Vivo Y200e 5G ಸದ್ದಿಲ್ಲದೇ ಬಿಡುಗಡೆ! 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿ 5G ಸ್ಮಾರ್ಟ್ಫೋನ್ ಬೆಲೆ ಎಷ್ಟು?

Vivo Y200e 5G ಸದ್ದಿಲ್ಲದೇ ಬಿಡುಗಡೆ! 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿ 5G ಸ್ಮಾರ್ಟ್ಫೋನ್ ಬೆಲೆ ಎಷ್ಟು?
HIGHLIGHTS

Vivo Y200e 5G ಸ್ಮಾರ್ಟ್ಫೋನ್ 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ ಬಿಡುಗಡೆಗೊಳಿಸಿದೆ.

Vivo Y200e 5G ಸ್ಮಾರ್ಟ್ಫೋನ್ Qualcomm Snapdragon 4 Gen 2 ಚಿಪ್‌ಸೆಟ್ ಅನ್ನು ಹೊಂದಿದೆ.

Vivo Y200e 5G ಸ್ಮಾರ್ಟ್ಫೋನ್ ಸುಮಾರು 19,999 ರೂಗಳ ಆರಂಭಿಕ ಬೆಲೆಗೆ ಲಭ್ಯವಿವಾಗಲಿದೆ.

Vivo Y200e 5G Launch in India 2024: ಕ್ಯಾಮೆರಾ ವಲಯದಲ್ಲಿ ಹೆಚ್ಚು ಜನಪ್ರಿಯವಾಗಿರುವ ವಿವೋ (Vivo) ಭಾರತದಲ್ಲಿ ಸದ್ದಿಲ್ಲದೇ ತನ್ನ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು 50MP ಕ್ಯಾಮೆರಾ ಮತ್ತು 5000mAh ಬ್ಯಾಟರಿಯೊಂದಿಗೆ Vivo Y200e 5G ನೆನ್ನೆ ಅಂದ್ರೆ 22ನೇ ಫೆಬ್ರವರಿ 2024 ಬಿಡುಗಡೆಗೊಳಿಸಿದೆ. ವಿವೋ ಭಾರತದಲ್ಲಿ ತನ್ನ ಹೊಸ Y ಸೀರೀಸ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ವಿವೋ ಹೊಸ ಫೋನ್ Qualcomm Snapdragon 4 Gen 2 ಚಿಪ್‌ಸೆಟ್ ಅನ್ನು ಹೊಂದಿದೆ. Vivo Y200e 5G ಹೊಸ ಫೋನ್ ದೇಶದಲ್ಲಿ ಸುಮಾರು 19,999 ರೂಗಳ ಆರಂಭಿಕ ಬೆಲೆಗೆ ಲಭ್ಯವಿವಾಗಲಿದೆ.

Also Read: iQOO Neo 9 Pro: ನಿಬ್ಬೆರಗಾಗಿಸುವ ಕ್ಯಾಮೆರಾ ಮತ್ತು Powerful ಪ್ರೊಸೆಸರ್‌ನ ಐಕ್ಯೂ 5G ಫೋನ್ ಇಂದಿನಿಂದ ಮೊದಲ ಸೇಲ್!

ಭಾರತದಲ್ಲಿ Vivo Y200e 5G ಫೀಚರ್ಗಳು

ಈ ಫೋನ್ ಅಕ್ಟೋಬರ್ 2023 ರಲ್ಲಿ ಬಿಡುಗಡೆಯಾದ Vivo Y200 5G ಅಪ್ಡೇಟ್ ರೂಪಾಂತರವಾಗಿದೆ. Vivo Y200E 5G ಸ್ಮಾರ್ಟ್‌ಫೋನ್ 6.67 ಇಂಚಿನ Samsung E4 AMOLED ಡಿಸ್‌ಪ್ಲೇ ಹೊಂದಿದೆ. ಫೋನ್‌ನಲ್ಲಿ ಡಿಸ್‌ಪ್ಲೇಯ ಮಧ್ಯದಲ್ಲಿ ಪಂಚ್ ಹೋಲ್ ಇದೆ. ಇದರ ಸ್ಕ್ರೀನ್ FullHD+ ರೆಸಲ್ಯೂಶನ್ ನೀಡುತ್ತದೆ ಮತ್ತು 120Hz ನ ರಿಫ್ರೆಶ್ ದರವನ್ನು ಹೊಂದಿದೆ. ಸ್ಕ್ರೀನ್ ಪಿಕ್ಸೆಲ್ ಸಾಂದ್ರತೆಯು 394ppi ಆಗಿದೆ ಮತ್ತು ಇದು 1200 ನಿಟ್‌ಗಳ ಗರಿಷ್ಠ ಹೊಳಪನ್ನು ನೀಡುತ್ತದೆ. ಹ್ಯಾಂಡ್‌ಸೆಟ್‌ನಲ್ಲಿ ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಡ್ಯುಯಲ್ ಸ್ಪೀಕರ್‌ಗಳು ಒದಗಿಸಲಾಗಿದೆ.

Vivo Y200e 5G ಫೋನ್ ಮುಂಭಾಗದಲ್ಲಿ 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ರಿಯರ್ ಕ್ಯಾಮೆರಾ, 2MP ಮೆಗಾಪಿಕ್ಸೆಲ್ ಬೊಕೆ ಫ್ಲಿಕರ್ ಸೆನ್ಸಾರ್ ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿದೆ. ಇದು ಆಂಡ್ರಾಯ್ಡ್ 14 ಆಧಾರಿತ FunTouch OS 14 ನೊಂದಿಗೆ ಬರುತ್ತದೆ. ಈ ಹ್ಯಾಂಡ್‌ಸೆಟ್ 6GB ಮತ್ತು 8GB RAM ಆಯ್ಕೆಗಳನ್ನು ಹೊಂದಿದೆ. ಅಲ್ಲದೆ ಹೆಚ್ಚುವರಿಯಾಗಿ ವರ್ಚುವಲ್ 8GB RAM ವರೆಗೆ ಹೆಚ್ಚಿಸಬಹುದು. ಸ್ಮಾರ್ಟ್ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು ಅದು 44W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ Wi-Fi 802.11 ac, Bluetooth 5.0, GPS ಮತ್ತು USB ಟೈಪ್-ಸಿ ಪೋರ್ಟ್‌ನಂತಹ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ.

ಭಾರತದಲ್ಲಿ ವಿವೋ Y200e 5G ಬೆಲೆ

ಈ ವಿವೊ ಸ್ಮಾರ್ಟ್‌ಫೋನ್ ಬ್ಲ್ಯಾಕ್ ಡೈಮಂಡ್ ಮತ್ತು ಸ್ಯಾಫ್ರನ್ ಆರೆಂಜ್ ಬಣ್ಣದಲ್ಲಿ ಬಿಡುಗಡೆಯಾಗಿದೆ. ಸ್ಮಾರ್ಟ್ಫೋನ್ 6GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆಯನ್ನು ರೂ 19,999 ರೂಗಳಿಗೆ ಖರೀದಿಸಬಹುದು. ಅಲ್ಲದೆ ಇದರ ಹೈಎಂಡ್ ರೂಪಾಂತರ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ 20,999 ರೂಗಳಾಗಿವೆ. Vivo Y200e 5G ಸ್ಮಾರ್ಟ್‌ಫೋನ್ ಅನ್ನು ವಿವೋ ಇಂಡಿಯಾ ವೆಬ್‌ಸೈಟ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳಿಂದ ಮುಂಗಡವಾಗಿ ಆರ್ಡರ್ ಮಾಡಬಹುದು. Vivo Y200e 5G ಫೋನ್‌ನ ಮೊದಲ ಮಾರಾಟವನ್ನು ಇದೆ 27ನೇ ಫೆಬ್ರವರಿ 2024 ರಿಂದ ಪ್ರಾರಂಭವಾಗುತ್ತದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo