Vivo V50 Elite Edition ಸ್ಮಾರ್ಟ್ಫೋನ್ Zeiss ಕ್ಯಾಮೆರಾದೊಂದಿಗೆ ಬಿಡುಗಡೆ! ಆಫರ್ ಬೆಲೆ ಮತ್ತು ಟಾಪ್ ಹೈಲೈಟ್‌ಗಳೇನು?
ಭಾರತದಲ್ಲಿ Vivo V50 Elite Edition ಸ್ಮಾರ್ಟ್ಫೋನ್ ಅಧಿಕೃತವಾಗಿ ಅಮೆಜಾನ್‌ನಲ್ಲಿ ಬಿಡುಗಡೆಯಾಗಿದೆ.
Vivo V50 Elite Edition ಉಚಿತ TWS ಇಯರ್ ಬಡ್ಸ್ ಮತ್ತು ಚಾರ್ಜಿಂಗ್ ಅಡಾಪ್ಟರ್ನೊಂದಿಗೆ ಪರಿಚಯವಾಗಿದೆ.
Vivo V50 Elite Edition ಪ್ರಸ್ತುತ ಒಂದೇ ಒಂದು ಮಾದರಿಯಲ್ಲಿ ₹40,999 ರೂಗಳಿಗೆ ಬಿಡುಗಡೆಯಾಗಿದೆ.
Vivo V50 Elite Edition Launched In India: ಭಾರತದಲ್ಲಿ ಇಂದು ಚೀನಾದ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ವಿವೋ ಸ್ಮಾರ್ಟ್ಫೋನ್ ಕಂಪನಿ ಇಂದು ತನ್ನ ಲೇಟೆಸ್ಟ್ Vivo V50 Elite Edition ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದನ್ನು ಕಂಪನಿ ಪ್ರತ್ಯೇಕವಾಗಿ ಅಮೆಜಾನ್ ಮೂಲಕ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ. Vivo V50 Elite ಪ್ರಸ್ತುತ ಒಂದೇ ಒಂದು ಮಾದರಿಯಲ್ಲಿ ಬಿಡುಗಡೆಯಾಗಿದ್ದು ಉಚಿತ TWS ಇಯರ್ ಬಡ್ಸ್ ಮತ್ತು ಚಾರ್ಜಿಂಗ್ ಅಡಾಪ್ಟರ್ ಜೊತೆಗೆ ಸುಮಾರು ₹41,999 ರೂಗಳಿಗೆ ಪರಿಚಯವಾಗಿದೆ. ಆದರೆ Vivo V50 Elite Edition ಸ್ಮಾರ್ಟ್ಫೋನ್ ಬ್ಯಾಂಕ್ ಆಫರ್ ಬೆಲೆ ಎಷ್ಟು ಮತ್ತು ಟಾಪ್ ಹೈಲೈಟ್ ಫೀಚರ್ಗಳೇನು ಎಲ್ಲವನ್ನು ತಿಳಿಯಿರಿ!
ಭಾರತದಲ್ಲಿ Vivo V50 Elite Edition ಆಫರ್ ಬೆಲೆ ಎಷ್ಟು?
Vivo V50 Elite Edition ಸ್ಮಾರ್ಟ್ಫೋನ್ ಪ್ರಸ್ತುತ ಒಂದೇ ಒಂದು ರೂಪಾಂತದರಲ್ಲಿ ಅಮೆಜಾನ್‌ನಲ್ಲಿ ಬಿಡುಗಡೆಯಾಗಿದ್ದು ಆರಂಭಿಕ 12GB RAM ಮತ್ತು 512GB ಸ್ಟೋರೇಜ್ ರೂಪಾಂತರವನ್ನು ₹41,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು ಆಯ್ದ ಬ್ಯಾಂಕ್ ಕಾರ್ಡ್ ಆಫರ್ ಸಹ ಪಡೆಯಬಹುದು.
ಸುಮಾರು 3000 ರೂಗಳ ಬ್ಯಾಂಕ್ ಕಾರ್ಡ್ ಡಿಸ್ಕೌಂಟ್ ಪಡೆಯುವ ಮೂಲಕ Vivo V50 Elite Edition ಸ್ಮಾರ್ಟ್ಫೋನ್ ಆರಂಭಿಕ ಮಾದರಿ ಕೇವಲ ₹39,999 ರೂಗಳಿಗೆ ಖರೀದಿಸಬಹುದು. ಅಲ್ಲದೆ ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 39,899 ರೂಗಳ ವರೆಗೆ ಡಿಸ್ಕೌಂಟ್ ನಿರೀಕ್ಷಿಸಬಹುದು. ಆದರೆ ಈ ಡೀಲ್ ಬೆಲೆ ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: Godrej 1 Ton Inverter Split AC ಮೇಲೆ ಅದ್ದೂರಿಯ ಡೀಲಗಳನ್ನು ನೀಡುತ್ತಿರುವ ಅಮೆಜಾನ್! ಬೆಲೆ ಮತ್ತು ಫೀಚರ್ಗಳೇನು?
Vivo V50 Elite Edition ಫೀಚರ್ ಮತ್ತು ವಿಶೇಷಣಗಳೇನು ತಿಳಿಯಿರಿ:
Vivo V50 Elite Edition ಸ್ಮಾರ್ಟ್ಫೋನ್ 90Hz ರಿಫ್ರೆಶ್ ರೇಟ್ನೊಂದಿಗೆ 6.77 ಇಂಚಿನ Quad Curved AMOLED (2392×1080 ಪಿಕ್ಸೆಲ್‌ಗಳು) FHD ಅನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ಮುಖ್ಯವಾಗಿ ಕ್ಯಾಮೆರಾ ಪ್ರಿಯರನ್ನು ಗುರಿಯಾಗಿಸಿಕೊಂಡಿದ್ದು ನಿಮಗೊಂದು ಸೂಪರ್ ಕೂಲ್ ಕ್ಯಾಮೆರಾ ಫೋನ್ ಸುಮಾರು 40,000 ರೂಗಳೊಳಗೆ ಬೇಕಿದ್ದರೆ ಇದನ್ನೂ ಪರಿಗಣಿಸಬಹುದು.
Vivo V50 Elite Edition ಸ್ಮಾರ್ಟ್ಫೋನ್ Snapdragon 7s Gen 3 ಪ್ರೊಸೆಸರ್ ಮತ್ತು FunTouch OS 10 ಜೊತೆಗೆ ಬರುತ್ತದೆ. Vivo V50 Elite Edition ಸ್ಮಾರ್ಟ್ಫೋನ್ ಆರಂಭಿಕ 12GB RAM ಮೆಮೊರಿ ಹೊಂದಿದ್ದು ಕನೆಕ್ಟಿಂಗ್ ಆಯ್ಕೆಗಳಲ್ಲಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 90W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
Vivo V50 Elite Edition ಕ್ಯಾಮೆರಾ ವಿವರಗಳು:
ಫೋಟೋಗಳು ಮತ್ತು ವೀಡಿಯೊಗಳಿಗಾಗಿ Vivo V50 Elite Edition ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು OIS ಜೊತೆಗೆ ಬರುತ್ತದೆ. ಮತ್ತೊಂದು 50MP ಸೂಪರ್ ಅಲ್ಟ್ರಾ ವೈಡ್ ಲೆನ್ಸ್ ಮತ್ತು ಕೊನೆಯದಾಗಿ 5MP ಲೆನ್ಸ್ ಹೊಂದಿದೆ. ಇದರ ಕ್ರಮವಾಗಿ ಫೋನ್ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 50MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP68 /IP69 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile