Jio ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ: ಈ ಒಂದೇ ರೀಚಾರ್ಜ್ ಪ್ಲಾನಿನಲ್ಲಿ 3 ವರ್ಷಗಳ ವ್ಯಾಲಿಡಿಟಿ!

Jio: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಹೊಸ ಮೂರು ವರ್ಷಗಳ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. 10,000 ರೂ.ಗಳ ಬೆಲೆಯ ಈ 3 ವರ್ಷಗಳ ಅನ್‌ಲಿಮಿಟೆಡ್ ಕನೆಕ್ಟಿವಿಟಿ ಪ್ಲಾನ್ ಅಂದರೆ ಒಟ್ಟು 36 ತಿಂಗಳ ವ್ಯಾಲಿಡಿಟಿ ಸೌಲಭ್ಯವನ್ನು ಹೊಂದಿದೆ. ಗ್ರಾಹಕರು ಮೂರು ವರ್ಷಗಳವರೆಗೆ ಪ್ರತಿ ವರ್ಷ ಪ್ರತ್ಯೇಕವಾಗಿ ರೀಚಾರ್ಜ್ ಮಾಡಿಸುವ ಅಗತ್ಯವಿಲ್ಲ. ಒಂದೇ ಬಾರಿಗೆ ರೀಚಾರ್ಜ್ ಮಾಡಿಕೊಂಡು ಡೇಟಾ, ಕರೆ ಹಾಗೂ ಹಲವು ಡಿಜಿಟಲ್ ಸೇವೆಗಳ ಪ್ರಯೋಜನ ಪಡೆಯಬಹುದು. ಈ ಯೋಜನೆಯಲ್ಲಿ ಅನ್‌ಲಿಮಿಟೆಡ್ 5G ಡೇಟಾ, ಅನಿಯಮಿತ ವಾಯ್ಸ್ ಕರೆಗಳು, ಪ್ರತಿದಿನ 2.5GB ಹೈ-ಸ್ಪೀಡ್ ಡೇಟಾ ಮತ್ತು 100 SMS ಸೌಲಭ್ಯಗಳು ಲಭ್ಯವಿವೆ. ಇದರ ಜೊತೆಗೆ JioHotstar, Canva Pro Lite ಮತ್ತು JioAICloud ಸೇವೆಗಳನ್ನೂ ನೀಡಲಾಗುತ್ತಿದೆ. ಜಿಯೋ ಈ ಹೊಸ ಯೋಜನೆಯನ್ನು ನವೆಂಬರ್ 7, 2026 ರಿಂದ ಬಳಕೆದಾರರಿಗೆ ಲಭ್ಯ.
Jio ಟೆಲಿಕಾಂನ ಈ ಪ್ಲಾನ್‌ನ ಪ್ರಯೋಜನಗಳು
ಜಿಯೋ ಮೂರು ವರ್ಷಗಳ ಈ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಹಲವು ಪ್ರಯೋಜನಗಳನ್ನು ನೀಡುತ್ತಿದೆ. 10,000 ರೂ.ಗಳ ಬೆಲೆಯ ಈ ಪ್ಲಾನ್ 36 ತಿಂಗಳ ವ್ಯಾಲಿಡಿಟಿ ಹೊಂದಿದ್ದು, ಪ್ರತಿದಿನ 2.5GB ಹೈ-ಸ್ಪೀಡ್ ಡೇಟಾ, ಅನ್‌ಲಿಮಿಟೆಡ್ 5G ಡೇಟಾ, ಅನಿಯಮಿತ ವಾಯ್ಸ್ ಕರೆಗಳು ಮತ್ತು ಪ್ರತಿದಿನ 100 SMS ಸೌಲಭ್ಯವನ್ನು ಒಳಗೊಂಡಿದೆ.
ಇದರ ಜೊತೆಗೆ ಗ್ರಾಹಕರಿಗೆ ಹೆಚ್ಚುವರಿ ಡಿಜಿಟಲ್ ಪ್ರಯೋಜನಗಳೂ ಸಿಗಲಿವೆ. JioHotstar Mobile + Hollywood ಚಂದಾದಾರಿಕೆಯ ಮೂಲಕ ಲೈವ್ ಕ್ರೀಡೆಗಳು, ಪ್ರೀಮಿಯಂ ಮನರಂಜನಾ ಕಾರ್ಯಕ್ರಮಗಳು, ಹಾಟ್‌ಸ್ಟಾರ್ ಒರಿಜಿನಲ್ಸ್ ಮತ್ತು ಹಾಲಿವುಡ್ ಸಿನಿಮಾಗಳನ್ನು ವೀಕ್ಷಿಸಬಹುದು. ಅಲ್ಲದೆ, 12 ತಿಂಗಳ Canva Pro Lite ಚಂದಾದಾರಿಕೆ ದೊರೆಯಲಿದ್ದು, ಪ್ರೀಮಿಯಂ ಡಿಸೈನ್ ಟೆಂಪ್ಲೇಟ್‌ಗಳು ಮತ್ತು ವಿನ್ಯಾಸ ಪರಿಕರಗಳನ್ನು ಬಳಸಲು ಅವಕಾಶವಿದೆ. ಇದರೊಂದಿಗೆ JioAICloud ನಲ್ಲಿ 50GB ಉಚಿತ ಕ್ಲೌಡ್ ಸ್ಟೋರೇಜ್ ಸೌಲಭ್ಯವನ್ನೂ ನೀಡಲಾಗುತ್ತದೆ. ಇದರಲ್ಲಿ ಫೋಟೋಗಳು, ವಿಡಿಯೋಗಳು, ದಾಖಲೆಗಳು ಸೇರಿದಂತೆ ವಿವಿಧ ಫೈಲ್‌ಗಳನ್ನು ಸಂಗ್ರಹಿಸಿಡಬಹುದು.
ಜಿಯೋ 3 ವರ್ಷಗಳ ರೀಚಾರ್ಜ್ ಪ್ಲಾನ್ ಯಾವಾಗ ಲಭ್ಯ?
ಜಿಯೋ 10,000 ರೂ.ಗಳ ಬೆಲೆಯ ಮೂರು ವರ್ಷಗಳ ಯೋಜನೆಯು ನವೆಂಬರ್ 7, 2026 ರಿಂದ ಲಭ್ಯವಾಗಲಿದೆ. ಆಸಕ್ತ ಗ್ರಾಹಕರು MyJio ಆಪ್, Jio.com ಅಧಿಕೃತ ವೆಬ್‌ಸೈಟ್, ಜಿಯೋ ಸ್ಟೋರ್‌ಗಳು ಹಾಗೂ ಅಧಿಕೃತ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು. ಮೂರು ವರ್ಷಗಳವರೆಗೆ ಒಂದೇ ರೀಚಾರ್ಜ್‌ನಲ್ಲಿ ಮೊಬೈಲ್ ಸೇವೆಗಳನ್ನು ಬಳಸಲು ಬಯಸುವವರಿಗೆ ಈ ಯೋಜನೆ ಒಂದು ಆಯ್ಕೆಯಾಗಬಹುದು. ಆದರೆ, 10,000 ರೂ.ಗಳ ಮೊತ್ತವನ್ನು ಒಂದೇ ಬಾರಿ ಪಾವತಿಸುವ ಮೊದಲು ತಮ್ಮ ಡೇಟಾ ಬಳಕೆ ಮತ್ತು ಡಿಜಿಟಲ್ ಚಂದಾದಾರಿಕೆಗಳ ಅಗತ್ಯವನ್ನು ಪರಿಗಣಿಸುವುದು ಉತ್ತಮ.
Manthesh B
Manthesh B ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
View full profile
