50MP ಸೆಲ್ಫಿ ಕ್ಯಾಮೆರಾವುಳ್ಳ Vivo V30e ಬಿಡುಗಡೆ! ಖರೀದಿಗೂ ಮುಂಚೆ ಬೆಲೆಯೊಂದಿಗೆ ಟಾಪ್ 5 ಫೀಚರ್ಗಳೇನು?

50MP ಸೆಲ್ಫಿ ಕ್ಯಾಮೆರಾವುಳ್ಳ Vivo V30e ಬಿಡುಗಡೆ! ಖರೀದಿಗೂ ಮುಂಚೆ ಬೆಲೆಯೊಂದಿಗೆ ಟಾಪ್ 5 ಫೀಚರ್ಗಳೇನು?
HIGHLIGHTS

Vivo V30e 5G ಸ್ಮಾರ್ಟ್ಫೋನ್ ನಿಮಗೆ 50MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.

ವಿವೋ (Vivo) ಈಗ ಭಾರತದಲ್ಲಿ ತನ್ನ ಲೇಟೆಸ್ಟ್ Vivo V30e 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ.

Vivo V30e ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ₹27,999 ರೂಗಳಿಗೆ ಬಿಡುಗಡೆ.

ಭಾರತದಲ್ಲಿ ವಿವೋ ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ವಿವೋ (Vivo) ಈಗ ಭಾರತದಲ್ಲಿ ತನ್ನ ಲೇಟೆಸ್ಟ್ Vivo V30e 5G ಸ್ಮಾರ್ಟ್ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ನೀವೊಂದು ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅತ್ಯುತ್ತಮವಾದ ಸೆಲ್ಫಿ ಕ್ಯಾಮೆರಾದೊಂದಿಗೆ ಹುಡುಕುತ್ತಿದ್ದರೆ ವಿವೋದ ಈ ಸ್ಮಾರ್ಟ್ಫೋನ್ ಉತ್ತಮವಾದ ಆಯ್ಕೆಯಾಗಲಿದೆ. ಯಾಕೆಂದರೆ Vivo V30e 5G ಸ್ಮಾರ್ಟ್ಫೋನ್ 50MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಹಿಂಭಾಗದಲ್ಲಿ ಟ್ರಿಪಲ್ ರೇರ್ ಕ್ಯಾಮೆರಾ ಸೆಟಪ್ ಅಳವಡಿಸಲಾಗಿದೆ. ಇದರೊಂದಿಗೆ Snapdragon 6 Gen 1 ಚಿಪ್ ಮತ್ತು 5500mAh ಬ್ಯಾಟರಿಯನ್ನು ಹೊಂದಿದೆ. Vivo V30e 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಅದಕ್ಕೂ ಮುಂಚೆ ಟಾಪ್ 5 ಫೀಚರ್ಗಳನ್ನು ತಿಳಿಯಿರಿ.

Vivo V30e 5G ಸ್ಮಾರ್ಟ್ಫೋನ್ ಡಿಸ್ಪ್ಲೇ ಮಾಹಿತಿ!

ಮೊದಲಿಗೆ Vivo V30e 5G ಸ್ಮಾರ್ಟ್ಫೋನ್ ಡಿಸ್ಪ್ಲೇಯ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ನಿಮಗೆ 6.78 ಇಂಚಿನ AMOLED ಪ್ಯಾನೆಲ್ ಉತ್ತಮ ಮತ್ತು ರೋಮಾಂಚಕ ಬಣ್ಣಗಳನ್ನು ಉತ್ಪಾದಿಸಿತು. ಅಲ್ಲದೆ ಇದರ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. ಅಲ್ಲದೆ ಫೋನ್ full HD+(2400 ×1080p) ಪಿಕ್ಸೆಲ್ ರೆಸಲ್ಯೂಷನ್ ನೊಂದಿಗೆ UI ಉದ್ದಕ್ಕೂ ಮೃದುವಾದ ಸ್ಕ್ರೋಲಿಂಗ್ ಅನುಭವವನ್ನು ನೀಡುತ್ತದೆ. ಕರ್ವ್ ಡಿಸ್ಪ್ಲೇ ಸ್ಮಾರ್ಟ್ಫೋನ್ ಅನ್ನು ಪ್ರೀಮಿಯಂ ವೈಬ್‌ಗೆ ಸೇರಿಸುತ್ತದೆ.

Vivo V30e officially launched in India
Vivo V30e officially launched in India

ವಿವೋ V30e 5G ಸ್ಮಾರ್ಟ್ಫೋನ್ ಕ್ಯಾಮೆರಾ ಡೀಟೇಲ್ಸ್!

ಈ Vivo V30e 5G ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತನಾಡುವುದಾದ್ರೆ Vivo V30e 5G ಸ್ಮಾರ್ಟ್ಫೋನ್ 50MP ಪ್ರೈಮರಿ ಲೆನ್ಸ್ SonyIMX 882 ಸೆನ್ಸರ್‌ನೊಂದಿಗೆ Optical Image Stabilization (OIS) ಮತ್ತು ಔರಾ ಲೈಟ್ ಮತ್ತು 8MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್‌ಗೆ ಬೆಂಬಲವನ್ನು ಒಳಗೊಂಡಂತೆ ಹಿಂಭಾಗಕ್ಕೆ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಪ್ಯಾಕ್ ಮಾಡುತ್ತದೆ. ಇದಲ್ಲದೆ Vivo V30e 5G ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಸೆಲ್ಫಿನ್ ಮತ್ತು ವಿಡಿಯೋ ಕರೆಗಾಗಿ 50MP ಶೂಟರ್‌ ಹೊಂದಿದ್ದು ಇದರಿಂದ ಗರಿಗರಿಯಾದ ಮತ್ತು ವಿವರವಾದ ಅತ್ಯುತ್ತಮವಾದ ಇಮೇಜ್ ಮತ್ತು ವಿಡಿಯೋಗಳನ್ನು ಸೆರೆಹಿಡಿಯಲು ಸಹಕರಿಸುತ್ತದೆ.

Also Read: Amazon Summer ಸೇಲ್‌ನಲ್ಲಿ ಲೇಟೆಸ್ಟ್ ಏರ್ ಕಂಡಿಷನರ್‌ಗಳ ಮೇಲೆ 55% ವರೆಗಿನ ಭರ್ಜರಿ ಡಿಸ್ಕೌಂಟ್‌ಗಳು!

Vivo V30e 5G ಸ್ಮಾರ್ಟ್ಫೋನ್ ಹಾರ್ಡ್ವೇರ್ ಹೇಗಿದೆ?

Vivo V30e 5G ಸ್ಮಾರ್ಟ್ಫೋನ್ 4nm TSMC ಪ್ರಕ್ರಿಯೆಯ ಆಧಾರದ ಮೇಲೆ Octa ಕೋರ್ ಸ್ನಾಪ್‌ಡ್ರಾಗನ್ 6 Gen 1 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಎಲ್ಲಾ ಗ್ರಾಫಿಕ್ಸ್ ತೀವ್ರವಾದ ಕಾರ್ಯಗಳಿಗಾಗಿ Adreno 710 GPU ನೊಂದಿಗೆ ಜೋಡಿಸಲಾಗಿದೆ. Vivo V30e ಸ್ಮಾರ್ಟ್ಫೋನ್ 8GB ವರೆಗೆ LPDDR4x RAM ಮತ್ತು 256GB ವರೆಗಿನ UFS 2.2 ಸ್ಟೋರೇಜ್‌ನೊಂದಿಗೆ ಬಿಡುಗಡೆಯಾಗಿದೆ. Vivo V30e ಸ್ಮಾರ್ಟ್ಫೋನ್ ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್ ಅನ್ನು ವಿಸ್ತರಿಸಬಹುದು. Vivo V30e 5G ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಆಧಾರಿತ ಫನ್‌ಟಚ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. Vivo V30e ಸ್ಮಾರ್ಟ್ಫೋನ್ 3 ವರ್ಷಗಳ ಆಂಡ್ರಾಯ್ಡ್ ಅಪ್ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಪ್ಯಾಚ್‌ಗಳನ್ನು ನೀಡುವುದಾಗಿ ಭರವಸೆ ನೀಡಿದೆ.

ವಿವೋ V30e 5G ಸ್ಮಾರ್ಟ್ಫೋನ್ ಬ್ಯಾಟರಿ ಮತ್ತು ಸೆನ್ಸರ್ಗಳು

ಇದರ ಮತ್ತೊಂದು ವಿಶೇಷತೆ ಅಂದ್ರೆ Vivo V30e 5G ಸ್ಮಾರ್ಟ್ಫೋನ್ ನಿಮಗೆ ಬೃಹತ್ 5,500mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದನ್ನು ಬಾಕ್ಸ್‌ನೊಳಗೆ ಬಂಡಲ್ ಮಾಡಿದ 44W ಅಡಾಪ್ಟರ್ ಮೂಲಕ ಚಾರ್ಜ್ ಮಾಡಬಹುದು. Vivo V30e 5G ಸ್ಮಾರ್ಟ್ಫೋನ್ ಸಿಲ್ಕ್ ಬ್ಲೂ ಮತ್ತು ವೆಲ್ವೆಟ್ ರೆಡ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಫೋನ್‌ನ ಇತರ ವೈಶಿಷ್ಟ್ಯಗಳೆಂದರೆ IP64 ಧೂಳು ಮತ್ತು ವಾಟರ್ ಪ್ರೂಫ್, ಬ್ಲೂಟೂತ್ 5.1, Wi-Fi 6, 5G ಮತ್ತು USB ಟೈಪ್-ಸಿ ಪೋರ್ಟ್ (USB 2.0) ಅನ್ನು ಹೊಂದಿದೆ.

Vivo V30e 5G ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ

Vivo V30e ಸ್ಮಾರ್ಟ್ಫೋನ್ ನಿಮಗೆ ಮೊದಲು 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ₹27,999 ರೂಗಳಿಗೆ ಬಿಡುಗಡೆಯಾದರೆ. ಇದರ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕೆ ₹29,999 ರೂಗಳಿಗೆ ಬಿಡುಗಡೆಯಾಗಿದೆ. ಇದಲ್ಲದೆ ಆಸಕ್ತ ಗ್ರಾಹಕರು HDFC ಬ್ಯಾಂಕ್ ಮತ್ತು SBI ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು 3000 ರೂಗಳ ತ್ವರಿತ ರಿಯಾಯಿತಿಯನ್ನು ಪಡೆಯುವ ಮೂಲಕ Vivo V30e 5G ಸ್ಮಾರ್ಟ್ಫೋನ್ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡಬಹುದು. ಫೋನ್ ನಿಮಗೆ ಫ್ಲಿಪ್‌ಕಾರ್ಟ್, ವಿವೊದ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳಲ್ಲಿ ಇದೆ ತಿಂಗಳ 9ನೇ ಮೇ 2024 ರಿಂದ ಲಭ್ಯವಿರುತ್ತದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo