ಅಮೆಜಾನ್‌ನಲ್ಲಿ OPPO Reno15 Series ನಾಳೆ ಮೊದಲ ಮಾರಾಟ ಶುರು! ಆಫರ್ ಬೆಲೆ ಮತ್ತು ಫೀಚರ್ಗಳೇನು?

HIGHLIGHTS

OPPO Reno15 5G Series ಮೊದಲ ಮಾರಾಟವನ್ನು ನಾಳೆಯಿಂದ ಆರಂಭಿಸಲಿದೆ.

ಈ ಸರಣಿಯಲ್ಲಿ Reno15 5G, Reno15 Pro Mini ಮತ್ತು Reno15 5G Pro ಮೂರು ಮಾದರಿಗಳಿವೆ.

ವಿಶೇಷವೆಂದರೆ ಸಣ್ಣ ಗಾತ್ರದ ಫೋನ್ ಇಷ್ಟಪಡುವವರಿಗಾಗಿ ಈ ಬಾರಿ Pro Mini ಎಂಬ ಹೊಸದನ್ನು ಪರಿಚಯಿಸಲಾಗಿದೆ.

ಅಮೆಜಾನ್‌ನಲ್ಲಿ OPPO Reno15 Series ನಾಳೆ ಮೊದಲ ಮಾರಾಟ ಶುರು! ಆಫರ್ ಬೆಲೆ ಮತ್ತು ಫೀಚರ್ಗಳೇನು?

ಸ್ಮಾರ್ಟ್ಫೋನ್ ಪ್ರಿಯರ ಬಹುದಿನದ ಕಾಯುವಿಕೆ ಈಗ ಕೊನೆಗೊಳ್ಳುವ ಸಮಯ ಬಂದಿದೆ. ಬಹುನಿರೀಕ್ಷಿತ OPPO Reno15 Series ಬಿಡುಗಡೆಯ ನಂತರ ನಾಳೆ ಅಂದರೆ 13ನೇ ಜನವರಿ 2026 ರಂದು ಭಾರತದಲ್ಲಿ ತನ್ನ ಮೊದಲ ಮಾರಾಟವನ್ನು ಪ್ರಾರಂಭಿಸಲಿದೆ. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಈ ಫೋನ್‌ಗಳು ಈಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈ ಸರಣಿಯಲ್ಲಿ Reno15 5G ಹೊಸ ವಿನ್ಯಾಸದ Reno15 Pro Mini ಮತ್ತು ಅತ್ಯಂತ ಪವರ್ಫುಲ್ Reno15 5G Pro ಎಂಬ ಮೂರು ಮಾದರಿಗಳಿವೆ. ಗ್ರಾಹಕರು ಈ ಫೋನ್‌ಗಳನ್ನು ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಒಪ್ಪೋ ಇ-ಸ್ಟೋರ್ ಮತ್ತು ನಿಮ್ಮ ಹತ್ತಿರದ ಮೊಬೈಲ್ ಮಳಿಗೆಗಳಲ್ಲಿ ಖರೀದಿಸಬಹುದು. ವಿಶೇಷವೆಂದರೆ, ಸಣ್ಣ ಗಾತ್ರದ ಫೋನ್ ಇಷ್ಟಪಡುವವರಿಗಾಗಿ ಈ ಬಾರಿ ಪ್ರೊ ಮಿನಿ ಎಂಬ ಹೊಸದನ್ನು ಪರಿಚಯಿಸಲಾಗಿದೆ.

Digit.in Survey
✅ Thank you for completing the survey!

Also Read: Digital Detox 2026: ಮಕ್ಕಳು ಸ್ಕ್ರೀನ್ ವ್ಯಸನವನ್ನು ಬಿಡಿಸಲು ಹಳ್ಳಿಯೊಂದರಲ್ಲಿ ಅನುಸರಿಸುತ್ತಿರುವ ಈ ಸಣ್ಣ ಹೆಜ್ಜೆಯ ಮಹತ್ವ ಎಷ್ಟಿದೆ ಗೊತ್ತಾ?

Oppo Reno15 Series ಬೆಲೆ ಮತ್ತು ಬ್ಯಾಂಕ್ ಆಫರ್‌ಗಳು:

ಒಪ್ಪೋ ಕಂಪನಿಯು ಈ ಬಾರಿ ಮಧ್ಯಮ ಶ್ರೇಣಿಯಿಂದ ಪ್ರೀಮಿಯಂ ವಿವಿಧ ಬೆಲೆಗಳಲ್ಲಿ ಈ ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯ Oppo Reno15 5G ಫೋನಿನ 8GB/256GB ಆವೃತ್ತಿಯ ಬೆಲೆ ₹45,999 ರಿಂದ ಆರಂಭವಾಗುತ್ತದೆ. ಇದರ 12GB/512GB ಮಾದರಿಯ ಬೆಲೆ ₹53,999 ಆಗಿದೆ. ಇನ್ನು ಕಾಂಪಾಕ್ಟ್ ಗಾತ್ರದ Reno15 Pro Mini ಬೆಲೆ ₹59,999 (256GB) ಮತ್ತು ₹64,999 (512GB) ಎಂದು ನಿಗದಿಪಡಿಸಲಾಗಿದೆ.

OPPO Reno15 Series

ಅತ್ಯುತ್ತಮ ಫೀಚರ್ಸ್ ಹೊಂದಿರುವ Reno15 5G Pro ಬೆಲೆ ₹67,999 ರಿಂದ ಪ್ರಾರಂಭವಾಗಿ ₹72,999 (512GB) ವರೆಗೆ ಇರುತ್ತದೆ. ಆರಂಭಿಕ ಗ್ರಾಹಕರ ವಿಶೇಷ ಕೊಡುಗೆಯಾಗಿ ಆಯ್ದ ಬ್ಯಾಂಕ್ ಕಾರ್ಡ್‌ಗಳು ಮತ್ತು UPI ಪಾವತಿಗಳ ಮೇಲೆ 10% ಇನ್‌ಸ್ಟಂಟ್ ಕ್ಯಾಶ್‌ಬ್ಯಾಕ್ ನೀಡಲಾಗುತ್ತಿದೆ. ಇದರೊಂದಿಗೆ ₹2,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಶೂನ್ಯ ಮುಂಗಡ ಪಾವತಿ ಶೂನ್ಯ ಡೌನ್ ಪೇಮೆಂಟ್ ಸುಲಭ ಕಂತುಗಳು (EMI) ಮತ್ತು 180 ದಿನಗಳ ಉಚಿತ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಸೌಲಭ್ಯವೂ ಇದೆ.

Oppo Reno15 Series ಫೀಚರ್‌ಗಳು ಮತ್ತು ವಿಶೇಷತೆಗಳು

ಈ ಸರಣಿಯ ಫೋನ್‌ಗಳು ಕ್ಯಾಮೆರಾ ಮತ್ತು ಬಾಳಿಕೆಗೆ ಹೆಚ್ಚು ಒತ್ತು ನೀಡಿವೆ. ಈ ಮೂರೂ ಫೋನ್‌ಗಳು IP69 ರೇಟಿಂಗ್ ಹೊಂದಿದ್ದು ಧೂಳು ಮತ್ತು ಸಂಪೂರ್ಣ ರಕ್ಷಣೆ ನೀಡುತ್ತವೆ. Reno15 5G ಫೋನ್ ಸ್ನಾಪ್ಡ್ರಾಗನ್ 7 ಜೆನ್ 4 ಪ್ರೊಸೆಸರ್ ಮತ್ತು 6.59-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇನ್ನು Oppo Reno15 Pro ಮತ್ತು Oppo Reno15 Pro Mini ಮಾದರಿಗಳು ಅತ್ಯಂತ ಶಕ್ತಿಯುತವಾದ ಮೀಡಿಯಾ ಟೆಕ್ ಡೈಮೆನ್ಸಿಟಿ 8450 ಪ್ರೊಸೆಸರ್ ಮತ್ತು ಬೃಹತ್ 200 ಎಂಪಿ ಮೇನ್ ಕ್ಯಾಮೆರಾವನ್ನು ಹೊಂದಿದೆ.

Oppo Reno15 Pro ಮಾಡೆಲ್ 6.78 ಇಂಚಿನ ದೊಡ್ಡ ಪರದೆಯನ್ನು Oppo Reno15 Pro Mini ಮಾಡೆಲ್ 6.32 ಇಂಚಿನ ಸಣ್ಣ ಹಾಗೂ ಸುಲಭವಾಗಿ ಕೈಗೆಟುಕುವ ಸ್ಕ್ರೀನ್ ಹೊಂದಿದೆ. ವಿಚಾರದಲ್ಲಿ ಈ ಫೋನ್‌ಗಳು ಅದ್ಭುತವಾಗಿದೆ, ಪ್ರೊ ಮಾದರಿಗಳಲ್ಲಿ 6,500mAh ದೊಡ್ಡ ಬ್ಯಾಟರಿ ಮತ್ತು 80W ವೇಗದ ಚಾರ್ಜಿಂಗ್ ವ್ಯವಸ್ಥೆ ಇದೆ. ಈ ಎಲ್ಲಾ ಫೋನ್‌ಗಳು ಲೇಟೆಸ್ಟ್ ಆಂಡ್ರಾಯ್ಡ್ 16 ಆಧಾರಿತ ಕಲರ್ ಎಸ್ 16 (ColorOS 16) ನಲ್ಲಿ ಕಾರ್ಯನಿರ್ವಹಿಸುತ್ತವೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo