Ration Card eKYC: ನಿಮ್ಮ ರೇಷನ್ ಕಾರ್ಡ್‍ನಲ್ಲಿ ಕೆವೈಸಿ ಪೂರ್ಣಗೊಳಿಸದಿದ್ದರೆ ಈಗಲೇ ಅಪ್ಡೇಟ್ ಮಾಡಿಕೊಳ್ಳಿ ಇಲ್ಲವಾದರೆ…

HIGHLIGHTS

ರೇಷನ್ ಕಾರ್ಡ್ ಇ-ಕೆವೈಸಿಯನ್ನು ಅಪ್ಡೇಟ್ ಮಾಡಲು 31ನೇ ಜನವರಿ 2026 ಕೊನೆ ದಿನಾಂಕ.

ನಿಮ್ಮ ರೇಷನ್ ಕಾರ್ಡ್ eKYC ಪೂರ್ಣಗೊಳಿಸದಿದ್ದರೆ ನಿಮ್ಮ ಪಡಿತರ ಚೀಟಿ ರದ್ದಾಗುವ ಸಾಧ್ಯತೆಗಳಿವೆ.

Ration Card eKYC: ನಿಮ್ಮ ರೇಷನ್ ಕಾರ್ಡ್‍ನಲ್ಲಿ ಕೆವೈಸಿ ಪೂರ್ಣಗೊಳಿಸದಿದ್ದರೆ ಈಗಲೇ ಅಪ್ಡೇಟ್ ಮಾಡಿಕೊಳ್ಳಿ ಇಲ್ಲವಾದರೆ…

Ration Card eKYC: ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಎಲ್ಲಾ ಪಡಿತರ ಚೀಟಿದಾರರಿಗೆ ಒಂದು ಮಹತ್ವದ ನವೀಕರಣವನ್ನು ಹೊರಡಿಸಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ (PDS) ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಪ್ರಯೋಜನಗಳು ನಿಜವಾದ ಫಲಾನುಭವಿಗಳಿಗೆ ಮಾತ್ರ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಆಧಾರ್ ಆಧಾರಿತ ಇ-ಕೆವೈಸಿಯನ್ನು ಪೂರ್ಣಗೊಳಿಸುವುದು ಈಗ ಕಡ್ಡಾಯವಾಗಿದೆ. 31ನೇ ಜನವರಿ 2026 ಗಡುವಿನೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಫಲವಾದರೆ ನಿಮ್ಮ ಪಡಿತರ ಚೀಟಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಬಹುದು ಅಥವಾ ಶಾಶ್ವತವಾಗಿ ರದ್ದುಗೊಳಿಸಬಹುದು.

Digit.in Survey
✅ Thank you for completing the survey!

Also Read: Digital Detox 2026: ಮಕ್ಕಳು ಸ್ಕ್ರೀನ್ ವ್ಯಸನವನ್ನು ಬಿಡಿಸಲು ಹಳ್ಳಿಯೊಂದರಲ್ಲಿ ಅನುಸರಿಸುತ್ತಿರುವ ಈ ಸಣ್ಣ ಹೆಜ್ಜೆಯ ಮಹತ್ವ ಎಷ್ಟಿದೆ ಗೊತ್ತಾ?

Ration Card eKYC ಮಾಡಿಸುವುದು ಏಕೆ ಮುಖ್ಯ?

ಪಡಿತರ ವ್ಯವಸ್ಥೆಯಲ್ಲಿ ಲೋಪದೋಷಗಳನ್ನು ಸರಿಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅನೇಕ ಕಡೆ ಮರಣ ಹೊಂದಿದವರ ಹೆಸರಿನಲ್ಲಿ ಅಥವಾ ಬೇರೆ ಕಡೆ ವಲಸೆ ಹೋದವರ ಹೆಸರಿನಲ್ಲಿ ಪಡಿತರ ಪಡೆಯಲಾಗುತ್ತಿದೆ. ಇದನ್ನು ಘೋಸ್ಟ್ ಬೆನಿಫಿಶಿಯರಿಸ್ ಎನ್ನಲಾಗುತ್ತದೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬಬೆರಳಚ್ಚು ಸದಸ್ಯರ ಬಯೋಮೆಟ್ರಿಕ್ ಪರಿಶೀಲನೆ ಅಗತ್ಯ. ನೀವು ಇ-ಕೆವೈಸಿ ಪೂರ್ಣಗೊಳಿಸಿದರೆ ಮಾತ್ರ ಸರ್ಕಾರದ ಅನ್ನಭಾಗ್ಯ ಯೋಜನೆ ಅಕ್ಕಿ ಮತ್ತು ಇತರ ರಿಯಾಯಿತಿ ದರದ ಪದಾರ್ಥಗಳು ನಿಮಗೆ ಸುಗಮವಾಗಿ ಸಿಗುತ್ತವೆ. ಇಲ್ಲದಿದ್ದರೆ ನಿಮ್ಮ ಕಾರ್ಡ್ ನಿಷ್ಕ್ರಿಯ ಎಂದು ಪರಿಗಣಿಸಿ ಪಡಿತರ ನಿಂತುಹೋಗಬಹುದು.

Ration Cards eKYC

ಈ Ration Card eKYC ಮಾಡುವ ವಿಧಾನವೇನು?

  • ಕರ್ನಾಟಕದಲ್ಲಿ ಇ-ಕೆವೈಸಿ ಮುಖ್ಯವಾಗಿ ನಿಮ್ಮ ಪಡಿತರ ಅಂಗಡಿಯಲ್ಲಿ ಭೌತಿಕವಾಗಿ ನಡೆಯುತ್ತದೆ.
  • ನೀವು ಪ್ರತಿ ತಿಂಗಳು ಎಲ್ಲಿ ಪಡಿತರ ಪಡೆಯುತ್ತೀರೋ ಆ ನ್ಯಾಯಬೆಲೆ ಅಂಗಡಿ ಹೋಗಿ.
  • ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಸದಸ್ಯರು ಅಸಲಿ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ತೆಗೆದುಕೊಂಡು ಹೋಗಿ.
  • ಕಾರ್ಡ್‌ನಲ್ಲಿರುವ ಪ್ರತಿಯೊಬ್ಬ ಸದಸ್ಯರು ನೇರವಾಗಿ ಅಂಗಡಿಗೆ ಹೋಗಿ (e-POS) ಯಂತ್ರದ ಮೇಲೆ ತಮ್ಮ ಬೆರಳಚ್ಚು ಇಡಬೇಕು.
  • ನಿಮ್ಮ ಬೆರಳಚ್ಚು ಆಧಾರ್ ಮಾಹಿತಿಯೊಂದಿಗೆ ಹೊಂದಾಣಿಕೆಯಾದ ತಕ್ಷಣ ನಿಮ್ಮ ಇ-ಕೆವೈಸಿ ಪೂರ್ಣಗೊಳ್ಳುತ್ತದೆ.
  • ಈ ಪ್ರಕ್ರಿಯೆಗೆ ನೀವು ಯಾವುದೇ ಹಣವನ್ನು ನೀಡುತ್ತೀರಿ ಇದು ಉಚಿತವಾಗಿದೆ.

ನಿಮ್ಮ ಇ-ಕೆವೈಸಿ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

ಮೊದಲಿಗೆ ನೀವು ಅಧಿಕೃತ ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿರುವ ಇ-ಸೇವೆಗಳು ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದರ ನಂತರ ಇ-ಸ್ಥಿತಿ ಪಡಿತರ ಚೀಟಿ ವಿವರ ಆಯ್ಕೆ ಮಾಡಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಪಡಿತರ ಚೀಟಿ ಸಂಖ್ಯೆ (RC ಸಂಖ್ಯೆ) ನಮೂದಿಸಿ. ಅಲ್ಲಿ ಪ್ರತಿಯೊಬ್ಬ ಸದಸ್ಯರ ಹೆಸರಿನ ಮುಂದೆ e-KYC ಸ್ಟೇಟಸ್ ಕಾಣಿಸುತ್ತದೆ. ಒಂದು ವೇಳೆ ‘ಪೆಂಡಿಂಗ್’ ಎಂದು ತೋರಿಸಿದರೆ ಅಂತಹ ಸದಸ್ಯರು ತಕ್ಷಣ ಪಡಿತರ ಅಂಗಡಿಗೆ ಹೋಗಬೇಕು.

ಗಡುವು ಮೀರಿದರೆ ಏನಾಗುತ್ತದೆ?

ನೀವು ಈ ಕೆಲಸವನ್ನು 31ನೇ ಜನವರಿ 2026 ಒಳಗೆ ನೀವು ಈ ಕೆಲಸ ಮಾಡದಿದ್ದರೆ ಫೆಬ್ರವರಿ 2026 ರಿಂದ ನಿಮ್ಮ ಪಡಿತರ ಚೀಟಿಗೆ ಬರುವ ಆಹಾರ ಪದಾರ್ಥಗಳ ಹಂಚಿಕೆ ಸರ್ಕಾರ ನಿಲ್ಲಿಸಬಹುದು. ನಿಮ್ಮ ಕಾರ್ಡ್ ‘ಬ್ಲಾಕ್’ ಆದರೆ ಅದನ್ನು ಮತ್ತೆ ಸರಿಪಡಿಸಲು ಆಹಾರ ನಿರೀಕ್ಷಕರು ಕಚೇರಿಗೆ ಅಲೆಯಬಹುದು. ಆದ್ದರಿಂದ ಕೊನೆಯ ದಿನದವರೆಗೆ ಕಾಯದೆ ನಿಮ್ಮ ಕೆವೈಸಿ ಪೂರ್ಣಗೊಳಿಸಿಕೊಳ್ಳಿ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo