Digit.in
Digit.in

    BSNL ಗ್ರಾಹಕರಿಗೆ ದೀಪಾವಳಿ ಕೊಡುಗೆ: ಈ ವಾರ್ಷಿಕ ಪ್ಲಾನ್‌ನಲ್ಲಿ 30 ದಿನ ಹೆಚ್ಚುವರಿ ವ್ಯಾಲಿಡಿಟಿ ಸೌಲಭ್ಯ

    BSNL ಗ್ರಾಹಕರಿಗೆ ದೀಪಾವಳಿ ಕೊಡುಗೆ: ಈ ವಾರ್ಷಿಕ ಪ್ಲಾನ್‌ನಲ್ಲಿ 30 ದಿನ ಹೆಚ್ಚುವರಿ ವ್ಯಾಲಿಡಿಟಿ ಸೌಲಭ್ಯ

    BSNL: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್, ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆಯ ಭಾಗವಾಗಿ ತನ್ನ 2,799 ರೂ.ಗಳ ವಾರ್ಷಿಕ ರೀಚಾರ್ಜ್ ಪ್ಲಾನ್‌ನಲ್ಲಿ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿದೆ. ಈ ಆಫರ್‌ನಲ್ಲಿ ಗ್ರಾಹಕರಿಗೆ 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಜೊತೆಗೆ ಹೆಚ್ಚಿನ ಡೇಟಾ ಸೌಲಭ್ಯವೂ ಸಿಗಲಿದೆ. ಇದರಿಂದ ಈ ಪ್ಲಾನ್‌ನ ಒಟ್ಟು ಮಾನ್ಯತೆ ಒಂದು ವರ್ಷಕ್ಕಿಂತಲೂ ಹೆಚ್ಚಾಗಲಿದೆ. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಬಿಎಸ್‌ಎನ್‌ಎಲ್‌ ವಾರ್ಷಿಕ ರೀಚಾರ್ಜ್ ಮಾಡಿಸಿಕೊಳ್ಳಲು ಯೋಚಿಸುತ್ತಿರುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಬಹುದು. ಹಾಗಾದರೆ, 2,799 ರೂ.ಗಳ ಪ್ಲಾನ್‌ನಲ್ಲಿ ಸಿಗುವ ಪ್ರಯೋಜನಗಳೇನು? ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

    BSNL 2,799 ರೂ.ಗಳ ಪ್ಲಾನ್‌ನ ಪ್ರಯೋಜನಗಳ ಮಾಹಿತಿ

    ಬಿಎಸ್‌ಎನ್‌ಎಲ್‌ ಟೆಲಿಕಾಂ ತನ್ನ ಅಧಿಕೃತ X ಖಾತೆಯ ಪೋಸ್ಟ್‌ನಲ್ಲಿ ಈ ದೀಪಾವಳಿ ಹಬ್ಬದ ವಿಶೇಷ ಕೊಡುಗೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಸಾಮಾನ್ಯವಾಗಿ ಒಂದು ವರ್ಷದ ವ್ಯಾಲಿಡಿಟಿ ಹೊಂದಿರುವ 2,799 ರೂ.ಗಳ ರೀಚಾರ್ಜ್ ಪ್ಲಾನ್‌ಗೆ ಈಗ ಹೆಚ್ಚುವರಿಯಾಗಿ 30 ದಿನಗಳ ಮಾನ್ಯತೆಯನ್ನು ನೀಡಲಾಗುತ್ತಿದೆ.

    bsnl

    ಈ ಪ್ಲಾನ್‌ನಲ್ಲಿ ಒಟ್ಟು 395 ದಿನಗಳು (ಹೆಚ್ಚುವರಿ 30 ದಿನಗಳ ಸೇರಿ) ವ್ಯಾಲಿಡಿಟಿ ಸಿಗಲಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರತಿದಿನ 3GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ದೇಶದಾದ್ಯಂತ ಅನಿಯಮಿತ ಧ್ವನಿ ಕರೆಗಳು ಸೌಲಭ್ಯ ಲಭ್ಯ. ಹಾಗೆಯೇ ಪ್ರತಿದಿನ 100 SMS ಸಿಗುತ್ತವೆ. ಅಂದಹಾಗೆ ಈ ಹೆಚ್ಚುವರಿ ಪ್ರಯೋಜನಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿವೆ. ನವೆಂಬರ್ 30ರ ವರೆಗೆ ಈ ವಿಶೇಷ ಕೊಡುಗೆಯ ಪ್ರಯೋಜನ ಪಡೆಯಬಹುದು.

    ಬಿಎಸ್‌ಎನ್‌ಎಲ್‌ 2,399 ರೂ.ಗಳ ಪ್ಲಾನ್ ಮಾಹಿತಿ

    ಬಿಎಸ್‌ಎನ್‌ಎಲ್‌ 2,799 ರೂ.ಗಳ ವಾರ್ಷಿಕ ಪ್ಲಾನ್ ಬೇಡ ಎನ್ನುವ ಗ್ರಾಹಕರು ಬಿಎಸ್‌ಎನ್‌ಎಲ್‌ 2,399 ರೂ.ಗಳ ವಾರ್ಷಿಕ ರೀಚಾರ್ಜ್ ಯೋಜನೆಯನ್ನು ಪರಿಗಣಿಸಬಹುದು. ಈ ಪ್ಲಾನ್ ಕೂಡ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಸಾಕಷ್ಟು ಡೇಟಾ ಮತ್ತು ಕರೆ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಪ್ಲಾನ್‌ನಲ್ಲಿ ಒಟ್ಟು 365 ದಿನಗಳು ವ್ಯಾಲಿಡಿಟಿ ಸಿಗಲಿದೆ. ಅಲ್ಲದೇ ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಇದರೊಂದಿಗೆ ದೇಶದಾದ್ಯಂತ ಅನಿಯಮಿತ ಧ್ವನಿ ಕರೆಗಳು ಸೌಲಭ್ಯ ಲಭ್ಯ. ಹಾಗೆಯೇ ಪ್ರತಿದಿನ 100 SMS ಸಿಗುತ್ತವೆ.

    Manthesh B

    Manthesh B

    Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

    View full profile