ಶೀಘ್ರದಲ್ಲೇ Lava Yuva Star 3 ಮೊಬೈಲ್‌ ಲಾಂಚ್‌! ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಬದಲಾವಣೆ ಸಾಧ್ಯತೆ

HIGHLIGHTS

Lava Yuva Star 3 ಫೋನ್‌ ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ

Lava Yuva Star 3 ಮೊಬೈಲ್ ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಬದಲಾವಣೆಯ ನಿರೀಕ್ಷೆ ಇದೆ

Lava Yuva Star 3 ಫೋನ್‌ ಹೆಚ್ಚಿನ ಕಲರ್‌ ಆಯ್ಕೆಗಳಲ್ಲಿ ಬರುವ ಸಾಧ್ಯತೆಗಳು ಇವೆ

ಶೀಘ್ರದಲ್ಲೇ Lava Yuva Star 3 ಮೊಬೈಲ್‌ ಲಾಂಚ್‌! ಕ್ಯಾಮೆರಾ ಮಾಡ್ಯೂಲ್‌ನಲ್ಲಿ ಬದಲಾವಣೆ ಸಾಧ್ಯತೆ

Lava ಕಂಪನಿಯು ನೂತನವಾಗಿ Lava Yuva Star 3 ಸ್ಮಾರ್ಟ್‌ಫೋನ್‌ ಬಿಡುಗಡೆಗೆ ತಯಾರಿ ನಡೆಸಿದೆ. Lava Yuva Star 2 ಫೋನಿನ ಮುಂದುವರಿದ ಭಾಗವಾಗಿರುವ ಈ ಸ್ಮಾರ್ಟ್‌ಫೋನ್‌ ಬಜೆಟ್ ಶ್ರೇಣಿಯ ಮೊಬೈಲ್‌ ಆಗಿರಲಿದೆ. ಲೀಕ್‌ ಫೋಟೋ ಮಾಹಿತಿ ಪ್ರಕಾರ ಈ ಮುಂಬರುವ ಫೋನ್‌ ರಿಫ್ರೆಶ್ ಮಾಡಿದ ಕ್ಯಾಮೆರಾ ಮಾಡ್ಯೂಲ್ ಮತ್ತು ಕ್ಲೀನ್ ಮ್ಯಾಟ್ ಫಿನಿಶ್ ಹೊಂದಿರುವ ಸುಳಿವು ನೀಡಿದೆ. ಹಿಂಭಾಗದಲ್ಲಿ ಡ್ಯುಯಲ್‌ ಕ್ಯಾಮೆರಾ ರಚನೆ ಜೊತೆಗೆ ಭಿನ್ನ ಕಲರ್‌ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳು ಇವೆ. ವರದಿಯ ಪ್ರಕಾರ ಈ ಮೊಬೈಲ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಹಾಗಾದರೆ Lava Yuva Star 3 ಫೋನಿನ ಲಾಂಚ್‌ ದಿನಾಂಕ ಹಾಗೂ ನಿರೀಕ್ಷಿತ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ಫೆಬ್ರವರಿ 10 ರಂದು ಮಾರುಕಟ್ಟೆಗೆ ಬರ್ತಿದೆ OPPO K14x 5G ಮೊಬೈಲ್‌! ವಾವ್‌ ಎನಿಸುವ ಫೀಚರ್ಸ್‌

Lava Yuva Star 3 ಬಿಡುಗಡೆ ದಿನಾಂಕ ಹಾಗೂ ನಿರೀಕ್ಷಿತ ಬೆಲೆ

ಲಾವಾ ಮೊಬೈಲ್‌ ಸಂಸ್ಥೆಯು Lava Yuva Star 3 ಫೋನ್‌ ಅನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಲು ಸಕಲ ತಯಾರಿ ಪ್ರಾರಂಭಿಸಿದೆ. ಲೀಕ್ ವರದಿಗಳ ಪ್ರಕಾರ ಈ ಮೊಬೈಲ್‌ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್‌ ಆಗಲಿದೆ ಎಂದಿವೆ. ಆದರೆ ಕಂಪನಿಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಈ ಮೊಬೈಲ್‌ ಬಜೆಟ್‌ ಪ್ರೈಸ್‌ಟ್ಯಾಗ್‌ ರೇಂಜ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುವ ನಿರೀಕ್ಷೆಗಳು ಇವೆ. ಅಲ್ಲದೇ ಈ ಫೋನ್‌ ಭಿನ್ನ ಕಲರ್‌ ವೇರಿಯಂಟ್‌ ಆಯ್ಕೆಗಳಲ್ಲಿ ಪ್ರವೇಶಿಸುವ ವದಂತಿಗಳಿವೆ. ಅಂದಹಾಗೆ ಲಾವಾ ಯುವ ಸ್ಟಾರ್ 2 ಫೋನ್‌ ರೇಡಿಯಂಟ್ ಬ್ಲಾಕ್ ಮತ್ತು ಸ್ಪಾರ್ಕ್ಲಿಂಗ್ ಐವರಿ ಕಲರ್‌ ಆಯ್ಕೆಯೊಂದಿಗೆ ಕಳೆದ ವರ್ಷ ಮೇ ತಿಂಗಳಲ್ಲಿ ಲಾಂಚ್‌ ಆಗಿತ್ತು.

Lava Yuva Star 3 ಮೊಬೈಲ್‌ನ ನಿರೀಕ್ಷಿತ ಫೀಚರ್ಸ್‌

ಲಾವಾ ಯುವ ಸ್ಟಾರ್ 2 ಉತ್ತರಾಧಿಕಾರಿ ಆಗಲಿರುವ Lava Yuva Star 3 ಮೊಬೈಲ್‌ ಕೆಲವು ಅಪ್‌ಗ್ರೇಡ್‌ ಫೀಚರ್ಸ್‌ಗಳೊಂದಿಗೆ ಎಂಟ್ರಿ ಕೊಡುವ ಸಾಧ್ಯತೆಗಳು ಇವೆ. ಈ ಫೋನ್‌ ಬಾಗಿದ ಅಂಚುಗಳೊಂದಿಗೆ ಮ್ಯಾಟ್ ಬ್ಲ್ಯಾಕ್‌ ಫಿನಿಶ್‌ ಹೊಂದಿರುವಂತೆ ಕಾಣುತ್ತದೆ. ಹಾಗೆಯೇ ಹಿಂಭಾಗದಲ್ಲಿ ಆಯತಾಕಾರದ ಕ್ಯಾಮೆರಾ ಮಾಡ್ಯೂಲ್ ರಚನೆ ಕಂಡುಬರುತ್ತದೆ ಹಾಗೂ ಇದರಲ್ಲಿ ಲಂಬವಾಗಿ ಸೆಟ್‌ ಮಾಡಲಾದ ಎರಡು ವೃತ್ತಾಕಾರದ ಕ್ಯಾಮೆರಾ ರಿಂಗ್‌ಗಳು ಸೇರಿವೆ. ಹಾಗೆಯೇ ಮೇಲಿನ ಕ್ಯಾಮೆರಾ ಲೆನ್ಸ್‌ನ ಬಲಭಾಗದಲ್ಲಿ LED ಫ್ಲ್ಯಾಶ್‌ ಅನ್ನು ಇರಿಸಲಾಗಿದೆ.

ಇನ್ನು ಈ ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ಹೊಂದಿರಲಿದ್ದು 13 ಮೆಗಾ ಪಿಕ್ಸೆಲ್ AI ಕ್ಯಾಮೆರಾ ರಚನೆ ಪಡೆದಿರಬಹುದು ಎಂದು ಸೂಚಿಸುತ್ತದೆ. ಹಾಗೆಯೇ LED ಫ್ಲ್ಯಾಶ್‌ ಲೈಟ್‌ ಕೆಳಗಡೆ ಸಣ್ಣ ವೃತ್ತಾಕಾರದ ಟಚ್‌ ಸೆನ್ಸಾರ್ ನೀಡಬಹುದು ಎನಿಸುತ್ತದೆ. ಅಲ್ಲದೇ ಲೀಕ್ ಫೋಟೋ ಗಮನಿಸಿದಾಗ ಫೋನಿನ ಬಲ ಭಾಗದ ಅಂಚಿನಲ್ಲಿ ವಾಲ್ಯೂಮ್ ಬಟನ್ ಮತ್ತು ಪವರ್ ಬಟನ್ ಅನ್ನು ಸಹ ಒದಗಿಸಿರುವಂತೆ ಕಾಣುತ್ತದೆ. ಹಾಗೆಯೇ ಲೀಕ್ ಮಾಹಿತಿಗಳ ಪ್ರಕಾರ Lava Yuva Star 3 ಫೋನ್‌ ಬ್ಲ್ಯಾಕ್‌ ಕಲರ್‌ ಆಯ್ಕೆ ಹೊರತುಪಡಿಸಿ ಹೆಚ್ಚಿನ ಕಲರ್‌ ಆಯ್ಕೆಗಳಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿ ಇದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile

Digit.in
Logo
Digit.in
Logo