultra ಫೋನ್ ಮುಂದಿನ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇನ್ನು ವಿವೋದ ಮುಂಬರುವ ಈ ಹೊಸ ಫೋನ್‌ ಡಿಸ್‌ಪ್ಲೇ, ಕ್ಯಾಮೆರಾ, ಬ್ಯಾಟರಿ ಹಾಗೂ ಪ್ರೊಸೆಸರ್‌ ಫೀಚರ್ಸ್‌ಗಳಲ್ಲಿ ಹಿಂದಿನ ಮಾಡೆಲ್‌ಗಿಂತ ಹೆಚ್ಚಿನ ಅಪ್‌ಗ್ರೇಡ್‌ ಪಡೆದಿರುವ ನಿರೀಕ್ಷೆಗಳನ್ನು ಮೂಡಿಸಿದೆ. ಇನ್ನುಳಿದಂತೆ Vivo X300 Ultra ಮೊಬೈಲ್‌ನ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : Jio ಬಳಕೆದಾರರೇ ಅಧಿಕ ಡೇಟಾ ಬೇಕಿದ್ದರೆ ಈ ರೀಚಾರ್ಜ್‌ ಪ್ಲಾನ್‌ಗಳನ್ನು ಒಮ್ಮೆ ಗಮನಿಸಿ!

Vivo X300 Ultra ಮೊಬೈಲ್‌ನ ನಿರೀಕ್ಷಿತ ಫೀಚರ್ಸ್‌

ವಿವೋ ಕಂಪನಿಯು ಪರಿಚಯಿಸಲಿರುವ Vivo X300 Ultra ಫೋನ್‌ ಬಗ್ಗೆ ಮಾರುಕಟ್ಟೆಯಲ್ಲಿ ಕುತೂಹಲ ಮೂಡಿದೆ. ಇನ್ನು ಲೀಕ್ ಮಾಹಿತಿಗಳ ಪ್ರಕಾರ, Vivo X300 Ultra ಕ್ವಾಲ್ಕಾಮ್ Snapdragon 8 Elite Gen 5 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನ ಒಳಗೊಂಡಿರುವ ನಿರೀಕ್ಷೆಯಿದೆ. ಇನ್ನು ಈ ಮೊಬೈಲ್‌ ಡಿಸ್ಪ್ಲೇ ಬಗ್ಗೆ ನೋಡುವುದಾದರೇ ಇದು 6.82 ಇಂಚಿನ 2K LTPO OLED ಸ್ಕ್ರೀನ್‌ ಅನ್ನು ಪಡೆದಿರುವ ಸಾಧ್ಯತೆಗಳು ಇವೆ. ಹಾಗೆಯೇ ಈ ಫೋನ್‌ 7,000mAh ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್ ಪಡೆದಿರುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬ್ಯಾಟರಿ ಫೀಚರ್‌ ಇದರ ಪ್ರಮುಖ ಹೈಲೈಟ್‌ ಅಂಶಗಳಲ್ಲಿ ಒಂದಾಗಲಿದೆ ಎನ್ನಲಾಗಿದೆ. ಬಿಗ್‌ ಬ್ಯಾಟರಿಗೆ ಪೂರಕವಾಗಿ 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲ ನೀಡಬಹುದು ಎನ್ನಲಾಗಿದೆ.

Vivo X300 Ultra

Vivo X300 Ultra ಫೋನ್‌ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಜೊತೆಗೆ ಲಗ್ಗೆ ಇಡುವ ನಿರೀಕ್ಷೆಗಳು ಇವೆ. ಇನ್ನು ಇದು 200MP ಪ್ರಾಥಮಿಕ ಸೆನ್ಸಾರ್‌, 200MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ, 50MP ಅಲ್ಟ್ರಾ ವೈಡ್ ಲೆನ್ಸ್ ಮತ್ತು 5MP ಸೆನ್ಸಾರ್ ಅನ್ನು ಒಳಗೊಂಡಿರಲಿದೆ ಎಂದು ವದಂತಿಗಳಿವೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 50MP ಕ್ಯಾಮೆರಾ ಒದಗಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಹಾಗೆಯೇ ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ ಐಪಿ 69 ರೇಟಿಂಗ್‌ನೊಂದಿಗೆ ಬರಬಹುದು ಮತ್ತು ಯುಎಸ್‌ಬಿ 3.2 ಟೈಪ್-ಸಿ ಪೋರ್ಟ್ ಅನ್ನು ಸಹ ಹೊಂದಿದೆ ಎಂದು ಹೇಳಲಾಗಿದೆ. ಮುಂಬರುವ ಹೊಸ Vivo X300 Ultra ಫೋನ್‌ ಬಗ್ಗೆ ವಿವೋ ಕಂಪನಿಯು ಅಧಿಕೃತವಾಗಿ ಯಾವುದೇ ಹೆಚ್ಚಿನ ಮಾಹಿತಿ ಘೋಷಿಸಿಲ್ಲ. ಒಂದು ಅತ್ಯುತ್ತಮ ಪ್ರಿಮಿಯಂ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆ ಆಗಬಹುದು ಎಂದು ಹೇಳಲಾಗುತ್ತಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo