ವೇಗದ ಪ್ರೊಸೆಸರ್ ಇರುವ Realme GT 7 Pro ಮೊಬೈಲ್ ಬೆಲೆಯಲ್ಲಿ ಬೊಂಬಾಟ್ ಇಳಿಕೆ
ರಿಯಲ್‌ಮಿ GT 7 ಪ್ರೊ ಅಮೆಜಾನ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ಬೆಲೆ ಇಳಿಕೆ ಪಡೆದಿದೆ
ರಿಯಲ್‌ಮಿ GT 7 ಪ್ರೊ ಮೊಬೈಲ್ 50MP ಕ್ಯಾಮೆರಾ ಸಪೋರ್ಟ್ ಪಡೆದುಕೊಂಡಿದೆ
ರಿಯಲ್‌ಮಿ GT 7 ಪ್ರೊ ಮಾರ್ಸ್ ಆರೆಂಜ್, ವೈಟ್ ಹಾಗೂ ಗ್ಯಾಲಕ್ಸಿ ಗ್ರೇ ಕಲರ್ ಆಯ್ಕೆಗಳಲ್ಲಿ ಲಭ್ಯ
ಬಹುತೇಕ ಗ್ರಾಹಕರು ಆಫರ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಬಯಸುತ್ತಾರೆ. ಸದ್ಯ ರಿಯಲ್‌ಮಿ ಕಂಪನಿಯ Realme GT 7 Pro ಮೊಬೈಲ್ ಭರ್ಜರಿ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದೆ. ಹೌದು, ಅಮೆಜಾನ್‌ನಲ್ಲಿ ಈ ಸ್ಮಾರ್ಟ್‌ಫೋನ್ ಸಖತ್ ಬೆಲೆ ಇಳಿಕೆ ಪಡೆದುಕೊಂಡಿದೆ. ಇದಲ್ಲದೇ ಬ್ಯಾಂಕ್ ಆಫರ್ ಪಡೆದುಕೊಂಡು ಖರೀದಿಸಿದರೆ ಇನ್ನಷ್ಟು ಹೆಚ್ಚುವರಿ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅಂದಹಾಗೆ ರಿಯಲ್‌ಮಿ GT 7 ಪ್ರೊ ಮೊಬೈಲ್ Snapdragon 8 Elite ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಪಡೆದಿದೆ ಹಾಗೂ 120W ವರೆಗೆ ಫಾಸ್ಟ್ ಚಾರ್ಜಿಂಗ್ ಲಭ್ಯ ಪಡೆದುಕೊಂಡಿದೆ. ಇದರೊಂದಿಗೆ 50MP ಕ್ಯಾಮೆರಾ ಸಪೋರ್ಟ್ ಸಹ ಪಡೆದುಕೊಂಡಿದೆ. ಹಾಗಾದರೆ ಅಮೆಜಾನ್ ವೆಬ್‌ಸೈಟ್‌ನಲ್ಲಿ ರಿಯಲ್‌ಮಿ GT 7 ಪ್ರೊ ಮೊಬೈಲ್‌ಗೆ ಲಭ್ಯ ಇರುವ ಆಫರ್ ಬಗ್ಗೆ ಮುಂದೆ ತಿಳಿಯೋಣ.
SurveyAlso Read : ಭಾರತದಲ್ಲಿ iPhone 17e ಮೊಬೈಲ್ ಬಿಡುಗಡೆ! 48MP ಕ್ಯಾಮೆರಾ, A19 ಚಿಪ್‌ಸೆಟ್ ಸೌಲಭ್ಯ
Realme GT 7 Pro ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ
ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ GT 7 ಪ್ರೊ ಮೊಬೈಲ್ ಪ್ರಸ್ತುತ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಭರ್ಜರಿ ರಿಯಾಯಿತಿ ಹೊಂದಿದೆ. ಈ ಸ್ಮಾರ್ಟ್‌ಫೋನ್ 12GB + 256GB ವೇರಿಯಂಟ್ ಬೆಲೆ 69,999 ರೂಗಳು ಪ್ರೈಸ್‌ಟ್ಯಾಗ್‌ನಲ್ಲಿದ್ದು ಆದರೆ ಆಫರ್‌ನಲ್ಲಿ ಸದ್ಯ ಈ ಮೊಬೈಲ್ 47,999 ರೂಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಹೆಚ್ಚುವರಿ ಡಿಸ್ಕೌಂಟ್ ಪಡೆಯಬಹುದಾಗಿದೆ. ಇದಲ್ಲದೇ ಆಕರ್ಷಕ EMI ಆಯ್ಕೆಗಳು ಲಭ್ಯ ಇವೆ. ಅಂದಹಾಗೆ ಈ ಮೊಬೈಲ್ ಮಾರ್ಸ್ ಆರೆಂಜ್, ವೈಟ್ ಹಾಗೂ ಗ್ಯಾಲಕ್ಸಿ ಗ್ರೇ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ ಇದೆ.

ರಿಯಲ್‌ಮಿ GT 7 ಪ್ರೊ ಫೀಚರ್ಸ್ ಹೀಗಿವೆ
ರಿಯಲ್‌ಮಿ GT 7 ಪ್ರೊ ಸ್ಮಾರ್ಟ್‌ಫೋನ್ 6.6.78 ಇಂಚಿನ FHD+ AMOLED ಪ್ಯಾನೆಲ್ ಡಿಸ್‌ಪ್ಲೇ ಹೊಂದಿದೆ. ಇದರ ಸ್ಕ್ರೀನ್ 120Hz ವರೆಗೆ ರಿಫ್ರೆಶ್ ರೇಟ್ ಜೊತೆಗೆ 6500 nits ಬ್ರೈಟ್ನೆಸ್ ಸಪೋರ್ಟ್ ಪಡೆದುಕೊಂಡಿದೆ. ಹಾಗೆಯೇ ಈ ಮೊಬೈಲ್ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕೆಲಸ ಮಾಡಲಿದೆ. ಇದು ಆಂಡ್ರಾಯ್ಡ್ 15 OS ಅನ್ನು ಆಧರಿಸಿದ ರಿಯಲ್‌ಮಿ UI 6.0 ಸ್ಕಿನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಅನುಗುಣವಾಗಿ 12GB + 256GB ಮತ್ತು 16GB + 512GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. ಇನ್ನು ಈ ಮೊಬೈಲ್ 120W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆಗೆ 5800mAh ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ.
ಹಾಗೆಯೇ ರಿಯಲ್‌ಮಿ GT 7 ಪ್ರೊ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದುಕೊಂಡಿದ್ದು ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಆಗಿದೆ. ಇನ್ನುಳಿದೆರಡು ಕ್ಯಾಮೆರಾಗಳು ಕ್ರಮವಾಗಿ 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸರ್ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಆಗಿವೆ. ಅಲ್ಲದೇ ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿದೆ. ಈ ಫೋನ್ ನೀರು ಮತ್ತು ಧೂಳಿನ ವಿರುದ್ಧ IP69 ರೇಟಿಂಗ್ ಅನ್ನು ಪಡೆದಿದೆ.
Manthesh B
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile