ಫೆಬ್ರವರಿ 9 ರಂದು Samsung Galaxy F70e ಮೊಬೈಲ್ ಬಿಡುಗಡೆ! ಬೆಲೆ ಮತ್ತು ಫೀಚರ್ಸ್ ನೋಡಿ
Samsung Galaxy F70e ಫೋನ್ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿರಲಿದೆ
Samsung Galaxy F70e ಮೊಬೈಲ್ ಫೆ 9 ರಂದು ಮಾರುಕಟ್ಟೆಗೆ ಬರುವ ಸಾಧ್ಯತೆ
Samsung Galaxy F70e ಫೋನ್ 6000mAh ಬ್ಯಾಟರಿ ಪಡೆದಿರುವ ಸಾಧ್ಯತೆ ಇವೆ
Samsung ಕಂಪನಿಯು ತನ್ನ F ಲೈನ್‌ಅಪ್‌ನಲ್ಲಿ ನೂತನವಾಗಿ Samsung Galaxy F70e ಫೋನ್ ಅನ್ನು ಬಿಡುಗಡೆ ಮಾಡಲಿದೆ. ಈ ಮೊಬೈಲ್ ಇನ್ನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದು, ಈ ಬಗ್ಗೆ ಫ್ಲಿಪ್‌ಕಾರ್ಟ್‌ನಲ್ಲಿ ಮೈಕ್ರೋ ಪೇಜ್ ಸಹ ತೆರೆಯಲಾಗಿದೆ. ಬಿಡುಗಡೆಗೂ ಮುನ್ನವೇ ಈ ಫೋನಿನ ಫೀಚರ್ಸ್ ಗ್ರಾಹಕರಲ್ಲಿ ಕುತೂಹಲ ಹೆಚ್ಚಿಸಿವೆ. ಅಂದಹಾಗೆ ಈ ಮೊಬೈಲ್ MediaTek Dimensity 6300 ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿರುವುದು ಬಹುತೇಕ ಪಕ್ಕಾ ಎನ್ನಲಾಗಿದೆ. ಅಲ್ಲದೇ 50MP ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಹಾಗಾದರೆ Samsung Galaxy F70e ಲಾಂಚ್ ಡೇಟಾ ಹಾಗೂ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.
SurveyAlso Read : Samsung Galaxy A35 5G ಖರೀದಿಸಲು ಇದುವೇ ಬೆಸ್ಟ್ ಟೈಮ್! ಸಿಗುತ್ತೆ 14000 ರೂಗಳ ಡಿಸ್ಕೌಂಟ್
Samsung Galaxy F70e: ಲಾಂಚ್ ದಿನಾಂಕ ಮತ್ತು ನಿರೀಕ್ಷಿತ ಬೆಲೆ
ಸ್ಯಾಮ್‌ಸಂಗ್ ಸಂಸ್ಥೆಯ ನೂತನ Samsung Galaxy F70 ಸರಣಿಯಲ್ಲಿ Samsung Galaxy F70e ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಫೋನ್ ಇದೇ ಫೆಬ್ರವರಿ 9 ರಂದು ಅಧಿಕೃತವಾಗಿ ಬಿಡುಗಡೆ ಆಗಲಿದೆ. ಈ ಕುರಿತಾಗಿ Flipkart ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಮೈಕ್ರೋ ಪೇಜ್ ತೆರೆಯಲಾಗಿದೆ. ಇದರೊಂದು ಬಜೆಟ್ ರೇಂಜ್‌ನ ಮೊಬೈಲ್ ಆಗಿರಲಿದ್ದು ಇದರ ಬೆಲೆ 10,000 ರಿಂದ 15,000 ರೂಗಳ ಆಸುಪಾಸಿನಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಕಂಪನಿಯು ಈ ಕುರಿತು ಇನ್ನು ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ. ಇನ್ನು ಈ ಮೊಬೈಲ್ ಲೈಮ್‌ಲೈಟ್ ಗ್ರೀನ್ ಹಾಗೂ ಸ್ಪಾಟ್‌ಲೈಟ್ ಬ್ಲೂ ಕಲರ್ ಆಯ್ಕೆ ಪಡೆದಿರಲಿದೆ.

Samsung Galaxy F70e ನಿರೀಕ್ಷಿತ ಫೀಚರ್ಸ್
ಲೀಕ್ ಮಾಹಿತಿ ಪ್ರಕಾರ Samsung Galaxy F70e ಮೊಬೈಲ್ 120Hz ರಿಫ್ರೆಶ್ ರೇಟ್ ಮತ್ತು ವಾಟರ್‌ಡ್ರಾಪ್ ನಾಚ್ ಹೊಂದಿರುವ 6.7 ಇಂಚಿನ HD+ ಡಿಸ್‌ಪ್ಲೇ ಹೊಂದಿರಲಿದೆ. ಈ ಫೋನ್ Mediatek Dimensity 6300 ಪ್ರೊಸೆಸರ್ ಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ Android 16 ಓಎಸ್ ಸಪೋರ್ಟ್ ಸಹ ಪಡೆದಿರಲಿದೆ. ಅಲ್ಲದೇ ಇದು 6GB RAM ಮತ್ತು 128GB ಆನ್‌ಬೋರ್ಡ್ ಸ್ಟೋರೇಜ್ ಆಯ್ಕೆ ಒಳಗೊಂಡಿರಲಿದೆ. ಇದರೊಂದಿಗೆ 6,000mAh ಬ್ಯಾಟರಿ ಜೊತೆಗೆ 25W ಫಾಸ್ಟ್ ಸಪೋರ್ಟ್ ಕೂಡಾ ಪಡೆದಿರಲಿದೆ.
ಹಾಗೆಯೇ Samsung Galaxy F70e ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಒಳಗೊಂಡಿರಲಿದೆ. ಕ್ರಮವಾಗಿ 50MP ಪ್ರಾಥಮಿಕ ಕ್ಯಾಮೆರಾವು ಸೆನ್ಸಾರ್ ಹಾಗೂ 2MP ಡೆಪ್ತ್ ಕ್ಯಾಮೆರಾ ಸೆನ್ಸಾರ್ ಪಡೆದಿರಲಿದೆ. ಇನ್ನು ಮುಂಭಾಗದಲ್ಲಿ ಸೆಲ್ಫಿಗಾಗಿ 8MP ಕ್ಯಾಮೆರಾ ರಚನೆಯನ್ನು ಪಡೆದುಕೊಂಡಿರುವುದು ಬಹುತೇಕ ನಿಕ್ಕಿ ಎನ್ನಲಾಗಿದೆ. ಅಲ್ಲದೇ IP54 ಧೂಳು ಸಂರಕ್ಷಿತ ಮತ್ತು ಜಲ ನಿರೋಧಕ ಸೌಲಭ್ಯ ಸಹ ಪಡೆದಿರಲಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile